AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮತ್ತೆ ಸಾರಿಗೆ ಮುಷ್ಕರದ ಸುಳಿವು: ‘ಬ್ರೇಕ್​ ಹಾಕಿ’ ಸಿಬ್ಬಂದಿಗೆ ಶಾಕ್ ಕೊಟ್ಟ ಸರ್ಕಾರ, ಈ ವರ್ಷ ಇನ್ನು ಸಾರಿಗೆ ಮುಷ್ಕರ ನಡೆಸುವಂತಿಲ್ಲ!

Transport employees strike: ಸಾರಿಗೆ ನೌಕರರು ಮತ್ತೆ ಮುಷ್ಕರಕ್ಕೆ ಸಿದ್ದರಾಗ್ತಿದ್ದಾರೆ ಎಂಬ ಸುಳಿವು ಸಿಕ್ಕಿತ್ತು. ಲಾಕ್​ಡೌನ್​ ಮುಗಿದ ಮೇಲೆ  ಜುಲೈ 5 ರ ನಂತ್ರ ಕುಟುಂಬ ಸಮೇತ ಪ್ರತಿಭಟನೆ ನಡೆಸಲು ಸಾರಿಗೆ ನೌಕರರು ಮುಂದಾಗಿದ್ದರು. ಆದರೆ ಅದಕ್ಕೂ ಮೊದಲೇ...  ಅಗತ್ಯ ಸೇವೆಗಳ‌ ಮುಷ್ಕರವನ್ನ ನಿಷೇಧಿಸಿ ಸರ್ಕಾರ ಆದೇಶ ಹೊರಡಿಸಿದೆ.  

ಮತ್ತೆ ಸಾರಿಗೆ ಮುಷ್ಕರದ ಸುಳಿವು: ‘ಬ್ರೇಕ್​ ಹಾಕಿ’ ಸಿಬ್ಬಂದಿಗೆ ಶಾಕ್ ಕೊಟ್ಟ ಸರ್ಕಾರ, ಈ ವರ್ಷ ಇನ್ನು ಸಾರಿಗೆ ಮುಷ್ಕರ ನಡೆಸುವಂತಿಲ್ಲ!
ಮತ್ತೆ ಸಾರಿಗೆ ಮುಷ್ಕರದ ಸುಳಿವು: ‘ಬ್ರೇಕ್​ ಹಾಕಿ’ ಸಿಬ್ಬಂದಿಗೆ ಶಾಕ್ ಕೊಟ್ಟ ಸರ್ಕಾರ, ಈ ವರ್ಷ ಇನ್ನು ಸಾರಿಗೆ ಮುಷ್ಕರ ನಡೆಸುವಂತಿಲ್ಲ!
TV9 Web
| Edited By: |

Updated on: Jun 26, 2021 | 10:24 AM

Share

 ಬೆಂಗಳೂರು: ರಾಜ್ಯದ ನಾನಾ ಸಾರಿಗೆ ಸಂಸ್ಥೆಗಳ ನೌಕರರು ಮತ್ತೆ ಮುಷ್ಕರ ಮಾಡಲು ಮುಂದಾಗಿದ್ದಾರೆ ಎಂಬ ಸುಳಿವು ಸರ್ಕಾರಕ್ಕೆ ಸಿಕ್ಕಿದೆ. ಜುಲೈ 5ರ ಬಳಿಕ ಸಾರಿಗೆ ನೌಕರರು ಮತ್ತೆ ರಸ್ತೆಗೆ ಇಳಿಯಲಿದ್ದಾರೆ ಎನ್ನಲಾಗಿದೆ. ಇದನ್ನರಿತು ಮುಷ್ಕರಕ್ಕೆ ನಿರ್ಧರಿಸಿದ್ದ ಸಾರಿಗೆ ಸಿಬ್ಬಂದಿಗೆ ಬ್ರೇಕ್​ ಹಾಕಲು ಅಗತ್ಯ ಸೇವೆಗಳ ಮುಷ್ಕರ ನಿಷೇಧಿಸಿ ಸರ್ಕಾರದಿಂದ ಆದೇಶ ಹೊರಬಿದ್ದಿದೆ. 

ಈ ವರ್ಷ ಇನ್ನು ಸಾರಿಗೆ ಮುಷ್ಕರ ನಡೆಸುವಂತಿಲ್ಲ: ಜುಲೈ 1ರಿಂದ ಡಿಸೆಂಬರ್​​ 31ರವರೆಗೆ ಸಾರಿಗೆ ಸಿಬ್ಬಂದಿ ಮುಷ್ಕರವನ್ನು ನಿಷೇಧ ಮಾಡಲಾಗಿದೆ. ಆರ್ಥಿಕತೆಯ ಮೇಲೆ ಕೊವಿಡ್ ಸಾಕಷ್ಟು ಪ್ರಭಾವ ಬೀರಿದೆ. ಈ ಸಂದರ್ಭದಲ್ಲಿ ಮುಷ್ಕರ ಮಾಡುವುದು ಸೂಕ್ತವಲ್ಲ. ಹೀಗಾಗಿ ಕರ್ನಾಟಕ ಅಗತ್ಯ ಸೇವೆಗಳ ನಿರ್ವಹಣೆ ಕಾಯ್ದೆ 3 ಉಪವಿಭಾಗ 1ರ ಅನ್ವಯ ಅಗತ್ಯ ಸೇವೆಗಳ ಮುಷ್ಕರವನ್ನು (essential services maintain act) ನಿಷೇಧಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಸಾರಿಗೆ ನೌಕರರು ಮತ್ತೆ ಮುಷ್ಕರಕ್ಕೆ ಸಿದ್ದರಾಗ್ತಿದ್ದಾರೆ ಎಂಬ ಸುಳಿವು ಸಿಕ್ಕಿತ್ತು. ಲಾಕ್​ಡೌನ್​ ಮುಗಿದ ಮೇಲೆ  ಜುಲೈ 5 ರ ನಂತ್ರ ಕುಟುಂಬ ಸಮೇತ ಪ್ರತಿಭಟನೆ ನಡೆಸಲು ಸಾರಿಗೆ ನೌಕರರು ಮುಂದಾಗಿದ್ದರು. ಆದರೆ ಅದಕ್ಕೂ ಮೊದಲೇ…  ಅಗತ್ಯ ಸೇವೆಗಳ‌ ಮುಷ್ಕರವನ್ನ ನಿಷೇಧಿಸಿ ಸರ್ಕಾರ ಆದೇಶ ಹೊರಡಿಸಿದೆ.

karnataka government brings in essential services maintain act to curb strike by transport employees

ಕರ್ನಾಟಕ ಅಗತ್ಯ ಸೇವೆಗಳ ನಿರ್ವಹಣೆ ಕಾಯ್ದೆ 3  ಉಪವಿಭಾಗ 1ರ ಅನ್ವಯ ಅಗತ್ಯ ಸೇವೆಗಳ ಮುಷ್ಕರವನ್ನು ನಿಷೇಧ

(karnataka government brings in essential services maintain act to curb strike by transport employees)

ಕರ್ನಾಟಕದಲ್ಲಿ ಮತ್ತೊಮ್ಮೆ ಸಾರಿಗೆ ನೌಕರರ ಮುಷ್ಕರ ಸಾಧ್ಯತೆ, ಸಭೆಯಲ್ಲಿ ದಿನಾಂಕ ನಿಗದಿ: ಕೋಡಿಹಳ್ಳಿ ಚಂದ್ರಶೇಖರ್ ಮಾಹಿತಿ