AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯುಪಿಐ, ಐಎಂಪಿಎಸ್ ಹಣ ವರ್ಗಾವಣೆ ವಿಫಲವಾದರೆ ಬ್ಯಾಂಕ್​ಗಳಿಂದ ದಿನಕ್ಕೆ 100 ರೂ.ನಂತೆ ದಂಡ ಪಾವತಿ

ಗ್ರಾಹಕರ ಖಾತೆಯಿಂದ ಯುಪಿಐ, ಐಎಂಪಿಎಸ್ ಮೂಲಕ ಹಣ ವರ್ಗಾವಣೆ ಮಾಡಿದಾಗ ಅದು ವಿಫಲವಾದಲ್ಲಿ ನಿಗದಿತ ಕಾಲಾವಧಿಯಲ್ಲಿ ಮರಳಿಸಬೇಕಾಗುತ್ತದೆ. ಒಂದು ವೇಳೆ ವಿಫಲವಾದಲ್ಲಿ ಅದಕ್ಕೆ ಬ್ಯಾಂಕ್​ಗಳು ದಂಡ ಪಾವತಿಸಬೇಕು.

ಯುಪಿಐ, ಐಎಂಪಿಎಸ್ ಹಣ ವರ್ಗಾವಣೆ ವಿಫಲವಾದರೆ ಬ್ಯಾಂಕ್​ಗಳಿಂದ ದಿನಕ್ಕೆ 100 ರೂ.ನಂತೆ ದಂಡ ಪಾವತಿ
ಪ್ರಾತಿನಿಧಿಕ ಚಿತ್ರ
Srinivas Mata
|

Updated on:Apr 06, 2021 | 2:01 PM

Share

ಕಳೆದ ವರ್ಷದಿಂದ ಈಚೆಗೆ ಯುಪಿಐ (ಯುನಿಫೈಡ್ ಪೇಮೆಂಟ್ ಇಂಟರ್​ಫೇಸ್) ಬಳಕೆ ಭಾರೀ ಪ್ರಮಾಣದಲ್ಲಿ ಹೆಚ್ಚಾಗಿದೆ. ಭಾರತದಲ್ಲಿ ಯುಪಿಐ ವಹಿವಾಟುಗಳು ಜನಪ್ರಿಯ ಕೂಡ ಆಗಿವೆ. ಬಿಲ್ ಪಾವತಿಯಿಂದ ಹಣ ವರ್ಗಾವಣೆ ಮಾಡುವ ತನಕ ಎಲ್ಲವನ್ನೂ ಸುಲಭ ಹಾಗೂ ಶೀಘ್ರ ಮಾಡಿದೆ ಈ ಯುಪಿಐ. ಈಚೆಗೆ ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (ಎನ್​ಪಿಸಿಐ) ಮಾಡಿರುವ ಟ್ವೀಟ್ ಬಗ್ಗೆ ಇಟಿನೌನ್ಯೂಸ್.ಕಾಮ್ ವರದಿ ಮಾಡಿದೆ. ಅದರ ಪ್ರಕಾರ, ಹಣಕಾಸು ವರ್ಷದ ಕೊನೆಗೆ ಯುಪಿಐ ಮತ್ತು ಐಎಂಪಿಎಸ್ ವಹಿವಾಟುಗಳು ಕೆಲವು ಬ್ಯಾಂಕ್​ಗಳಲ್ಲಿ ವಿಫಲವಾಗಿವೆ. ಕಳೆದ ಸಂಜೆಯಿಂದ ಬ್ಯಾಂಕ್ ವ್ಯವಸ್ಥೆ ಮತ್ತೆ ಸಹಜ ಸ್ಥಿತಿಗೆ ಮರಳಿವೆ. ಗ್ರಾಹಕರಿಗೆ ತಡೆರಹಿತವಾದ ಐಎಂಪಿಎಸ್ ಮತ್ತು ಯುಪಿಐ ಸೇವೆಗಳು ದೊರೆಯಲಿವೆ ಎಂದು ಟ್ವೀಟ್ ಮಾಡಿದ್ದಾಗಿ ವರದಿ ಆಗಿದೆ.

