Delta Plus variant ದೇಶದಲ್ಲಿ 50 ಡೆಲ್ಟಾ ಪ್ಲಸ್ ಪ್ರಕರಣಗಳು ಪತ್ತೆ, ಮಹಾರಾಷ್ಟ್ರದಲ್ಲಿ ಅತೀ  ಹೆಚ್ಚು: ಕೇಂದ್ರ ಸರ್ಕಾರ

ಮಹಾರಾಷ್ಟ್ರದಲ್ಲಿ 20 ಪ್ರಕರಣಗಳು ಮತ್ತು ತಮಿಳುನಾಡಿನಲ್ಲಿ ಒಂಬತ್ತು ಪ್ರಕರಣಗಳಿವೆ. ಅದೇ ವೇಳೆ ಮಧ್ಯಪ್ರದೇಶವು ಏಳು ಪ್ರಕರಣಗಳು ಮತ್ತು ಕೇರಳದಲ್ಲಿ ಮೂರು ಪ್ರಕರಣಗಳು ದಾಖಲಾಗಿವೆ . ಆಂಧ್ರಪ್ರದೇಶ, ಒಡಿಶಾ, ರಾಜಸ್ಥಾನ, ಕರ್ನಾಟಕ ಪ್ರಕರಣಗಳು ತಲಾ ಒಂದು ಪ್ರಕರಣಗಳನ್ನು ವರದಿ ಮಾಡಿವೆ.

Delta Plus variant ದೇಶದಲ್ಲಿ 50 ಡೆಲ್ಟಾ ಪ್ಲಸ್ ಪ್ರಕರಣಗಳು ಪತ್ತೆ, ಮಹಾರಾಷ್ಟ್ರದಲ್ಲಿ ಅತೀ  ಹೆಚ್ಚು: ಕೇಂದ್ರ ಸರ್ಕಾರ
ಬಲರಾಮ್ ಭಾರ್ಗವ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:Jun 25, 2021 | 6:50 PM

ದೆಹಲಿ: ಕೊವಿಡ್  -19 ರ ‘ಡೆಲ್ಟಾ ಪ್ಲಸ್’ ರೂಪಾಂತರದ 50 ಪ್ರಕರಣಗಳು ಪತ್ತೆಯಾಗಿದ್ದು 11 ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶಗಳಲ್ಲಿ ಇದು ಹರಡಿದೆ ಎಂದು ಸರ್ಕಾರ ಶುಕ್ರವಾರ ಸಂಜೆ ಹೇಳಿದೆ. ಮಹಾರಾಷ್ಟ್ರದಲ್ಲಿ 20 ಪ್ರಕರಣಗಳು ಮತ್ತು ತಮಿಳುನಾಡಿನಲ್ಲಿ ಒಂಬತ್ತು ಪ್ರಕರಣಗಳಿವೆ. ಅದೇ ವೇಳೆ ಮಧ್ಯಪ್ರದೇಶವು ಏಳು ಪ್ರಕರಣಗಳು ಮತ್ತು ಕೇರಳದಲ್ಲಿ ಮೂರು ಪ್ರಕರಣಗಳು ದಾಖಲಾಗಿವೆ . ಆಂಧ್ರಪ್ರದೇಶ, ಒಡಿಶಾ, ರಾಜಸ್ಥಾನ, ಕರ್ನಾಟಕ ಪ್ರಕರಣಗಳು ತಲಾ ಒಂದು ಪ್ರಕರಣಗಳನ್ನು ವರದಿ ಮಾಡಿವೆ.

ಗುಜರಾತ್ ಮತ್ತು ಪಂಜಾಬ್ ಸಹ ಕ್ರಮವಾಗಿ ತಲಾ ಎರಡು ಪ್ರಕರಣಗಳನ್ನು ಹೊಂದಿವೆ. ಜಮ್ಮುವಿನ ಕೇಂದ್ರಾಡಳಿತ ಪ್ರದೇಶವೂ ಒಂದು ಪ್ರಕರಣವನ್ನು ವರದಿ ಮಾಡಿದೆ. ರೂಪಾಂತರಿಯ ಹರಡುವಿಕೆ ಈಗ ನಿರ್ದಿಷ್ಟ ಪ್ರದೇಶದಲ್ಲಿ ಮಾತ್ರ ಇದೆ ಎಂದು ಸರ್ಕಾರ ಹೇಳಿದೆ.

ಇಂದು ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಐಸಿಎಂಆರ್ ಮಹಾನಿರ್ದೇಶಕ ಬಲರಾಮ್ ಭಾರ್ಗವ, ಇತರ 12 ದೇಶಗಳಿಂದಲೂ ‘ಡೆಲ್ಟಾ ಪ್ಲಸ್’ ರೂಪಾಂತರ ಪ್ರಕರಣಗಳು ವರದಿಯಾಗಿವೆ ಎಂದಿದ್ದಾರೆ.

