SBI UPI Services: ಸ್ಟೇಟ್ ಬ್ಯಾಂಕ್​ ಆಫ್ ಇಂಡಿಯಾದ ನಿಮ್ಮ ಖಾತೆಗೆ ಯುಪಿಐ ಸೇವೆ ಆ್ಯಕ್ಟಿವೇಟ್ ಹಾಗೂ ಡಿಆ್ಯಕ್ಟಿವೇಟ್ ಹೇಗೆ?

SBI account UPI service: ನೀವು ಸ್ಟೇಟ್ ಬ್ಯಾಂಕ್ ಆಫ್​ ಇಂಡಿಯಾದ ಗ್ರಾಹಕರಾಗಿದ್ದಲ್ಲಿ ಯುಪಿಐ ಸೇವೆಗೆ ಆ್ಯಕ್ಟಿವೇಟ್ ಮತ್ತು ಡಿಆ್ಯಕ್ಟಿವೇಟ್ ಹೇಗೆ ಎಂಬುದರ ವಿವರ ಇಲ್ಲಿದೆ.

SBI UPI Services: ಸ್ಟೇಟ್ ಬ್ಯಾಂಕ್​ ಆಫ್ ಇಂಡಿಯಾದ ನಿಮ್ಮ ಖಾತೆಗೆ ಯುಪಿಐ ಸೇವೆ ಆ್ಯಕ್ಟಿವೇಟ್ ಹಾಗೂ ಡಿಆ್ಯಕ್ಟಿವೇಟ್ ಹೇಗೆ?
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on:Jun 24, 2021 | 7:30 PM

ಇಂದು ವ್ಯಾಪಕವಾಗಿ ಬಳಕೆ ಆಗುತ್ತಿರುವ ಯೂನಿಫೈಡ್ ಪೇಮೆಂಟ್ಸ್ ಇಂಟರ್​ಫೇಸ್ (ಯುಪಿಐ) ಅನ್ನು ಕಂಡು ಹಿಡಿದಿದ್ದು ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (ಎನ್​ಪಿಸಿಐ). ಇದನ್ನು ನಿಯಂತ್ರಿಸುವುದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ. ಐಎಂಪಿಎಸ್ ತಂತ್ರಜ್ಞಾನ ಬಳಸಿ, ರಿಯಲ್​ಟೈಮ್​ನಲ್ಲಿ ಎರಡು ಬ್ಯಾಂಕ್ ಖಾತೆಗಳ ಮಧ್ಯೆ ಹಣವನ್ನು ವರ್ಗಾವಣೆ ಮಾಡಲಾಗುತ್ತದೆ. ಯುಪಿಐ ವಹಿವಾಟು ಮಾಡುವುದಕ್ಕೆ ಗೊತ್ತಿರಬೇಕಾದದ್ದು ಯುಪಿಐ ಪಾಸ್​ಕೋಡ್ ಅಥವಾ ಯುಪಿಐ- PIN. ಇದು 4ರಿಂದ 6 ಅಂಕಿಯನ್ನು ಒಳಗೊಂಡಿರುತ್ತದೆ. ಇದು ಭದ್ರತೆಯಂತೆ ಸಹಾಯಕ್ಕೆ ಬರಲಿದ್ದು, ಇಬ್ಬರು ವ್ಯಕ್ತಿಗಳ ಮಧ್ಯೆ ತಕ್ಷಣವೇ ಹಣ ವರ್ಗಾವಣೆ ಆಗುತ್ತದೆ. ದೇಶದ ಅತಿ ದೊಡ್ಡ ಸಾರ್ವಜನಿಕ ಸ್ವಾಮ್ಯದ ಬ್ಯಾಂಕ್​ ಆದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಗ್ರಾಹಕರು ಆನ್​ಲೈನ್​ ಬ್ಯಾಂಕಿಂಗ್ ಮೂಲಕ ತಮ್ಮ ಖಾತೆಗೆ ಸರಳವಾಗಿ ಯುಪಿಐ ಆ್ಯಕ್ಟಿವೇಟ್ ಮತ್ತು ಡಿಆ್ಯಕ್ಟಿವೇಟ್ ಮಾಡಿಕೊಳ್ಳಬಹುದು. ನೀವು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಗ್ರಾಹಕರಾಗಿದ್ದಲ್ಲಿ ಖಾತೆ ಮೂಲಕ ಯುಪಿಐ ಸೇವೆ ಪಡೆಯಲು ಬಯಸಿದಲ್ಲಿ ಈ ಲೇಖನದಿಂದ ಅನುಕೂಲ ಆಗಲಿದೆ.

