Fixed Deposits: 3ರಿಂದ 5 ವರ್ಷದ ಅವಧಿಗೆ ಫಿಕ್ಸೆಡ್ ಡೆಪಾಸಿಟ್ ಮೇಲೆ ಹೆಚ್ಚಿನ ಬಡ್ಡಿ ದರ ನೀಡುವ ಟಾಪ್ 5 ಬ್ಯಾಂಕ್​ಗಳಿವು

ಎಫ್​.ಡಿ. ಮೇಲಿನ ಬಡ್ಡಿ ದರ ಕಡಿಮೆ ಆಗಿರುವ ಈಗಿನ ಕಾಲ ಘಟ್ಟದಲ್ಲಿ ಹೆಚ್ಚಿನ ಬಡ್ಡಿ ನೀಡುವ ಟಾಪ್​ 5 ಬ್ಯಾಂಕ್​ಗಳ ಪಟ್ಟಿಯನ್ನು ಈ ಲೇಖನದಲ್ಲಿ ನೀಡಲಾಗಿದೆ.

Fixed Deposits: 3ರಿಂದ 5 ವರ್ಷದ ಅವಧಿಗೆ ಫಿಕ್ಸೆಡ್ ಡೆಪಾಸಿಟ್ ಮೇಲೆ ಹೆಚ್ಚಿನ ಬಡ್ಡಿ ದರ ನೀಡುವ ಟಾಪ್ 5 ಬ್ಯಾಂಕ್​ಗಳಿವು
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on: Jun 25, 2021 | 7:58 PM

ಅಲ್ಪಾವಧಿ ಮತ್ತು ದೀರ್ಘಾವಧಿ ಎರಡೂ ಬಗೆಯ ಹೂಡಿಕೆದಾರರಿಗೂ ಫಿಕ್ಸೆಡ್ ಡೆಪಾಸಿಟ್ಸ್ (ಎಫ್​ಡಿ) ಅತ್ಯಂತ ಸುರಕ್ಷಿತ ಹಾಗೂ ಆದ್ಯತೆಯ ಹೂಡಿಕೆ ಆಯ್ಕೆಗಳಾಗಿವೆ. ಏಕೆಂದರೆ, ಖಾತ್ರಿ ರಿಟರ್ನ್ಸ್, ತೆರಿಗೆ ಅನುಕೂಲಗಳು, ನಗದೀಕರಣ ಮತ್ತು ಅನುಕೂಲಕರ ಅವಧಿ ಇಂಥ ಅಂಶಗಳೆಲ್ಲ ಸೇರಿಕೊಂಡಿವೆ. ಫಿಕ್ಸೆಡ್ ಡೆಪಾಸಿಟ್​ಗಳ ಮೇಲೆ ಖಾತ್ರಿ ಬಡ್ಡಿ ದರ ಬರುವುದರಿಂದ ಯಾರಿಗೆ ಹೂಡಿಕೆಯಲ್ಲಿ ರಿಸ್ಕ್​ ಬೇಡ ಅಂತನ್ನಿಸುತ್ತದೋ, ಅದರಲ್ಲೂ ಹಿರಿಯ ನಾಗರಿಕರು ಭಾರತದಲ್ಲಿ ನಿವೃತ್ತಿ ನಂತರ ಎಫ್​ಡಿಯನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಕೊವಿಡ್- 19 ಬಿಕ್ಕಟ್ಟು ಸಂದರ್ಭದಲ್ಲಿ ಆರ್ಥಿಕ ಸವಾಲಿರುವಾಗ, ಆರ್​ಬಿಐ ರೆಪೋ ದರ ನಿರಂತರವಾಗಿ ಶೇ 4ರಷ್ಟಿದ್ದು, ಕಳೆದ ವರ್ಷದಿಂದ ಈಚೆಗೆ ಎಫ್​ಡಿ ಮೇಲಿನ ಬಡ್ಡಿ ದರವು ಕಡಿಮೆ ಇದೆ. ಹಿರಿಯ ನಾಗರಿಕರಾಗಿದ್ದು, ಎಪ್​ಡಿ ಮೇಲೆ ಹೂಡಿಕೆ ಮಾಡಬೇಕು ಎಂದಿರುವವರಿಗೆ ಇದು ಖಂಡಿತಾ ಗಂಭೀರವಾದ ವಿಷಯ. ಏಕೆಂದರೆ ಯಾವಾಗ ಎಫ್​ಡಿ ಮೇಲೆ ಬಡ್ಡಿ ದರ ಕಡಿಮೆ ಆಯಿತೋ ಬಹುತೇಕ ಬ್ಯಾಂಕ್​ಗಳು ಶೇ 4ರಿಂದ 5ಕ್ಕೆ ಇಳಿಸಿವೆ.

