AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Oil Import: ಭಾರತದ ತೈಲ ಆಮದು ಪ್ರಮಾಣ ಜೂನ್​ನಲ್ಲಿ 9 ತಿಂಗಳ ಕನಿಷ್ಠ ಮಟ್ಟಕ್ಕೆ ಕುಸಿತ

ವಿಶ್ವದ ಮೂರನೇ ಅತಿ ದೊಡ್ಡ ತೈಲ ಆಮದುದಾರ ಹಾಗೂ ಬಳಕೆದಾರ ದೇಶ ಭಾರತ. ಜೂನ್ ತಿಂಗಳು ದಿನಕ್ಕೆ 39 ಲಕ್ಷ ಬ್ಯಾರೆಲ್ (ಬಿಪಿಡಿ) ಕಚ್ಚಾ ತೈಲವು ರವಾನೆ ಆಗಿದೆ. ಮೇ ತಿಂಗಳಿಗೆ ಹೋಲಿಸಿದರೆ ಶೇ 7ರಷ್ಟು ಕಡಿಮೆ ಆಗಿದ್ದರೆ, ಕಳೆದ ವರ್ಷದ ಜೂನ್​ಗೆ ಹೋಲಿಸಿದರೆ ಶೇ 22ರಷ್ಟು ಹೆಚ್ಚಾಗಿದೆ. ತೈಲ ಆಮದು ಪ್ರಮಾಣ ಜೂನ್ಲ್ಲಿ​ 9 ತಿಂಗಳ ಕನಿಷ್ಠ ಮಟ್ಟಕ್ಕೆ ಇಳಿದಿದೆ.

Oil Import: ಭಾರತದ ತೈಲ ಆಮದು ಪ್ರಮಾಣ ಜೂನ್​ನಲ್ಲಿ 9 ತಿಂಗಳ ಕನಿಷ್ಠ ಮಟ್ಟಕ್ಕೆ ಕುಸಿತ
ಕಚ್ಚಾ ತೈಲ (ಸಂಗ್ರಹ ಚಿತ್ರ)
TV9 Web
| Updated By: Srinivas Mata|

Updated on: Jul 16, 2021 | 6:36 PM

Share

ಭಾರತದ ತೈಲ ಆಮದು ಪ್ರಮಾಣವು ಜೂನ್​ ತಿಂಗಳಲ್ಲಿ 9 ತಿಂಗಳ ಕನಿಷ್ಠ ಮಟ್ಟಕ್ಕೆ ಇಳಿದಿದೆ. ಹೆಚ್ಚಿನ ಇಂಧನ ದಾಸ್ತಾನಿದ್ದು, ಕಡಿಮೆ ಬಳಕೆ ಆಗುತ್ತಿದ್ದುದರಿಂದ ರೀಫೈನರಿಗಳಿಂದ ಖರೀದಿ ಕಡಿಮೆ ಮಾಡಲಾಗಿತ್ತು. ಇನ್ನು ಕಳೆದ ಎರಡು ತಿಂಗಳು ಕೊರೊನಾ ವೈರಸ್​ ವ್ಯಾಪಕವಾಗಿದ್ದ ಕಾರಣಕ್ಕೆ ಲಾಕ್​ಡೌನ್ ವಿಸ್ತರಿಸಲಾಗಿತ್ತು. ವಿಶ್ವದ ಮೂರನೇ ಅತಿ ದೊಡ್ಡ ತೈಲ ಆಮದುದಾರ ಹಾಗೂ ಬಳಕೆದಾರ ದೇಶ ಭಾರತ. ಕಳೆದ ತಿಂಗಳು ದಿನಕ್ಕೆ 39 ಲಕ್ಷ ಬ್ಯಾರೆಲ್ (ಬಿಪಿಡಿ) ಕಚ್ಚಾ ತೈಲವು ರವಾನೆ ಆಗಿದೆ. ಮೇ ತಿಂಗಳಿಗೆ ಹೋಲಿಸಿದರೆ ಶೇ 7ರಷ್ಟು ಕಡಿಮೆ ಆಗಿದ್ದರೆ, ಕಳೆದ ವರ್ಷದ ಜೂನ್​ಗೆ ಹೋಲಿಸಿದರೆ ಶೇ 22ರಷ್ಟು ಹೆಚ್ಚಾಗಿದೆ. ಚೀನಾ ನಂತರ ಏಷ್ಯಾದಲ್ಲಿ ಎರಡನೇ ಅತಿಮುಖ್ಯ ಆಮದುದಾರ ದೇಶ ಭಾರತ. ಫೆಬ್ರವರಿ ಹಾಗೂ ಮಾರ್ಚ್​ನಲ್ಲಿ ಭಾರತದಲ್ಲಿ ಇಂಧನ ಬೇಡಿಕೆ ಹೆಚ್ಚಾಗಿತ್ತು. ದೇಶದ ರಿಫೈನರಿಗಳು ತೈಲ ಪ್ರೊಸೆಸಿಂಗ್ ಮತ್ತು ತೈಲ ಆಮದು ಹೆಚ್ಚಿಸಲಾಗಿತ್ತು, ಎಂದು ಹೆಸರು ಹೇಳಲು ಇಚ್ಛಿಸದ ಭಾರತೀಯ ರಿಫೈನಿಂಗ್ ಅಧಿಕಾರಿಗಳು ತಿಳಿಸಿದ್ದಾರೆ.

