ರಾಘವೇಂದ್ರ ಕೇಂದ್ರ ಸಚಿವ, ವಿಜಯೇಂದ್ರ ಹಾನಗಲ್ ಕ್ಷೇತ್ರದಿಂದ ಸ್ಪರ್ಧೆ? ಯಡಿಯೂರಪ್ಪ ಕುಟುಂಬದಲ್ಲಿ ಹೀಗೊಂದು ಲೆಕ್ಕಾಚಾರ…

ಮುಖ್ಯಮಂತ್ರಿ ಯಡಿಯೂರಪ್ಪ ಬದಲಾವಣೆ ಚರ್ಚೆ ನಡುವೆ ಅವರ ಪುತ್ರ ಬಿ.ವೈ. ವಿಜಯೇಂದ್ರ ರಾಜಕೀಯವಾಗಿ ಭದ್ರ ನೆಲೆ ಕಾಣುವ ಪ್ರಯತ್ನದಲ್ಲಿದ್ದಾರೆ. ಯಡಿಯೂರಪ್ಪ ಮುಖ್ಯಮಂತ್ರಿ ಆಗಿರುವಾಗಲೇ ವಿಧಾನಸಭೆ ಪ್ರವೇಶಕ್ಕೆ ವಿಜಯೇಂದ್ರ ತಯಾರಿ ಆರಂಭಿಸಿದ್ದಾರೆ. ಬಿಜೆಪಿ ಹಿರಿಯ ನಾಯಕ ಸಿ.ಎಂ. ಉದಾಸಿ ನಿಧನದಿಂದ ತೆರವಾದ ಹಾನಗಲ್ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಚಿಂತಿಸಿದ್ದಾರೆ. ಹಾನಗಲ್ ನಿಂದ ಸ್ಪರ್ಧಿಸುವ ಬಗ್ಗೆ ಕುಟುಂಬದೊಂದಿಗೂ ಚರ್ಚೆ ನಡೆಸಿದ್ದಾರೆ.

ರಾಘವೇಂದ್ರ ಕೇಂದ್ರ ಸಚಿವ, ವಿಜಯೇಂದ್ರ ಹಾನಗಲ್ ಕ್ಷೇತ್ರದಿಂದ ಸ್ಪರ್ಧೆ? ಯಡಿಯೂರಪ್ಪ ಕುಟುಂಬದಲ್ಲಿ ಹೀಗೊಂದು ಲೆಕ್ಕಾಚಾರ...
ರಾಘವೇಂದ್ರ ಕೇಂದ್ರ ಸಚಿವ, ವಿಜಯೇಂದ್ರ ಹಾನಗಲ್ ಕ್ಷೇತ್ರದಿಂದ ಸ್ಪರ್ಧೆ? ಯಡಿಯೂರಪ್ಪ ಕುಟುಂಬದಲ್ಲಿ ಹೀಗೊಂದು ಲೆಕ್ಕಾಚಾರ..!
Follow us
TV9 Web
| Updated By: ಸಾಧು ಶ್ರೀನಾಥ್​

Updated on: Jun 25, 2021 | 7:16 PM

ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ ಬದಲಾವಣೆ ವಿಚಾರ ರಾಜ್ಯ ಬಿಜೆಪಿಯಲ್ಲಿ ಹಾಟ್ ಟಾಪಿಕ್. ಯಡಿಯೂರಪ್ಪ ಬದಲಾವಣೆ ಇಲ್ಲ ಎಂದು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಸ್ಪಷ್ಟಪಡಿಸಿದ್ದರೂ ಯಡಿಯೂರಪ್ಪ ವಿರೋಧಿ ಬಣವಂತೂ ಬದಲಾವಣೆ ಖಚಿತ, ಸ್ವಲ್ಪ ತಡವಾಗಬಹುದು ಅಷ್ಟೆ ಎಂಬ ವಿಶ್ವಾಸಲ್ಲಿದೆ.

ಮುಖ್ಯಮಂತ್ರಿ ಯಡಿಯೂರಪ್ಪ ಬದಲಾವಣೆ ಚರ್ಚೆ ನಡುವೆ ಅವರ ಪುತ್ರ ಬಿ.ವೈ. ವಿಜಯೇಂದ್ರ ರಾಜಕೀಯವಾಗಿ ಭದ್ರ ನೆಲೆ ಕಾಣುವ ಪ್ರಯತ್ನದಲ್ಲಿದ್ದಾರೆ. ಯಡಿಯೂರಪ್ಪ ಮುಖ್ಯಮಂತ್ರಿ ಆಗಿರುವಾಗಲೇ ವಿಧಾನಸಭೆ ಪ್ರವೇಶಕ್ಕೆ ವಿಜಯೇಂದ್ರ ತಯಾರಿ ಆರಂಭಿಸಿದ್ದಾರೆ. ಬಿಜೆಪಿ ಹಿರಿಯ ನಾಯಕ ಸಿ.ಎಂ. ಉದಾಸಿ ನಿಧನದಿಂದ ತೆರವಾದ ಹಾನಗಲ್ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಚಿಂತಿಸಿದ್ದಾರೆ. ಹಾನಗಲ್ ನಿಂದ ಸ್ಪರ್ಧಿಸುವ ಬಗ್ಗೆ ಕುಟುಂಬದೊಂದಿಗೂ ಚರ್ಚೆ ನಡೆಸಿದ್ದಾರೆ.

