EPFO: ವಿಲೀನವಾದ ಬ್ಯಾಂಕ್​ನಲ್ಲಿ ಖಾತೆಯಿದ್ದರೆ ತಕ್ಷಣವೇ ಪಿಎಫ್​ ಅಕೌಂಟ್​ನಲ್ಲಿ ಬ್ಯಾಂಕ್ ಮಾಹಿತಿ ಅಪ್​ಡೇಟ್ ಮಾಡಿ​

ಈಚೆಗೆ ಕೆಲವು ಬ್ಯಾಂಕ್​ಗಳ ವಿಲೀನವಾಗಿದೆ. ಒಂದು ವೇಳೆ ಆ ಬ್ಯಾಂಕ್​ಗಳಲ್ಲಿನ ಖಾತೆ ಜತೆಗೆ ಪಿಎಫ್​ ಅಕೌಂಟ್​ ಅಪ್​ಡೇಟ್​ ಆಗಿದ್ದಲ್ಲಿ ಅವುಗಳ ಮಾಹಿತಿಯನ್ನು ಬದಲಾವಣೆ ಮಾಡಬೇಕಾಗುತ್ತದೆ. ಏಕೆಂದರೆ ಅವುಗಳ ಐಎಫ್​ಎಸ್​ಸಿ ಕೋಡ್ ಏಪ್ರಿಲ್ 1, 2021ರಿಂದ ಅಸಿಂಧುವಾಗಿದೆ.

EPFO: ವಿಲೀನವಾದ ಬ್ಯಾಂಕ್​ನಲ್ಲಿ ಖಾತೆಯಿದ್ದರೆ ತಕ್ಷಣವೇ ಪಿಎಫ್​ ಅಕೌಂಟ್​ನಲ್ಲಿ ಬ್ಯಾಂಕ್ ಮಾಹಿತಿ ಅಪ್​ಡೇಟ್ ಮಾಡಿ​
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: Srinivas Mata

Updated on: Jun 26, 2021 | 1:21 PM

ನೀವೇನಾದರೂ ಪಿಎಫ್​ (ಪ್ರಾವಿಡೆಂಟ್ ಫಂಡ್) ಹಣ ವಿಥ್​ಡ್ರಾ ಮಾಡಬೇಕು ಅಂದುಕೊಂಡಿದ್ದೀರಾ? ಅದಕ್ಕಾಗಿ ಮೊದಲಿಗೆ ಪಿಎಫ್​ ಖಾತೆಯಲ್ಲಿ ಬ್ಯಾಂಕ್ ಮಾಹಿತಿಯನ್ನು ಅಪ್​ಡೇಟ್​ ಮಾಡಬೇಕು. ಇಲ್ಲದಿದ್ದಲ್ಲಿ ಪಿಎಫ್​ ಖಾತೆಯಿಂದ ಹಣ ಡ್ರಾ ಮಾಡಲು ಆಗಲ್ಲ. ಈಚೆಗೆ ವಿಲೀನವಾದ ಬ್ಯಾಂಕ್​ಗಳಲ್ಲಿ ಯಾವುದಾದರೂ ಒಂದರಲ್ಲಿ ಖಾತೆ ಇದ್ದಲ್ಲಿ ಇವತ್ತೇ ಖಾತೆಯ ಮಾಹಿತಿಯನ್ನು ಅಪ್​ಡೇಟ್ ಮಾಡುವುದು ಉತ್ತಮ. ಸಾರ್ವಜನಿಕ ಸ್ವಾಮ್ಯದ ಕೆಲವು ಬ್ಯಾಂಕ್​ಗಳು ಈಚೆಗೆ ವಿಲೀನ ಆಗಿವೆ. ಆ ಬ್ಯಾಂಕ್​ಗಳ ಐಎಫ್​ಎಸ್​ಸಿ ಕೋಡ್​ಗಳು ಏಪ್ರಿಲ್​ 1, 2021ರಿಂದ ಅಸಿಂಧುವಾಗಿದೆ. ಆ ಕಾರಣಕ್ಕೆ ಕ್ಲೇಮ್​ಗಳು ಪ್ರೊಸೆಸ್ ಆಗುವುದಿಲ್ಲ. ಪ್ರಾವಿಡೆಂಟ್ ಫಂಡ್ ಅಕೌಂಟ್​ನಲ್ಲಿ ತಮ್ಮ ಬ್ಯಾಂಕ್​ ಖಾತೆಯ ಮಾಹಿತಿಯನ್ನು ಅಪ್​ಡೇಟ್​ ಮಾಡುವಂತೆ ಕಾರ್ಮಿಕರ ಭವಿಷ್ಯ ನಿಧಿ ಒಕ್ಕೂಟ (ಇಪಿಎಫ್​ಒ)ದಿಂದ ಮನವಿ ಮಾಡಿಕೊಳ್ಳಲಾಗಿದೆ. ಕೆಲವು ದಿನಗಳ ಹಿಂದಷ್ಟೇ ಸರ್ಕಾರದಿಂದ ನಾನ್- ರೀಫಂಡಬಲ್ ಪಿಎಫ್ ಮುಂಗಡವನ್ನು ಘೋಷಿಸಲಾಗಿದೆ. ಕೊರೊನಾ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಹಣಕಾಸು ತುರ್ತು ಇರುವವರು ಈಗಿನ ಅವಕಾಶವನ್ನು ಬಳಸಿಕೊಳ್ಳಬಹುದು.