ಎಸ್​ಬಿಐ ಆನ್​ಲೈನ್ ಅಥವಾ YONO SBI ಮೂಲಕ ಎನೇಬಲ್ ಅಥವಾ ಡಿಸೇಬಲ್ ಮಾಡಬಹುದು. ಒಂದು ವೇಳೆ ನೀವು ಎಸ್​ಬಿಐನ ನೆಟ್​ ಬ್ಯಾಂಕಿಂಗ್ ಬಳಕೆದಾರರಾಗಿದ್ದಲ್ಲಿ ಹಂತಹಂತವಾದ ಯುಪಿಐ ಸೌಲಭ್ಯ ಪಡೆಯಲು ಅಥವಾ ಕೊನೆಗೊಳಿಸಲು ಇಲ್ಲಿದೆ ಹಂತಹಂತವಾದ ವಿವರಣೆ ಇಲ್ಲಿದೆ. – ಮೊದಲಿಗೆ https://www.onlinesbi.com/ ಗೆ ಭೇಟಿ ನೀಡಿ. ಪರ್ಸನಲ್ ಬ್ಯಾಂಕಿಂಗ್ ಸೆಕ್ಷನ್​ ಅಡಿಯಲ್ಲಿ ಲಾಗಿನ್ ಕ್ಲಿಕ್ ಮಾಡಿ. – “ಕಂಟಿನ್ಯೂ ಟು ಲಾಗಿನ್” ಮೇಲೆ ಕ್ಲಿಕ್ ಮಾಡಿ. ಆ ನಂತರ ಲಾಗಿನ್ ಟು ಆನ್​ಲೈನ್ ಎಸ್​ಬಿಐ ಪುಟಕ್ಕೆ ತೆರಳುತ್ತದೆ. ಅಲ್ಲಿ ಯೂಸರ್​ ನೇಮ್, ಪಾಸ್​ವರ್ಡ್​ ಮತ್ತು ಅಗತ್ಯ ಇರುವ CAPTCHA ಕೋಡ್ ನಮೂದಿಸಬೇಕು. – ಒಂದು ಸಲ ಅಕೌಂಟ್​ಗೆ ಸೈನ್​ ಇನ್​ ಆದ ಮೇಲೆ ಮೈ ಪ್ರೊಫೈಲ್ ಸೆಕ್ಷನ್​ಗೆ ಹೋಗುತ್ತದೆ. ಯುಪಿಐ ಆಯ್ಕೆಯಲ್ಲಿ ಎನೇಬಲ್/ಡಿಸೇಬಲ್ ಖಾತೆಯ ಮೇಲೆ ಕ್ಲಿಕ್ ಮಾಡಿ. – ನಿಮ್ಮ ಖಾತೆಯನ್ನು ಆಯ್ಕೆ ಮಾಡಿಕೊಳ್ಳಿ. ನಿಮ್ಮ ಖಾತೆಗೆ ಯುಪಿಐ ಸೇವೆ ಎನೇಬಲ್ ಅಥವಾ ಡಿಸೇಬಲ್ ಆದ್ಯತೆಯನ್ನು ಆರಿಸಿಕೊಳ್ಳಿ.

ಎಸ್​ಬಿಐ ಖಾತೆ ಮೂಲಕ ಯುಪಿಐ ಸೇವೆ ಆ್ಯಕ್ಟಿವೇಟ್ ಮತ್ತು ಡಿಆ್ಯಕ್ಟಿವೇಟ್ ಹಂತಹಂತವಾದ ವಿಧಾನ – ಎಸ್​ಬಿಐ Yono ಲೈಟ್ ಮೊಬೈಲ್ ಆ್ಯಪ್ ತೆರೆಯಿರಿ ಮತ್ತು ಎಸ್​ಬಿಐ ಮೊಬೈಲ್​ ಬ್ಯಾಂಕಿಂಗ್​ಗೆ ಅಗತ್ಯ ಕ್ರೆಡೆನ್ಷಿಯಲ್ಸ್​​ನೊಂದಿಗೆ ಸೈನ್​ ಇನ್ ಆಗಿ. – ಯುಪಿಐ ಆಯ್ಕೆ ಮೇಲೆ ಒತ್ತಿ ಮತ್ತು ಯುಪಿಐ ಡಿಸೇಬಲ್/ಎನೇಬಲ್ ಆಯ್ಕೆಯನ್ನು ಆರಿಸಿಕೊಳ್ಳಿ. – ಈಗ ನಿಮ್ಮ ಖಾತೆಯನ್ನು ಆರಿಸಿಕೊಳ್ಳಿ ಮತ್ತು ಖಾತೆಗೆ ಯುಪಿಐ ಸೇವೆಯ ಎನೇಬಲ್ ಅಥವಾ ಡಿಆ್ಯಕ್ಟಿವೇಟ್ ಆದ್ಯತೆಯನ್ನು ನಿರ್ಧರಿಸಿ.

