Sign In

By signing in or creating an account, you agree with Associated Broadcasting Company's Terms & Conditions and Privacy Policy.

Horoscope Today 29 March: ಈ ರಾಶಿಯವರಿಗೆ ಕೆಲಸದ ವಿಷಯದಲ್ಲಿ ಇಂದು ನಿಮಗೆ ಉತ್ತಮ ದಿನವಾಗಿದೆ

ಶಾಲಿವಾಹನ ಶಕವರ್ಷ 1947ರ ಉತ್ತರಾಯಣ, ಶಿಶಿರ ಋತುವಿನ ಫಾಲ್ಗುಣ ಮಾಸ ಕೃಷ್ಣ ಪಕ್ಷದ ಅಮಾವಾಸ್ಯಾ ತಿಥಿ, ಶನಿವಾರ ಪ್ರಾಮುಖ್ಯ ಬದಲಾವಣೆ, ಬೆಳವಣಿಗೆಗೆ ಅಡ್ಡಿ, ಆರ್ಥಿಕ ಆತಂಕ, ಪರರ ಬಗ್ಗೆ ಅಸೂಯೆ ಇವೆಲ್ಲ ಈ ದಿನ ಈ ದಿನ 29-3-25ರ ದಿನ ಭವಿಷ್ಯದಲ್ಲಿ ಯಾವ ರಾಶಿಗೆ ಯಾವ ಫಲ ಎನ್ನುವುದನ್ನು ತಿಳಿದುಕೊಳ್ಳಿ.

Horoscope Today 29 March: ಈ ರಾಶಿಯವರಿಗೆ ಕೆಲಸದ ವಿಷಯದಲ್ಲಿ ಇಂದು ನಿಮಗೆ ಉತ್ತಮ ದಿನವಾಗಿದೆ
ದಿನ ಭವಿಷ್ಯ
Follow us
ಲೋಹಿತ ಹೆಬ್ಬಾರ್​, ಇಡುವಾಣಿ
| Updated By: ವಿವೇಕ ಬಿರಾದಾರ

Updated on: Mar 29, 2025 | 1:20 AM

ಶಾಲಿವಾಹನ ಶಕೆ ೧೯೪೭ರ ಕ್ರೋಧೀ ಸಂವತ್ಸರದ ಉತ್ತರಾಯಣ, ಋತು : ಶಿಶಿರ, ಸೌರ ಮಾಸ : ಮೀನ ಮಾಸ, ಮಹಾನಕ್ಷತ್ರ: ಉತ್ತರಾಭಾದ್ರ, ಮಾಸ : ಫಾಲ್ಗುಣ, ಪಕ್ಷ : ಕೃಷ್ಣ, ವಾರ : ಶುಕ್ರ, ತಿಥಿ : ಅಮಾವಾಸ್ಯಾ, ನಿತ್ಯನಕ್ಷತ್ರ : ಉತ್ತರಾಭಾದ್ರ, ಯೋಗ : ಬ್ರಹ್ಮ, ಕರಣ : ಶಕುನಿ, ಸೂರ್ಯೋದಯ – 06 – 31 am, ಸೂರ್ಯಾಸ್ತ – 06 – 43 pm, ಇಂದಿನ ಶುಭಾಶುಭಕಾಲ : ರಾಹು ಕಾಲ 09:34 – 11:06, ಯಮಘಂಡ ಕಾಲ 14:09 – 15:40, ಗುಳಿಕ ಕಾಲ 06:32 – 08:03

