AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IRCTC Bharat Darshan Tour: ಏಳು ಜ್ಯೋತಿರ್ಲಿಂಗ ಕ್ಷೇತ್ರ ಮತ್ತು ಪ್ರಮುಖ ಪ್ರವಾಸಿ ತಾಣಗಳಿಗೆ ಭಾರತ್ ದರ್ಶನ್ ಸ್ಪೆಷಲ್ ಟೂರಿಸ್ಟ್ ಟ್ರೇನ್ ಆಗಸ್ಟ್ 24ರಿಂದ

ಮೂಲಗಳ ಪ್ರಕಾರ ಐಆರ್​ಸಿಟಿಸಿ ಅತ್ಯಂತ ಮಿತವ್ಯಯಕರ ಮತ್ತು ಎಲ್ಲ ಖರ್ಚು-ವೆಚ್ಚಗಳನ್ನೊಳಗೊಂಡ ಪ್ಯಾಕೇಜ್ ಅನ್ನು ಪ್ರವಾಸ ಮಾಡಲಿಚ್ಛಸುವವರಿಗೆ ನೀಡಲಿದೆ. ಈ ಪ್ರವಾಸವು ಭಾರತದ ಏಳು ಜ್ಯೋತಿರ್ಲಿಂಗಳಿರುವ ಕ್ಷೇತ್ರಗಳು, ದ್ವಾರಕಾ ಮತ್ತು ಗುಜರಾತ್​ನಲ್ಲಿರುವ ಸ್ಟ್ಯಾಚ್ಯೂ ಅಫ್ ಯುನಿಟಿ ಸೇರಿದಂತೆ ಎಲ್ಲಾ ಪ್ರಮುಖ ಪ್ರವಾಸಿ ತಾಣಗಳನ್ನೊಳಗೊಂಡಿದೆ.

IRCTC Bharat Darshan Tour: ಏಳು ಜ್ಯೋತಿರ್ಲಿಂಗ ಕ್ಷೇತ್ರ ಮತ್ತು ಪ್ರಮುಖ ಪ್ರವಾಸಿ ತಾಣಗಳಿಗೆ ಭಾರತ್ ದರ್ಶನ್ ಸ್ಪೆಷಲ್ ಟೂರಿಸ್ಟ್ ಟ್ರೇನ್ ಆಗಸ್ಟ್ 24ರಿಂದ
ಭಾರತ ದರ್ಶನ ವಿಶೇಷ ರೈಲು
ಅರುಣ್​ ಕುಮಾರ್​ ಬೆಳ್ಳಿ
|

Updated on: Jun 25, 2021 | 8:03 PM

Share

ನವದೆಹಲಿ: ಬೇರೆಲ್ಲ ಸಾರಿಗೆ ಮಾಧ್ಯಮಗಳ ಹಾಗೆ ಭಾರತೀಯ ರೇಲ್ವೇಸ್ ಸಹ ಕೊವಿಡ್​-19 ಪಿಡುಗಿನಿಂದಾಗಿ ಭಾರೀ ಹಾನಿ ಅನುಭವಿಸಿದೆ. ಅದನ್ನು ಸ್ವಲ್ಪಮಟ್ಟಿಗಾದರು ಸರಿದೂಗಿಸಿಕೊಳ್ಳುವ ಎಂಬ ಯೋಚನೆಯೊಂದಿಗೆ ರೇಲ್ವೇ ಇಲಾಖೆಯು ಆಗಸ್ಟ್​ ತಿಂಗಳಲ್ಲಿ ಏಳು ಜ್ಯೋತಿರ್ಲಿಂಗಳಿರುವ ಪುಣ್ಯಕ್ಷೇತ್ರಗಳು ಸೇರಿದಂತೆ ದೇಶದ ಪ್ರಮುಖ ಪ್ರವಾಸಿ ತಾಣಗಳಿಗೆ ಒಂದು ವಿಶೇಷ ರೈಲು ಬಿಡುವ ನಿರ್ಧಾರ ತೆಗೆದುಕೊಂಡಿದೆ. ಈ ವಿಶೇಷ ರೈಲನ್ನು ಭಾರತ್ ದರ್ಶನ್ ಸ್ಪೆಷಲ್ ಟೂರಿಸ್ಟ್ ಟ್ರೇನ್ ಎಂದು ಕರೆಯಲಾಗುವುದು ಮತ್ತು ಇದನ್ನು ಭಾರತೀಯ ರೇಲ್ವೇ ಅಡುಗೆ ಮತ್ತು ಪ್ರವಾಸೋದ್ಯಮ ನಿಗಮ (ಐಆರ್​ಸಿಟಿಸಿ) ಆಗಸ್ಟ್​ 24ರಿಂದ ಆಪರೇಟ್​ ಮಾಡಲಿದೆ.

