IPL 2025: ಆರ್ಸಿಬಿಯನ್ನು ಗೇಲಿ ಮಾಡಿದ ಅಂಬಟಿ ರಾಯುಡುನನ್ನು ಹಿಗ್ಗಾಮುಗ್ಗಾ ಜಾಡಿಸಿದ ಆರ್‌ಸಿಬಿ ಫ್ಯಾನ್ಸ್
RCB's 50-Run Thrashing of CSK in Chepauk: ಚೆನ್ನೈನ ಚೆಪಾಕ್ ಕ್ರೀಡಾಂಗಣದಲ್ಲಿ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಪಂದ್ಯದಲ್ಲಿ ಆರ್‌ಸಿಬಿ 50 ರನ್‌ಗಳಿಂದ ಭರ್ಜರಿ ಗೆಲುವು ಸಾಧಿಸಿದೆ. ಈ ಗೆಲುವಿನಿಂದ ಆರ್‌ಸಿಬಿ ಅಂಕಪಟ್ಟಿಯಲ್ಲಿ ಮುಂಚೂಣಿಯಲ್ಲಿದೆ. ಆದರೆ, ಈ ಗೆಲುವಿನ ಬಳಿಕ ಮಾಜಿ ಸಿಎಸ್‌ಕೆ ಆಟಗಾರ ಅಂಬಟಿ ರಾಯುಡು ಅವರನ್ನು ಆರ್‌ಸಿಬಿ ಅಭಿಮಾನಿಗಳು ತೀವ್ರವಾಗಿ ಟೀಕಿಸುತ್ತಿದ್ದಾರೆ.

ಚೆನ್ನೈನ ಚೆಪಾಕ್ ಮೈದಾನದಲ್ಲಿ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಚೆನ್ನೈ ಸೂಪರ್ ಕಿಂಗ್ಸ್ (RCB vs CSK) ನಡುವಿನ ಹೈವೋಲ್ಟೇಜ್ ಪಂದ್ಯದಲ್ಲಿ ಆರ್‌ಸಿಬಿ 50 ರನ್ಗಳ ಬೃಹತ್ ಜಯ ಸಾಧಿಸಿದೆ. ಆರ್‌ಸಿಬಿ ನೀಡಿದ 196 ರನ್ಗಳ ಗುರಿ ಬೆನ್ನಟ್ಟಿದ ಸಿಎಸ್‌ಕೆ 146 ರನ್ ಕಲೆಹಾಕಲಷ್ಟೇ ಶಕ್ತವಾಯಿತು. ಈ ಗೆಲುವಿನೊಂದಿಗೆ ಆರ್‌ಸಿಬಿ 18 ಆವೃತ್ತಿಗಳ ಐಪಿಎಲ್ (IPL 2025) ಇತಿಹಾಸದಲ್ಲಿ ಎರಡನೇ ಬಾರಿಗೆ ಚೆಪಾಕ್ ಕ್ರೀಡಾಂಗಣದಲ್ಲಿ ಚೆನ್ನೈ ವಿರುದ್ಧ ಜಯಗಳಿಸಿದ ಸಾಧನೆ ಮಾಡಿದೆ. ಅಲ್ಲದೆ, ಬೆಂಗಳೂರು ಈ ಸೀಸನ್ನಲ್ಲಿ ಸತತ ಎರಡನೇ ಗೆಲುವು ದಾಖಲಿಸಿ ಅಂಕಪಟ್ಟಿಯಲ್ಲಿ ತನ್ನ ಅಗ್ರಸ್ಥಾನವನ್ನು ಉಳಿಸಿಕೊಂಡಿದೆ. ಇತ್ತ ಆರ್‌ಸಿಬಿ ಗೆಲುವು ಸಾಧಿಸುತ್ತಿದ್ದಂತೆ ಅತ್ತ ಸೋಶಿಯಲ್ ಮೀಡಿಯಾದಲ್ಲಿ ಮಾಜಿ ಸಿಎಸ್‌ಕೆ ಆಟಗಾರ ಅಂಬಟಿ ರಾಯುಡುರನ್ನು (Ambati Rayudu) ಆರ್‌ಸಿಬಿ ಅಭಿಮಾನಿಗಳು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.
