ನಾನು ಜೈಲಿಗೆ ಹೋಗಿ ಬಂದ ಮೇಲೆ ನನ್ನ ತಂದೆ ತಾಯಿ ನನ್ನನ್ನು ಮನೆಗೆ ಸೇರಿಸಲಿಲ್ಲ: ‘ಆ ದಿನಗಳ‘ ಅನುಭವ ಬಿಚ್ಚಿಟ್ಟ ಸಚಿವ ಆರ್ ಅಶೋಕ್

1975ರಲ್ಲಿ ಸ್ನೇಹಿತರ ಜತೆ ಪ್ರತಿಭಟಿಸಿದ್ದಕ್ಕೆ ಜೈಲಿಗೆ ಹಾಕಿದ್ದರು. ವಿ.ವಿ.ಪುರಂ ಕಾಲೇಜಿನಲ್ಲಿ ನಾನು ಓದುತ್ತಿದ್ದಾಗ ಪ್ರತಿಭಟಿಸಿದ್ದೆವು. ಸಿಲ್ವರ್ ತಟ್ಟೆ ಹಾಗೂ ಕಂಬಳಿ ಕೊಟ್ಟು ಜೈಲಿಗೆ ಹಾಕಿದರು. ಅಲ್ಲಿ ಹಿಡಿಯುವುದಕ್ಕಿಂತ5 ಪಟ್ಟು ಜನರನ್ನು ತುಂಬಿದ್ದರು. ನಾನು 1 ತಿಂಗಳು ಜೈಲಿನಲ್ಲಿದ್ದೆ, ನನ್ನ ತಮ್ಮ 3 ತಿಂಗಳು ಜೈಲಿನಲ್ಲಿದ್ದ.

ನಾನು ಜೈಲಿಗೆ ಹೋಗಿ ಬಂದ ಮೇಲೆ ನನ್ನ ತಂದೆ ತಾಯಿ ನನ್ನನ್ನು ಮನೆಗೆ ಸೇರಿಸಲಿಲ್ಲ: ‘ಆ ದಿನಗಳ‘ ಅನುಭವ ಬಿಚ್ಚಿಟ್ಟ ಸಚಿವ ಆರ್ ಅಶೋಕ್
ಆರ್ ಅಶೋಕ್ (ಸಂಗ್ರಹ ಚಿತ್ರ)
Follow us
| Updated By: Digi Tech Desk

Updated on:Jun 25, 2021 | 10:06 PM

ಬೆಂಗಳೂರು: ದೇಶದಲ್ಲಿ ತುರ್ತು ಪರಿಸ್ಥಿತಿ ಜಾರಿಗೆ ಬಂದು 46 ವರ್ಷವಾದ ಹಿನ್ನೆಲೆಯಲ್ಲಿ ಫ್ರೀಡಂಪಾರ್ಕ್‌ನಲ್ಲಿ ಬಿಜೆಪಿ ಇಂದು ಕರಾಳ ದಿನ ಆಚರಿಸಿತು. ಕಾರ್ಯಕ್ರಮದಲ್ಲಿ ಮಾತನಾಡಿದ ಕಂದಾಯ ಸಚಿವ ಆರ್.ಅಶೋಕ್ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ತಮ್ಮ ಅನುಭವ ಹಂಚಿಕೊಂಡರು.

1975ರಲ್ಲಿ ಸ್ನೇಹಿತರ ಜತೆ ಪ್ರತಿಭಟಿಸಿದ್ದಕ್ಕೆ ಜೈಲಿಗೆ ಹಾಕಿದ್ದರು. ವಿ.ವಿ.ಪುರಂ ಕಾಲೇಜಿನಲ್ಲಿ ನಾನು ಓದುತ್ತಿದ್ದಾಗ ಪ್ರತಿಭಟಿಸಿದ್ದೆವು. ಸಿಲ್ವರ್ ತಟ್ಟೆ ಹಾಗೂ ಕಂಬಳಿ ಕೊಟ್ಟು ಜೈಲಿಗೆ ಹಾಕಿದರು. ಅಲ್ಲಿ ಹಿಡಿಯುವುದಕ್ಕಿಂತ5 ಪಟ್ಟು ಜನರನ್ನು ತುಂಬಿದ್ದರು. ನಾನು 1 ತಿಂಗಳು ಜೈಲಿನಲ್ಲಿದ್ದೆ, ನನ್ನ ತಮ್ಮ 3 ತಿಂಗಳು ಜೈಲಿನಲ್ಲಿದ್ದ. ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದೆ ಅಂತ ಹೆಮ್ಮೆ ಇದೆ ಎಂದು ಅವರು ತಮ್ಮ ಪಾಲಿಗೆ ಬಂದೊದಗಿದ  ತುರ್ತು ಪರಿಸ್ಥಿತಿಯ ‘ಆ ದಿನಗಳನ್ನು’ ತೆರೆದಿಟ್ಟರು.