ಆದರೆ, ಎನ್​ಪಿಸಿಐ ಟ್ವೀಟ್​ಗೆ ಹಲವರು ಪ್ರತಿಕ್ರಿಯೆ ನೀಡಿದ್ದಾರೆ. ತಮ್ಮ ವಹಿವಾಟು ವಿಫಲವಾಗಿರುವುದಷ್ಟೇ ಅಲ್ಲ, ಬ್ಯಾಂಕ್ ಖಾತೆಗೆ ಇನ್ನೂ ಹಣ ವಾಪಸ್ ಬಂದಿಲ್ಲ ಎಂದು ದೂರು ಹೇಳಿಕೊಂಡಿದ್ದಾರೆ. ಎನ್​ಇಎಫ್​ಟಿ, ಆರ್​ಟಿಜಿಎಸ್ ಅಥವಾ ಯುಪಿಐ ವಹಿವಾಟು ವಿಫಲವಾದಲ್ಲಿ ಹಣ ಹಿಂತಿರುಗುವುದಕ್ಕೆ ಎಷ್ಟು ಸಮಯ ಬೇಕಾಗುತ್ತದೆ ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಆದರೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾವು ಸೆಪ್ಟೆಂಬರ್ 19, 2019ರಂದು ಹೊರಡಿಸಿದ ಸುತ್ತೋಲೆ ಪ್ರಕಾರ, ಒಂದು ವೇಳೆ ವ್ಯವಹಾರ ವಿಫಲವಾದಲ್ಲಿ ಗ್ರಾಹಕರ ಖಾತೆಯಿಂದ ಕಡಿತವಾದ ಹಣವು ವಹಿವಾಟು ವಿಫಲವಾದ ಮೇಲೆ ನಿಗದಿತ ಅವಧಿಯೊಳಗೆ ಹಿಂತಿರುಗಿಸಬೇಕು. ಒಂದು ವೇಳೆ ವಾಪಸ್ ಮಾಡುವುದಕ್ಕೆ ವಿಫಲವಾದಲ್ಲಿ ಗ್ರಾಹಕರಿಗೆ ಬ್ಯಾಂಕ್​ನಿಂದ ದಿನಕ್ಕೆ 100 ರೂಪಾಯಿಯಂತೆ ದಂಡ ಪಾವತಿಸಬೇಕು.

ಟಿ+1 ದಿನದಲ್ಲಿ ಹಿಂತಿರುಗಿಸಬೇಕು ಸುತ್ತೋಲೆಯ ಪ್ರಕಾರ, ಐಎಂಪಿಎಸ್ ವಹಿವಾಟು ವಿಫಲವಾದಲ್ಲಿ, ಅಂದರೆ ಗ್ರಾಹಕರ ಖಾತೆಯಿಂದ ಹಣ ಕಡಿತವಾಗಿ, ಫಲಾನುಭವಿಗಳ ಖಾತೆಗೆ ಜಮೆ ಆಗದಿದ್ದಲ್ಲಿ ಈ ಮೊತ್ತವನ್ನು ಟಿ+1 ದಿನದಲ್ಲಿ ಹಿಂತಿರುಗಿಸಬೇಕು. ಇಲ್ಲಿ ಟಿ ಅಂದರೆ, ವಹಿವಾಟಿನ ದಿನ. ಉದಾಹರಣೆಗೆ, ಏಪ್ರಿಲ್ 6, 2021ರಂದು ವಹಿವಾಟು ವಿಫಲವಾದಲ್ಲಿ ಮುಂದಿನ ಕಾರ್ಯ ನಿರ್ವಹಿಸುವ ದಿನದ ಕೊನೆಯೊಳಗೆ ಹಣ ಹಿಂತಿರುಗಿಸಬೇಕು. ಒಂದು ವೇಳೆ ಟಿ+1 ದಿನದೊಳಗೆ ಮೊತ್ತವನ್ನು ಮರಳಿಸದಿದ್ದಲ್ಲಿ ಅದರಾಚೆಗೆ ದಿನಕ್ಕೆ 100 ರೂಪಾಯಿಯಂತೆ ದಂಡ ಪಾವತಿ ಮಾಡಬೇಕು.