ಟ್ರೋಲಿಗರಿಗೆ ಆಹಾರವಾದ ರಾಯುಡು
ವಾಸ್ತವವಾಗಿ ಆರ್‌ಸಿಬಿ ತಂಡವನ್ನು ಬಹಿರಂಗವಾಗಿಯೇ ಟೀಕಿಸುವ ಆಟಗಾರರ ಪಟ್ಟಿಯಲ್ಲಿ ಸದಾ ಅಗ್ರಸ್ಥಾನದಲ್ಲಿರುವ ಅಂಬಟಿ ರಾಯುಡು, ಆರ್‌ಸಿಬಿ ಟ್ರೋಫಿ ಗೆಲ್ಲದಿರುವುದನ್ನು ಯಾವಾಗಲೂ ಗೇಲಿ ಮಾಡುತ್ತಿರುತ್ತಾರೆ. ಆರ್‌ಸಿಬಿ ಫ್ರಾಂಚೈಸಿಯ ಜೊತೆಗೆ ಅಭಿಮಾನಿಗಳನ್ನು ತನ್ನ ಹೇಳಿಕೆಗಳಿಂದ ಕೆರಳಿಸುವ ರಾಯುಡು, ವಿಶ್ವ ಕ್ರಿಕೆಟ್ನ ದಿಗ್ಗಜ ಬ್ಯಾಟರ್ ಕೊಹ್ಲಿಯನ್ನು ಟಿ20 ಕ್ರಿಕೆಟ್ಗೆ ಅಸಮರ್ಥ ಆಟಗಾರ ಎಂಬಂತೆಯೂ ಮಾತನಾಡುತ್ತಾರೆ. ಇದೀಗ ಚೆನ್ನೈ ತಂಡವನ್ನು ಅವರ ನೆಲದಲ್ಲೇ ಆರ್‌ಸಿಬಿ ಮಣಿಸಿರುವ ಖುಷಿಯಲ್ಲಿರುವ ಆರ್‌ಸಿಬಿ ಫ್ಯಾನ್ಸ್, ಅಂಬಟಿ ರಾಯುಡು ಇನ್ನೊಂದು ವಾರ ಸೋಶಿಯಲ್ ಮೀಡಿಯಾವನ್ನು ನೋಡದಂತೆ ಟ್ರೋಲ್ ಮಾಡುತ್ತಿದ್ದಾರೆ.
Ambati Rayudu seen leaving from Chepauk stadium#cskvsrcb pic.twitter.com/pHPtbHPnpo
— 👑Che_ಕೃಷ್ಣ🇮🇳💛❤️ (@ChekrishnaCk) March 28, 2025
RCB fans with Ambati Rayudu and Badrinath tonight😭😭😭 pic.twitter.com/3J9h4RptP0
— Homelander (Good Manners) (@aham_brahmasmi_) March 28, 2025
#CSKvsRCB Reaction of Ambati Rayudu after CSK lost the match pic.twitter.com/MQixmAeKiO
— BOBjr (@superking1816) March 28, 2025
Ambati rayudu when CSK lost to RCB 😭#CSKvsRCB
— Prashant🌾 (@gabbarsiingh) March 28, 2025
Why Ambati Rayudu 😂😂😂 pic.twitter.com/LnNzoSfGYO
— Sunil the Cricketer (@1sInto2s) March 21, 2025
ಆರ್ಸಿಬಿಯನ್ನು ಗೇಲಿ ಮಾಡಿದ್ದ ರಾಯುಡು
