AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

JioPhone Next: ಗೂಗಲ್ ಮತ್ತು ರಿಲಯನ್ಸ್ ಸಂಸ್ಥೆ ಅಭಿವೃದ್ಧಿಪಡಿಸಿರುವ ಈ ಹೊಸ ಸ್ಮಾರ್ಟ್​ಫೋನ್ ಬಗ್ಗೆ ತಿಳಿದುಕೊಳ್ಳಿ

ಈ ಹೊಸ ಸ್ಮಾರ್ಟ್​ಫೋನ್ ರಿಲಯನ್ಸ್ ಜಿಯೋ ಹಾಗೂ ಗೂಗಲ್​ನ ಸಹಭಾಗಿತ್ವದಿಂದ ಮಾರುಕಟ್ಟೆಗೆ ಬರಲಿದೆ. ಈ ಬಗ್ಗೆ ಕಳೆದ ವರ್ಷವೇ ಮುಕೇಶ್ ಅಂಬಾನಿ ಮತ್ತು ಗೂಗಲ್ ಮುಖ್ಯಸ್ಥ ಸುಂದರ್ ಪಿಚೈ ಮಾಹಿತಿ ನೀಡಿದ್ದರು.

JioPhone Next: ಗೂಗಲ್ ಮತ್ತು ರಿಲಯನ್ಸ್ ಸಂಸ್ಥೆ ಅಭಿವೃದ್ಧಿಪಡಿಸಿರುವ ಈ ಹೊಸ ಸ್ಮಾರ್ಟ್​ಫೋನ್ ಬಗ್ಗೆ ತಿಳಿದುಕೊಳ್ಳಿ
ಸಾಂದರ್ಭಿಕ ಚಿತ್ರ
TV9 Web
| Edited By: |

Updated on: Jun 25, 2021 | 11:12 PM

Share

ದೆಹಲಿ: ರಿಲಯನ್ಸ್ ಜಿಯೋ ಗೂಗಲ್ ಜೊತೆಗೂಡಿ ಜಿಯೋಫೋನ್ ಒಂದನ್ನು ಮಾರುಕಟ್ಟೆಗೆ ತರಲು ಯೋಜನೆ ಹಾಕಿಕೊಂಡಿದೆ. 4ಜಿ ಸಾಮರ್ಥ್ಯದ ಆಡ್ರಾಂಯ್ಡ್ ಫೋನ್​ನ್ನು ಕೈಗೆಟುಕುವ ದರದಲ್ಲಿ ನೀಡಲು ಯೋಜಿಸಿಕೊಂಡಿದೆ. ಜಿಯೋಫೋನ್ ನೆಕ್ಸ್ಟ್ ಎಂಬ ಮಾದರಿಯ ಈ ಮೊಬೈಲ್ ಫೋನ್​ನ್ನು ರಿಲಯನ್ಸ್ ಇಂಡಸ್ಟ್ರೀಸ್​ನ 44ನೇ ವಾರ್ಷಿಕ ಜನರಲ್ ಮೀಟಿಂಗ್​ನಲ್ಲಿ ಗುರುವಾರ ಮುಕೇಶ್ ಅಂಬಾನಿ ಘೋಷಿಸಿದ್ದಾರೆ.

ಈ ಹೊಸ ಸ್ಮಾರ್ಟ್​ಫೋನ್ ರಿಲಯನ್ಸ್ ಜಿಯೋ ಹಾಗೂ ಗೂಗಲ್​ನ ಸಹಭಾಗಿತ್ವದಿಂದ ಮಾರುಕಟ್ಟೆಗೆ ಬರಲಿದೆ. ಈ ಬಗ್ಗೆ ಕಳೆದ ವರ್ಷವೇ ಮುಕೇಶ್ ಅಂಬಾನಿ ಮತ್ತು ಗೂಗಲ್ ಮುಖ್ಯಸ್ಥ ಸುಂದರ್ ಪಿಚೈ ಮಾಹಿತಿ ನೀಡಿದ್ದರು.