ಯುಪಿಐ ಮೂಲಕ ಹಣ ವರ್ಗಾವಣೆ ಮಾಡಿದಾಗ ಬ್ಯಾಂಕ್ ಖಾತೆಯಿಂದ ಹಣ ಕಡಿತವಾಗಿ, ಫಲಾನುಭವಿ ಖಾತೆಗೆ ಜಮೆ ಆಗದಿದ್ದಲ್ಲಿ ಅಂಥ ಸನ್ನಿವೇಶದಲ್ಲೂ ಟಿ+1 ದಿನದಲ್ಲಿ ಹಣವನ್ನು ಹಿಂತಿರುಗಿಸಬೇಕು. ಒಂದು ವೇಳೆ ವಾಪಸ್ ಮಾಡದಿದ್ದಲ್ಲಿ ಅದರ ಆಚೆಗೆ ದಿನಕ್ಕೆ 100 ರೂಪಾಯಿಯಂತೆ ಗ್ರಾಹಕರಿಗೆ ದಂಡವನ್ನು ಪಾವತಿ ಮಾಡಬೇಕಾಗುತ್ತದೆ.

ಹಣ ಮರುಪಾವತಿ ಆಗದಿದ್ದಲ್ಲಿ ಏನು ಮಾಡಬೇಕು? ಒಂದು ವೇಳೆ ಇಂಥ ವಿಫಲ ವಹಿವಾಟುಗಳು ಅನುಭವಕ್ಕೆ ಬಂದಾಗ ಸಮಸ್ಯೆ ಪರಿಹಾರಕ್ಕೆ ಸೇವಾ ಪೂರೈಕೆದಾರರು ಎಷ್ಟು ಕಾಲಾವಧಿ ನಿಗದಿ ಮಾಡಿದ್ದಾರೆ ಎಂಬುದನ್ನು ಪರಿಶೀಲಿಸಬೇಕು. ಒಂದು ವೇಳೆ ನಿಗದಿತ ಕಾಲಾವಧಿಯಲ್ಲಿ ಸಮಸ್ಯೆಯನ್ನು ಬಗೆಹರಿಸದಿದ್ದಲ್ಲಿ ಸೇವಾ ಪೂರೈಕೆದಾರರು ಅಥವಾ ವ್ಯವಸ್ಥೆ ಭಾಗಿದಾರರಿಗೆ ದೂರು ಸಲ್ಲಿಸಬೇಕು.

ಈ ಎಲ್ಲವನ್ನೂ ಹೊರತುಪಡಿಸಿ, ಒಂದು ತಿಂಗಳ ಒಳಗಾಗಿ ಸಮಸ್ಯೆಗೆ ಪರಿಹಾರ ದೊರಕಿಸದಿದ್ದರೆ ಒಂಬುಡ್ಸ್​ಮನ್ ಸ್ಕೀಮ್ ಫಾರ್ ಡಿಜಿಟಲ್ ಟ್ರಾನ್ಸಾಕ್ಷನ್ಸ್, 2019ರ ಅಡಿಯಲ್ಲಿ ಒಂಬುಡ್ಸ್​ಮನ್​ಗೆ ದೂರು ನೀಡಬಹುದು. ಯಾವ ಬಗೆಯ ಹಣ ವರ್ಗಾವಣೆ ಎಂಬ ಆಧಾರದಲ್ಲಿ ಆಯಾ ಕ್ಷೇತ್ರದ ಒಂಬುಡ್ಸ್​ಮನ್​ರ ಬಳಿ ದೂರನ್ನು ಒಯ್ಯಬಹುದು. ಎಷ್ಟು ಸಮಯದೊಳಗೆ ಪರಿಷ್ಕಾರ ಸಿಗಬೇಕು ಎಂಬ ಬಗ್ಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮಾರ್ಗದರ್ಶನ ನೀಡಿದೆ.

ಇದನ್ನೂ ಓದಿ: UPI- Help: ಭೀಮ್ ಆ್ಯಪ್ ಮೂಲಕ ಸಲೀಸಾಗಲಿದೆ ಸಮಸ್ಯೆಗೆ ಪರಿಹಾರ

ಇದನ್ನೂ ಓದಿ: 5 safety tips to follow in digital payment: ಡಿಜಿಟಲ್ ಪೇಮೆಂಟ್ ವೇಳೆ ಈ 5 ತಪ್ಪುಗಳನ್ನು ಮಾಡಬೇಡಿ

(If UPI, IMPS transactions failed banks should pay a fine to customers. Here are the details.)