ವಿಜಯೇಂದ್ರ ಹಾನಗಲ್ ನಿಂದ ಸ್ಪರ್ಧೆ ಮಾಡಿದ್ರೆ ಗೆಲುವು ಸುಲಭದ ತುತ್ತಾಗಬಹುದಾ ಎಂಬ ಸಮಾಲೋಚನೆ ನಡೆದಿದೆ. ಹಿಂದೆ ನಡೆದ ಬಸವಕಲ್ಯಾಣದಿಂದ ಉಪಚುನಾವಣೆಯಲ್ಲಿ ವಿಜಯೇಂದ್ರ ಕಣಕ್ಕಿಳಿಯುವ ಆಸಕ್ತಿ ಹೊಂದಿದ್ದರು. ಆದರೆ ಹೈಕಮಾಂಡ್ ಗ್ರೀನ್ ಸಿಗ್ನಲ್ ನೀಡಿರಲಿಲ್ಲ ಎನ್ನುವ ಮಾತಿದೆ.

BY Raghavendra may become minister in PM Modi Cabinet BY Vijayendra may contest Hangal By Election 3

ರಾಘವೇಂದ್ರ ಕೇಂದ್ರ ಸಚಿವ, ವಿಜಯೇಂದ್ರ ಹಾನಗಲ್ ಕ್ಷೇತ್ರದಿಂದ ಸ್ಪರ್ಧೆ?

ಇನ್ನು ಮುಂದಿನ ಮುಂಗಾರು ಅಧಿವೇಶನಕ್ಕೂ ಮುನ್ನ ಕೇಂದ್ರ ಸಂಪುಟ ಪುನಾರಚನೆಗೆ ಪ್ರಧಾನಿ ನರೇಂದ್ರ ಮೋದಿ‌ ಸಿದ್ಧತೆ ನಡೆಸಿದ್ದಾರೆ. ಖಾಲಿ ಇರುವ 20 ಸಚಿವ ಸ್ಥಾನಗಳನ್ನು ತುಂಬುವ ಬಗ್ಗೆ ಮೋದಿ ಆಸಕ್ತಿ ವಹಿಸಿದ್ದಾರೆ. ಬಿಜೆಪಿ ಹಾಗೂ ಆರ್​ಎಸ್​ಎಸ್​ ಉನ್ನತ ನಾಯಕರೊಂದಿಗೆ ಮೋದಿ ಚರ್ಚೆ ನಡೆಸಿದ್ದ್ದಾರೆ. ಕೇಂದ್ರ ರೈಲ್ವೇ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿಯವರಿಂದ ತೆರವಾದ ಸ್ಥಾನಕ್ಕೆ‌ ರಾಜ್ಯದ ಸಂಸದರಲ್ಲಿ ಪೈಪೋಟಿ ಶುರುವಾಗಿದೆ.

ಅದರಲ್ಲೂ ಲಿಂಗಾಯತ ಸಂಸದರಲ್ಲಿ ಆಸೆ ಚಿಗುರೊಡೆದಿದೆ. ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ ಕೂಡ ಕೇಂದ್ರ ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ತಮ್ಮದೇ ಮೂಲಗಳ‌ ಮೂಲಕ ಹೈಕಮಾಂಡ್ ಮೇಲೆ‌ ಒತ್ತಡ ಹೇರುತ್ತಿದ್ದಾರೆ. ಒಂದು ವೇಳೆ ರಾಘವೇಂದ್ರ ಸಚಿವ ಸ್ಥಾನ ದಕ್ಕಿಸಿಕೊಂಡಿದ್ದೇ ಆದಲ್ಲಿ ರಾಜ್ಯ ಬಿಜೆಪಿಯಲ್ಲಿ ಭಾರೀ ಬದಲಾವಣೆಗೆ ಮುನ್ನುಡಿ ಬರೆಯಲಿದೆ. ಸಿಎಂ‌ ಬದಲಾವಣೆ ಚರ್ಚೆ ಮತ್ತೆ ಮುನ್ನೆಲೆಗೆ ಬರುವ ಸಾಧ್ಯತೆ ಇದೆ.

ಸಿಎಂ‌ ಬದಲಾವಣೆ ಆಗುತ್ತೆ ಎಂಬ ವಿಶ್ವಾದಲ್ಲಿರುವ ನಾಯಕರ ಮಾತಿನಲ್ಲಿ ನಂಬಿಕೆ ಇಡುವುದೆ ಆಗಿದ್ದರೆ, ಯಡಿಯೂರಪ್ಪ ಪುತ್ರರಾದ ರಾಘವೇಂದ್ರ, ವಿಜಯೇಂದ್ರ ರಾಜಕೀಯ ಭವಿಷ್ಯ ಭದ್ರಪಡಿಸಿಕೊಳ್ಳಲು ಪಯತ್ನಿಸುತ್ತಿರುವ ಚಟುವಟಿಕೆಗಳೂ ಪೂರಕವಾಗಿವೆ.

– ಹರೀಶ್, ಟಿವಿ ನೈನ್, ನವದೆಹಲಿ

(BY Raghavendra may become minister in PM Narendra Modi Cabinet and BY Vijayendra may contest from Hangal assembly constituency)

ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?