ಆದರೆ, ಕೆಲವು ಖಾಸಗಿ ಮತ್ತು ಸಣ್ಣ ಹಣಕಾಸು ಸಂಸ್ಥೆಗಳು ಸರಾಸರಿ ಬಡ್ಡಿ ದರಕ್ಕಿಂತ ಹೆಚ್ಚಿನದನ್ನು ನೀಡುತ್ತಿವೆ. ಆದ್ದರಿಂದ, ನಿಮಗೇನಾದರೂ 3ರಿಂದ 5 ವರ್ಷಗಳ ಅವಧಿಗೆ ಎಫ್​.ಡಿ. ಮಾಡಬೇಕು ಎಂದುಕೊಂಡಿದ್ದಲ್ಲಿ ಇಲ್ಲಿ ಕೆಲವು ಆಯ್ಕೆಗಳಿವೆ. 2 ಕೋಟಿ ರೂಪಾಯಿಯೊಳಗಿನ ಮೊತ್ತಕ್ಕೆ ಹೆಚ್ಚಿನ ಬಡ್ಡಿ ದರವನ್ನು ನೀಡುವ ಟಾಪ್ 5 ಬ್ಯಾಂಕ್​ಗಳಿವು.

ಸಣ್ಣ ಹಣಕಾಸು ಬ್ಯಾಂಕ್​ಗಳು ಉತ್ಕರ್ಷ್​ ಸ್ಮಾಲ್ ಫೈನಾನ್ಸ್ ಬ್ಯಾಂಕ್: ಸಾಮಾನ್ಯ ಎಫ್​ಡಿ 3 ವರ್ಷಕ್ಕೆ- ವಾರ್ಷಿಕ ಬಡ್ಡಿ ದರ ಶೇ 6.75, ಹಿರಿಯ ನಾಗರಿಕರಿಗೆ 3 ವರ್ಷಗಳ ಅವಧಿಗೆ ಶೇ 7.25, ಸಾಮಾನ್ಯ ಎಫ್​ಡಿ 5 ವರ್ಷಕ್ಕೆ ಶೇ 6.75, ಹಿರಿಯ ನಾಗರಿಕರಿಗೆ 5 ವರ್ಷಗಳ ಅವಧಿಗೆ ಶೇ 7.25. ಅಕ್ಟೋಬರ್ 19, 2020ರಿಂದ ಅನ್ವಯ.

ಉಜ್ಜೀವನ್​ ಸ್ಮಾಲ್ ಫೈನಾನ್ಸ್ ಬ್ಯಾಂಕ್: ಸಾಮಾನ್ಯ ಎಫ್​ಡಿ 3 ವರ್ಷಕ್ಕೆ- ವಾರ್ಷಿಕ ಬಡ್ಡಿ ದರ ಶೇ 6.75, ಹಿರಿಯ ನಾಗರಿಕರಿಗೆ 3 ವರ್ಷಗಳ ಅವಧಿಗೆ ಶೇ 7.25, ಸಾಮಾನ್ಯ ಎಫ್​ಡಿ 5 ವರ್ಷಕ್ಕೆ ಶೇ 6.75, ಹಿರಿಯ ನಾಗರಿಕರಿಗೆ 5 ವರ್ಷಗಳ ಅವಧಿಗೆ ಶೇ 7.25. ಮೇ 15, 2021ರಿಂದ ಅನ್ವಯ.

ಜನ​ ಸ್ಮಾಲ್ ಫೈನಾನ್ಸ್ ಬ್ಯಾಂಕ್: ಸಾಮಾನ್ಯ ಎಫ್​ಡಿ 3 ವರ್ಷಕ್ಕೆ- ವಾರ್ಷಿಕ ಬಡ್ಡಿ ದರ ಶೇ 6.50, ಹಿರಿಯ ನಾಗರಿಕರಿಗೆ 3 ವರ್ಷಗಳ ಅವಧಿಗೆ ಶೇ 7, ಸಾಮಾನ್ಯ ಎಫ್​ಡಿ 5 ವರ್ಷಕ್ಕೆ ಶೇ 6.75, ಹಿರಿಯ ನಾಗರಿಕರಿಗೆ 5 ವರ್ಷಗಳ ಅವಧಿಗೆ ಶೇ 7.25. ಮೇ 7, 2021ರಿಂದ ಅನ್ವಯ.