ಮೂಲಗಳ ಪ್ರಕಾರ ಐಆರ್​ಸಿಟಿಸಿ ಅತ್ಯಂತ ಮಿತವ್ಯಯಕರ ಮತ್ತು ಎಲ್ಲ ಖರ್ಚು-ವೆಚ್ಚಗಳನ್ನೊಳಗೊಂಡ ಪ್ಯಾಕೇಜ್ ಅನ್ನು ಪ್ರವಾಸ ಮಾಡಲಿಚ್ಛಸುವವರಿಗೆ ನೀಡಲಿದೆ. ಈ ಪ್ರವಾಸವು ಭಾರತದ ಏಳು ಜ್ಯೋತಿರ್ಲಿಂಗಳಿರುವ ಕ್ಷೇತ್ರಗಳು, ದ್ವಾರಕಾ ಮತ್ತು ಗುಜರಾತ್​ನಲ್ಲಿರುವ ಸ್ಟ್ಯಾಚ್ಯೂ ಅಫ್ ಯುನಿಟಿ ಸೇರಿದಂತೆ ಎಲ್ಲಾ ಪ್ರಮುಖ ಪ್ರವಾಸಿ ತಾಣಗಳನ್ನೊಳಗೊಂಡಿದೆ.

ಆಗಸ್ಟ್​ 24 ರಂದಯ ಆರಂಭವಾಗುವ ಈ ರೇಲ್ವೇಸ್​ ಭಾರತ್ ದರ್ಶನ್ ಸ್ಪೆಷಲ್ ಟ್ರೇನ್ ಸೇವೆಯು ಎರಡು ವಾರಗಳ ಅವಧಿಯದಾಗಿರುತ್ತದೆ. ಈ ಟ್ರೇನು ಸೆಪ್ಟಂಬರ್ ಏಳರಂದು ನವದೆಹಲಿಗೆ ಹಿಂತಿರುಗಲಿದೆ. ಈ ಪ್ಯಾಕೇಜ್​ನಡಿಯಲ್ಲಿ ಪ್ರವಾಸಿಗರು ಟಿಕೆಟ್​ಗಳನ್ನು ಬುಕ್ ಮಾಡಿಕೊಂಡು ಯಾವುದೇ ಸ್ಥಳದ ರೇಲ್ವೆ ನಿಲ್ದಾಣದಿಂದ ಭಾರತ್ ದರ್ಶನ್ ಸ್ಪೆಷಲ್ ಟ್ರೇನ್​ನಲ್ಲಿ ಹತ್ತಬಹುದಾಗಿದೆ ಮತ್ತು ಇಳಿಯಬಹುದಾಗಿದೆ. ಲಖನೌ, ಗೊರಖ್​ಪುರ, ದೋರಿಯಾ, ಜೌನ್​ಪುರ್ ಸಿಟಿ, ಸುಲ್ತಾನಪುರ, ಕಾನ್ಪುರ್ ಮತ್ತು ಝಾಂಸಿ ಮೊದಲಾದ ಸ್ಥಳಗಳಲ್ಲಿ ಟ್ರೇನನ್ನು ಹತ್ತಬಹುದು ಮತ್ತು ಇಳಿಯಬಹುದಾಗಿದೆ. ಭಾರತ್ ದರ್ಶನ್ ಪ್ಯಾಕೇಜಿನ ಅಂದಾಜು ವೆಚ್ಚ ಪ್ರತಿ ಪ್ರಯಾಣಿಕನಿಗೆ ರೂ. 12,285 ಆಗಲಿದೆ ಎಂದು ಐಆರ್​ಸಿಟಿಸಿ ಮೂಲಗಳು ತಿಳಿಸಿವೆ