ತುಲಾ ರಾಶಿ: ನಿಮ್ಮ ಆಶ್ವಾಸನೆಯ ಮಾತುಗಳಿಂದ ಪ್ರಯೋಜನವಾಗದು. ಅದೃಷ್ಟವು ನಿಮಗೆ ಅನುಕೂಲಕರವಾಗಿರುತ್ತದೆ. ಹಾಗಾಗಿ ನಿಮ್ಮ ಎಲ್ಲ ಕೆಲಸಗಳು ಸುಲಭವಾಗಿ ಪೂರ್ಣಗೊಳ್ಳುತ್ತವೆ. ಕಷ್ಟಕರವಾದ ಕಾರ್ಯಗಳೂ ಭಾರವಾಗದೇ ಇರಬಹುದು. ನಿಮ್ಮ ಉದ್ಯಮದ ಗುಣಮಟ್ಟವನ್ನು ಏರಿಸುವಿರಿ. ಪ್ರತಿಯೊಂದು ವಿಷಯದಲ್ಲೂ ನಿಮ್ಮ ಪೋಷಕರಿಂದ ನೀವು ಸಂತೋಷ ಮತ್ತು ಬೆಂಬಲವನ್ನು ಪಡೆಯುತ್ತೀರಿ. ಇಂದು ದೊಡ್ಡ ಖರೀದಿಯನ್ನು ಮಾಡಲು ತೀರ್ಮಾನಿಸಿದ್ದೀರಿ. ವಿದ್ಯಾಭ್ಯಾಸದ ಕಾರಣಕ್ಕೆ ಮನೆಯನ್ನು ಬಿಡುವುದು ನಿಮಗೆ ಕಷ್ಟವಾದೀತು. ಸಾಲ ಕೊಟ್ಟ ಹಣವು ನಿಮಗೆ ಮರಳಿಬರುವುದು. ನಿಮಗೆ ಸಂಸ್ಥೆಯನ್ನು ಮುನ್ನಡೆಸುವ ಹೊಣೆಗಾರಿಕೆ ಸಿಗಲಿದೆ. ಇಂದು ಇನ್ನೊಬ್ಬರ ನೋವಿಗೆ ಸ್ಪಂದಿಸಲು ಆಗದು. ಇಂದು ನೀವು ಕೆಲವು ಅನಗತ್ಯ ಖರ್ಚುಗಳನ್ನು ಸಹ ಅನುಭವಿಸಬಹುದು. ಅನಗತ್ಯ ಖರ್ಚು ಮಾಡುವ ಸಾಧ್ಯತೆಯೂ ಇದೆ. ನೀವು ಜನರಿಂದ ಪೂರ್ಣ ಗೌರವವನ್ನು ಪಡೆಯುತ್ತೀರಿ. ವ್ಯಾಪಾರದಲ್ಲಿ ಲಾಭ ಇರುತ್ತದೆ. ಆಪ್ತರು ನಿಮಗೆ ಆತಿಥ್ಯವನ್ನು ಕೊಡಿಸುವರು. ಇಂದು ವಿದ್ಯಾರ್ಥಿಗಳಿಗೆ ಪ್ರಶಂಸೆ ಸಿಗುವುದು.