ಅಂದು ಪತ್ರಿಕೆಗಳು ಸೆನ್ಸಾರ್ ಆಗಿ ಬರುತ್ತಿತ್ತು. ಪತ್ರಿಕಾ ಸ್ವಾತಂತ್ರ್ಯ ಕಿತ್ತುಕೊಳ್ಳಲಾಗಿತ್ತು. ತುರ್ತು ಪರಿಸ್ಥಿತಿಯ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದೆ ಅಂತ ಹೆಮ್ಮೆ ಇದೆ. ವಾಜಪೇಯಿ,ದೇವೇಗೌಡರು, ಅಡ್ವಾಣಿ, ಫರ್ನಾಂಡೀಸ್ ಸೇರಿ ಅನೇಕ ನಾಯಕರು ಜೈಲಿನಲ್ಲಿ ಇದ್ದರು. ಆವತ್ತು ಹೋರಾಟ ಆಗದೇ‌ ಹೋಗಿದ್ದರೆ ಇಂದು ಭಾರತದಲ್ಲೂ ಪಾಕಿಸ್ತಾನದಂತೆ ಮಿಲಿಟರಿ ಆಡಳಿತ ಬರುತ್ತಿತ್ತು. ಈ ಹೋರಾಟದಲ್ಲಿ ಅನೇಕ ಜನ ಮೃತರಾಗಿದ್ದರು. ಆಗ ಕೊಟ್ಟ ಕಿರುಕುಳ, ಹೋರಾಟದ ಕ್ಷಣ ನನ್ನ ಜೀವನದಲ್ಲಿ ಅಚ್ಚಳಿಯದೇ ಇರಲಿದೆ. ನಾನು ಜೈಲಿಗೆ ಹೋಗಿ ಬಂದ ಮೇಲೆ ನನ್ನ ತಂದೆ ತಾಯಿ ನನ್ನ ಮನೆಗೆ ಸೇರಿಸಲಿಲ್ಲ. ನನ್ನ ಅಕ್ಕ ತಂಗಿ ಅತ್ತು ನನ್ನನ್ನ ಮನೆಗೆ ಸೇರುವಂತೆ ಮಾಡಿದ್ದರು. ಆಗ ನಡು ರಸ್ತೆಯಲ್ಲಿ ಕೂರಿಸಿ ಸಗಣಿ, ಗಂಜಲ ಹಾಕಿ ಸ್ನಾನ ಮಾಡಿಸಿ ಮನೆ ಒಳಗೆ ಕರೆದುಕೊಂಡಿದ್ದರು. ಊರಿನ ಜನ ನನಗೆ ಬೈದಿದ್ದರು. ಆದ್ರೆ ಹೋರಾಟ ಮಾಡಿದ್ದು ನನಗೆ ಹೆಮ್ಮೆ ಇದೆ. ಇದು ನನ್ನ ಕಾಣಿಕೆ ಸಾಸಿವೆ ಕಾಳಿನ‌ ಸೇವೆ ಮಾಡಿದ್ದೇನೆ ಎಂಬ ಸಮಾಧಾನ ಇದೆ ಎಂದು ತುರ್ತು ಪರಿಸ್ಥಿತಿಯ ದಿನಗಳನ್ನು ಸಚಿವ ಆರ್. ಅಶೋಕ್ ನೆನೆಸಿಕೊಂಡರು.

ಇದನ್ನೂ ಓದಿ: ರಾಘವೇಂದ್ರ ಕೇಂದ್ರ ಸಚಿವ, ವಿಜಯೇಂದ್ರ ಹಾನಗಲ್ ಕ್ಷೇತ್ರದಿಂದ ಸ್ಪರ್ಧೆ? ಯಡಿಯೂರಪ್ಪ ಕುಟುಂಬದಲ್ಲಿ ಹೀಗೊಂದು ಲೆಕ್ಕಾಚಾರ

ಸುದ್ದಿ ವಿಶ್ಲೇಷಣೆ: ಬಿಜೆಪಿಯಲ್ಲಿ ಮುಖ್ಯಮಂತ್ರಿ ಅಭ್ಯರ್ಥಿ ಇಲ್ಲ, ಕಾಂಗ್ರೆಸ್​ನಲ್ಲಿ ಈಗಲೇ ಹಲವಾರು ಮುಖ್ಯಮಂತ್ರಿಗಳು!

(Emergency Period 1975 Karnataka Revenue Minister R Ashok remembers his jail days o emergency days in Bengaluru)