ಇದೇ ಮೂಲಗಳ ಪ್ರಕಾರ ಭಾರತ್ ದರ್ಶನ್ ಸ್ಪೆಷಲ್ ಟ್ರೇನ್, ಓಂಕಾರೇಶ್ವರ್, ಉಜ್ಜಯನಿ, ಅಹಮದಾಬಾದ್, ದ್ವಾರಕಾ, ನಾಗೇಶ್ವರ್, ಸೋಮ್​ನಾಥ, ತ್ರಿಂಬಕೇಶ್ವರ, ಶಿರಡಿ, ಭೀಮಾಶಂಕರ್, ಕೆವಾಡಿಯಾ ಮೊದಲಾದ ಸ್ಥಳಗಳಿಗೆ ಹೋಗಲಿದೆ.

ಪ್ರವಾಸದ ಸಮಯದಲ್ಲಿ, ಎಲ್ಲ ಪ್ರಯಾಣಿಕರಿಗೆ ಮೂರು ಹೊತ್ತು ಸಸ್ಯಾಹಾರಿ ಆಹಾರ ನೀಡಲಾಗುವುದು. ಅದಲ್ಲದೆ, ಧರ್ಮಶಾಲಾದಲ್ಲಿ ಅವರಿಗೆ ವಾತಾನುಕೂಲಿತವಲ್ಲದ ವಸತಿ ಸೌಕರ್ಯ ಮತ್ತು ಸ್ಥಳೀಯ ಟೂರಿಸ್ಟ್​ ಸ್ಥಳಗಳಿಗೆ ಭೇಟಿ ನೀಡಲು ಬಸ್​ ವ್ಯವಸ್ಥೆ ಮಾಡಲಾಗುವುದು ಎಂದು ಐಆರ್​ಸಿಟಿಸಿ ಮೂಲಗಳು ತಿಳಿಸಿವೆ. ಭಾರತ್ ದರ್ಶನ್ ಪ್ರವಾಸಕ್ಕೆ ಟಿಕೆಟ್​ಗಳನ್ನು ಕಾಯ್ದಿರಿಸುವುದು ಹೇಗೆ?

ಪ್ರವಾಸ ಮಾಡಲಿಚ್ಛಿಸುವವರು ಐಆರ್​ಸಿಟಿಸಿ ವೆಬ್​ಸೈಟ್​ www.irctctourism.com. ಮೂಲಕ ಟಿಕೆಟ್​ಗಳನ್ನು ಬುಕ್ ಮಾಡಿಕೊಳ್ಳಬಹುದಾಗಿದೆ. ಅಲ್ಲದೆ, ಈ ಸಹಾಯವಾಣಿ ನಂಬರ್​ಗಳಿಗೆ ಫೋನಾಯಿಸಿ ಪ್ಯಾಕೇಜ್​ ಬಗ್ಗೆ ಹೆಚ್ಚಿನ ವಿವರಗಳನ್ನು ಪಡೆಯಬಹುದಾಗಿದೆ- 8287930908, 8287930909, 8287930910 ಮತ್ತು 8287930911.

ಇದನ್ನೂ ಓದಿ: Indian Railway: ವಿಶ್ವದಲ್ಲೇ ಬೃಹತ್ ಪರಿಸರ ಸ್ನೇಹಿ ರೈಲ್ವೆ ವ್ಯವಸ್ಥೆಯಾಗಿ ಮಾರ್ಪಡಲು ಭಾರತೀಯ ರೈಲ್ವೆಯ ಸಿದ್ಧತೆ

ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಇಂದು ಈ ರಾಶಿಯವರ ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ
ಇಂದು ಈ ರಾಶಿಯವರ ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?