ವೃಶ್ಚಿಕ ರಾಶಿ: ನಿಮ್ಮ ಗುರಿ ವಿಚಲಿತವಾಗಿದ್ದು ಮತ್ತೆ ಯೋಜಿಸಿಕೊಳ್ಳಬೇಕಿದೆ. ಕೆಲವು ಕಾರಣಗಳಿಂದ ನೀವು ಮಾನಸಿಕ ಅಶಾಂತಿಯನ್ನು ಅನುಭವಿಸುವರು. ಕೆಲಸದ ವಿಷಯದಲ್ಲಿ ಇಂದು ನಿಮಗೆ ಉತ್ತಮ ದಿನವಾಗಿದೆ. ಕೆಲಸದ ನಿಮಿತ್ತ ಪ್ರಯಾಣ ಮಾಡಬೇಕಾಗುವುದು. ನಿಮ್ಮ ಈ ಪ್ರಯಾಣವು ತುಂಬಾ ಪ್ರಯೋಜನಕಾರಿಯಾಗಲಿದೆ. ಬಾಂಧವರ ಜೊತೆ ಸ್ನೇಹದಿಂದ ಇರುವಿರಿ. ಭೂಮಿಯ ವ್ಯವಹಾರವನ್ನು ಮಾಡಲು ಬಹಳ ಉತ್ಸಾವಿರಲಿದೆ. ಹೊಸ ಬದುಕು ಒಂದು ವ್ಯವಸ್ಥೆಗೆ ಬರುವತನಕ ಕಷ್ಟ. ಕಛೇರಿಯಲ್ಲಿ ನಿಮ್ಮ ದಾಖಲೆಗಳು ಕಾಣಿಸದೇ ಹೋಗಬಹುದು. ಒರಟು ಮಾತುಗಳಿಂದ ಸಂಬಂಧವನ್ನು ಕಳೆದುಕೊಳ್ಳಬೇಕಾದೀತು. ಪೋಷಕರ ಬೆಂಬಲ ಮತ್ತು ಆಶೀರ್ವಾದದಿಂದ ಸಮಾಧಾನವಿರುತ್ತದೆ. ನಿಮ್ಮ ಬಂಧುಗಳ ಜೊತೆ ಯಾವುದೇ ರೀತಿಯ ವ್ಯವಹಾರವನ್ನು ಮಾಡಬೇಡಿ. ಇಲ್ಲದಿದ್ದರೆ ನೀವು ಸಮಸ್ಯೆಗಳನ್ನು ಎದುರಿಸಬಹುದು. ಮಧುರವಾದ ಮಾತುಗಳಿಂದ ತುಂಡಾಗುವ ಸಂಬಂಧವನ್ನು ಸರಿ ಮಾಡಿಕೊಳ್ಳುವಿರಿ. ನಿಮ್ಮ ಸಂಗಾತಿಯ ಜೊತೆ ನಿಮ್ಮ ಸಂಬಂಧವು ಹಿಂದಿಗಿಂತ ಗಟ್ಟಿಯಾಗುವುದು.

ಧನು ರಾಶಿ: ವೃತ್ತಿಗಾಗಿ ದೂರ ಪ್ರಯಾಣದ ಅನಿವಾರ್ಯತೆ ಸೃಷ್ಟಿ. ಸಮಾಲೋಚನೆ ಮಾಡಿ ಸರಿಯಾದ ತೀರ್ಮಾನ‌ ಮಾಡಿ. ಇಂದು ಅದೃಷ್ಟವು ನಿಮ್ಮ ಕಡೆ ಇರುವಂತೆ ಕಾಣುತ್ತದೆ. ನಿಮ್ಮ ಕಠಿಣ ಪರಿಶ್ರಮಕ್ಕೆ ನೀವು ಉತ್ತಮ ಫಲಿತಾಂಶಗಳನ್ನು ಪಡೆಯುತ್ತೀರಿ. ನಿಮ್ಮ ಮಕ್ಕಳ ವೃತ್ತಿಜೀವನದಲ್ಲಿ ನೀವು ಸಾಕಷ್ಟು ತೃಪ್ತರಾಗುವಿರಿ. ಇಂದು ಕೆಲವು ವ್ಯಕ್ತಿತ್ವಗಳು ಇಷ್ಟವಾಗಲಿದ್ದು, ಅವರನ್ನು ಅನುಕರಿಸುವಿರಿ. ಆರ್ಥಿಕತೆಯನ್ನು ಸರಿದೂಗಿಸುವ ಮಾರ್ಗೋಪಾಯವನ್ನು ಕಂಡುಕೊಳ್ಳಿ. ಸರ್ಕಾರದ ಕೆಲಸಕ್ಕೆ ತೊಂದರೆಯಾಗುವುದು. ಯಾರದೋ ಒತ್ತಾಯಕ್ಕಾಗಿ ಪ್ರಯಾಣ ಮಾಡಬೇಕಾದೀತು. ಇಂದು, ತಾಯಿಯ ಕಡೆಯಿಂದ ಪ್ರೀತಿ ಮತ್ತು ವಿಶೇಷ ಬೆಂಬಲವನ್ನು ಪಡೆಯುವ ಸಾಧ್ಯತೆಯಿದೆ. ನಿಮ್ಮ ಐಷಾರಾಮಿಗಳಿಗಾಗಿ ನೀವು ಹಣವನ್ನು ಖರ್ಚು ಮಾಡುತ್ತೀರಿ. ಇದರಿಂದ ನಿಮ್ಮ ಶತ್ರುಗಳನ್ನು ಅಸಮಾಧಾನಗೊಳಿಸುತ್ತದೆ. ಕಾಲಿನ ಕೆಳನ ಭಾಗಕ್ಕೆ ಗಾಯವಾಗುವ ಸಾಧ್ಯತೆ ಇದೆ. ನೀವು ನಿಮ್ಮ ಹೆತ್ತವರ ಬಗ್ಗೆ ವಿಶೇಷ ಕಾಳಜಿ ವಹಿಸಿದರೆ, ನಿಮ್ಮ ಕೆಲಸವು ಪೂರ್ಣಗೊಳ್ಳುತ್ತದೆ.