Published On - 2:00 pm, Tue, 6 April 21

ರಸ್ತೆ ಮಾಡುವುದರಿಂದ ಬಡವರ ಜೀವನ ಉದ್ದಾರ ಆಗ್ತದಾ: ಪರಮೇಶ್ವರ್ ಪ್ರಶ್ನೆ
ರಸ್ತೆ ಮಾಡುವುದರಿಂದ ಬಡವರ ಜೀವನ ಉದ್ದಾರ ಆಗ್ತದಾ: ಪರಮೇಶ್ವರ್ ಪ್ರಶ್ನೆ
ಇಂಗ್ಲೆಂಡ್ ವರನ ಕೈ ಹಿಡಿದ ಬೇಲೂರಿನ ವಧು! ನಡೆಯಿತು ಅದ್ದೂರಿ ಮದುವೆ
ಇಂಗ್ಲೆಂಡ್ ವರನ ಕೈ ಹಿಡಿದ ಬೇಲೂರಿನ ವಧು! ನಡೆಯಿತು ಅದ್ದೂರಿ ಮದುವೆ
ಎಲಿಮಿನೇಟ್ ಆಗದಿದ್ದರೂ ರಕ್ಷಿತಾ ಶೆಟ್ಟಿಗೆ ಶುರುವಾಯ್ತು ಹೊಸ ಚಿಂತೆ
ಎಲಿಮಿನೇಟ್ ಆಗದಿದ್ದರೂ ರಕ್ಷಿತಾ ಶೆಟ್ಟಿಗೆ ಶುರುವಾಯ್ತು ಹೊಸ ಚಿಂತೆ
Video: ಆರತಿ ಎತ್ತಿರೋ ಫುಟ್​ಪಾತ್​ ಮೇಲೆ ಗಾಡಿ ಓಡ್ಸವ್ರಿಗೆ
Video: ಆರತಿ ಎತ್ತಿರೋ ಫುಟ್​ಪಾತ್​ ಮೇಲೆ ಗಾಡಿ ಓಡ್ಸವ್ರಿಗೆ
ಸೈಕಲ್ ಸವಾರನಿಗೆ ಡಿಕ್ಕಿ ಹೊಡೆದು ತಿರುಗಿಯೂ ನೋಡದೆ ಹೋದ ಬೈಕ್ ಸವಾರ
ಸೈಕಲ್ ಸವಾರನಿಗೆ ಡಿಕ್ಕಿ ಹೊಡೆದು ತಿರುಗಿಯೂ ನೋಡದೆ ಹೋದ ಬೈಕ್ ಸವಾರ
Video: ಅಮ್ಮಾ ನನ್ನ ಮೈಬಣ್ಣ ಬೇರೆ ಮಾಡೋಕೆ ಆಗಲ್ವಾ, ಕಣ್ಣೀರಿಟ್ಟ ಬಾಲಕಿ
Video: ಅಮ್ಮಾ ನನ್ನ ಮೈಬಣ್ಣ ಬೇರೆ ಮಾಡೋಕೆ ಆಗಲ್ವಾ, ಕಣ್ಣೀರಿಟ್ಟ ಬಾಲಕಿ
ವಿಷ್ಣು ತುಳಿಸಿ, ಹಾಗೂ ಲಕ್ಷ್ಮೀ ತುಳಸಿ ಎರೆಡೂ ಮನೆಯಲ್ಲಿರಬೇಕು ಯಾಕೆ?
ವಿಷ್ಣು ತುಳಿಸಿ, ಹಾಗೂ ಲಕ್ಷ್ಮೀ ತುಳಸಿ ಎರೆಡೂ ಮನೆಯಲ್ಲಿರಬೇಕು ಯಾಕೆ?
ಇಂದು ಈ ರಾಶಿಯವರಿಗೆ ಐದು ಗ್ರಹಗಳ ಶುಭಫಲವಿರುತ್ತದೆ
ಇಂದು ಈ ರಾಶಿಯವರಿಗೆ ಐದು ಗ್ರಹಗಳ ಶುಭಫಲವಿರುತ್ತದೆ
ಮದ್ಯ ಕರ್ನಾಟದಲ್ಲಿ ಶಮನೂರು ಸಾಮ್ರಾಜ್ಯ: ಹೆಲಿಕಾಪ್ಟರ್, ಮಿನಿ ವಿಮಾನ ಒಡೆಯ
ಮದ್ಯ ಕರ್ನಾಟದಲ್ಲಿ ಶಮನೂರು ಸಾಮ್ರಾಜ್ಯ: ಹೆಲಿಕಾಪ್ಟರ್, ಮಿನಿ ವಿಮಾನ ಒಡೆಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