ಕೋಲಾರ, ಬೀದರ್ ಡ್ರಗ್ಸ್ ತಯಾರಿಕಾ ಅಡ್ಡೆಗಳ ಮೇಲೆ ಎನ್​ಸಿಬಿ ದಾಳಿ; 62 ಲಕ್ಷ ನಗದು, 91 ಕೆ.ಜಿ ಆಲ್ಪಾಜೋಲಮ್ ವಶಕ್ಕೆ

ಲಾಕ್​ಡೌನ್​ ವೇಳೆಯೂ ಸಿಲಿಕಾನ್ ಸಿಟಿ ಬೆಂಗಳೂರಿಗೆ ಮಾದಕ ವಸ್ತುಗಳು ಸರಬರಾಜಾಗುತ್ತಿದ್ದು, 6 ತಿಂಗಳ ಅವಧಿಯಲ್ಲಿ ಬರೋಬ್ಬರಿ 3 ಸಾವಿರ ಕೆ.ಜಿ ಮಾದಕ ವಸ್ತುಗಳು ಜಪ್ತಿಯಾಗಿದೆ. ಒಟ್ಟು 382 ಪ್ರಕರಣಗಳು ದಾಖಲಾಗಿವೆ. ಬೆಂಗಳೂರಿನ 8 ವಿಭಾಗ ಮತ್ತು ಸಿಸಿಬಿ ಪೊಲೀಸರು ಮಾದಕ ವಸ್ತುವನ್ನು ವಶಕ್ಕೆ ಪಡೆದಿದ್ದಾರೆ.

ಕೋಲಾರ, ಬೀದರ್ ಡ್ರಗ್ಸ್ ತಯಾರಿಕಾ ಅಡ್ಡೆಗಳ ಮೇಲೆ ಎನ್​ಸಿಬಿ ದಾಳಿ; 62 ಲಕ್ಷ ನಗದು, 91 ಕೆ.ಜಿ ಆಲ್ಪಾಜೋಲಮ್ ವಶಕ್ಕೆ
ಎನ್​ಸಿಬಿ ಅಧಿಕಾರಿಗಳು ದಾಳೆ ನಡೆಸಿ 62 ಲಕ್ಷ ನಗದು ಮತ್ತು 91 ಕೆ.ಜಿ ಆಲ್ಪಾಜೋಲಮ್ ವಶಕ್ಕೆ ಪಡೆದಿದ್ದಾರೆ
Follow us
TV9 Web
| Updated By: sandhya thejappa

Updated on:Jun 26, 2021 | 11:09 AM

ಬೆಂಗಳೂರು: ಕೋಲಾರ ಇಂಡಸ್ಟ್ರಿಯಲ್ ಏರಿಯಾ ಹಾಗೂ ಬೀದರ್​ನ ‘ಇಂದು ಡ್ರಗ್ ಪ್ರೈವೇಟ್ ಲಿ.’ ಮೇಲೆ ಎನ್​ಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಆಲ್ಪಾಜೋಲಮ್ ಪೌಡರ್​ ತಯಾರಿಸಿ ಕೋಲಾರ, ಬೀದರ್, ಆಂಧ್ರ ಪ್ರದೇಶ ಹಾಗೂ ತೆಲಂಗಾಣದಲ್ಲಿ ಮಾರಾಟ ಮಾಡಲಾಗುತ್ತಿತ್ತು. ಅಕ್ರಮವಾಗಿ ಕಾರ್ಖಾನೆ ನಡೆಸುತ್ತಿದ್ದ ಹೈದರಾಬಾದ್​ನ ಎನ್.ವಿ ರೆಡ್ಡಿ ಎಂಬಾತನಿಗೆ ಸೇರಿದ್ದ ಕಾರ್ಖಾನೆ ಮೇಲೆ ದಾಳಿ ನಡೆಸಿ, ಎನ್​ಸಿಬಿ ತಂಡ ಸುಮಾರು 62 ಲಕ್ಷ ನಗದು ಮತ್ತು 91 ಕೆ.ಜಿ ಆಲ್ಪಾಜೋಲಮ್ ವಶಕ್ಕೆ ಪಡೆದಿದೆ.

ಎನ್​ಸಿಬಿ ವಲಯಾಧಿಕಾರಿ ಅಮಿತ್ ಗವಾಟೆ ನೇತೃತ್ವದಲ್ಲಿ ದಾಳಿ ನಡೆದಿದೆ. ಆಲ್ಪಾಜೋಲಮ್ ನಿಷೇಧಿತ ಮಾದಕ ವಸ್ತು. ಆದರೆ ಬೀದರ್​ನ ಇಂದು ಡ್ರಗ್ಸ್ ಪ್ರೈವೇಟ್ ಲಿಮಿಟೆಡ್ ಫ್ಯಾಕ್ಟರಿಯಲ್ಲಿ ಡ್ರಗ್ ಉತ್ಪಾದನೆಯಾಗುತ್ತಿತ್ತು. ಎಸ್.ಭಾಸ್ಕರ್ ಹಾಗೂ ಎನ್.ವಿ.ರೆಡ್ಡಿ ಇಂದು ಡ್ರಗ್ಸ್ ಪ್ರೈವೇಟ್ ಲಿಮಿಟೆಡ್ ಫ್ಯಾಕ್ಟರಿಯಲ್ಲಿ ಆಲ್ಪಾಜೋಲಮ್ ಡ್ರಗ್ ಮ್ಯಾನುಫ್ಯಾಕ್ಟರ್ ಮಾಡುತ್ತಿದ್ದರು. ಈ ಪ್ರಕರಣ ಸಂಬಂಧ ವೈ.ವಿ ರೆಡ್ಡಿ. ಎಸ್.ಮೆನನ್, ಎನ್.ವಿ.ರೆಡ್ಡಿ, ಅಮೃತ್ ಹಾಗೂ ಭಾಸ್ಕರ್ ಎಂಬುವವರನ್ನು ವಶಕ್ಕೆ ಪಡೆದಿದ್ದಾರೆ.