ಮಕರ ರಾಶಿ: ಮಕ್ಕಳ ಸಂತೋಷಕ್ಕಾಗಿ ಏನಾದರೂ ಯೋಜನೆ ಹಾಕಬೇಕಾಗುವುದು. ಇಂದು ನಿಮಗೆ ಗೌರವ ಪಡೆಯುವ ದಿನವಾಗಿರಲಿದೆ. ಅನಗತ್ಯ ಖರ್ಚುಗಳನ್ನು ತಪ್ಪಿಸಿದರೆ ಉತ್ತಮ. ಅನ್ಯರ ಬಗ್ಗೆ ಇರುವ ಅಸೂಯೆಯಿಂದ ಸಂಕಟ ಹೆಚ್ಚಾಗಬಹುದು. ಕೂಲಂಕುಷವಾಗಿ ಯೋಚಿಸಿದ ಅನಂತರ ಯಾವುದೇ ನಿರ್ಧಾರ ತೆಗೆದುಕೊಳ್ಳುವುದು ಉತ್ತಮ. ನಿಮ್ಮ ಶತ್ರುಗಳಿಗೆ ತಾನಾಗಿಯೇ ಸೋಲಾಗುವುದು. ಸಾಮಾಜಿಕ ಚಟುವಟಿಕೆಗಳಲ್ಲಿ ಅಡಚಣೆ ಉಂಟಾಗುವುದು. ಕೆಲವು ಅನಿರೀಕ್ಷಿತ ಲಾಭಗಳಿಂದಾಗಿ ನಿಮ್ಮ ಗೌರವ ಹೆಚ್ಚಾಗುತ್ತದೆ. ನಿಮ್ಮ ಮಕ್ಕಳಿಂದ ನೀವು ಉತ್ತೇಜಕ ಸುದ್ದಿಯನ್ನು ಸ್ವೀಕರಿಸುತ್ತೀರಿ. ಭೀಕರತೆಯಿಂದ ಭಯಗೊಳ್ಳುವಿರಿ.‌ ಇಂದು ಕಛೇರಿಯಲ್ಲಿ ಕೊಡುವ ಕೆಲಸವನ್ನು ಬಹಳ ಜವಾಬ್ದಾರಿಯಿಂದ ಮಾಡಬೇಕಾದೀತು. ಆರೋಗ್ಯ ಸಮಸ್ಯೆಗಳು ನಿಮ್ಮ ಸರಿಯಿಲ್ಲದ ದಿನಚರಿಯಿಂದ ಬರಲಿದೆ. ಸೊಂಟದ ಭಾಗದಲ್ಲಿ ನೋವು ಕಾಣಿಸುಬುದು. ಅಮೂಲ್ಯ ವಸ್ತುವಿನ ಬಗ್ಗೆ ನಿಷ್ಕಾಳಜಿ ಸರಿಯಲ್ಲ. ವ್ಯಾಪಾರಸ್ಥರು ಅಧಿಕ ಲಾಭವನ್ನು ಗಳಿಸುವರು.