ಎಯು​ ಸ್ಮಾಲ್ ಫೈನಾನ್ಸ್ ಬ್ಯಾಂಕ್: ಸಾಮಾನ್ಯ ಎಫ್​ಡಿ 3 ವರ್ಷಕ್ಕೆ- ವಾರ್ಷಿಕ ಬಡ್ಡಿ ದರ ಶೇ 6.25, ಹಿರಿಯ ನಾಗರಿಕರಿಗೆ 3 ವರ್ಷಗಳ ಅವಧಿಗೆ ಶೇ 6.75, ಸಾಮಾನ್ಯ ಎಫ್​ಡಿ 5 ವರ್ಷಕ್ಕೆ ಶೇ 6, ಹಿರಿಯ ನಾಗರಿಕರಿಗೆ 5 ವರ್ಷಗಳ ಅವಧಿಗೆ ಶೇ 6.50. ಜೂನ್ 23, 2021ರಿಂದ ಅನ್ವಯ.

ಸೂರ್ಯೋದಯ್​ ಸ್ಮಾಲ್ ಫೈನಾನ್ಸ್ ಬ್ಯಾಂಕ್: ಸಾಮಾನ್ಯ ಎಫ್​ಡಿ 3 ವರ್ಷಕ್ಕೆ- ವಾರ್ಷಿಕ ಬಡ್ಡಿ ದರ ಶೇ 6.25, ಹಿರಿಯ ನಾಗರಿಕರಿಗೆ 3 ವರ್ಷಗಳ ಅವಧಿಗೆ ಶೇ 6.50, ಸಾಮಾನ್ಯ ಎಫ್​ಡಿ 5 ವರ್ಷಕ್ಕೆ ಶೇ 6.25, ಹಿರಿಯ ನಾಗರಿಕರಿಗೆ 5 ವರ್ಷಗಳ ಅವಧಿಗೆ ಶೇ 6.50. ಜೂನ್ 21, 2021ರಿಂದ ಅನ್ವಯ.

ಖಾಸಗಿ ಬ್ಯಾಂಕ್​ಗಳು 3ರಿಂದ 5 ವರ್ಷದ ಅವಧಿಗೆ 2 ಕೋಟಿ ರೂ. ಒಳಗಿನ ಮೊತ್ತಕ್ಕೆ ಇಂಡಸ್​ಇಂಡ್ ಬ್ಯಾಂಕ್: ಸಾಮಾನ್ಯ ಎಫ್​ಡಿ 3 ವರ್ಷಕ್ಕೆ- ವಾರ್ಷಿಕ ಬಡ್ಡಿ ದರ ಶೇ 6.50, ಹಿರಿಯ ನಾಗರಿಕರಿಗೆ 3 ವರ್ಷಗಳ ಅವಧಿಗೆ ಶೇ 7, ಸಾಮಾನ್ಯ ಎಫ್​ಡಿ 5 ವರ್ಷಕ್ಕೆ ಶೇ 6, ಹಿರಿಯ ನಾಗರಿಕರಿಗೆ 5 ವರ್ಷಗಳ ಅವಧಿಗೆ ಶೇ 6.50. ಜೂನ್ 4, 2021ರಿಂದ ಅನ್ವಯ.

ಡಿಸಿಬಿ ಬ್ಯಾಂಕ್: ಸಾಮಾನ್ಯ ಎಫ್​ಡಿ 3 ವರ್ಷಕ್ಕೆ- ವಾರ್ಷಿಕ ಬಡ್ಡಿ ದರ ಶೇ 6.50, ಹಿರಿಯ ನಾಗರಿಕರಿಗೆ 3 ವರ್ಷಗಳ ಅವಧಿಗೆ ಶೇ 7, ಸಾಮಾನ್ಯ ಎಫ್​ಡಿ 5 ವರ್ಷಕ್ಕೆ ಶೇ 6, ಹಿರಿಯ ನಾಗರಿಕರಿಗೆ 5 ವರ್ಷಗಳ ಅವಧಿಗೆ ಶೇ 6.50. ಮೇ 15, 2021ರಿಂದ ಅನ್ವಯ.