382 ಪ್ರಕರಣಗಳು ದಾಖಲು ಲಾಕ್​ಡೌನ್​ ವೇಳೆಯೂ ಸಿಲಿಕಾನ್ ಸಿಟಿ ಬೆಂಗಳೂರಿಗೆ ಮಾದಕ ವಸ್ತುಗಳು ಸರಬರಾಜಾಗುತ್ತಿದ್ದು, 6 ತಿಂಗಳ ಅವಧಿಯಲ್ಲಿ ಬರೋಬ್ಬರಿ 3 ಸಾವಿರ ಕೆ.ಜಿ ಮಾದಕ ವಸ್ತುಗಳು ಜಪ್ತಿಯಾಗಿದೆ. ಒಟ್ಟು 382 ಪ್ರಕರಣಗಳು ದಾಖಲಾಗಿವೆ. ಬೆಂಗಳೂರಿನ 8 ವಿಭಾಗ ಮತ್ತು ಸಿಸಿಬಿ ಪೊಲೀಸರು ಮಾದಕ ವಸ್ತುವನ್ನು ವಶಕ್ಕೆ ಪಡೆದಿದ್ದಾರೆ. 2,500 ಕೆ.ಜಿ ಗಾಂಜಾ, 960 ಗ್ರಾಂ ಅಫೀಮ್, 872 ಗ್ರಾಂ ಹೆರಾಯಿನ್, 82 ಗ್ರಾಂ ಎಂಡಿಎಂಎ ಮಾತ್ರೆ, 9.4 ಕೆಜಿ ಚರಸ್, 90 ಕೆಜಿ ಮೆಥಾಕ್ಲೀನ್, 10.2 ಕೆಜಿ ಹ್ಯಾಶಿಶ್ ಆಯಿಲ್, 96.43 ಗ್ರಾಂ ಕೊಕೇನ್ ಸೇರಿ ಒಟ್ಟು 50 ಕೋಟಿ ಮೌಲ್ಯದ ಮಾದಕ ವಸ್ತುವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

50 ಕೋಟಿ ರೂ. ಮೌಲ್ಯದ ಡ್ರಗ್ಸ್ ನಾಶ ಅಂತಾರಾಷ್ಟ್ರೀಯ ಮಾದಕ ವಸ್ತು ವಿರೋಧಿ ದಿನ ಹಿನ್ನೆಲೆ ಇಂದು 50 ಕೋಟಿ ರೂಪಾಯಿ ಮೌಲ್ಯದ ಡ್ರಗ್ಸ್ ನಾಶಪಡಿಸುತ್ತೇವೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು. 1 ವರ್ಷದಲ್ಲಿ ವಶಪಡಿಸಿಕೊಂಡಿರುವ ಒಟ್ಟು 12 ಬಗೆಯ ಮಾದಕ ವಸ್ತುಗಳನ್ನು ನಾಶಪಡಿಸುತ್ತೇವೆ. ಎಸ್‌ಪಿ, ಆಯುಕ್ತರ ನೇತೃತ್ವದಲ್ಲಿ ಡ್ರಗ್ಸ್ ನಾಶಪಡಿಸಲಾಗುತ್ತೆ. ದೇಶದಲ್ಲಿ ಇದೇ ಮೊದಲ ಬಾರಿಗೆ ಡ್ರಗ್ಸ್ ನಾಶಪಡಿಸಲಾಗುತ್ತಿದೆ. ಕೋರ್ಟ್ ಅನುಮತಿ ನೀಡಿರುವಷ್ಟು ಡ್ರಗ್ಸ್ ಮಾತ್ರ ನಾಶ ಮಾಡಲಾಗುವುದು ಎಂದು ಬಸವರಾಜ ಬೊಮ್ಮಾಯಿ ಹೇಳಿದರು.

ಇದನ್ನೂ ಓದಿ

ಬಾಯ್​ಫ್ರೆಂಡ್​ ಜತೆ ಗಾಂಜಾ ಸೇವಿಸುವಾಗ ಬಲೆಗೆ ಬಿದ್ದ ಮತ್ತೋರ್ವ ನಟಿ; ವೈದ್ಯಕೀಯ ಪರೀಕ್ಷೆಯಲ್ಲೂ ನಿಷೇಧಿತ ವಸ್ತು ಸೇವನೆ ದೃಢ

ಕಾಶ್ಮೀರದಲ್ಲಿ ವಿಶೇಷ ಸ್ಥಾನಮಾನ ಮರುಸ್ಥಾಪನೆ ಆಗುವವರೆಗೂ ಯಾವುದೇ ಚುನಾವಣೆಯಲ್ಲೂ ಸ್ಪರ್ಧಿಸುವುದಿಲ್ಲ: ಮೆಹಬೂಬಾ ಮುಫ್ತಿ

(NCB team raided the Kolar and Bidar Drugs manufacturing factory)

Published On - 10:24 am, Sat, 26 June 21