ಕುಂಭ ರಾಶಿ: ನಿಮ್ಮನ್ನು ಬೇರೆ ರೀತಿಯಲ್ಲಿ ಉಪಯೋಗಿಸಿಕೊಳ್ಳಬಹುದು. ಇಂದು ಹೆಚ್ಚಿನ ಕೆಲಸದ ನಿಮಿತ್ತ, ನೀವು ಹೆಚ್ಚು ತಿರುಗಾಟ ಮಾಡಬೇಕಾದೀತು. ಜಾಗರೂಕರಾಗಿರಿ, ಕಾಲಿಗೆ ಗಾಯವಾಗುವ ಅಪಾಯವಿದೆ. ನಿಮ್ಮ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯವು ನಿಮಗೇ ಪ್ರಯೋಜನವನ್ನು ನೀಡುತ್ತದೆ. ಮಾನಸಿಕ ಸ್ಥೈರ್ಯ ನಿಮಗೆ ಕಡಿಮೆಯಾಗಬಹುದು.‌ ಇಂದು ಬಾಕಿ ಉಳಿದಿರುವ ಕೆಲಸಗಳು ಪೂರ್ಣಗೊಳ್ಳುತ್ತವೆ. ನಿಮ್ಮ ಮನಸ್ಸಿನಲ್ಲಿ ನೀವು ತುಂಬಾ ಸಂತೋಷವಾಗಿರುತ್ತೀರಿ. ಪ್ರವಾಸ ವಿಚಾರದಲ್ಲಿ ಬಹಳ ಗೊಂದಲವಿರುವುದು. ದ್ವಂದ್ವಗಳಿಗೆ ಕಟ್ಟುಬಿದ್ದು ಅನಂತರ ಗೊತ್ತಾಗುವುದು. ಮಕ್ಕಳ ಆರೋಗ್ಯದ ಸುಧಾರಣೆಗೆ ನೀವು ಓಡಾಟ ಮಾಡಬೇಕಾಗುವುದು. ಕೆಲಸದ ವಿಷಯದಲ್ಲಿ ನೀವು ಯಾರ ಮಾತನ್ನೂ ನೀವು ಕೇಳುವುದಿಲ್ಲ. ಇಂದಿನ ಆದಾಯವು ಮಧ್ಯಮಕ್ಕಿಂತ ಚೆನ್ನಾಗಿ ಇರುವುದು. ಚಂಚಲ ಮನಸ್ಸು ಸಹಜವಾದುದನ್ನು ಗುರುತಿಸಲಾರದು. ಶತ್ರುಗಳ ಚಿಂತೆಯಿಂದ ಮಾನಸಿಕವಾಗಿ ಕುಗ್ಗುವಿರಿ. ನಿಮ್ಮಷ್ಟಕ್ಕೆ ನೀವಿರಲು ಸಾಧ್ಯವಾಗದು. ಎಲ್ಲ ವಿಚಾರಕ್ಕೂ ಕಾರಣವನ್ನು ಕೇಳುವಿರಿ.

