Bank Holidays in July 2021: ಜುಲೈ ತಿಂಗಳ ಬ್ಯಾಂಕ್ ರಜಾದಿನಗಳ ಪಟ್ಟಿ ಇಲ್ಲಿದೆ
ವಾರಾಂತ್ಯದ ರಜೆಗಳನ್ನು ಹೊರತುಪಡಿಸಿ ಸಾರ್ವಜನಿಕ, ಖಾಸಗಿ ವಲಯದ, ವಿದೇಶಿ, ಕೊ ಆಪರೇಟಿವ್, ಸ್ಥಳೀಯ ಬ್ಯಾಂಕ್ಗಳು ಈ ಕೆಳಗೆ ಗುರುತಿಸಿದ ನಿಗದಿತ ದಿನಗಳಂದು ಮುಚ್ಚಿರಲಿದೆ. ಜುಲೈ 2021ರಲ್ಲಿ ಆರ್ಬಿಐ ಗೈಡ್ಲೈನ್ಸ್ ಅನುಸಾರ ರಜೆ ಇರಲಿದೆ.
ಭಾರತಾದ್ಯಂತ ಜುಲೈ ತಿಂಗಳಲ್ಲಿ ಕೆಲವಾರು ಹಬ್ಬಗಳನ್ನು ಆಚರಿಸಲಾಗುತ್ತದೆ. ಹಾಗಾಗಿ ಸರ್ಕಾರಿ ರಜೆಗಳು ಇರುವುದರಿಂದ ಬ್ಯಾಂಕ್ಗಳು ಕೂಡ ಕಾರ್ಯನಿರ್ವಹಿಸುವುದಿಲ್ಲ. ಜುಲೈ 2021ರಲ್ಲಿ ದೇಶದಲ್ಲಿ ಒಟ್ಟು 15 ಸರ್ಕಾರಿ ರಜೆಗಳು ಇರಲಿದೆ. ಈ ಬಗ್ಗೆ ರಿಸರ್ವ್ ಬ್ಯಾಂಕ್ ಅಧಿಕೃತ ರಜಾದಿನಗಳ ಕ್ಯಾಲೆಂಡರ್ ಪಟ್ಟಿ ನೀಡಿದೆ. ಅದರಲ್ಲಿ 9 ರಜೆಗಳು ವಿವಿಧ ಹಬ್ಬಗಳ ಕಾರಣದಿಂದ ಇರಲಿದೆ ಹಾಗೂ 6 ರಜೆಗಳು ಭಾನುವಾರ, ಎರಡನೇ ಶನಿವಾರಗಳ ಕಾರಣದಿಂದ ಇರಲಿದೆ. 9 ರಜಾದಿನಗಳು ವಿವಿಧ ರಾಜ್ಯದಲ್ಲಿ ರಾಜ್ಯ ಹಬ್ಬಗಳ ಕಾರಣದಿಂದ ಇರಲಿದೆ.
ವಾರಾಂತ್ಯದ ರಜೆಗಳನ್ನು ಹೊರತುಪಡಿಸಿ ಸಾರ್ವಜನಿಕ, ಖಾಸಗಿ ವಲಯದ, ವಿದೇಶಿ, ಕೊ ಆಪರೇಟಿವ್, ಸ್ಥಳೀಯ ಬ್ಯಾಂಕ್ಗಳು ಈ ಕೆಳಗೆ ಗುರುತಿಸಿದ ನಿಗದಿತ ದಿನಗಳಂದು ಮುಚ್ಚಿರಲಿದೆ. ಜುಲೈ 2021ರಲ್ಲಿ ಆರ್ಬಿಐ ಗೈಡ್ಲೈನ್ಸ್ ಅನುಸಾರ ರಜೆ ಇರಲಿದೆ.
ಜುಲೈ 2021ರಲ್ಲಿ ಬ್ಯಾಂಕ್ ರಜಾದಿನಗಳು:
- ಜುಲೈ 4, 2021- ಭಾನುವಾರ
- ಜುಲೈ 10, 2021- 2ನೇ ಶನಿವಾರ
- ಜುಲೈ 11, 2021- ಭಾನುವಾರಜುಲೈ 12, 2021- ರಥಯಾತ್ರ/ ಕಂಗ್
- ಜುಲೈ 13, 2021- ಹುತಾತ್ಮ ದಿನ/ ಭಾನು ಜಯಂತಿ (ಜಮ್ಮು ಮತ್ತು ಕಾಶ್ಮೀರ, ಸಿಕ್ಕಿಂ)
- ಜುಲೈ 14, 2021- ದ್ರುಕ್ಪ ತ್ಶೇಚಿ (ಗ್ಯಾಂಗ್ಟಕ್)
- ಜುಲೈ 16, 2021- ಹರೇಲಾ ಪೂಜಾ (ಡೆಹ್ರಾಡೂನ್)
- ಜುಲೈ 17, 2021- ಖಾರ್ಚಿ ಪೂಜಾ
- ಜುಲೈ 18, 2021- ಭಾನುವಾರ
- ಜುಲೈ 19, 2021- ಗುರು ರಿಂಪೋಚೆ ತುಂಗ್ಕರ್ ತ್ಶೇಚು, ಸಿಕ್ಕಿಂ
- ಜುಲೈ 20, 2021- ಬಕ್ರೀದ್
- ಜುಲೈ 21, 2021- ಬಕ್ರೀದ್ ಈದ್ (ಈದ್ ಉಲ್ ಜುಹಾ) (ಈದ್ ಉಲ್ ಅಧಾ)
- ಜುಲೈ 24, 2021- ನಾಲ್ಕನೇ ಶನಿವಾರ
- ಜುಲೈ 25, 2021- ಭಾನುವಾರ
- ಜುಲೈ 31, 2021- ಕೆರ್ ಪೂಜಾ (ಅಗರ್ತಲಾ)
ಇದನ್ನೂ ಓದಿ: PAN Card- Aadhaar Linking: ಪ್ಯಾನ್ ಕಾರ್ಡ್- ಆಧಾರ್ ಜೋಡಣೆಗೆ ಸೆ. 30ರ ತನಕ ಗಡುವು ವಿಸ್ತರಿಸಿದ ಕೇಂದ್ರ
Published On - 8:58 pm, Fri, 25 June 21