ಆರ್​ಬಿಎಲ್ ಬ್ಯಾಂಕ್: ಸಾಮಾನ್ಯ ಎಫ್​ಡಿ 3 ವರ್ಷಕ್ಕೆ- ವಾರ್ಷಿಕ ಬಡ್ಡಿ ದರ ಶೇ 6.10, ಹಿರಿಯ ನಾಗರಿಕರಿಗೆ 3 ವರ್ಷಗಳ ಅವಧಿಗೆ ಶೇ 6.60, ಸಾಮಾನ್ಯ ಎಫ್​ಡಿ 5 ವರ್ಷಕ್ಕೆ ಶೇ 6.50, ಹಿರಿಯ ನಾಗರಿಕರಿಗೆ 5 ವರ್ಷಗಳ ಅವಧಿಗೆ ಶೇ 7. ಜೂನ್ 1, 2021ರಿಂದ ಅನ್ವಯ.

ಯೆಸ್ ಬ್ಯಾಂಕ್: ಸಾಮಾನ್ಯ ಎಫ್​ಡಿ 3 ವರ್ಷಕ್ಕೆ- ವಾರ್ಷಿಕ ಬಡ್ಡಿ ದರ ಶೇ 6, ಹಿರಿಯ ನಾಗರಿಕರಿಗೆ 3 ವರ್ಷಗಳ ಅವಧಿಗೆ ಶೇ 6.50, ಸಾಮಾನ್ಯ ಎಫ್​ಡಿ 5 ವರ್ಷಕ್ಕೆ ಶೇ 6.25, ಹಿರಿಯ ನಾಗರಿಕರಿಗೆ 5 ವರ್ಷಗಳ ಅವಧಿಗೆ ಶೇ 7. ಜೂನ್ 3, 2021ರಿಂದ ಅನ್ವಯ.

ಕರೂರ್ ವೈಶ್ಯ ಬ್ಯಾಂಕ್: ಸಾಮಾನ್ಯ ಎಫ್​ಡಿ 3 ವರ್ಷಕ್ಕೆ- ವಾರ್ಷಿಕ ಬಡ್ಡಿ ದರ ಶೇ 5.50, ಹಿರಿಯ ನಾಗರಿಕರಿಗೆ 3 ವರ್ಷಗಳ ಅವಧಿಗೆ ಶೇ 6, ಸಾಮಾನ್ಯ ಎಫ್​ಡಿ 5 ವರ್ಷಕ್ಕೆ ಶೇ 5.65, ಹಿರಿಯ ನಾಗರಿಕರಿಗೆ 5 ವರ್ಷಗಳ ಅವಧಿಗೆ ಶೇ 6.15. ಜನವರಿ 11, 2021ರಿಂದ ಅನ್ವಯ.

ಸಾರ್ವಜನಿಕ ಸ್ವಾಮ್ಯದ ಬ್ಯಾಂಕ್​ಗಳು 3ರಿಂದ 5 ವರ್ಷದ ಅವಧಿಗೆ ಕೋಟಿ ರೂ. ಒಳಗಿನ ಮೊತ್ತಕ್ಕೆ ಯೂನಿಯನ್ ಬ್ಯಾಂಕ್: ಸಾಮಾನ್ಯ ಎಫ್​ಡಿ 3 ವರ್ಷಕ್ಕೆ- ವಾರ್ಷಿಕ ಬಡ್ಡಿ ದರ ಶೇ 5.50, ಹಿರಿಯ ನಾಗರಿಕರಿಗೆ 3 ವರ್ಷಗಳ ಅವಧಿಗೆ ಶೇ 6, ಸಾಮಾನ್ಯ ಎಫ್​ಡಿ 5 ವರ್ಷಕ್ಕೆ ಶೇ 5.55, ಹಿರಿಯ ನಾಗರಿಕರಿಗೆ 5 ವರ್ಷಗಳ ಅವಧಿಗೆ ಶೇ 6.05. ಡಿಸೆಂಬರ್ 12, 2020ರಿಂದ ಅನ್ವಯ.