ನಮ್ಮ ಬಳಿ ರೀಫೈನ್ಡ್ ಇಂಧನ ದಾಸ್ತಾನು ಸಾಕಷ್ಟು ಪ್ರಮಾಣದಲ್ಲಿತ್ತು. ಕಚ್ಚಾ ತೈಲ ಆಮದು ಹೆಚ್ಚಿಸುವ ಸಾಧ್ಯತೆ ಬಹಳ ಕಡಿಮೆ ಇದೆ, ಎಂದು ಮೂಲಗಳು ತಿಳಿಸಿವೆ. ಲಾಭದ ಪ್ರಮಾಣ ಕಡಿಮೆ ಇರುವುದರಿಂದ ರಫ್ತು ಮಾರುಕಟ್ಟೆ ಆಕರ್ಷಕವಾಗಿಲ್ಲ ಎಂದು ಸೇರಿಸಲಾಗಿದೆ. ಭಾರತದ ಕಚ್ಚಾ ತೈಲದ ಆಮದು ಏಪ್ರಿಲ್​ನಿಂದ ಜೂನ್​ ಮಧ್ಯೆ ವರ್ಷದಿಂದ ವರ್ಷಕ್ಕೆ ಶೇ 11.7ರಷ್ಟು ಹೆಚ್ಚಳವಾಗಿ, 4.1 ಮಿಲಿಯನ್ ಬಿಪಿಡಿ ಮುಟ್ಟಿದೆ. ಕಳೆದ ವರ್ಷದ ಲಾಕ್​ಡೌನ್ ಬೀರಿದ್ದ ಪರಿಣಾಮವನ್ನು ಹೋಲಿಸಿದಲ್ಲಿ ಈ ಬಾರಿಯದು ಅಷ್ಟೇನೂ ಗಂಭೀರವಾಗಿರಲಿಲ್ಲ ಎಂಂದು ಮೂಲಗಳ ದತ್ತಾಂಶದಿಂದ ತಿಳಿದುಬಂದಿದೆ.

ಕಳೆದ ತಿಂಗಳು ಭಾರತಕ್ಕೆ ಅತಿ ದೊಡ್ಡ ಮಟ್ಟದಲ್ಲಿ ತೈಲ ಸರಬರಾಜು ಮಾಡಿರುವ ದೇಶ ಇರಾಕ್. ಆ ನಂತರದ ಸ್ಥಾನದಲ್ಲಿ ಸೌದಿ ಅರೇಬಿಯಾ ಇದೆ. ಇನ್ನು ಯುನೈಟೆಡ್ ಅರೇಬಿಯಾ ಎಮಿರೇಟ್ಸ್ ನಾಲ್ಕು ಸ್ಥಾನ ಮೇಲೇರಿ ಮೂರನೇ ಸ್ಥಾನದಲ್ಲಿದೆ. ಮೇ ತಿಂಗಳಲ್ಲಿ ಐದನೇ ಸ್ಥಾನದಲ್ಲಿ ಇದ್ದ ನೈಜೀರಿಯಾ ನಾಲ್ಕಕ್ಕೆ ತಲುಪಿಕೊಂಡಿದೆ. ಯುನೈಟೆಡ್ ಸ್ಟೇಟ್ಸ್ ಐದು ಮತ್ತು ಆರನೇ ಸ್ಥಾನದಲ್ಲಿ ಕೆನಡಾ ಇದೆ. ಮೇ ತಿಂಗಳಲ್ಲಿ ಶೇ 53ರಷ್ಟಿದ್ದ ಮಧ್ಯಪ್ರಾಚ್ಯದ ತೈಲ ಆಮದು ಪ್ರಮಾಣ ಜೂನ್​ನಲ್ಲಿ ಶೇ 59 ಅನ್ನು ತಲುಪಿದೆ ಎಂದು ದತ್ತಾಂಶಗಳಿಂದ ಗೊತ್ತಾಗಿದೆ.