ಮೀನ ರಾಶಿ: ಎಲ್ಲ ಕಾರ್ಯಗಳಿಗೂ ಸಿಗುವ ಸಹಕಾರದಿಂದ ಆತ್ಮತೃಪ್ತಿ ಇರುವುದು. ಇಂದು ನೀವು ಕಚೇರಿಯಲ್ಲಿ ಗೌರವವನ್ನು ಪಡೆಯುತ್ತೀರಿ. ಮಕ್ಕಳ ಮನೆಯಲ್ಲಿ ವಾಸಮಾಡುವ ಅನಿವಾರ್ಯತೆ ಬರುವುದು. ನಿಮ್ಮ ಕೌಶಲ್ಯದ ಕೆಲಸವನ್ನು ಗುರುತಿಸುವರು. ಇಂದು ನೀವು ಹಣದ ವಿಷಯಗಳಲ್ಲಿ ಯಾವುದೇ ರೀತಿಯ ಅಪಾಯವನ್ನು ತೆಗೆದುಕೊಳ್ಳುವುದನ್ನು ತಪ್ಪಿಸಬೇಕು. ಬಂಧುಗಳ ಒತ್ತಾಯಕ್ಕೆ ಮಣಿಯಬೇಕಾಗುವುದು. ನೀವು ಹಳೆಯ ಸ್ನೇಹಿತರಿಂದ ಬೆಂಬಲವನ್ನು ಪಡೆಯುವಿರಿ. ಉತ್ತಮ ಸ್ನೇಹಿತರ ಸಮೂಹವೂ ಸಹ ಹೆಚ್ಚಾಗಲಿದೆ. ಕುಟುಂಬ ಸದಸ್ಯರಿಂದ ಗೌರವವನ್ನೂ ಪಡೆಯುತ್ತೀರಿ. ನಿಮಗೆ ಗೊತ್ತಾಗದಂತೆ ಖರ್ಚು ಅಧಿಕವಾಗುವುದು. ಸ್ತ್ರೀಯರಿಗೆ ಕೆಲವು ಲಾಭಗಳು ಆಗಬಹುದು. ವಾಹನ ಖರೀದಿಗೆ ದಾಖಲೆಗಳನ್ನು ತಯಾರಿಸಿಕೊಳ್ಳುವಿರಿ. ಇಂದು ನಿಮ್ಮ ತಲೆಯಲ್ಲಿ ಅಪೂರ್ಣ ಕಾರ್ಯಗಳೇ ತುಂಬಿರುವುದು. ಉತ್ತಮ ಕೆಲಸದ ಅನ್ವೇಷಣೆಯನ್ನು ಮಾಡುವಿರಿ. ನಿಮ್ಮ ಮಗನ ಮೇಲೆ ಸಂಪತ್ತಿನ ದೂರುವಿರಿ. ತುರ್ತು ಕಾರ್ಯಕ್ಕಾಗಿ ಮನೆಯಿಂದ ದೂರ ಹೋಗಬೇಕಾಗಬಹುದು.