ಭಾರತದಲ್ಲಿ ಶೇ 90 ಕರೋನವೈರಸ್ ಪ್ರಕರಣಗಳನ್ನು B.1.617.2 (ಡೆಲ್ಟಾ) ರೂಪಾಂತರದಿಂದ ಆಗಿದೆ ಎಂದು ಕೇಂದ್ರ ಹೇಳಿದೆ. 35 ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳ 174 ಜಿಲ್ಲೆಗಳಲ್ಲಿ ಮಹಾರಾಷ್ಟ್ರ, ದೆಹಲಿ, ಪಂಜಾಬ್, ತೆಲಂಗಾಣ, ಪಶ್ಚಿಮ ಬಂಗಾಳ ಮತ್ತು ಗುಜರಾತ್ ದೇಶಗಳಲ್ಲಿ ಅತಿ ಹೆಚ್ಚು ಪ್ರಕರಣಗಳು ಕಂಡುಬಂದಿವೆ.

“ಕಾಳಜಿಯ ರೂಪಾಂತರಗಳೊಂದಿಗೆ ಕೊವಿಡ್ -19 ಪ್ರಕರಣಗಳ ಪ್ರಮಾಣವು 2021 ರ ಮೇನಲ್ಲಿ ಶೇ 10.31 ರಿಂದ 2021 ಜೂನ್ 20 ರಂದು ಶೇ 51 ಕ್ಕೆ ಏರಿತು” ಎಂದು ಅದು ಹೇಳಿದೆ.

ವೈರಸ್ ಪ್ರಬೇದವು ಪ್ರತ್ಯೇಕಿಸಲ್ಪಟ್ಟಿದ್ದು ಐಸಿಎಂಆರ್-ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿಯಿಂದ ಸಂಸ್ಕರಿಸಲ್ಪಟ್ಟಿದೆ. ಅಸ್ತಿತ್ವದಲ್ಲಿರುವ ಕೊವಿಡ್ ಲಸಿಕೆಗಳಿಗೆ ಅದರ ಪ್ರತಿರೋಧವನ್ನು ಪರೀಕ್ಷಿಸುವ ಪರೀಕ್ಷೆಗಳು ನಡೆಯುತ್ತಿವೆ ಎಂದು ಸರ್ಕಾರ ತಿಳಿಸಿದೆ.

ಇತರ 12 ದೇಶಗಳಿಂದ ‘ಡೆಲ್ಟಾ ಪ್ಲಸ್’ ರೂಪಾಂತರ ಪ್ರಕರಣಗಳು ವರದಿಯಾಗಿವೆ ಎಂದು ಸರ್ಕಾರ ಹೇಳಿದೆ. ‘ಡೆಲ್ಟಾ ಪ್ಲಸ್’ ರೂಪಾಂತರವನ್ನು ‘ಕಾಳಜಿಯ ರೂಪಾಂತರ’ ಎಂದು ಪಟ್ಟಿ ಮಾಡಲಾಗಿದೆ ಎಂದು ಸರ್ಕಾರ ಬುಧವಾರ ಹೇಳಿದೆ. ಪ್ರಕರಣಗಳನ್ನು ವರದಿ ಮಾಡುವ ರಾಜ್ಯಗಳು “ತಕ್ಷಣದ ನಿಯಂತ್ರಣ ಕ್ರಮಗಳನ್ನು” ತೆಗೆದುಕೊಳ್ಳುವಂತೆ ಒತ್ತಾಯಿಸಲಾಯಿತು.

‘ಡೆಲ್ಟಾ ಪ್ಲಸ್’ ರೂಪಾಂತರಿಗೆ ಪ್ರಸರಣ ಸಾಮರ್ಥ್ಯವನ್ನು ಹೆಚ್ಚಿರುತ್ತದೆ. ಶ್ವಾಸಕೋಶದ ಕೋಶಗಳನ್ನು ಬಾಧಿಸುವ ಸಾಮರ್ಥ್ಯ ಮತ್ತು ಮೊನೊಕ್ಲೋನಲ್ ಪ್ರತಿಕಾಯ ಚಿಕಿತ್ಸೆಗೆ ಪ್ರತಿರೋಧವನ್ನು ಹೊಂದಿದೆ ಎಂದು ಸರ್ಕಾರ ಈ ಹಿಂದೆ ಹೇಳಿತ್ತು..

