Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊವಿಡ್ ಲಸಿಕೆಯನ್ನು ಗರ್ಭಿಣಿಯರಿಗೆ ನೀಡಬೇಕು, ಅದು ಅವರಿಗೆ ಉಪಯುಕ್ತ: ಐಸಿಎಂಆರ್

ICMR: ದೇಶದ ಕೊವಿಡ್ -19 ಪರಿಸ್ಥಿತಿ ಕುರಿತು ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಭಾರ್ಗವ, ಕೇವಲ ಒಂದು ದೇಶ ಮಾತ್ರ ಮಕ್ಕಳಿಗೆ ಕೋವಿಡ್ -19 ಲಸಿಕೆ ನೀಡುತ್ತಿದೆ. 2-18 ವಯಸ್ಸಿನ ಮಕ್ಕಳ ಬಗ್ಗೆ ಸಣ್ಣ ಅಧ್ಯಯನವನ್ನು ನಡೆಸಲಾಗಿದ್ದು, ಸೆಪ್ಟೆಂಬರ್ ವೇಳೆಗೆ ಫಲಿತಾಂಶಗಳು ಬರುವ ಸಾಧ್ಯತೆ ಇದೆ ಎಂದು ಅವರು ಹೇಳಿದರು.

ಕೊವಿಡ್ ಲಸಿಕೆಯನ್ನು ಗರ್ಭಿಣಿಯರಿಗೆ ನೀಡಬೇಕು, ಅದು ಅವರಿಗೆ ಉಪಯುಕ್ತ: ಐಸಿಎಂಆರ್
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Jun 25, 2021 | 7:26 PM

ದೆಹಲಿ: ಕೊವಿಡ್ -19 ಲಸಿಕೆ ಗರ್ಭಿಣಿಯರಿಗೆ ಉಪಯುಕ್ತವಾದ ಕಾರಣ ಅವರಿಗೆ ನೀಡಬೇಕು ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಮಹಾನಿರ್ದೇಶಕ ಡಾ. ಬಲರಾಮ್ ಭಾರ್ಗವ ಶುಕ್ರವಾರ ಹೇಳಿದ್ದಾರೆ. ಗರ್ಭಿಣಿಯರಿಗೆ ಲಸಿಕೆ ನೀಡಬಹುದು ಎಂದು ಆರೋಗ್ಯ ಸಚಿವಾಲಯ ಮಾರ್ಗಸೂಚಿಯಲ್ಲಿ ಹೇಳಿದೆ. ಗರ್ಭಿಣಿ ಮಹಿಳೆಯರಿಗೆ ವ್ಯಾಕ್ಸಿನೇಷನ್ ಉಪಯುಕ್ತವಾಗಿದೆ,ಅದನ್ನು ನೀಡಬೇಕು ಎಂದು ಅವರು ಹೇಳಿದರು. ದೇಶದ ಕೊವಿಡ್ -19 ಪರಿಸ್ಥಿತಿ ಕುರಿತು ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಭಾರ್ಗವ, ಕೇವಲ ಒಂದು ದೇಶ ಮಾತ್ರ ಮಕ್ಕಳಿಗೆ ಕೋವಿಡ್ -19 ಲಸಿಕೆ ನೀಡುತ್ತಿದೆ. 2-18 ವಯಸ್ಸಿನ ಮಕ್ಕಳ ಬಗ್ಗೆ ಸಣ್ಣ ಅಧ್ಯಯನವನ್ನು ನಡೆಸಲಾಗಿದ್ದು, ಸೆಪ್ಟೆಂಬರ್ ವೇಳೆಗೆ ಫಲಿತಾಂಶಗಳು ಬರುವ ಸಾಧ್ಯತೆ ಇದೆ ಎಂದು ಅವರು ಹೇಳಿದರು.