ಅಧ್ಯಕ್ಷನ ಸ್ಥಾನ ಉತ್ತರ ಕರ್ನಾಟಕದವರಿಗೆ ಅನ್ನೋದು ಗಾಳಿಸುದ್ದಿ: ಖರ್ಗೆ
ಅಧ್ಯಕ್ಷನ ಸ್ಥಾನ ಉತ್ತರ ಕರ್ನಾಟಕದವರಿಗೆ ಅನ್ನೋದು ಗಾಳಿಸುದ್ದಿ: ಖರ್ಗೆ
ಸರ್ಕಾರದ ದುರಾಡಳಿತ ವಿರುದ್ಧ ಬಿಜೆಪಿ ಜನಜಾಗೃತಿ ಅಭಿಯಾನ: ವಿಜಯೇಂದ್ರ
ಸರ್ಕಾರದ ದುರಾಡಳಿತ ವಿರುದ್ಧ ಬಿಜೆಪಿ ಜನಜಾಗೃತಿ ಅಭಿಯಾನ: ವಿಜಯೇಂದ್ರ
ಒರಿಜಿನಲ್ ರಂಗಾಯಣ ರಘುವಿಗೆ ಡುಪ್ಲಿಕೇಟ್ ರಂಗಾಯಣ ರಘು ಸಿಕ್ಕಾಗ
ಒರಿಜಿನಲ್ ರಂಗಾಯಣ ರಘುವಿಗೆ ಡುಪ್ಲಿಕೇಟ್ ರಂಗಾಯಣ ರಘು ಸಿಕ್ಕಾಗ
ಇಂದಿನಿಂದ ಕಸದ ಮೇಲೂ ತೆರಿಗೆ, ದಾರಿ ಯಾವುದಯ್ಯ ಬದುಕಲು?
ಇಂದಿನಿಂದ ಕಸದ ಮೇಲೂ ತೆರಿಗೆ, ದಾರಿ ಯಾವುದಯ್ಯ ಬದುಕಲು?
ಕಣ್ಮನ ಸೆಳೆಯುತ್ತಿದೆ ಶಿವಕುಮಾರ ಶ್ರೀಗಳ 125 ಅಡಿ ಉದ್ದದ ರಂಗೋಲಿ ಚಿತ್ರ
ಕಣ್ಮನ ಸೆಳೆಯುತ್ತಿದೆ ಶಿವಕುಮಾರ ಶ್ರೀಗಳ 125 ಅಡಿ ಉದ್ದದ ರಂಗೋಲಿ ಚಿತ್ರ
ದೇವರಿಗೆ ತಪ್ಪು ಕಾಣಿಕೆ ಕಟ್ಟುವುದು ಹೇಗೆ? ಮುಡಿಪು ಇಡುವುದರ ಮಹತ್ವ ಇಲ್ಲಿದೆ
ದೇವರಿಗೆ ತಪ್ಪು ಕಾಣಿಕೆ ಕಟ್ಟುವುದು ಹೇಗೆ? ಮುಡಿಪು ಇಡುವುದರ ಮಹತ್ವ ಇಲ್ಲಿದೆ
ರವಿ ಮೀನ ರಾಶಿ, ಚಂದ್ರ ವೃಷಭ ರಾಶಿಯಲ್ಲಿ ಸಂಚರಿಸುವ ಈ ದಿನದ ರಾಶಿ ಭವಿಷ್ಯ
ರವಿ ಮೀನ ರಾಶಿ, ಚಂದ್ರ ವೃಷಭ ರಾಶಿಯಲ್ಲಿ ಸಂಚರಿಸುವ ಈ ದಿನದ ರಾಶಿ ಭವಿಷ್ಯ
‘ಅರ್ಜುನ್ ಜನ್ಯ ರೀತಿಯ ಹುಚ್ಚ ಬೇರೆ ಯಾರಿಲ್ಲ: ರಾಜ್ ಬಿ. ಶೆಟ್ಟಿ
‘ಅರ್ಜುನ್ ಜನ್ಯ ರೀತಿಯ ಹುಚ್ಚ ಬೇರೆ ಯಾರಿಲ್ಲ: ರಾಜ್ ಬಿ. ಶೆಟ್ಟಿ
ನಿರ್ದೇಶಕರ ಪಾಲಿಗೆ ಶಿವಣ್ಣ ಅಪರಂಜಿ; ಕಾರಣ ಕೊಟ್ಟು ವಿವರಿಸಿದ ಉಪೇಂದ್ರ
ನಿರ್ದೇಶಕರ ಪಾಲಿಗೆ ಶಿವಣ್ಣ ಅಪರಂಜಿ; ಕಾರಣ ಕೊಟ್ಟು ವಿವರಿಸಿದ ಉಪೇಂದ್ರ
ರಾಮನಗರ: ಮಾನವೀಯತೆ ಮೆರೆದ ಪೊಲೀಸ್​ ಪೇದೆಗೆ ಮೆಚ್ಚುಗೆ
ರಾಮನಗರ: ಮಾನವೀಯತೆ ಮೆರೆದ ಪೊಲೀಸ್​ ಪೇದೆಗೆ ಮೆಚ್ಚುಗೆ