Zameer Ahmed: ಲಸಿಕೆ ಜಾಗೃತಿ ಮೂಡಿಸಲು ಸ್ಕೂಟರ್ ಓಡಿಸಿದ ಶಾಸಕ ಜಮೀರ್ ಅಹ್ಮದ್ ಹೆಲ್ಮೆಟ್ ಹಾಕೋದು ಮರೆತರು
ಇತ್ತೀಚಿಗಷ್ಟೇ ರಾಷ್ಟ್ರ ಪ್ರಶಸ್ತಿ ವಿಜೇತ ಪ್ರತಿಭಾವಂತ ನಟ ಸಂಚಾರಿ ವಿಜಯ್ ನಮ್ಮನ್ನಗಲಿದ್ದರು. ಅವರ ನಿಧನಕ್ಕೆ ಬೈಕ್ ಅಪಘಾತ ಕಾರಣವಾಗಿತ್ತು. ಕೊವಿಡ್ನಿಂದ ನೊಂದ, ಬೆಂದ ಕುಟುಂಬಗಳಿಗೆ ಅಗತ್ಯ ವಸ್ತು ವಿತರಣೆ ಮಾಡಲು ತೆರಳಿದ್ದ ಸಂಚಾರಿ ವಿಜಯ್ ಬೈಕ್ ಅಪಘಾತದಲ್ಲಿ ನಮ್ಮನ್ನಗಲಿದರು.
ಬೆಂಗಳೂರು: ಶಾಸಕ ಜಮೀರ್ ಅಹ್ಮದ್ ಇತ್ತೀಚಿಗೆ ಬಹಳಷ್ಟು ಸುದ್ದಿಯಲ್ಲಿದ್ದಾರೆ. ಸದ್ಯ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಹುದ್ದೆಯಲ್ಲಿ ನೋಡಬಯಸುತ್ತೇನೆ ಎಂಬರ್ಥದಲ್ಲಿ ಹೇಳಿಕೆಗಳ ಮೇಲೆ ಹೇಳಿಕೆ ನೀಡುತ್ತಿರುವ ಅವರು, ತಮ್ಮ ಕ್ಷೇತ್ರ ಚಾಮರಾಜಪೇಟೆಯಲ್ಲಿ ಕೊವಿಡ್ ಲಸಿಕೆ ಕುರಿತಂತೆ ಇಂದು ಜಾಗೃತಿ ಮೂಡಿಸಲು ಓಡಾಡಿದ್ದಾರೆ. ಅದರಲ್ಲೂ ದ್ವಿಚಕ್ರ ವಾಹನವನ್ನು ಸ್ವತಃ ಚಲಾಯಿಸಿಕೊಂಡು ಸ್ವಕ್ಷೇತ್ರ ತಿರುಗಿದ್ದಾರೆ ಶಾಸಕ ಜಮೀರ್ ಅಹ್ಮದ್. ಅವರೇ ತಮ್ಮ ಫೇಸ್ಬುಕ್ ಖಾತೆಯಲ್ಲಿ ಇಂದಿನ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಆ ಚಿತ್ರಗಳ ಪ್ರಕಾರ ಅವರು ದ್ವಿಚಕ್ರ ವಾಹನ ಚಾಲನೆ ವೇಳೆ ಹೆಲ್ಮೆಟ್ ಧರಿಸಿಲ್ಲ.
ಇತ್ತೀಚಿಗಷ್ಟೇ ರಾಷ್ಟ್ರ ಪ್ರಶಸ್ತಿ ವಿಜೇತ ಪ್ರತಿಭಾವಂತ ನಟ ಸಂಚಾರಿ ವಿಜಯ್ ನಮ್ಮನ್ನಗಲಿದ್ದರು. ಅವರ ನಿಧನಕ್ಕೆ ಬೈಕ್ ಅಪಘಾತ ಕಾರಣವಾಗಿತ್ತು. ಕೊವಿಡ್ನಿಂದ ನೊಂದ, ಬೆಂದ ಕುಟುಂಬಗಳಿಗೆ ಅಗತ್ಯ ವಸ್ತು ವಿತರಣೆ ಮಾಡಲು ತೆರಳಿದ್ದ ಸಂಚಾರಿ ವಿಜಯ್ ಬೈಕ್ ಅಪಘಾತದಲ್ಲಿ ನಮ್ಮನ್ನಗಲಿದರು. ಹೆಲ್ಮೆಟ್ ಧರಿಸದ ಒಂದೇ ಒಂದು ಕಾರಣಕ್ಕೆ ಅಂತಹ ಮಹೋನ್ನತ ಕಲಾವಿದ ಕನ್ನಡದ ಪಾಲಿಗೆ ಮುಂದಿನ ದಿನಗಳಲ್ಲಿ ಇಲ್ಲವಾಗಿದ್ದರು.
