Paytm Cashback On LPG Cylinder: 809 ರೂ. ಸಿಲಿಂಡರ್ 9 ರೂಪಾಯಿಗೆ ಬುಕ್ ಮಾಡಲು ಇನ್ನು ಆರೇ ದಿನ ಅವಕಾಶ

809 ರೂಪಾಯಿಯ ಗ್ಯಾಸ್​ ಸಿಲಿಂಡರ್​ ಅನ್ನು 9 ರೂಪಾಯಿಗೇ ಪಡೆಯುವುದಕ್ಕೆ ಇನ್ನು ಆರೇ ದಿನ, ಅಂದರೆ ಜೂನ್ 30, 2021ರ ತನಕ ಮಾತ್ರ ಅವಕಾಶ. ಯಾರಿಗೆ ಈ ಆಫರ್ ಮತ್ತು ಯಾವ ಸ್ವರೂಪದಲ್ಲಿ ಸಿಗುತ್ತದೆ ಎಂಬುದರ ವಿವರ ಇಲ್ಲಿದೆ.

Paytm Cashback On LPG Cylinder: 809 ರೂ. ಸಿಲಿಂಡರ್ 9 ರೂಪಾಯಿಗೆ ಬುಕ್ ಮಾಡಲು ಇನ್ನು ಆರೇ ದಿನ ಅವಕಾಶ
ಸಾಂದರ್ಭಿಕ ಚಿತ್ರ
TV9kannada Web Team

| Edited By: Srinivas Mata

Jun 24, 2021 | 4:02 PM

ಮನೆಗೆ ಬೇಕಾದ ಅಡುಗೆ ಅನಿಲ ಸಿಲಿಂಡರ್ 9 ರೂಪಾಯಿಗೆ ಬುಕ್ ಮಾಡಬಹುದಾ? ಖಂಡಿತಾ ಆ ಅವಕಾಶ ಇದೆ. 809 ರೂಪಾಯಿ ಬೆಲೆಯ ಸಿಲಿಂಡರ್ ಅನ್ನು ಕೇವಲ ಮತ್ತು ಕೇವಲ 9 ರೂಪಾಯಿಗೆ ಪಡೆಯಬಹುದು. ಇದೊಂದು ಆಫರ್ ಆಗಿದ್ದು, ಇದರ ಪ್ರಯೋಜನ ಪಡೆಯುವುದಕ್ಕೆ 6 ದಿನಗಳ ಕಾಲಾವಕಾಶ ಇದೆ. ಜೂನ್ 30, 2021ರವರೆಗೆ ಈ ಆಫರ್ ಇದೆ. ಪೇಟಿಎಂನಿಂದ ಈ ಆಫರ್​​ಗೆ “ಫಸ್ಟ್​ ಟೈಮ್” ಎಂದು ಹೆಸರು ನೀಡಲಾಗಿದೆ. ಅಂದ ಹಾಗೆ 9 ರೂಪಾಯಿಯಲ್ಲಿ ಗ್ಯಾಸ್ ಸಿಲಿಂಡರ್ ಬುಕ್ ಮಾಡುವುದು ಹೇಗೆ ಎಂಬುದನ್ನು ತಿಳಿದುಕೊಳ್ಳಿ. ಇದರ ಲಾಭವನ್ನು ಪಡೆಯುವುದಕ್ಕೆ ಕನಿಷ್ಠ ರೂಪಾಯಿ ಪಾವತಿ ಮಾಡಲೇಬೇಕು. ಅದಾದ ಮೇಲೆ ಒಂದು ಸ್ಕ್ರಾಚ್ ಕಾರ್ಡ್ ದೊರೆಯುತ್ತದೆ. ಆ ಸ್ಕ್ರಾಚ್ ಕಾರ್ಡ್​ನಲ್ಲಿ ಎಷ್ಟು ಮೊತ್ತ ಎಂಬುದನ್ನು ಬರೆಯಲಾಗಿರುತ್ತದೆ. ಅದರಲ್ಲಿ 10 ರೂಪಾಯಿಯಿಂದ 800 ರೂಪಾಯಿ ತನಕ ಎಷ್ಟಾದರೂ ಮೊತ್ತ ಇರುವ ಸಾಧ್ಯತೆ ಇರುತ್ತದೆ. ಈ ಕಾರ್ಡ್ ಅನ್ನು ಏಳು ದಿನದೊಳಗಾಗಿ ತೆರೆಯಬೇಕಾಗುತ್ತದೆ.