ಇದನ್ನೂ ಓದಿ: ಇಂಧನ ಬೇಡಿಕೆಯಲ್ಲಿ ಗಣನೀಯ ಇಳಿಕೆ; 5 ತಿಂಗಳ ಕನಿಷ್ಠಮಟ್ಟಕ್ಕೆ ಪೆಟ್ರೋಲ್-ಡೀಸೆಲ್ ಬಳಕೆ

(India’s June oil import at 9 month low. Here is the details)

ಓವರ್ ಮಧ್ಯದಲ್ಲಿಯೇ ಅಫ್ರಿದಿ ಬೌಲಿಂಗ್ ನಿಲ್ಲಿಸಿದ ಅಂಪೈರ್
ಓವರ್ ಮಧ್ಯದಲ್ಲಿಯೇ ಅಫ್ರಿದಿ ಬೌಲಿಂಗ್ ನಿಲ್ಲಿಸಿದ ಅಂಪೈರ್
ವಿಮಾನ ನಿಲ್ದಾಣದಲ್ಲಿ ಮೋದಿಗೆ ಜೋರ್ಡಾನ್‌ ಪ್ರಧಾನಿಯಿಂದ ಆತ್ಮೀಯ ಸ್ವಾಗತ
ವಿಮಾನ ನಿಲ್ದಾಣದಲ್ಲಿ ಮೋದಿಗೆ ಜೋರ್ಡಾನ್‌ ಪ್ರಧಾನಿಯಿಂದ ಆತ್ಮೀಯ ಸ್ವಾಗತ
ಉದ್ಯೋಗಾಕಾಂಕ್ಷಿಗಳಿಗೆ ಗುಡ್​ನ್ಯೂಸ್​​​: ಪೊಲೀಸ್ ಇಲಾಖೆಯಿಂದ ತರಬೇತಿ
ಉದ್ಯೋಗಾಕಾಂಕ್ಷಿಗಳಿಗೆ ಗುಡ್​ನ್ಯೂಸ್​​​: ಪೊಲೀಸ್ ಇಲಾಖೆಯಿಂದ ತರಬೇತಿ
ಅಶ್ವಿನಿ ಗೌಡ, ಚೈತ್ರಾ ಕುಂದಾಪುರ ನಡುವೆ ಜಗಳ: ಗಿಲ್ಲಿ ರಿಯಾಕ್ಷನ್ ನೋಡಿ..
ಅಶ್ವಿನಿ ಗೌಡ, ಚೈತ್ರಾ ಕುಂದಾಪುರ ನಡುವೆ ಜಗಳ: ಗಿಲ್ಲಿ ರಿಯಾಕ್ಷನ್ ನೋಡಿ..
ಭಲೇ ಆನೆ: ಪೊಲೀಸರಂತೆ ವಾಹನ ತಪಾಸಣೆ ಮಾಡಿದ ಕಾಡಾನೆ, ವಿಡಿಯೋ ನೋಡಿ
ಭಲೇ ಆನೆ: ಪೊಲೀಸರಂತೆ ವಾಹನ ತಪಾಸಣೆ ಮಾಡಿದ ಕಾಡಾನೆ, ವಿಡಿಯೋ ನೋಡಿ
ತಲ್ವಾರ್ ಹಿಡಿದು ಡ್ಯಾನ್ಸ್ ಮಾಡಿ ಫೇಸ್​ಬುಕ್ ಪೋಸ್ಟ್: ಇಬ್ಬರ ಬಂಧನ
ತಲ್ವಾರ್ ಹಿಡಿದು ಡ್ಯಾನ್ಸ್ ಮಾಡಿ ಫೇಸ್​ಬುಕ್ ಪೋಸ್ಟ್: ಇಬ್ಬರ ಬಂಧನ
ಜಾಗದ ವಿಚಾರಕ್ಕೆ ಸಮುದಾಯಗಳ ನಡುವೆ ಗಲಾಟೆ: ಅಷ್ಟಕ್ಕೂ ಆಗಿದ್ದೇನು?
ಜಾಗದ ವಿಚಾರಕ್ಕೆ ಸಮುದಾಯಗಳ ನಡುವೆ ಗಲಾಟೆ: ಅಷ್ಟಕ್ಕೂ ಆಗಿದ್ದೇನು?
ರಾಹುಲ್ ಗಾಂಧಿಯ ದಿಮಾಗ್ ಚೋರಿಯಾಗಿದೆ ಎಂದ ಪ್ರಲ್ಹಾದ್ ಜೋಶಿ
ರಾಹುಲ್ ಗಾಂಧಿಯ ದಿಮಾಗ್ ಚೋರಿಯಾಗಿದೆ ಎಂದ ಪ್ರಲ್ಹಾದ್ ಜೋಶಿ
ಬಳ್ಳಾರಿ: ಹೊತ್ತಿ ಉರಿದ ಲಾರಿ, 40 ಯಮಹಾ ಬೈಕ್​ಗಳು ಭಸ್ಮ
ಬಳ್ಳಾರಿ: ಹೊತ್ತಿ ಉರಿದ ಲಾರಿ, 40 ಯಮಹಾ ಬೈಕ್​ಗಳು ಭಸ್ಮ
ಶಿವರಾಜಕುಮಾರ್ ಹಾಡಿಗೆ ಹೆಜ್ಜೆ ಹಾಕಿದ ಶಾಸಕ ಹೆಚ್.ಸಿ.ಬಾಲಕೃಷ್ಣ
ಶಿವರಾಜಕುಮಾರ್ ಹಾಡಿಗೆ ಹೆಜ್ಜೆ ಹಾಕಿದ ಶಾಸಕ ಹೆಚ್.ಸಿ.ಬಾಲಕೃಷ್ಣ