ಮದುವೆ ಸಮಾರಂಭಗಳಲ್ಲಿ 40 ಮಂದಿ ಪಾಲ್ಗೊಳ್ಳಲು ಕರ್ನಾಟಕ ಸರ್ಕಾರ ಅನುಮತಿ
ಕಲ್ಯಾಣ ಮಂಟಪಗಳಲ್ಲಿ ನಡೆಯುವ ಮದುವೆಯಲ್ಲಿ ಪಾಲ್ಗೊಳ್ಳಲು 40 ಜನರಿಗೆ ಅವಕಾಶ ನೀಡಲಾಗುವುದು. ಮದುವೆಯಲ್ಲಿ ಭಾಗಿಯಾಗುವವರಿಗೆ ಪಾಸ್ ಕಡ್ಡಾಯ ಎಂದು ಸರ್ಕಾರ ತಿಳಿಸಿದೆ.
ಬೆಂಗಳೂರು: ಕಲ್ಯಾಣ ಮಂಟಪಗಳಲ್ಲಿ ಸೋಮವಾರದಿಂದ ಮದುವೆಗಳಿಗೆ ಷರತ್ತುಬದ್ಧ ಅನುಮತಿ ನೀಡಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ನಿರ್ಧರಿಸಲಾಯಿತು. ಕಲ್ಯಾಣ ಮಂಟಪಗಳಲ್ಲಿ ನಡೆಯುವ ಮದುವೆಯಲ್ಲಿ ಪಾಲ್ಗೊಳ್ಳಲು 40 ಜನರಿಗೆ ಅವಕಾಶ ನೀಡಲಾಗುವುದು. ಮದುವೆಯಲ್ಲಿ ಭಾಗಿಯಾಗುವವರಿಗೆ ಪಾಸ್ ಕಡ್ಡಾಯ ಎಂದು ಸರ್ಕಾರ ತಿಳಿಸಿದೆ.
ಹೋಟೆಲ್, ಪಾರ್ಟಿಹಾಲ್, ರೆಸಾರ್ಟ್‌ಗಳಲ್ಲೂ ಸರ್ಕಾರ ಮದುವೆ ಸಮಾರಂಭ ನಡೆಸಲು ಅನುಮತಿ ನೀಡಿದೆ. ಸೋಮವಾರದಿಂದ ಜಾರಿಗೆ ಬರುವಂತೆ ಷರತ್ತುಬದ್ಧ ಅನುಮತಿ
ಕಲ್ಯಾಣ ಮಂಟಪ, ಹೋಟೆಲ್, ಪಾರ್ಟಿ ಹಾಲ್ ಮತ್ತು ರೆಸಾರ್ಟ್ಗಳಲ್ಲಿ 40 ಜನಕ್ಕೆ ಸೀಮಿತಗೊಳಿಸಿ ಅನುಮತಿ ನೀಡಲಾಗುತ್ತದೆ. ವೈಯಕ್ತಿಕ ಪಾಸ್ ಗಳೊಂದಿಗೆ ಮದುವೆ ಸಮಾರಂಭಗಳಿಗೆ ಅನುಮತಿ ನೀಡಲು ಸಭೆ ತೀರ್ಮಾನಿಸಿತು.
ಕರ್ನಾಟಕ ಸರ್ಕಾರ ಶುಕ್ರವಾರ ಸಂಜೆ 7 ಗಂಟೆಯಿಂದ ಸೋಮವಾರ ಬೆಳಗ್ಗೆ 5 ಗಂಟೆಯವರೆಗೆ ವಾರಾಂತ್ಯ ಕರ್ಫ್ಯೂ ಘೋಷಿಸಲಾಗಿದೆ. ಬೆಂಗಳೂರು ಹಾಗೂ ಇತರ 19 ಜಿಲ್ಲೆಗಳಲ್ಲಿ ಈ ನಿಯಮ ಇರಲಿದೆ. ಈ ಅವಧಿಯಲ್ಲಿ ಅಗತ್ಯ ವಸ್ತು ಖರೀದಿಗೆ ಅವಕಾಶ ನೀಡಲಾಗಿದೆ. ಬೆಳಗ್ಗೆ 6 ಗಂಟೆಯಿಂದ ಮಧ್ಯಾಹ್ನ 2 ಗಂಟೆಯ ವರೆಗೆ ಅಗತ್ಯ ವಸ್ತು ಖರೀದಿಗೆ ಸಮಯಾವಕಾಶ ನೀಡಲಾಗಿದೆ.