ಯಾರಿಗೆ ಸಿಗುತ್ತದೆ ಫಾಯಿದೆ? ಪೇಟಿಎಂನಿಂದ ಈ ಆಫರ್​ಗೆ ಫಸ್ಟ್​ ಟೈಮ್ ಎಂದು ಹೆಸರು ನೀಡಲಾಗಿದೆ. ಯಾರು ಪೇಟಿಎಂ ಮೂಲಕವಾಗಿ ಮೊದಲ ಬಾರಿಗೆ ಗ್ಯಾಸ್ ಸಿಲಿಂಡರ್ ಬುಕ್ ಮಾಡುತ್ತಿರುವವರಿಗೆ ಮಾತ್ರ ದೊರೆಯುತ್ತದೆ. ಈಗಾಗಲೇ ಪೇಟಿಎಂ ಬಳಕೆ ಮಾಡುತ್ತಿರುವವರಿಗೆ ಈ ಆಫರ್ ದೊರೆಯುವುದಿಲ್ಲ.

ಪೇಟಿಎಂ ಆಫರ್ ಪಡೆಯುವುದರ ಹಂತಹಂತವಾದ ವಿವರಣೆ: – ಮೊದಲಿಗೆ ಮೊಬೈಲ್​ಫೋನ್​ನಲ್ಲಿ ಪೇಟಿಎಂ ಆ್ಯಪ್​ ಡೌನ್​ಲೋಡ್ ಮಾಡಿಕೊಳ್ಳಬೇಕು. – ಆ ನಂತರ ತಮ್ಮ ಗ್ಯಾಸ್ ಏಜೆನ್ಸಿ ಮೂಲಕ ಸಿಲಿಂಡರ್ ಬುಕ್ಕಿಂಗ್ ಮಾಡಬೇಕು. – ಇದಕ್ಕಾಗಿ ಪೇಟಿಎಂ ಆ್ಯಪ್​ನಲ್ಲಿ Show Moreಗೆ ಹೋಗಿ ಕ್ಲಿಕ್ ಮಾಡಿ – ಈಗ ರೀಚಾರ್ಜ್ ಮತ್ತು ಪೇ ಬಿಲ್ಸ್ ಮೇಲೆ ಕ್ಲಿಕ್ ಮಾಡಿ. – ಆ ನಂತರ ಬುಕ್ ಎ ಸಿಲಿಂಡರ್ ಎಂಬುದು ಕಾಣಿಸುತ್ತದೆ. – ಅಲ್ಲಿಗೆ ತೆರಳಿ ಅನಿಲ ಒದಗಿಸುವವರನ್ನು ಆಯ್ಕೆ ಮಾಡಿಕೊಳ್ಳಬೇಕು. – ಬುಕ್ಕಿಂಗ್​ಗೆ ಮೊದಲು FIRSTLPG ಎಂಬ ಪ್ರೋಮೋ ಕೋಡ್ ಹಾಕಬೇಕು. -ಬುಕ್ಕಿಂಗ್​ನ 24 ಗಂಟೆಯೊಳಗೆ ಕ್ಯಾಶ್​ಬ್ಯಾಕ್​ ಸ್ಕ್ರಾಚ್ ಕಾರ್ಡ್​ ಸಿಗುತ್ತದೆ. -ಈ ಸ್ಕ್ರಾಚ್ ಕಾರ್ಡ್ ಅನ್ನು 7 ದಿನದೊಳಗೆ ಬಳಸಿಕೊಳ್ಳಬೇಕು.

ಪೇಟಿಎಂನಿಂದ ಇದೇ ಮೊದಲ ಬಾರಿಗೆ ಎಲ್​ಪಿಜಿ ಗ್ಯಾಸ್​ ಬುಕ್ಕಿಂಗ್​ ಮೇಲೆ ಇಂಥ ಆಫರ್ ನೀಡುತ್ತಿರುವುದಲ್ಲ. ಇದಕ್ಕೂ ಮುಂಚೆ 700 ರೂಪಾಯಿ ತನಕ ಹಾಗೂ 500 ರೂಪಾಯಿ ತನಕ ಕ್ಯಾಶ್​ಬ್ಯಾಕ್ ನೀಡಲಾಗಿತ್ತು. ಈ ಬಾರಿ 809 ರೂಪಾಯಿಯ ಸಿಲಿಂಡರ್ ಮೇಲೆ 800 ರೂಪಾಯಿ ತನಕ ಕ್ಯಾಶ್​ಬ್ಯಾಕ್ ಸಿಗುತ್ತದೆ.

ಇದನ್ನೂ ಓದಿ: Paytm IPO: ಭಾರತದ ಅತಿದೊಡ್ಡ ಐಪಿಒಗೆ ಪೇಟಿಎಂ ಸಿದ್ಧತೆ; 21 ಸಾವಿರ ಕೋಟಿ ರೂ.ಗೂ ಹೆಚ್ಚು ಸಂಗ್ರಹಕ್ಕೆ ಇಂದು ತೀರ್ಮಾನ

(Paytm cashback offer on gas cylinder booking. Up to Rs 800 cash back can get for Rs 809 gas cylinder. Here is an explainer)

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada