RRVL: ಜಸ್ಟ್ ಡಯಲ್ನಲ್ಲಿ ಶೇ 67ರಷ್ಟು ಷೇರು ಖರೀದಿಸಲಿದೆ ರಿಲಯನ್ಸ್ ರೀಟೇಲ್ ವೆಂಚರ್ಸ್
ರಿಲಯನ್ಸ್ ರೀಟೇಲ್ ವೆಂಚರ್ಸ್ ಲಿಮಿಟೆಡ್ನಿಂದ B2B ಸರ್ಚ್ ಎಂಜಿನ್ ಜಸ್ಟ್ ಡಯಲ್‌ನ ಪ್ರಮುಖ ಷೇರಿನ ಪಾಲಾದ ಶೇ 66.95ರಷ್ಟನ್ನು ಖರೀದಿ ಮಾಡಲಿದೆ.
ರಿಲಯನ್ಸ್ ಇಂಡಸ್ಟ್ರೀಸ್ನ ಅಂಗಸಂಸ್ಥೆಯಾದ ರಿಲಯನ್ಸ್ ರೀಟೇಲ್ ವೆಂಚರ್ಸ್ ಲಿಮಿಟೆಡ್ (Reliance Retail Ventures Limited)ನಿಂದ B2B ಸರ್ಚ್ ಎಂಜಿನ್ ಜಸ್ಟ್ ಡಯಲ್‌ನ ಪ್ರಮುಖ ಷೇರಿನ ಪಾಲಾದ ಶೇ 66.95ರಷ್ಟನ್ನು ಖರೀದಿ ಮಾಡಲಿದೆ. ಒಪ್ಪಂದದ ಪ್ರಕಾರ ಅಂತಿಮವಾಗಿದೆ. ಜಸ್ಟ್ ಡಯಲ್ ಸ್ಥಾಪಕ ವಿಎಸ್ಎಸ್ ಮಣಿ ಅವರು ಕಾರ್ಯನಿರ್ವಾಹಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಮುಂದುವರಿಯಲಿದ್ದಾರೆ. ಜಸ್ಟ್ ಡಯಲ್ನಲ್ಲಿ ಶೇ 40.95ರಷ್ಟು ಪಾಲನ್ನು ಆರ್‌ಆರ್‌ವಿಎಲ್ ಹೊಂದಿರಲಿದೆ ಎಂದು ಜುಲೈ 16ರಂದು ಅನುಷ್ಠಾನಕ್ಕೆ ತಂದ ನಿರ್ದಿಷ್ಟ ಒಪ್ಪಂದದಲ್ಲಿ ಇದೆ. ಇನ್ನು ಶೇ 26ರಷ್ಟರ ತನಕದ ಷೇರಿನ ಪಾಲನ್ನು ಓಪನ್ ಆಫರ್ ಮೂಲಕ ನಿಯಮಾವಳಿ ಅನುಸಾರದ ಮೂಲಕ ಖರೀದಿಸಲಾಗುವುದು ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಶೇ 40.95ರಷ್ಟು ಷೇರಿನ ಪಾಲನ್ನು ರಿಲಯನ್ಸ್ ರೀಟೇಲ್ ಖರೀದಿಸಿದ ಪೈಕಿ ಪ್ರಾತಿನಿಧ್ಯ ವಿತರಣೆ 2.12 ಕೋಟಿ ಈಕ್ವಿಟಿ ಷೇರು ಪಡೆದಿದೆ. ಪ್ರಾತಿನಿಧ್ಯ ಷೇರು ಬಂಡವಾಳ ಪ್ರತಿ ಷೇರಿಗೆ ರೂ. 1022.25ರಂತೆ ಶೇ 25.33ಕ್ಕೆ ಸಮನಾಗುತ್ತದೆ. ಆರ್‌ಆರ್‌ವಿಎಲ್ ಕಂಪೆನಿಯು ವಿಎಸ್ಎಸ್ ಮಣಿ ಅವರಿಂದ 1.31 ಕೋಟಿ ಈಕ್ವಿಟಿ ಷೇರು ಖರೀದಿಸಲಿದೆ. ಪ್ರಾತಿನಿಧ್ಯ ಷೇರು ಬಂಡವಾಳ ನಂತರ ಪ್ರತಿ ಷೇರಿಗೆ ರೂ. 1020ರಂತೆ ಶೇ 15.62ಕ್ಕೆ ಸಮವಾಗುತ್ತದೆ. “ಆರ್‌ಆರ್‌ವಿಎಲ್‌ನಿಂದ ಪೂರೈಕೆಯಾಗುವ ಬಂಡವಾಳವು ಜಸ್ಟ್ ಡಯಲ್‌ನ ಬೆಳವಣಿಗೆ ಮತ್ತು ವಿಸ್ತರಣೆಯನ್ನು ಸಮಗ್ರ ಸ್ಥಳೀಯ ಲಿಸ್ಟಿಂಗ್ ಮತ್ತು ವಾಣಿಜ್ಯ ವೇದಿಕೆಯಾಗಿ ಹೆಚ್ಚಿಸಲು ಸಹಾಯ ಮಾಡುತ್ತದೆ. ಜಸ್ಟ್ ಡಯಲ್ ತನ್ನ ವೇದಿಕೆಯಲ್ಲಿ ಆವಿಷ್ಕಾರವನ್ನು ವಿಸ್ತರಿಸುತ್ತದೆ ಮತ್ತು ಲಕ್ಷಾಂತರ ಉತ್ಪನ್ನಗಳು ಹಾಗೂ ಸೇವೆಗಳಿಗೆ ವಹಿವಾಟುಗಳನ್ನು ಹೆಚ್ಚಿಸುತ್ತದೆ,” ಎಂದು ಪತ್ರಿಕಾ ಪ್ರಕಟಣೆ ತಿಳಿಸಿದೆ.
ಈ ಹೂಡಿಕೆಗಳು ಅಂದಾಜು 30.4 ಮಿಲಿಯನ್ನಷ್ಟು ಲಿಸ್ಟಿಂಗ್ಸ್ ಜಸ್ಟ್ ಡಯಲ್‌ನ ಅಸ್ತಿತ್ವದಲ್ಲಿರುವ ಡೇಟಾಬೇಸ್ ಮತ್ತು ಸುಮಾರು 129.1 ಮಿಲಿಯನ್ ತ್ರೈಮಾಸಿಕ ವಿಶಿಷ್ಟ ಬಳಕೆದಾರರ (ಮಾರ್ಚ್ 31, 2021ರಂತೆ) ಅಸ್ತಿತ್ವದಲ್ಲಿರುವ ಗ್ರಾಹಕ ದಟ್ಟಣೆಯನ್ನು ನಿಯಂತ್ರಿಸುತ್ತದೆ. ಜಸ್ಟ್ ಡಯಲ್‌ನೊಂದಿಗಿನ ಒಪ್ಪಂದದ ಬಗ್ಗೆ ಆರ್‌ಆರ್‌ವಿಎಲ್ ನಿರ್ದೇಶಕಿ ಇಶಾ ಅಂಬಾನಿ ಮಾತನಾಡಿ, “ನಮ್ಮ ಲಕ್ಷಾಂತರ ಪಾಲುದಾರ ವ್ಯಾಪಾರಿಗಳು, ಕಿರು, ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ಡಿಜಿಟಲ್ ಪರಿಸರ ವ್ಯವಸ್ಥೆಯನ್ನು ಮತ್ತಷ್ಟು ಹೆಚ್ಚಿಸುವ ಮೂಲಕ ಹೊಸ ವಾಣಿಜ್ಯ ಉದ್ದೇಶಕ್ಕೆ ನಮ್ಮ ಬದ್ಧತೆಯನ್ನು ಒತ್ತಿಹೇಳುತ್ತದೆ,” ಎಂದು ಹೇಳಿದ್ದಾರೆ. 25 ವರ್ಷಗಳ ಹಿಂದೆ ಜಸ್ಟ್ ಡಯಲ್ ಪ್ರಾರಂಭಿಸಿದ್ದಾರೆ ಮಣಿ. ರಿಲಯನ್ಸ್ ರೀಟೇಲ್ ಜೊತೆಗಿನ ಸಹಭಾಗಿತ್ವವು ಕಂಪೆನಿಗೆ ತನ್ನ ದೃಷ್ಟಿಯನ್ನು ಇನ್ನಷ್ಟು ಸಾಕಾರಗೊಳಿಸಲು ಸಹಾಯ ಮಾಡುತ್ತದೆ ಎಂದಿದ್ದಾರೆ.
ಇದನ್ನೂ ಓದಿ: JioPhone Next: ಗೂಗಲ್ ಮತ್ತು ರಿಲಯನ್ಸ್ ಸಂಸ್ಥೆ ಅಭಿವೃದ್ಧಿಪಡಿಸಿರುವ ಈ ಹೊಸ ಸ್ಮಾರ್ಟ್ಫೋನ್ ಬಗ್ಗೆ ತಿಳಿದುಕೊಳ್ಳಿ
(Reliance Industries retail arm Reliance Retail Ventures Limited to acquire 67 percent of stake in Just Dial)