ಜೂನ್ 21ರ ನಂತರ ಕರ್ನಾಟಕ ಸರ್ಕಾರ ಲಾಕ್ಡೌನ್ ನಿಯಮಾವಳಿಗಳಲ್ಲಿ ಹಲವು ಸಡಿಲಿಕೆಗಳನ್ನು ಮಾಡಿದೆ. ಆದರೂ ವಾರಾಂತ್ಯ ಕರ್ಫ್ಯೂ ಹಾಗೂ ರಾತ್ರಿ ಕರ್ಫ್ಯೂ ಜಾರಿಯಲ್ಲಿದೆ. ಕೊರೊನಾ ವೈರಸ್ ಹರಡುವಿಕೆ ತಡೆಗಟ್ಟುವಿಕೆಯ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ಆಹಾರ ಸಾಮಾಗ್ರಿಗಳ ಅಂಗಡಿ, ದಿನಸಿ ಅಂಗಡಿ, ಹಣ್ಣು, ತರಕಾರಿ ಅಂಗಡಿಗಳು, ಮಾಂಸ, ಮೀನು ಮಾರಾಟ, ಹಾಲು ಹಾಗೂ ಇತರ ಡೈರಿ ಉತ್ಪನ್ನಗಳ ಮಾರುಕಟ್ಟೆಯು ವಾರಾಂತ್ಯದ ಕರ್ಫ್ಯೂ ಅವಧಿಯಲ್ಲೂ ತೆರೆದಿರುತ್ತದೆ. ಶನಿವಾರ ಹಾಗೂ ಭಾನುವಾರ ಕೂಡ ಇವು ತೆರೆದಿರುತ್ತವೆ. ಬೀದಿಬದಿ ವ್ಯಾಪಾರಿಗಳಿಗೂ ಬೆಳಗ್ಗೆ 6 ಗಂಟೆಯಿಂದ 2 ಗಂಟೆಯವರೆಗೆ ಕಾರ್ಯನಿರ್ವಹಿಸಲು ಅವಕಾಶ ನೀಡಲಾಗಿದೆ.
ಮದ್ಯದ ಅಂಗಡಿಗಳಿಗೆ ಪಾರ್ಸೆಲ್ ನೀಡುವ ವ್ಯವಸ್ಥೆಗೆ ಅವಕಾಶ ನೀಡಲಾಗಿದೆ. ಅದೂ ಕೂಡ ಬೆಳಗ್ಗೆ 6 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಮದ್ಯ ಪಾರ್ಸೆಲ್ ನೀಡುವ ಅವಕಾಶ ಇದೆ. ಅಲ್ಲದೆ, ಎಲ್ಲಾ ರೀತಿಯ ವಸ್ತುಗಳ ಹೋಮ್ ಡೆಲಿವರಿಗೆ ದಿನದ 24 ಗಂಟೆಗಳಲ್ಲೂ ಅವಕಾಶ ನೀಡಲಾಗಿದೆ.
(Karnataka Govt Gives Permission for marriages with 40 people)
ಇದನ್ನೂ ಓದಿ: ಕೊವಿಡ್ ಲಸಿಕೆಯನ್ನು ಗರ್ಭಿಣಿಯರಿಗೆ ನೀಡಬೇಕು, ಅದು ಅವರಿಗೆ ಉಪಯುಕ್ತ: ಐಸಿಎಂಆರ್
ಇದನ್ನೂ ಓದಿ: ಭಾರತಕ್ಕೆ ಶೀಘ್ರ ಮತ್ತೊಂದು ಲಸಿಕೆ: ಕೊವಾವ್ಯಾಕ್ಸ್ ಲಸಿಕೆ ಉತ್ಪಾದನೆ ಆರಂಭಿಸಿದ ಪುಣೆಯ ಸೆರಮ್ ಇನ್ಸ್ಟಿಟ್ಯೂಟ್