ತೀರಾ ಸಣ್ಣ ಮಕ್ಕಳಿಗೆ ಲಸಿಕೆ ಅಗತ್ಯವಿದೆಯೇ ಎಂಬುದು ಇನ್ನೂ ಪ್ರಶ್ನೆಯಾಗಿಯೇ ಉಳಿದಿದೆ ಎಂದು ಭಾರ್ಗವ ಹೇಳಿದರು. ಅಲ್ಲಿಯವರೆಗೆ ನಾವು ಮಕ್ಕಳಿಗೆ ಲಸಿಕೆ ನೀಡುವ ಬಗ್ಗೆ ಹೆಚ್ಚಿನ ಡೇಟಾವನ್ನು ಹೊಂದಿರುತ್ತೇವೆ, ಹೆಚ್ಚಿನ ಪ್ರಮಾಣದಲ್ಲಿ ಮಕ್ಕಳಿಗೆ ಲಸಿಕೆ ಹಾಕಲು ನಮಗೆ ಸಾಧ್ಯವಾಗುವುದಿಲ್ಲ ಎಂದು ಅವರು ಹೇಳಿದರು. ಕೊವಿಡ್ -19 ವಿರುದ್ಧ ಗರ್ಭಿಣಿ ಮಹಿಳೆಯರಿಗೆ ಲಸಿಕೆ ಹಾಕುವ ಮಾರ್ಗಸೂಚಿಗಳನ್ನು ಸರ್ಕಾರ ಶೀಘ್ರದಲ್ಲೇ ಬಿಡುಗಡೆ ಮಾಡುತ್ತದೆ. ಪ್ರಸ್ತುತ, ಭಾರತದಲ್ಲಿ ಹಾಲುಣಿಸುವ ಮಹಿಳೆಯರಿಗೆ ಮಾತ್ರ ಕೊವಿಡ್ -19 ಲಸಿಕೆ ತೆಗೆದುಕೊಳ್ಳಲು ಶಿಫಾರಸು ಮಾಡಲಾಗಿದೆ.

ಐಸಿಎಂಆರ್ ಇತ್ತೀಚಿನ ಅಧ್ಯಯನವೊಂದರಲ್ಲಿ ಗರ್ಭಿಣಿ ಮತ್ತು ಪ್ರಸವನಂತರದ ಮಹಿಳೆಯರು ಭಾರತದ ಎರಡನೇ ಕೊವಿಡ್ -19 ಅಲೆಯಲ್ಲಿ ಮೊದಲಿಗಿಂತ ಹೆಚ್ಚು ತೀವ್ರ ಪರಿಣಾಮಕ್ಕೊಳಗಾಗಿದ್ದಾರೆ ಎಂದು ತಿಳಿದುಬಂದಿದೆ. ಈ ವರ್ಷ ಸಾವಿನ ಪ್ರಮಾಣ ಮತ್ತು ರೋಗಲಕ್ಷಣದ ಪ್ರಕರಣಗಳು ಗಮನಾರ್ಹವಾಗಿ ಹೆಚ್ಚಿವೆ.

ಇದನ್ನೂ  ಓದಿ: Delta Plus variant ದೇಶದಲ್ಲಿ 50 ಡೆಲ್ಟಾ ಪ್ಲಸ್ ಪ್ರಕರಣಗಳು ಪತ್ತೆ, ಮಹಾರಾಷ್ಟ್ರದಲ್ಲಿ ಅತೀ  ಹೆಚ್ಚು: ಕೇಂದ್ರ ಸರ್ಕಾರ

(Covid-19 vaccine should be given to pregnant women as it is useful for them says ICMR Director-General Dr Balram Bhargava)