ಯುಪಿಐ PIN ಬಳಸಿ ಹಣ ವರ್ಗಾವಣೆ ಮಾಡುವುದು ಹೇಗೆ? – ಮೊಬೈಲ್​ ಫೋನ್​ನಲ್ಲಿ BHIM SBI ಪೇ ಆ್ಯಪ್ ತೆರೆದು, ಖಾತೆಗೆ ಲಾಗ್ ಇನ್ ಆಗಬೇಕು. – Pay ಆಯ್ಕೆ ಮೇಲೆ ಒತ್ತಬೇಕು ಮತ್ತು ವಿಪಿಎ ಅಥವಾ ಅಕೌಂಟ್ ಮತ್ತು ಐಎಫ್​ಎಸ್​ಸಿ ಅಥವಾ ಕ್ಯೂಆರ್ ಕೋಡ್ ಆರಿಸಿಕೊಳ್ಳಬೇಕು. – ಅಗತ್ಯ ಮಾಹಿತಿಗಳನ್ನು ಭರ್ತಿ ಮಾಡಿ, ಅದನ್ನು ಖಾತ್ರಿಪಡಿಸಬೇಕು. – ಜೋಡಣೆ ಆಗಿರುವ ಖಾತೆಗಳಿಂದ ಡೆಬಿಟ್ ಆಗಬೇಕಾದ ಖಾತೆಯನ್ನು ಆರಿಸಿಕೊಳ್ಳಬೇಕು ಮತ್ತು ಟಿಕ್ ಗುರುತಿನ ಮೇಲೆ ಕ್ಲಿಕ್ ಮಾಡಬೇಕು. – ವಹಿವಾಟು ಆರಂಭಿಸುವುದಕ್ಕೆ ಯುಪಿಐ PIN ನಮೂದಿಸಬೇಕು ಮತ್ತು ಅದನ್ನು ಸಂಪೂರ್ಣಗೊಳಿಸಲು ಟಿಕ್ ಗುರುತಿನ ಮೇಲೆ ಕ್ಲಿಕ್ ಮಾಡಬೇಕು.

ಎಸ್​ಬಿಐ ಯುಪಿಐ ಮಿತಿ ಯುಪಿಐ PIN ನಿಗದಿ ಆದ ಮೇಲೆ ಮೊದಲ ವಹಿವಾಟು ಗರಿಷ್ಠ 5000 ರೂಪಾಯಿ ಇರುತ್ತದೆ. ಮೊದಲ ಇಪ್ಪತ್ನಾಲ್ಕು ಗಂಟೆಯಲ್ಲಿ ಕ್ಯುಮುಲೇಟಿವ್ ಮೊತ್ತ ದಿನಕ್ಕೆ 5 ಸಾವಿರ ರೂಪಾಯಿ. BHIM SBI Payನಲ್ಲಿ ಒಂದು ದಿನಕ್ಕೆ 1 ಲಕ್ಷ ರೂಪಾಯಿಯ ಮಿತಿ ಇದೆ. 1 ಲಕ್ಷ ರೂಪಾಯಿ ಮಿತಿಯಲ್ಲಿ 24 ಗಂಟೆಯಲ್ಲಿ ಒಂದು ಖಾತೆಗೆ ಗರಿಷ್ಠ 10 ವಹಿವಾಟು ಮಾಡಬಹುದು.

ಇದನ್ನೂ ಓದಿ: ಯುಪಿಐ, ಐಎಂಪಿಎಸ್ ಹಣ ವರ್ಗಾವಣೆ ವಿಫಲವಾದರೆ ಬ್ಯಾಂಕ್​ಗಳಿಂದ ದಿನಕ್ಕೆ 100 ರೂ.ನಂತೆ ದಂಡ ಪಾವತಿ

(How to activate and deactivate UPI services in SBI account by customers. Here is an explainer)

Published On - 7:24 pm, Thu, 24 June 21

ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