ಪಿಎಫ್​ ಹಣ ವಿಥ್​ಡ್ರಾಗೆ ಆನ್​ಲೈನ್ ಮತ್ತು ಆಫ್​ಲೈನ್ ಎರಡೂ ಬಗೆಯಲ್ಲಿ ಅರ್ಜಿ ಸಲ್ಲಿಸಬಹುದು. ಪಿಎಫ್ ಖಾತೆಯಲ್ಲಿ ಒಂದು ವೇಳೆ ಬ್ಯಾಂಕ್ ಖಾತೆಯ ಮಾಹಿತಿ ಅಪ್​ಡೇಟ್ ಆಗಿಲ್ಲ ಅಂತಾದರೆ ಕ್ಲೇಮ್ ಪಡೆದುಕೊಳ್ಳುವುದು ಕಷ್ಟ. ಇಪಿಎಫ್​ಒ ತಿಳಿಸಿರುವಂತೆ, ಆಂಧ್ರಾ ಬ್ಯಾಂಕ್, ಸಿಂಡಿಕೇಟ್ ಬ್ಯಾಂಕ್, ಓರಿಯೆಂಟಲ್ ಬ್ಯಾಂಕ್ ಆಫ್ ಕಾಮರ್ಸ್, ಅಲಹಾಬಾದ್ ಬ್ಯಾಂಕ್, ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಕಾರ್ಪೊರೇಷನ್ ಬ್ಯಾಂಕ್​ನ ಐಎಫ್​ಎಸ್​ಸಿ ಕೋಡ್​ಗಳು ಅಸಿಂಧುವಾಗಿವೆ. ಉದ್ಯೋಗದಾತರ ಮೂಲಕ ಸರಿಯಾದ ಐಎಫ್​ಎಸ್​ಸಿ ಕೋಡ್​ ಅಪ್​ಡೇಟ್​ ಮಾಡದಿದಲ್ಲಿ ಆನ್​ಲೈನ್ ಕ್ಲೇಮ್ ಮಾಡಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಐಎಫ್​ಎಸ್​ಸಿ ಪಡೆದು, ಬ್ಯಾಂಕ್ ಮಾಹಿತಿ ಅಪ್​​ಲೋಡ್ ಮಾಡಿ, ಅಪ್ರೂವ್ ಕೂಡ ಆಗಬೇಕು. ಆಗಷ್ಟೇ ಬ್ಯಾಂಕ್​ಗೆ ಬಂದ ಹಣ ವಾಪಸ್ ಹೋಗುವುದಿಲ್ಲ.

ಬ್ಯಾಂಕ್ ಖಾತೆ ಅಪ್​ಡೇಟ್ ಹೇಗೆ? 1. ಇಪಿಎಫ್​ಒ ಯುನಿಫೈಡ್ ಸದಸ್ಯರ ಪೋರ್ಟಲ್ https://unifiedportal-mem.epfindia.gov.in/memberinterface/ ಇದಕ್ಕೆ ತೆರಳಬೇಕು 2. UAN ಮತ್ತು ಪಾಸ್​ವರ್ಡ್​ನೊಂದಿಗೆ ಲಾಗ್​ ಇನ್ ಆಗಬೇಕು. 3. Manage ಎಂಬ ಟ್ಯಾಬ್ ಮೇಲೆ ಕ್ಲಿಕ್ ಮಾಡಬೇಕು. ಡ್ರಾಪ್ ಡೌನ್ ಮೆನು ಕಾಣಿಸುತ್ತದೆ. 4. ಈ ಮೆನುವಿನಲ್ಲಿ KYC ಆಯ್ಕೆ ಮಾಡಬೇಕು. 5. ಈಗ ಬ್ಯಾಂಕ್ ಆಯ್ಕೆ ಮಾಡಿ, ಬ್ಯಾಂಕ್ ಖಾತೆ ಸಂಖ್ಯೆ, ಹೆಸರು ಮತ್ತು ಹೊಸ ಐಎಫ್​ಎಸ್​ಸಿ ಕೋಡ್ ಭರ್ತಿ ಮಾಡಿ, ಸೇವ್ ಮಾಡಬೇಕು. 6. ಈ ಮಾಹಿತಿಯು ಮೊದಲು ಉದ್ಯೋಗದಾತರಿಂದ ಅಪ್ರೂವ್ ಆಗಬೇಕು. ಆ ನಂತರ ಅಪ್​ಡೇಟ್ ಆಗಿರುವ ಬ್ಯಾಂಕ್​ ಮಾಹಿತಿಯು ಅಪ್ರೂವ್ ಆಗಿರುವ ಕೆವೈಸಿ ವಿಭಾಗದಲ್ಲಿ ಕಾಣಿಸುತ್ತದೆ.

ಇದನ್ನೂ ಓದಿ: SBI UPI Services: ಸ್ಟೇಟ್ ಬ್ಯಾಂಕ್​ ಆಫ್ ಇಂಡಿಯಾದ ನಿಮ್ಮ ಖಾತೆಗೆ ಯುಪಿಐ ಸೇವೆ ಆ್ಯಕ್ಟಿವೇಟ್ ಹಾಗೂ ಡಿಆ್ಯಕ್ಟಿವೇಟ್ ಹೇಗೆ?

(If your account with merged banks need to update with PF account. Here is the reason why?)

ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್