ಪ್ರೇಕ್ಷಕರ ನಗು-ಅಳು ನೋಡಿ ‘ಮನದ ಕಡಲು’ ನಾಯಕಿಯರು ಹೇಳಿದ್ದೇನು ನೋಡಿ..
‘ಇಂದು ನನ್ನ ದೊಡ್ಡ ಕನಸು ನನಸಾಗಿದೆ. ತುಂಬ ಪ್ರೀತಿಯಿಂದ ಸಿನಿಮಾ ಮಾಡಿದ್ದೇವೆ. ಯೋಗರಾಜ್ ಭಟ್ ಸರ್ ನಮ್ಮ ಮೇಲೆ ನಂಬಿಕೆ ಇಟ್ಟು ಈ ಅವಕಾಶ ಕೊಟ್ಟರು’ ಎಂದು ಅಂಜಲಿ ಅನೀಶ್ ಹೇಳಿದ್ದಾರೆ. ‘ನಾನು ಎಮೋಷನಲ್ ಆಗಿದ್ದೇನೆ. ಜನರು ಇಷ್ಟು ಇಷ್ಟಪಟ್ಟಿದ್ದಾರೆ. ಆಗ ಮುಂಗಾರುಮಳೆ, ಈಗ ಮನದ ಕಡಲು’ ಎಂದು ನಟಿ ರಾಶಿಕಾ ಶೆಟ್ಟಿ ಹೇಳಿದ್ದಾರೆ.
ಯೋಗರಾಜ್ ಭಟ್ (Yogaraj Bhat) ನಿರ್ದೇಶನ ಮಾಡಿದ ‘ಮನದ ಕಡಲು’ ಸಿನಿಮಾ ಇಂದು (ಮಾರ್ಚ್ 28) ಬಿಡುಗಡೆ ಆಗಿದೆ. ಚಿತ್ರದ ನಾಯಕಿಯರಾದ ಅಂಜಲಿ ಅನೀಶ್ (Anjali Anish) ಮತ್ತು ರಾಶಿಕಾ ಶೆಟ್ಟಿ ಅವರು ಮೊದಲ ದಿನವೇ ಪ್ರೇಕ್ಷಕರ ಜೊತೆ ಕುಳಿತು ಸಿನಿಮಾ ನೋಡಿದ್ದಾರೆ. ಪ್ರೇಕ್ಷಕರ ಪ್ರತಿಕ್ರಿಯೆ ಕಂಡು ತಮಗೆ ಖುಷಿ ಆಗಿದೆ ಎಂದು ಅವರು ಹೇಳಿದ್ದಾರೆ. ಈ ಸಿನಿಮಾದಲ್ಲಿ ಸುಮುಖ ಅವರು ಹೀರೋ ಆಗಿ ಅಭಿನಯಿಸಿದ್ದಾರೆ. ‘ಮುಂಗಾರುಮಳೆ’ ಚಿತ್ರದ ನಿರ್ಮಾಪಕ ಇ. ಕೃಷ್ಣಪ್ಪ ಅವರು ಈಗ ‘ಮನದ ಕಡಲು’ (Manada Kadalu) ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Latest Videos