‘ಡೆಲ್ಟಾ ಪ್ಲಸ್’ ರೂಪಾಂತರವು ಹೆಚ್ಚು ಆಕ್ರಮಣಕಾರಿ B.1.617.2 ಅಥವಾ ‘ಡೆಲ್ಟಾ’ ಸ್ಟ್ರೈನ್‌ನ ರೂಪಾಂತರಿತ ಆವೃತ್ತಿಯಾಗಿದ್ದು, ಇದು ಭಾರತದಲ್ಲಿ ಎರಡನೇ ಅಲೆಯ ಸೋಂಕುಗಳಿಗೆ ಕಾರಣವಾಯಿತು ಮತ್ತು ಈಗಾಗಲೇ ಇದನ್ನು ‘ಕಾಳಜಿಯ ರೂಪಾಂತರ’ ಎಂದು ಪಟ್ಟಿ ಮಾಡಲಾಗಿದೆ. B.1.617.2.1, ಅಥವಾ AY.1 / 2 ಎಂದು ಗುರುತಿಸಲಾಗಿರುವ ಈ ಪ್ರಬೇಧ ಕೊವಿಡ್ ರೋಗಕ್ಕೆ ಕಾರಣವಾಗುವ SARS-CoV2 ವೈರಸ್‌ನ ಸ್ಪೈಕ್ ಪ್ರೋಟೀನ್‌ನಲ್ಲಿನ K417N ರೂಪಾಂತರದಿಂದ ನಿರೂಪಿಸಲ್ಪಟ್ಟಿದೆ. ಸ್ಪೈಕ್ ಪ್ರೋಟೀನ್ ವೈರಸ್ ಮಾನವ ಜೀವಕೋಶಗಳಿಗೆ ಸೋಂಕು ತಗುಲುವಂತೆ ಮಾಡುತ್ತದೆ. K417N ರೋಗನಿರೋಧಕ ಪಾರು ಅಥವಾ ತಪ್ಪಿಸಿಕೊಳ್ಳುವಿಕೆಯೊಂದಿಗೆ ಸಂಬಂಧಿಸಿದೆ. ಇದು ಲಸಿಕೆಗಳು ಅಥವಾ ಔಷಧಿಗಳಿಗೆ ವೈರಸ್ ಹೆಚ್ಚು ರೋಗನಿರೋಧಕತೆಯನ್ನು ನೀಡುತ್ತದೆ.

ಆದಾಗ್ಯೂ, ಆರೋಗ್ಯ ಸಚಿವಾಲಯವು ರೂಪಾಂತರಿಯ ರೋಗನಿರೋಧಕ ಪಾರು ಸಾಮರ್ಥ್ಯಗಳು ಮತ್ತು ಹೆಚ್ಚು ತೀವ್ರವಾದ ಸೋಂಕುಗಳನ್ನು ಉಂಟುಮಾಡುವ ಅಥವಾ ಹೆಚ್ಚು ಆಕ್ರಮಣಕಾರಿಯಾಗಿ ಹರಡುವ ಸಾಮರ್ಥ್ಯ ಬಗ್ಗೆ “ನಿರಂತರ ಕಣ್ಗಾವಲಿಟ್ಟಿದೆ” ಎಂದು ಹೇಳಿದೆ.

ಈ ವಾರ ಐಸಿಎಂಆರ್-ಎನ್ಐವಿ (ICMR-NIV )ಕೊವಿಶೀಲ್ಡ್ ಮತ್ತು ಕೊವ್ಯಾಕ್ಸಿನ್ ಗೆ ‘ಡೆಲ್ಟಾ ಪ್ಲಸ್’ ಪ್ರತಿರೋಧವನ್ನು ನಿರ್ಧರಿಸಲು ಅಧ್ಯಯನ ನಡೆಸಲು ನಿರ್ಧರಿಸಿದೆ ಎಂದು ವರದಿಯಾಗಿದೆ ಪ್ರಸ್ತುತ ಭಾರತದಲ್ಲಿ ಬಳಕೆಯಲ್ಲಿರುವ ಎರಡು ಕೊವಿಡ್ ಲಸಿಕೆಗಳು ಇವು. – ಕೊವ್ಯಾಕ್ಸಿನ್ ಮತ್ತು ಕೊವಿಶೀಲ್ಡ್ – ಆಲ್ಫಾ, ಬೀಟಾ, ಗಾಮಾ ಮತ್ತು ಡೆಲ್ಟಾದಂತಹ ಕರೋನವೈರಸ್ ರೂಪಾಂತರಗಳ ವಿರುದ್ಧ ಪರಿಣಾಮಕಾರಿ ಎಂದು ಸರ್ಕಾರ ಪ್ರತಿಪಾದಿಸಿತು. ಯಾವುದೇ ರೂಪಾಂತರವನ್ನು ಅದರ ಪ್ರಸರಣ ಮತ್ತು ಹರಡುವಿಕೆ ಆಧಾರದ ಮೇಲೆ ‘ಕುತೂಹಲದ ರೂಪಾಂತರ’ ಅಥವಾ ‘ಕಾಳಜಿಯ ರೂಪಾಂತರ’ ಎಂದು ವರ್ಗೀಕರಿಸಲಾಗಿದೆ.