Published On - 7:16 pm, Fri, 25 June 21

ನಟ್ಟು ಬೋಲ್ಟು ಸರಿಮಾಡುವ ಸ್ಪ್ಯಾನರ್ ಜನರ ಬಳಿ ಇರುತ್ತದೆ: ನಿಖಿಲ್
ನಟ್ಟು ಬೋಲ್ಟು ಸರಿಮಾಡುವ ಸ್ಪ್ಯಾನರ್ ಜನರ ಬಳಿ ಇರುತ್ತದೆ: ನಿಖಿಲ್
ಮತ್ತೆ ಹಳ್ಳಿ ಹುಡುಗಿ ಅವತಾರದಲ್ಲಿ ಸಪ್ತಮಿ ಗೌಡ; ಅನುಭವ ಹಂಚಿಕೊಂಡ ನಟಿ
ಮತ್ತೆ ಹಳ್ಳಿ ಹುಡುಗಿ ಅವತಾರದಲ್ಲಿ ಸಪ್ತಮಿ ಗೌಡ; ಅನುಭವ ಹಂಚಿಕೊಂಡ ನಟಿ
ಕದಿಯಲು ಆಕೆಯದ್ದೇ ಬ್ಯಾಗ್​ ಬೇಕಿತ್ತಾ, ಯಾಕಾದ್ರೂ ಕದ್ನೋ ಅನ್ನೋ ಸ್ಥಿತಿ
ಕದಿಯಲು ಆಕೆಯದ್ದೇ ಬ್ಯಾಗ್​ ಬೇಕಿತ್ತಾ, ಯಾಕಾದ್ರೂ ಕದ್ನೋ ಅನ್ನೋ ಸ್ಥಿತಿ
ಸತೀಶ್ ಜಾರಕಿಹೊಳಿ ದೆಹಲಿಗೆ ಯಾಕೆ ಹೋಗಿದ್ದು ಅಂತ ಗೊತ್ತಿಲ್ಲ: ರಾಜಣ್ಣ
ಸತೀಶ್ ಜಾರಕಿಹೊಳಿ ದೆಹಲಿಗೆ ಯಾಕೆ ಹೋಗಿದ್ದು ಅಂತ ಗೊತ್ತಿಲ್ಲ: ರಾಜಣ್ಣ
ಶಿವಕುಮಾರ್ ರಾಜೀನಾಮೆಗೆ ಆಗ್ರಹಿಸಿದ ಪ್ರತಿಭಟನೆಕಾರರು
ಶಿವಕುಮಾರ್ ರಾಜೀನಾಮೆಗೆ ಆಗ್ರಹಿಸಿದ ಪ್ರತಿಭಟನೆಕಾರರು
ನ್ಯಾಯಾಧೀಶರ ಹನಿಟ್ರ್ಯಾಪ್​ಗೆ​ ಯತ್ನ? ರಾಜಣ್ಣ ಸ್ಪಷ್ಟನೆ
ನ್ಯಾಯಾಧೀಶರ ಹನಿಟ್ರ್ಯಾಪ್​ಗೆ​ ಯತ್ನ? ರಾಜಣ್ಣ ಸ್ಪಷ್ಟನೆ
ಹನಿಟ್ರ್ಯಾಪ್ ಮಾಡಲು ಬ್ಲೂ ಜೀನ್ಸ್ ಹುಡುಗಿ ಬಂದಿದ್ಳು: ರಾಜಣ್ಣ
ಹನಿಟ್ರ್ಯಾಪ್ ಮಾಡಲು ಬ್ಲೂ ಜೀನ್ಸ್ ಹುಡುಗಿ ಬಂದಿದ್ಳು: ರಾಜಣ್ಣ
ರನ್ಯಾ ಪ್ರಕರಣದಲ್ಲಿ ಡಿಅರ್​ಐ, ಸಿಎಂಗೆ ವರದಿ ಸಲ್ಲಿಸಿರಬಹುದು: ಪರಮೇಶ್ವರ್
ರನ್ಯಾ ಪ್ರಕರಣದಲ್ಲಿ ಡಿಅರ್​ಐ, ಸಿಎಂಗೆ ವರದಿ ಸಲ್ಲಿಸಿರಬಹುದು: ಪರಮೇಶ್ವರ್
ಬಿಡದಿ ರೈಲ್ವೆ ನಿಲ್ದಾಣ ಸ್ಫೋಟಿಸುವುದಾಗಿ ಬೆದರಿಕೆ ಕರೆ
ಬಿಡದಿ ರೈಲ್ವೆ ನಿಲ್ದಾಣ ಸ್ಫೋಟಿಸುವುದಾಗಿ ಬೆದರಿಕೆ ಕರೆ
ಉತ್ತರ ಕರ್ನಾಟಕದ ಅನೇಕ ಭಾಗಗಳಲ್ಲಿ ನೀರಿನ ಸಮಸ್ಯೆ, ಎಲ್ಲಿ ಜನಪ್ರತಿನಿಧಿಗಳು?
ಉತ್ತರ ಕರ್ನಾಟಕದ ಅನೇಕ ಭಾಗಗಳಲ್ಲಿ ನೀರಿನ ಸಮಸ್ಯೆ, ಎಲ್ಲಿ ಜನಪ್ರತಿನಿಧಿಗಳು?