ಶಾಸಕ ಜಮೀರ್ ಅಹ್ಮದ್ ಓರ್ವ ರಾಜಕಾರಣಿ. ಅವರು ರಾಜಕೀಯದಲ್ಲಿ ಎಂತಹ ನಡೆಯನ್ನೇ ತೆಗೆದುಕೊಳ್ಳಲಿ, ಯಾವ ಪಟ್ಟನ್ನೇ ಹಾಕಲಿ, ಅದು ಅವರ ಸ್ವಂತ ನಿರ್ಧಾರ. ಆದರೆ ಅವರು ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ. ಓರ್ವ ಗೌರವಾನ್ವಿತ ಜನಪ್ರತಿನಿಧಿ. ಅವರ ಕರ್ತವ್ಯ ಕೊವಿಡ್ ಸೋಂಕು ತಡೆಯಲು ಶ್ರಮಿಸುವುದು. ಲಸಿಕೆ ವಿತರಣೆ ಹೆಚ್ಚಿಸಲು ಏನೆಲ್ಲ ಕ್ರಮ ಬೇಕೋ ಅವುಗಳನ್ನು ತ್ವರಿತವಾಗಿ ಕೈಗೊಳ್ಳುವುದು. ಇಂದು ಅವರು ತಮ್ಮ ಕ್ಷೇತ್ರದಾದ್ಯಂತ ಕೊವಿಡ್ ಲಸಿಕೆ ಬಗ್ಗೆ ಜಾಗೃತಿ ಮೂಡಿಸಲು ‘ಕಾರು ಬಿಟ್ಟು ದ್ವಿಚಕ್ರ ವಾಹನದಲ್ಲಿ ತಿರುಗಾಡಿರುವುದು ಅತ್ಯಂತ ಶ್ಲಾಘನೀಯ ವಿಚಾರವೇ. ತಳಮಟ್ಟದ ಜನರನ್ನು ತಲುಪಲು ಕಾರಿಗಿಂತ ದ್ವಿಚಕ್ರ ವಾಹನವೇ ಉತ್ತಮ. ಜನರಿಗೂ ತಮ್ಮ ಜನಪ್ರತಿನಿಧಿ ತಮ್ಮಂತೆಯೇ ಇದ್ದಾರೆ ಎಂಬ ಭಾವ ಮೂಡಿಸುತ್ತದೆ. ಆದರೆ ಅವರು ದ್ವಿಚಕ್ರ ವಾಹನದಲ್ಲಿ ಪ್ರಯಾಣಿಸುವಾಗ ಹೆಲ್ಮೆಟ್ ಧರಿಸಬೇಕಿತ್ತು ಎಂಬುದಂತೂ ಅಷ್ಟೇ ದಿಟ.
ಹೆಲ್ಮೆಟ್ ಧರಿಸಿ ಕೊವಿಡ್ ಲಸಿಕೆ ಬಗ್ಗೆ ಜಾಗೃತಿ ಮೂಡಿಸಲು ತಿರುಗಾಟ ನಡೆಸಿದ್ದರೆ ಅವರ ನಡೆಗೆ ಇನ್ನಷ್ಟು ತೂಕ ಬರುತ್ತಿತ್ತು. ಹೆಲ್ಮೆಟ್ ಧರಿಸುವಿಕೆಯ ಬಗ್ಗೆ ಕೊಂಚ ಜಾಗೃತಿಯೂ ತನ್ನಿಂದ ತಾನೇ ಮೂಡಿಸಲು ಸಾಧ್ಯವಾಗುತ್ತಿತ್ತೇನೋ. ಇದು ಶಾಸಕ ಜಮೀರ್ ಅಹ್ಮದ್ ಅವರಿಗೊಂದೇ ಅಲ್ಲ, ಸಾರ್ವಜನಿಕ ಜೀವನದಲ್ಲಿನ ಎಲ್ಲ ಜನಪ್ರತಿನಿಧಿಗಳು, ನಟ ನಟಿಯರು, ಕಲಾವಿದರು, ಕ್ರೀಡಾಪಟುಗಳು, ಜನಪ್ರಿಯ ತಾರೆಯರಿಗೂ ಅನ್ವಯಿಸುತ್ತದೆ. ದ್ವಿಚಕ್ರ ವಾಹನದಲ್ಲಿ ಸಂಚರಿಸುವಾಗ ಹೆಲ್ಮೆಟ್ ಧರಿಸಲೇ ಬೇಕು ಎಂಬ ಎಂಬ ಸಂದೇಶ ಜನರ ಮನಸ್ಸಲ್ಲಿ ಅಚ್ಚೊತ್ತಲು ಇಂಥ ವ್ಯಕ್ತಿಗಳು ಮಾದರಿಯಾಗಿ ನಡೆದುಕೊಂಡಾಗ ಮಾತ್ರ ಸಾಧ್ಯ.ಲಸಿಕೆ ಜಾಗೃತಿ ಮೂಡಿಸಲು ಸ್ಕೂಟರ್ ಓಡಿಸಿದ ಶಾಸಕ ಜಮೀರ್ ಅಹ್ಮದ್ ಹೆಲ್ಮೆಟ್ ಹಾಕೋದು ಮರೆತರು
ಇದನ್ನೂ ಓದಿ: ನಾನು ಜೈಲಿಗೆ ಹೋಗಿ ಬಂದ ಮೇಲೆ ನನ್ನ ತಂದೆ ತಾಯಿ ನನ್ನನ್ನು ಮನೆಗೆ ಸೇರಿಸಲಿಲ್ಲ: ‘ಆ ದಿನಗಳ‘ ಅನುಭವ ಬಿಚ್ಚಿಟ್ಟ ಸಚಿವ ಆರ್ ಅಶೋಕ್
ಸುದ್ದಿ ವಿಶ್ಲೇಷಣೆ: ಬಿಜೆಪಿಯಲ್ಲಿ ಮುಖ್ಯಮಂತ್ರಿ ಅಭ್ಯರ್ಥಿ ಇಲ್ಲ, ಕಾಂಗ್ರೆಸ್ನಲ್ಲಿ ಈಗಲೇ ಹಲವಾರು ಮುಖ್ಯಮಂತ್ರಿಗಳು!
(Chamrajpet MLA Zameer Ahmed who runs Scooty to raise covid vaccine awareness but did not wearing a helmet)