AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Aarogyam healthcare business loan: ಎಸ್​ಬಿಐನಿಂದ ಹೆಲ್ತ್​ಕೇರ್​ಗಳಿಗೆ 100 ಕೋಟಿ ರೂ. ತನಕ ಆರೋಗ್ಯಮ್ ಉದ್ಯಮ ಸಾಲ

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ ಹೆಲ್ತ್​ಕೇರ್ ವಲಯಕ್ಕೆ ಆರೋಗ್ಯಮ್ ಹೆಲ್ತ್​ಕೇರ್ ಉದ್ಯಮ ಸಾಲ ಯೋಜನೆ ಘೋಷಣೆ ಮಾಡಲಾಗಿದೆ. ಈ ಬಗ್ಗೆ ವಿವರ ಇಲ್ಲಿದೆ.

Aarogyam healthcare business loan: ಎಸ್​ಬಿಐನಿಂದ ಹೆಲ್ತ್​ಕೇರ್​ಗಳಿಗೆ 100 ಕೋಟಿ ರೂ. ತನಕ ಆರೋಗ್ಯಮ್ ಉದ್ಯಮ ಸಾಲ
ಸಾಂದರ್ಭಿಕ ಚಿತ್ರ
TV9 Web
| Edited By: |

Updated on:Jun 25, 2021 | 1:59 PM

Share

ಕೊರೊನಾ ಸಂದರ್ಭದಲ್ಲಿ ಹೆಲ್ತ್​ಕೇರ್​ ವಲಯಕ್ಕೆ ಬೆಂಬಲ ನೀಡುವ ಉದ್ದೇಶದಿಂದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್​ಬಿಐ)ದಿಂದ ಆರೋಗ್ಯಮ್​ ಹೆಲ್ತ್​ಕೇರ್ ಉದ್ಯಮ ಸಾಲ ಆರಂಭಿಸಲಾಗಿದೆ. ಈ ಹೊಸ ಪ್ರಾಡಕ್ಟ್​ ಅಡಿಯಲ್ಲಿ ಆಸ್ಪತ್ರೆ, ನರ್ಸಿಂಗ್ ಹೋಮ್​ಗಳು, ಡಯಾಗ್ನೋಸ್ಟಿಕ್ ಸೆಂಟರ್​ಗಳು, ಪೆಥಾಲಜಿ ಲ್ಯಾಬ್​ಗಳು, ಉತ್ಪಾದಕರು, ಸರಬರಾಜುದಾರರು, ಆಮದುದಾರರು, ತೀರಾ ಅಗತ್ಯ ಹೆಲ್ತ್​ಕೇರ್ ಪೂರೈಕೆ ಮಾಡುವ ಸಾಗಾಟ ಸಂಸ್ಥೆಗಳಿಗೆ 100 ಕೋಟಿ ರೂಪಾಯಿ ತನಕ (ಭೌಗೋಳಿಕ ಪ್ರದೇಶದ ಆಧಾರದ ಮೇಲೆ) ಸಾಲ ನೀಡಲಾಗುತ್ತದೆ. 10 ವರ್ಷದ ಅವಧಿಯೊಳಗೆ ಅದನ್ನು ಮರುಪಾವತಿಸಬಹುದು ಎಂದು ಎಸ್​ಬಿಐ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಅಂದಹಾಗೆ ಆರೋಗ್ಯಮ್ ಸಾಲವನ್ನು ವಿಸ್ತರಣೆ, ಆಧುನೀಕರಣದ ಕಾರಣಕ್ಕೆ ಟರ್ಮ್ ಲೋನ್​ನಂತೆಯೂ ಅಥವಾ ವರ್ಕಿಂಗ್ ಕ್ಯಾಪಿಟಲ್​ಗೆ ನಗದು ಕ್ರೆಡಿಟ್, ಬ್ಯಾಂಕ್​ ಗ್ಯಾರಂಟಿ/ಲೆಟರ್ ಆಫ್​ ಕ್ರೆಡಿಟ್​ ಥರದಲ್ಲಿ ಕೂಡ ದೊರೆಯುತ್ತದೆ ಎಂದು ತಿಳಿಸಲಾಗಿದೆ. ಮೆಟ್ರೋ ನಗರಗಳಲ್ಲಿ ಆರೋಗ್ಯ ಯೋಜನೆ ಅಡಿ 100 ಕೋಟಿ ರೂಪಾಯಿ ತನಕ ಸಾಲ ದೊರೆಯುತ್ತದೆ. ಟಯರ್ I ಮತ್ತು ಪಟ್ಟಣಗಳಲ್ಲಿ ರೂ. 20 ಕೋಟಿ ತನಕ ಮತ್ತು ಟಯರ್ IIರಿಂದ ಟಯರ್ VIರ ತನಕ 10 ಕೋಟಿ ರೂಪಾಯಿ ತನಕ ಸಾಲ ಸಿಗುತ್ತದೆ. ಯಾವ ಸಂಸ್ಥೆಗಳು ಅಥವಾ ಘಟಕ 2 ಕೋಟಿ ರೂಪಾಯಿಯೊಳಗೆ ಸಾಲ ಪಡೆದುಕೊಳ್ಳುತ್ತವೋ ಅವು ಕೊಲ್ಯಾಟರಲ್ ಅಥವಾ ಭದ್ರತೆ ನೀಡುವ ಅಗತ್ಯ ಇಲ್ಲ. Credit Guarantee Fund Trust for Micro and Small Enterprises (CGTMSE) ಅಡಿಯಲ್ಲಿ ಕವರ್ ಆಗುತ್ತದೆ ಎಂದು ಹೇಳಲಾಗಿದೆ.