ಕೆನರಾ ಬ್ಯಾಂಕ್: ಸಾಮಾನ್ಯ ಎಫ್​ಡಿ 3 ವರ್ಷಕ್ಕೆ- ವಾರ್ಷಿಕ ಬಡ್ಡಿ ದರ ಶೇ 5.40, ಹಿರಿಯ ನಾಗರಿಕರಿಗೆ 3 ವರ್ಷಗಳ ಅವಧಿಗೆ ಶೇ 5.90, ಸಾಮಾನ್ಯ ಎಫ್​ಡಿ 5 ವರ್ಷಕ್ಕೆ ಶೇ 5.50, ಹಿರಿಯ ನಾಗರಿಕರಿಗೆ 5 ವರ್ಷಗಳ ಅವಧಿಗೆ ಶೇ 6.00. ಫೆಬ್ರವರಿ 8, 2021ರಿಂದ ಅನ್ವಯ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ: ಸಾಮಾನ್ಯ ಎಫ್​ಡಿ 3 ವರ್ಷಕ್ಕೆ- ವಾರ್ಷಿಕ ಬಡ್ಡಿ ದರ ಶೇ 5.10, ಹಿರಿಯ ನಾಗರಿಕರಿಗೆ 3 ವರ್ಷಗಳ ಅವಧಿಗೆ ಶೇ 5.60, ಸಾಮಾನ್ಯ ಎಫ್​ಡಿ 5 ವರ್ಷಕ್ಕೆ ಶೇ 5.30, ಹಿರಿಯ ನಾಗರಿಕರಿಗೆ 5 ವರ್ಷಗಳ ಅವಧಿಗೆ ಶೇ 5.80. ಜನವರಿ 8, 2021ರಿಂದ ಅನ್ವಯ.

ಬ್ಯಾಂಕ್ ಆಫ್ ಇಂಡಿಯಾ: ಸಾಮಾನ್ಯ ಎಫ್​ಡಿ 3 ವರ್ಷಕ್ಕೆ- ವಾರ್ಷಿಕ ಬಡ್ಡಿ ದರ ಶೇ 5.30, ಹಿರಿಯ ನಾಗರಿಕರಿಗೆ 3 ವರ್ಷಗಳ ಅವಧಿಗೆ ಶೇ 5.80, ಸಾಮಾನ್ಯ ಎಫ್​ಡಿ 5 ವರ್ಷಕ್ಕೆ ಶೇ 5.30, ಹಿರಿಯ ನಾಗರಿಕರಿಗೆ 5 ವರ್ಷಗಳ ಅವಧಿಗೆ ಶೇ 5.80. ಜೂನ್ 1, 2021ರಿಂದ ಅನ್ವಯ.

ಪಂಜಾಬ್ ಅಂಡ್ ಸಿಂದ್ ಬ್ಯಾಂಕ್: ಸಾಮಾನ್ಯ ಎಫ್​ಡಿ 3 ವರ್ಷಕ್ಕೆ- ವಾರ್ಷಿಕ ಬಡ್ಡಿ ದರ ಶೇ 5.15, ಹಿರಿಯ ನಾಗರಿಕರಿಗೆ 3 ವರ್ಷಗಳ ಅವಧಿಗೆ ಶೇ 5.65, ಸಾಮಾನ್ಯ ಎಫ್​ಡಿ 5 ವರ್ಷಕ್ಕೆ ಶೇ 5.30, ಹಿರಿಯ ನಾಗರಿಕರಿಗೆ 5 ವರ್ಷಗಳ ಅವಧಿಗೆ ಶೇ 5.80. ಮೇ 16, 2021ರಿಂದ ಅನ್ವಯ.

(ಮಾಹಿತಿ ಮೂಲ: ಬ್ಯಾಂಕ್ ವೆಬ್​ಸೈಟ್​ಗಳು)

ಇದನ್ನೂ ಓದಿ: ಯಾವುದೇ ಠೇವಣಿ ಮೇಲೆ ಎಷ್ಟೇ ಬಡ್ಡಿ ಬರಲಿ ಮಾಹಿತಿ ನೀಡುವಂತೆ ಆದಾಯ ತೆರಿಗೆ ಇಲಾಖೆಯಿಂದ ಬ್ಯಾಂಕ್​ಗಳಿಗೆ ಸುತ್ತೋಲೆ

(Here are the top 5 banks with higher rate of interest on fixed deposits for 3 to 5 years term)

ಇನ್ನು ಮುಂದೆ ಸುಮ್ಮನಿರಲ್ಲ: ಚೈತ್ರಾ-ಮೋಕ್ಷಿತಾಗೆ ತ್ರಿವಿಕ್ರಮ್ ಸವಾಲು
ಇನ್ನು ಮುಂದೆ ಸುಮ್ಮನಿರಲ್ಲ: ಚೈತ್ರಾ-ಮೋಕ್ಷಿತಾಗೆ ತ್ರಿವಿಕ್ರಮ್ ಸವಾಲು
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