Petrol Price Today: ಇಂಧನ ದರದಲ್ಲಿ ಇಂದು ಮತ್ತೆ ತುಸು ಏರಿಕೆ; ಮುಂಬೈ, ಭೋಪಾಲ್ನಲ್ಲಿ ಗರಿಷ್ಠ ಬೆಲೆ
Petrol Diesel Rate Today: ಬೆಂಗಳೂರಿನಲ್ಲಿ ಜೂನ್ ತಿಂಗಳ ಅತಿ ಹೆಚ್ಚಿನ ಪೆಟ್ರೋಲ್ ದರ ಇಂದಿನದೇ ಆಗಿದೆ. ಜೂ.1ರಂದು 97.64 ರೂ. ಇತ್ತು. ಅದು ಈ ತಿಂಗಳ ಅತ್ಯಂತ ಕಡಿಮೆ ಪೆಟ್ರೋಲ್ ದರವಾಗಿದೆ.
Petrol Diesel Price Today | ದೇಶದಲ್ಲಿಂದು ಪೆಟ್ರೋಲ್-ಡೀಸೆಲ್ ದರದಲ್ಲಿ ಮತ್ತೊಮ್ಮೆ ತುಸು ಏರಿಕೆ ಅಂದರೆ ಸುಮಾರು 35 ಪೈಸೆಯಷ್ಟು ಏರಿದೆ. ವಾಣಿಜ್ಯ ನಗರಿ ಮುಂಬೈನಲ್ಲಿ ಐತಿಹಾಸಿಕ ಗರಿಷ್ಠ ದರ ತಲುಪಿದ್ದು, ಪೆಟ್ರೋಲ್ ದರ ಲೀಟರ್ಗೆ 104.22 ರೂ. ಆಗಿದೆ. ಹಾಗೇ ಡೀಸೆಲ್ ಬೆಲೆ 96.16 ರೂ. ಆಗಿದೆ. ಇನ್ನು ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಲೀಟರ್ಗೆ 98.11 ರೂ. ಆಗಿದ್ದು, ಡೀಸೆಲ್ ಬೆಲೆ 88.65 ರೂ.ಆಗಿದೆ. ಚೆನ್ನೈನಲ್ಲೂ ಸಹ ಪೆಟ್ರೋಲ್ ಬೆಲೆ 100 ರೂ. ಸಮೀಪಿಸಿದ್ದು, ಸದ್ಯಕ್ಕೆ 99.19 ರೂ. ಇದ್ದು ಡೀಸೆಲ್ ದರ ಲೀಟರ್ಗೆ 93.23ರೂ.ನಿಗದಿಯಾಗಿದೆ. ಕೋಲ್ಕತ್ತದಲ್ಲಿ ಪೆಟ್ರೋಲ್ 97.97 ರೂ.ಆಗಿದ್ದು, ಡೀಸೆಲ್ ಬೆಲೆ 91.50 ರೂ. ಇದೆ. ದೇಶದಲ್ಲಿಯೇ ಅತ್ಯಂತ ಹೆಚ್ಚು ಪೆಟ್ರೋಲ್ ದರ ಇರುವುದು ಮಧ್ಯಪ್ರದೇಶದ ಭೋಪಾಲ್ನಲ್ಲಿ. ಇಲ್ಲಿ ಲೀಟರ್ಗೆ 106.35 ರೂ., ಡೀಸೆಲ್ ಬೆಲೆ 97.37 ರೂ. ಇದೆ.
ದೇಶಾದ್ಯಂತ ಪೆಟ್ರೋಲ್-ಡೀಸೆಲ್ ದರ ಒಂದೇ ತರ ಇರುವುದಿಲ್ಲ. ಆಯಾ ಪ್ರದೇಶಗಳ ವ್ಯಾಟ್, ಸ್ಥಳೀಯ ತೆರಿಗೆ, ಸರಕು ಶುಲ್ಕವನ್ನಾಧರಿಸಿ ನಿಗದಿಯಾಗುತ್ತದೆ. ದೇಶದಲ್ಲಿ ಸದ್ಯ ಬೆಂಗಳೂರು ಸೇರಿ 8 ಜಿಲ್ಲೆಗಳಲ್ಲಿ ಪೆಟ್ರೋಲ್ ದರ 100 ರೂ.ಗಡಿ ದಾಟಿದೆ. ಕರ್ನಾಟಕ, ಮಧ್ಯಪ್ರದೇಶ, ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ, ಜಮ್ಮು-ಕಾಶ್ಮೀರ ಮತ್ತು ಲಡಾಖ್ನಲ್ಲಿ ಪೆಟ್ರೋಲ್ ಬೆಲೆ ಲೀಟರ್ಗೆ 100 ರೂ.ದಾಟಿದೆ.