ಎಸ್​ಬಿಐ ಅಧ್ಯಕ್ಷ ದಿನೇಶ್ ಖರ ಮಾತನಾಡಿ, ಈ ವಿಶೇಷ ಸಾಲ ಯೋಜನೆಯು ಈಗಿರುವ ವ್ಯವಸ್ಥೆಯ ವಿಸ್ತರಣೆ, ಆಧುನೀಕರಣ ಮತ್ತು ಹೊಸ ಫೆಸಿಲಿಟಿ ಸ್ಥಾಪನೆಗೆ ನೆರವು ನೀಡುತ್ತದೆ. ಇಡೀ ದೇಶದಲ್ಲಿ ಹೆಲ್ತ್​ಕೇರ್ ಮೂಲಸೌಕರ್ಯ ಬಲಗೊಳಿಸುವ ನಿಟ್ಟಿನಲ್ಲಿ ಈ ಆರೋಗ್ಯಮ್ ಹೆಲ್ತ್​ಕೇರ್ ಉದ್ಯಮ ಸಾಲವು ಸಹಾಯ ಮಾಡುತ್ತದೆ. ಇದು ನಮ್ಮ ಉದ್ದೇಶವೂ ಆಗಿದೆ ಎಂದಿದ್ದಾರೆ. ಆರೋಗ್ಯ ಹೆಲ್ತ್​ಕೇರ್ ಉದ್ಯಮ ಸಾಲವು ಬ್ಯಾಂಕ್​ಗಳಿಂದ ಸೃಷ್ಟಿಸಿದ ಕೊವಿಡ್ ಲೋನ್ ಬುಕ್ ಅಡಿಯಲ್ಲಿ ಅರ್ಹತೆ ಪಡೆದಿದೆ. ಇದು ಆರ್​ಬಿಐನಿಂದ ಘೋಷಿಸಲಾದ ಕೊವಿಡ್ ಪರಿಹಾರ ಕ್ರಮದ ಭಾಗವಾಗಿದೆ.

ಇದನ್ನು ಓದಿ: SBI Loan: ಕೊವಿಡ್​- 19 ಚಿಕಿತ್ಸೆಗೆ ಎಸ್​ಬಿಐನಿಂದ ಕೊಲಾಟರಲ್ ಇಲ್ಲದಂತೆ ಶೇ 8.5 ಬಡ್ಡಿ ದರದಲ್ಲಿ 5 ಲಕ್ಷದ ತನಕ ಸಾಲ

(State Bank Of India announced Aarogyam healthcare business loan for health care sector for corona situation. Here is the details of the loan)

Published On - 1:58 pm, Fri, 25 June 21

ಬಿಗ್ ಬಾಸ್: ಬಂಗಾರದ ಅಂಗಡಿಯಲ್ಲಿ ಕಾವ್ಯಾ ಜೊತೆ ಸೆಲ್ಫಿಗೆ ಮುಗಿಬಿದ್ದ ಜನ
ಬಿಗ್ ಬಾಸ್: ಬಂಗಾರದ ಅಂಗಡಿಯಲ್ಲಿ ಕಾವ್ಯಾ ಜೊತೆ ಸೆಲ್ಫಿಗೆ ಮುಗಿಬಿದ್ದ ಜನ
ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾದ ಅಫ್ಘಾನ್ ಬ್ಯಾಟರ್
ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾದ ಅಫ್ಘಾನ್ ಬ್ಯಾಟರ್
ಅಪರೂಪದ ವಸ್ತು ಪತ್ತೆ:ಲಕ್ಕುಂಡಿ ನೈಜ ಗತವೈಭವ ಈಗ ಆರಂಭ!
ಅಪರೂಪದ ವಸ್ತು ಪತ್ತೆ:ಲಕ್ಕುಂಡಿ ನೈಜ ಗತವೈಭವ ಈಗ ಆರಂಭ!
‘ಈ ಬಂಗಾರದ ಚೈನ್ ನನಗೆ ಅಲ್ವಾ ಸರ್’: ಶಾಕ್ ಆದ ಗಿಲ್ಲಿ ನಟ
‘ಈ ಬಂಗಾರದ ಚೈನ್ ನನಗೆ ಅಲ್ವಾ ಸರ್’: ಶಾಕ್ ಆದ ಗಿಲ್ಲಿ ನಟ
ರಕ್ಷಿತಾ ಶೆಟ್ಟಿ ಕಣ್ಣಲ್ಲಿ ನನ್ನ ಗೆಲುವಿನ ಖುಷಿ ಕಾಣಿಸಿತು: ಗಿಲ್ಲಿ ನಟ
ರಕ್ಷಿತಾ ಶೆಟ್ಟಿ ಕಣ್ಣಲ್ಲಿ ನನ್ನ ಗೆಲುವಿನ ಖುಷಿ ಕಾಣಿಸಿತು: ಗಿಲ್ಲಿ ನಟ
ಬಾಬರ್ ಆಝಂ ತಂಡದಿಂದ ಹೊರಬಿದ್ದ ಬೆನ್ನಲ್ಲೇ ಫೈನಲ್​ಗೇರಿದ ಸಿಡ್ನಿ ಸಿಕ್ಸರ್ಸ್
ಬಾಬರ್ ಆಝಂ ತಂಡದಿಂದ ಹೊರಬಿದ್ದ ಬೆನ್ನಲ್ಲೇ ಫೈನಲ್​ಗೇರಿದ ಸಿಡ್ನಿ ಸಿಕ್ಸರ್ಸ್
ರಾಹುಲ್​​ ನೀಡಿದ್ದ ಭರವಸೆ ಬಗ್ಗೆ ಬೈಕ್​​ ಟ್ಯಾಕ್ಸಿ ರೈಡರ್​​ಗಳು ಏನಂದ್ರು?
ರಾಹುಲ್​​ ನೀಡಿದ್ದ ಭರವಸೆ ಬಗ್ಗೆ ಬೈಕ್​​ ಟ್ಯಾಕ್ಸಿ ರೈಡರ್​​ಗಳು ಏನಂದ್ರು?
ಮತ್ತೊಂದು ಕೆಟ್ಟ ದಾಖಲೆಯೊಂದಿಗೆ ವಿಶ್ವ ಮಟ್ಟದಲ್ಲಿ ಸುದ್ದಿಯಾದ ಬೆಂಗಳೂರು
ಮತ್ತೊಂದು ಕೆಟ್ಟ ದಾಖಲೆಯೊಂದಿಗೆ ವಿಶ್ವ ಮಟ್ಟದಲ್ಲಿ ಸುದ್ದಿಯಾದ ಬೆಂಗಳೂರು
ಸಾಲು ಸಾಲು ರಜೆ ಹಿನ್ನೆಲೆ ಊರಿನತ್ತ ಹೊರಟ ಜನರಿಗೆ ಶಾಕ್​​: ದುಪ್ಪಟ್ಟು ದರ
ಸಾಲು ಸಾಲು ರಜೆ ಹಿನ್ನೆಲೆ ಊರಿನತ್ತ ಹೊರಟ ಜನರಿಗೆ ಶಾಕ್​​: ದುಪ್ಪಟ್ಟು ದರ
ಗಿಲ್ಲಿಗೆ ಮನೆಯಲ್ಲೇ 10 ಲಕ್ಷ ರೂಪಾಯಿ ಕೊಟ್ಟ ಕಿಚ್ಚ ಸುದೀಪ್
ಗಿಲ್ಲಿಗೆ ಮನೆಯಲ್ಲೇ 10 ಲಕ್ಷ ರೂಪಾಯಿ ಕೊಟ್ಟ ಕಿಚ್ಚ ಸುದೀಪ್