ಮಾನಸಿಕ ಅಸ್ವಸ್ಥ ಯುವಕನಿಗೆ ಕಿರುಕುಳ: ದಾಬಸ್‌ಪೇಟೆ ಪೊಲೀಸರಿಂದ ಕಾಮುಕ ಶಿಕ್ಷಕ ರಂಗನಾಥ್ ಸೆರೆ
Nelamangala: ಎರಡು ದಿನಗಳ ಕಾಲ 21 ವಯಸ್ಸಿನ ಮಾನಸಿಕ ಅಸ್ವಸ್ಥ ಯುವಕನ ಮೇಲೆ ದೌರ್ಜನ್ಯ ನಡೆದಿದೆ ಎಂದು ಆರೋಪಿಸಲಾಗಿದೆ. ಜೂನ್ 15ರಂದು ದಾಬಸ್ ಪೇಟೆ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಐಪಿಸಿ ಕಲಂ 377, 506 ರೀತ್ಯಾ ಕೇಸ್ ದಾಖಲು ಮಾಡಿಕೊಳ್ಳಲಾಗಿದೆ. ಧರಿತ್ರಿ ಸಂಸ್ಥೆಯ ಕಾರ್ಯದರ್ಶಿ ಶ್ರೀಕಾಂತ್ ಬೆಟ್ಟಗೇರಿ ಅವರು ಮುಖ್ಯೋಪಾಧ್ಯಾಯ ರಂಗನಾಥ್ ಮೇಲೆ ದೂರು ನೀಡಿದ್ದಾರೆ.
ನೆಲಮಂಗಲ: ಯುವಕನಿಗೆ ನೀಲಿಚಿತ್ರ ತೋರಿಸಿ ಲೈಂಗಿಕ ಕಿರುಕುಳ ನೀಡುತ್ತಿದ್ದ ಆರೋಪದ ಮೇಲೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕು ದಾಬಸ್‌ಪೇಟೆ ಪೊಲೀಸರು ಕಾಮುಕ ಶಿಕ್ಷಕನನ್ನು ಅರೆಸ್ಟ್ ಮಾಡಿದ್ದಾರೆ. ನೆಲಮಂಗಲದಲ್ಲಿ ಶೇಮ್ ಶೇಮ್ ಪ್ರಕರಣ?!: ಮಾರ್ಗದರ್ಶನ ತೋರಬೇಕಿದ್ದ ಶಿಕ್ಷಕನೊಬ್ಬ ಯುವಕನಿಗೆ ಕಾಮುಕನಾಗಿ ಕಾಡಿದ್ದಾನೆ. ಗುರುವಿನ ಸ್ಥಾನದಲ್ಲಿದ್ದ ಶಿಕ್ಷಕ ನೀಲಿ ಚಿತ್ರ ತೋರಿಸಿ ಯುವಕನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಅರೋಪ ಕೇಳಿಬಂದಿದೆ.
ಲೈಂಗಿಕ ದೌರ್ಜನ್ಯ ಅರೋಪ ಹಿನ್ನೆಲೆ ರಂಗನಾಥ್ ಎಂಬ ಮುಖ್ಯೋಪಾಧ್ಯಾಯನಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಮಾನಸಿಕ ಅಸ್ವಸ್ಥ ಮಕ್ಕಳ ಧರಿತ್ರಿ ಸಂಸ್ಥೆ ನರಸೀಪುರದಲ್ಲಿ ಮೇ 6 ಮತ್ತು 7 ರಂದು ಕೃತ್ಯ ನಡೆದಿರುವುದಾಗಿ ತಿಳಿದುಬಂದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಎರಡು ದಿನಗಳ ಕಾಲ 21 ವಯಸ್ಸಿನ ಮಾನಸಿಕ ಅಸ್ವಸ್ಥ ಯುವಕನ ಮೇಲೆ ದೌರ್ಜನ್ಯ ನಡೆದಿದೆ ಎಂದು ಆರೋಪಿಸಲಾಗಿದೆ.
ಜೂನ್ 15ರಂದು ದಾಬಸ್ ಪೇಟೆ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಐಪಿಸಿ ಕಲಂ 377, 506 ರೀತ್ಯಾ ಕೇಸ್ ದಾಖಲು ಮಾಡಿಕೊಳ್ಳಲಾಗಿದೆ. ಧರಿತ್ರಿ ಸಂಸ್ಥೆಯ ಕಾರ್ಯದರ್ಶಿ ಶ್ರೀಕಾಂತ್ ಬೆಟ್ಟಗೇರಿ ಅವರು ಮುಖ್ಯೋಪಾಧ್ಯಾಯ ರಂಗನಾಥ್ ಮೇಲೆ ದೂರು ನೀಡಿದ್ದಾರೆ.
(mentally disabled youth harassed by headmaster ranganath accused sent to judicial custody nelamangala)
ನೆಲಮಂಗಲದಲ್ಲಿ ವಾಮಾಚಾರ: 10 ವರ್ಷದ ಬಾಲಕಿಯ ಅಪಹರಣ, ಬಲಿಗೆ ಯತ್ನ; ಅರ್ಚಕ ಸೇರಿದಂತೆ ಐದು ಮಂದಿ ಅರೆಸ್ಟ್