ಬೆಂಗಳೂರಿನಲ್ಲಿ ಹೀಗಿದೆ ಪೆಟ್ರೋಲ್, ಡೀಸೆಲ್ ದರ ರಾಜ್ಯರಾಜಧಾನಿ ಬೆಂಗಳೂರಿನಲ್ಲಿ ಸಹ ಪೆಟ್ರೋಲ್ ಡೀಸೆಲ್ ದರದಲ್ಲಿ ಇಂದು ಹೆಚ್ಚಳವಾಗಿದೆ. ಪೆಟ್ರೋಲ್ ದರ 101.39 ರೂ. ಆಗಿದೆ. ನಿನ್ನೆ 101.03 ರೂ. ಇತ್ತು. ಅಂದರೆ ಇಂದು 36 ಪೈಸೆ ಹೆಚ್ಚಿದೆ. ಹಾಗೇ ಡೀಸೆಲ್ ದರ ಇಂದು 93.99 ರೂ.ಆಗಿದೆ. ನಿನ್ನೆ 93.61 ರೂಪಾಯಿ ಇತ್ತು. ನಿನ್ನೆಗಿಂತ ಇಂದು 38 ಪೈಸೆ ಹೆಚ್ಚಳವಾಗಿದೆ.
ಬೆಂಗಳೂರಿನಲ್ಲಿ ಜೂನ್ ತಿಂಗಳ ಅತಿ ಹೆಚ್ಚಿನ ಪೆಟ್ರೋಲ್ ದರ ಇಂದಿನದೇ ಆಗಿದೆ. ಜೂ.1ರಂದು 97.64 ರೂ. ಇತ್ತು. ಅದು ಈ ತಿಂಗಳ ಅತ್ಯಂತ ಕಡಿಮೆ ಪೆಟ್ರೋಲ್ ದರವಾಗಿದೆ. ಹಾಗೇ ಡೀಸೆಲ್ ದರ ಕೂಡ ಜೂ.1ರಂದು ಲೀ.ಗೆ 90.51 ರೂ. ಇದ್ದಿದ್ದೇ ಅತ್ಯಂತ ಕಡಿಮೆಯಾಗಿದ್ದು, ಇಂದಿನ 93.99 ರೂ. ಗರಿಷ್ಠ ದರವಾಗಿದೆ.
ವಿವಿಧ ನಗರದಲ್ಲಿ ಪೆಟ್ರೋಲ್ ದರ ಎಷ್ಟಿದೆ ಎಂಬುದನ್ನು ತಿಳಿಯಲು ಈ ಕೆಳಗಿನ ಲಿಂಕ್ಅನ್ನು ಕ್ಲಿಕ್ ಮಾಡಿ: https://tv9kannada.com/business/petrol-price-today.html
ವಿವಿಧ ನಗರದ ಡೀಸೆಲ್ ದರ ತಿಳಿಯಲು ಈ ಕೆಳಗಿನ ಲಿಂಕ್ಅನ್ನು ಕ್ಲಿಕ್ ಮಾಡಿ: https://tv9kannada.com/business/diesel-price-today.html
ಇದನ್ನೂ ಓದಿ: ಕೋಲಾರ, ಬೀದರ್ ಡ್ರಗ್ಸ್ ತಯಾರಿಕಾ ಅಡ್ಡೆಗಳ ಮೇಲೆ ಎನ್ಸಿಬಿ ದಾಳಿ; 62 ಲಕ್ಷ ನಗದು, 91 ಕೆ.ಜಿ ಆಲ್ಪಾಜೋಲಮ್ ವಶಕ್ಕೆ
Published On - 10:54 am, Sat, 26 June 21