ಆರ್‌ಸಿಬಿ ಹಾಗೂ ಸಿಎಸ್‌ಕೆ ನಡುವಿನ ಈ ಪಂದ್ಯ ಆರಂಭಕ್ಕೂ ಮುನ್ನ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಜಿ ಕ್ರಿಕೆಟಿಗರಾದ ಅಂಬಟಿ ರಾಯುಡು ಮತ್ತು ಎಸ್ ಬದ್ರಿನಾಥ್, ಟ್ರೋಫಿ ಗೆಲ್ಲುವ ಆರ್‌ಸಿಬಿಯ ಕನಸನ್ನು ಅಣಕಿಸಿದ್ದರು. ಈ ಇಬ್ಬರ ಗೇಲಿ ಮಾತಿನ ವಿಡಿಯೋ ಎಲ್ಲೆಡೆ ವೈರಲ್ ಆಗಿತ್ತು. ಈಗ ವೈರಲ್ ಆಗಿರುವ ವಿಡಿಯೋದಲ್ಲಿ ‘ಈ ವರ್ಷ ಆರ್‌ಸಿಬಿ ತನ್ನ ಟ್ರೋಫಿಯ ಬರಗಾಲವನ್ನು ನೀಗಿಸಲು ಸಾಧ್ಯವಾಗುತ್ತದೆಯೇ ಎಂದು ಬದರಿನಾಥ್ ತಮಾಷೆಯಾಗಿ ರಾಯುಡು ಬಳಿ ಪ್ರಶ್ನೆ ಕೇಳಿದ್ದಾರೆ. ಇದನ್ನು ಕೇಳಿದ ಕೂಡಲೇ ಇಬ್ಬರೂ ಆಟಗಾರರು ನಗಲು ಆರಂಭಿಸಿದ್ದಾರೆ. ಆ ಬಳಿಕ ಈ ಪ್ರಶ್ನೆಗೆ ಉತ್ತರಿಸಿರುವ ರಾಯುಡು, ‘ಆರ್‌ಸಿಬಿ ಟ್ರೋಫಿ ಗೆಲ್ಲುವುದಕ್ಕೆ ಮಾಡುವ ಹೋರಾಟವನ್ನು ನೋಡಿ ನಾನು ಯಾವಾಗಲೂ ಆನಂದಿಸುತ್ತೇನೆ ಎಂದಿದ್ದಾರೆ.
These ex-CSK clowns are now groveling for clout and crumbs of relevance through a "trophyless" RCB 😭😭😭😭😭😭 😭
These two washed-up jokers strut around like they’ve smashed 100 Tests for India and bagged a cabinet full of ICC trophies pic.twitter.com/qtkPjPVCAm
— Thalaiban (@Thalaiban) March 27, 2025
ಮುಂದುವರೆದು ಮಾತನಾಡಿರುವ ರಾಯುಡು, ‘ಒಂದು ದಿನ ಆರ್‌ಸಿಬಿ ಟ್ರೋಫಿ ಗೆಲ್ಲಬೇಕೆಂದು ನಾನು ಬಯಸುತ್ತೇನೆ, ಆದರೆ ಈ ವರ್ಷ ಅಲ್ಲ!’. ವಾಸ್ತವವಾಗಿ, ಐಪಿಎಲ್‌ಗೆ ನಿರಂತರವಾಗಿ ನಿರೀಕ್ಷೆಗಳನ್ನು ಹೆಚ್ಚಿಸುವ ಆದರೆ ಅವುಗಳನ್ನು ಪೂರೈಸಲು ಸಾಧ್ಯವಾಗದ ತಂಡ ಬೇಕು. ಇದು ಪಂದ್ಯಾವಳಿಯನ್ನು ಇನ್ನಷ್ಟು ಮೋಜಿನಿಂದ ಕೂಡಿಸುತ್ತದೆ!’ ಎಂದಿದ್ದಾರೆ. ರಾಯುಡು ಅವರ ಈ ಕಾಮೆಂಟ್ ಮತ್ತೆ ಆರ್‌ಸಿಬಿ ಅಭಿಮಾನಿಗಳು ಕೆರಳುವಂತೆ ಮಾಡಿತ್ತು. ಇದೀಗ ಸಿಎಸ್‌ಕೆ ವಿರುದ್ಧ ಆರ್‌ಸಿಬಿ ಭರ್ಜರಿ ಗೆಲುವು ಸಾಧಿಸಿದ್ದು, ಆರ್‌ಸಿಬಿ ಅಭಿಮಾನಿಗಳು ರಾಯುಡು ಮೇಲೆ ಮುಗಿಬಿದ್ದಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:51 pm, Fri, 28 March 25