Published On - 8:17 pm, Fri, 25 June 21

ತಾಜಾ ಸುದ್ದಿ
ಟ್ರಾಫಿಕ್ ರೂಲ್ಸ್​ ಉಲ್ಲಂಘಿಸುವವರೇ ಹುಷಾರ್​! ಬಂದಿದೆ ಉನ್ನತ ತಂತ್ರಜ್ಞಾನ
ಟ್ರಾಫಿಕ್ ರೂಲ್ಸ್​ ಉಲ್ಲಂಘಿಸುವವರೇ ಹುಷಾರ್​! ಬಂದಿದೆ ಉನ್ನತ ತಂತ್ರಜ್ಞಾನ
ಮಂಗಳೂರು: ಸುಂಟರಗಾಳಿಗೆ ಧರೆಗೆ ಉರುಳಿದ ವಿದ್ಯುತ್ ಕಂಬ, ಮರ; ವಿಡಿಯೋ ನೋಡಿ
ಮಂಗಳೂರು: ಸುಂಟರಗಾಳಿಗೆ ಧರೆಗೆ ಉರುಳಿದ ವಿದ್ಯುತ್ ಕಂಬ, ಮರ; ವಿಡಿಯೋ ನೋಡಿ
ಚಾಮುಂಡಿ ದರ್ಶನಕ್ಕೆ ಬಂದ ದಿನಕರ್, ಚಿಕ್ಕಣ್ಣ; ಜನಜಂಗುಳಿಯಲ್ಲಿ ಹೈರಾಣು
ಚಾಮುಂಡಿ ದರ್ಶನಕ್ಕೆ ಬಂದ ದಿನಕರ್, ಚಿಕ್ಕಣ್ಣ; ಜನಜಂಗುಳಿಯಲ್ಲಿ ಹೈರಾಣು
‘ಮಾರ್ಟಿನ್’ ಮನಸ್ತಾಪ; ಕಮಿಷನ್ ಆರೋಪಕ್ಕೆ ಎ.ಪಿ. ಅರ್ಜುನ್ ಸುದ್ದಿಗೋಷ್ಠಿ
‘ಮಾರ್ಟಿನ್’ ಮನಸ್ತಾಪ; ಕಮಿಷನ್ ಆರೋಪಕ್ಕೆ ಎ.ಪಿ. ಅರ್ಜುನ್ ಸುದ್ದಿಗೋಷ್ಠಿ
ಕುಮಾರಸ್ವಾಮಿಯವರಿಗೆ ರಾಮನಗರ ಜನರ ನಾಡಿಮಿಡಿತ ಗೊತ್ತಿಲ್ಲ:ಇಕ್ಬಾಲ್ ಹುಸ್ಸೇನ್
ಕುಮಾರಸ್ವಾಮಿಯವರಿಗೆ ರಾಮನಗರ ಜನರ ನಾಡಿಮಿಡಿತ ಗೊತ್ತಿಲ್ಲ:ಇಕ್ಬಾಲ್ ಹುಸ್ಸೇನ್
ನನಗೆ ಸೈಟು ಸಿಕ್ಕಿದ್ದು ನಿಜ ಆದರೆ ಅದು 1984ರಲ್ಲಿ: ಹೆಚ್ ಡಿ ಕುಮಾರಸ್ವಾಮಿ
ನನಗೆ ಸೈಟು ಸಿಕ್ಕಿದ್ದು ನಿಜ ಆದರೆ ಅದು 1984ರಲ್ಲಿ: ಹೆಚ್ ಡಿ ಕುಮಾರಸ್ವಾಮಿ
ರಾಮನಗರ ಇನ್ನು ಮುಂದೆ ರಾಮನಗರವಲ್ಲ ಬೆಂಗಳೂರು ದಕ್ಷಿಣ ಜಿಲ್ಲೆ!
ರಾಮನಗರ ಇನ್ನು ಮುಂದೆ ರಾಮನಗರವಲ್ಲ ಬೆಂಗಳೂರು ದಕ್ಷಿಣ ಜಿಲ್ಲೆ!
ಆಫೀಸಲ್ಲಿ ಗಬಕ್ಕಂತ ಹಾವು ಹಿಡಿದ ಮಹಿಳೆ, ನೋಡಿದರೆ ಎದೆ ಝಲ್ಲೆನ್ನುತ್ತೆ!
ಆಫೀಸಲ್ಲಿ ಗಬಕ್ಕಂತ ಹಾವು ಹಿಡಿದ ಮಹಿಳೆ, ನೋಡಿದರೆ ಎದೆ ಝಲ್ಲೆನ್ನುತ್ತೆ!
ನದಿಲಿ ಕೊಚ್ಚಿಕೊಂಡು ಹೋಗ್ತಿದ್ದ ಹಸು ಉಳಿಸಲು ಜೀವ ಪಣಕ್ಕಿಟ್ಟ ಹೋಂ ಗಾರ್ಡ್ಸ್
ನದಿಲಿ ಕೊಚ್ಚಿಕೊಂಡು ಹೋಗ್ತಿದ್ದ ಹಸು ಉಳಿಸಲು ಜೀವ ಪಣಕ್ಕಿಟ್ಟ ಹೋಂ ಗಾರ್ಡ್ಸ್
ಆಷಾಢ ಮಾಸದ ಮೂರನೇ ಶುಕ್ರವಾರ ಚಾಮುಂಡೇಶ್ವರಿ ಸನ್ನಿಧಿಗೆ ಬಂದ ಸೂರಜ್ ರೇವಣ್ಣ
ಆಷಾಢ ಮಾಸದ ಮೂರನೇ ಶುಕ್ರವಾರ ಚಾಮುಂಡೇಶ್ವರಿ ಸನ್ನಿಧಿಗೆ ಬಂದ ಸೂರಜ್ ರೇವಣ್ಣ