75 ಜಿಲ್ಲೆಗಳು ಇನ್ನೂಶೇ  10 ಕ್ಕಿಂತ ಹೆಚ್ಚು ರೋಗ ಹರಡಿಕೊಂಡಿವೆ ಮತ್ತು 92 ಜಿಲ್ಲೆಗಳಲ್ಲಿಶೇ  5-10ರಷ್ಟು ಕೊವಿಡ್ -19 ಹರಡಿಕೊಂಡಿರುವುದರಿಂದ ದೇಶದಲ್ಲಿ ಎರಡನೇ ಅಲೆ  ಇನ್ನೂ ಮುಗಿದಿಲ್ಲ ಎಂದು ಅದು ಹೇಳಿದೆ.

ಕೋವಿಡ್ -19 ರ ಡೆಲ್ಟಾ ರೂಪಾಂತರವು ಭಾರತ ಸೇರಿದಂತೆ 80 ದೇಶಗಳಲ್ಲಿ ಕಂಡುಬಂದಿದೆ ಎಂದು ಕೇಂದ್ರ ಹೇಳಿದೆ. ಅಮೆರಿಕ, ಬ್ರಿಟನ್, ಪೋರ್ಚುಗಲ್, ಸ್ವಿಟ್ಜರ್ಲೆಂಡ್, ಜಪಾನ್, ಪೋಲೆಂಡ್, ನೇಪಾಳ, ಚೀನಾ, ರಷ್ಯಾ ಮತ್ತು ಭಾರತ ಎಂಬ ಒಂಬತ್ತು ದೇಶಗಳಲ್ಲಿ ಡೆಲ್ಟಾ ಪ್ಲಸ್ ರೂಪಾಂತರ ಕಂಡುಬಂದಿದೆ ಎಂದು ಆರೋಗ್ಯ ಕಾರ್ಯದರ್ಶಿ ಹೇಳಿದರು.

ಆಂಧ್ರದ ತಿರುಪತಿಯಲ್ಲಿ ಡೆಲ್ಟಾ ಪ್ಲಸ್ ವೇರಿಯಂಟ್  ಪ್ರಕರಣ

ಆಂಧ್ರದ ತಿರುಪತಿಯಲ್ಲಿ ಡೆಲ್ಟಾ ಪ್ಲಸ್ ವೇರಿಯಂಟ್ ಪ್ರಕರಣ ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾ ಆಡಳಿತ ಜಾಗೃತವಾಗಿದೆ. ಏಪ್ರಿಲ್ 3ರಂದು ಈ  ವ್ಯಕ್ತಿಯಲ್ಲಿ ಕೊರೊನ ಲಕ್ಷಣಗಳು ಕಂಡು ಬಂದಿತ್ತು. ಏಪ್ರಿಲ 5ರಂದು ಪಾಸಿಟಿವ್ ಎಂದು ದೃಢ ಪಟ್ಟ ಕಾರಣ ಸ್ವಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಇವರ ಪತ್ನಿ, ಮಗನಿಗೆ ಸಹ  ಕೊರೊನಾ ಸೋಂಕು ತಗಲಿದೆ. ಸ್ವಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನಂತರ ಕೊರೊನಾದಿಂದ ಗುಣಮುಖರಾದ ವ್ಯಕ್ತಿ ವೇರಿಯಂಟ್ ಗುಣ ಪರೀಕ್ಷಿಸಲೆಂದು  ರ್ಯಾಂಡ್ಂ ಸರ್ವೆಗಾಗಿ ಸ್ಯಾಂಪಲ್ಸ್ ಸಂಗ್ರಹಿಸಿ ಪುಣೆ ಸಿಸಿಎಂಬಿಕೆಗೆ  ಆರೋಗ್ಯ ಇಲಾಖೆಗೆ ಕಳುಹಿಸಿತ್ತು.

ಇದನ್ನೂ ಓದಿ: Delta Plus Variant: ಡೆಲ್ಟಾ ಪ್ಲಸ್​ ವಿರುದ್ಧ ಯಾವ ಕಂಪೆನಿಯ ಕೊರೊನಾ ಲಸಿಕೆ ಹೆಚ್ಚು ಪರಿಣಾಮಕಾರಿ?

(50 cases of Delta Plus variant of Covid-19 have been recorded across 11 states of India says Central Government )

Published On - 6:48 pm, Fri, 25 June 21

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