ಈ ಸ್ಮಾರ್ಟ್​ಫೋನ್ ಹೇಗೆ ಪಡೆಯಬಹುದು? ಬೆಲೆ ಎಷ್ಟು? ಸಾಮಾನ್ಯವಾಗಿ ಜನರಲ್ಲಿ ಇರಬಹುದಾದ ಮುಖ್ಯ ಪ್ರಶ್ನೆಗಳಿವು. ಈ ಫೋನ್ ಎಲ್ಲಿ ಸಿಗುತ್ತದೆ ಮತ್ತು ನಾವು ಹೇಗೆ ಪಡೆದುಕೊಳ್ಳಬಹುದು ಎಂಬುದು. ಜಿಯೋಫೋನ್ ನೆಕ್ಸ್ಟ್ ಇದರ ಮೊತ್ತ ಭಾರತದಲ್ಲಿ ಎಷ್ಟು ಎಂದು ಇನ್ನೂ ಮಾಹಿತಿ ಲಭ್ಯವಾಗಿಲ್ಲ. ಕೈಗೆಟಕುವ ದರದಲ್ಲೇ ಫೋನ್ ಇರಲಿದೆ ಎಂದು ಹೇಳಲಾಗುತ್ತಿದೆ. ಹಾಗೂ ಸಪ್ಟೆಂಬರ್ 10ರಿಂದ ಮಾರುಕಟ್ಟೆಯಲ್ಲಿ ಕೊಂಡುಕೊಳ್ಳಲು ಲಭ್ಯವಿರುತ್ತದೆ ಎಂದೂ ತಿಳಿಸಲಾಗಿದೆ.

ರಿಲಯನ್ಸ್ ಜಿಯೋಫೋನ್ ನೆಕ್ಸ್ಟ್ ಆಂಡ್ರಾಯ್ಡ್​ನ ಲೈಟ್ ವರ್ಷನ್​ನೊಂದಿಗೆ ಬರಲಿದೆ. ಗೂಗಲ್ ಹಾಗೂ not KaiOS ನೊಂದಿಗೆ ಸಿಗಲಿದೆ. ಈ ಫೋನ್​ಗಾಗಿ ನಮ್ಮ ತಂಡ ವಿಶೇಷ ಆಂಡ್ರಾಯ್ಡ್ ವರ್ಷನ್ ಒಂದನ್ನು ಸಿದ್ದಪಡಿಸಿದೆ ಎಂದು ಗೂಗಲ್ ಹಾಗೂ ಆಲ್ಫಾಬೆಟ್ ಸಿಇಒ ಸುಂದರ್ ಪಿಚೈ ಹೇಳಿದ್ದಾರೆ. ಇದು ರಿಲಯನ್ಸ್ ಜಿಯೋನ ಮೊದಲ ಆಂಡ್ರಾಯ್ಡ್ ಫೋನ್ ಆಗಿರಲಿದೆ. ಹಳೆಯ ಜಿಯೋ ಫೋನ್​ಗಳು KaiOS ಮಾದರಿಯವು ಆಗಿದ್ದವು.

ಹಾರ್ಡ್​ವೇರ್ ಸೌಲಭ್ಯಗಳು ಏನೇನು? ಜಿಯೋಫೋನ್ ನೆಕ್ಸ್ಟ್ ಎಂಬುದು ಬೇಸಿಕ್ ಹಾರ್ಡ್​ವೇರ್ ಸೌಕರ್ಯಗಳೊಂದಿಗೆ ಲಭ್ಯವಾಗಲಿದೆ. ಹಾಗೂ ಈಗಿನ ಆಧುನಿಕ ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಮ್​ನೊಂದಿಗೆ ಸಪೋರ್ಟ್ ಆಗುವುದು ಅನುಮಾನವಾಗಿದೆ. ಗೂಗಲ್ ಪ್ರತ್ಯೇಕ ಆಂಡ್ರಾಯ್ಡ್ ವರ್ಷನ್ ಮಾಡಿದ್ದು, ಸೀಮಿತ ಹಾರ್ಡ್​ವೇರ್ ಸೌಕರ್ಯಗಳಿಗೆ ಅನುಗುಣವಾಗಿ ತಯಾರಿಸಲಾಗಿದೆ.

ಜಿಯೋಫೋನ್ ನೆಕ್ಸ್ಟ್ ಟಚ್ ಸ್ಕ್ರೀನ್ ಡಿಸ್​ಪ್ಲೇ ಸೌಲಭ್ಯದೊಂದಿಗೆ ಬರಲಿದೆ. 5 ಇಂಚುಗಳ ಡಿಸ್​​ಪ್ಲೇ ಇರಲಿದ್ದು, ಆಂಡ್ರಾಯ್ಡ್ ಸ್ಮಾರ್ಟ್​ಫೋನ್​ಗಳ ಸಾಮಾನ್ಯ ಡಿಸೈನ್ ಇರಲಿದೆ. ಬಹುಶಃ ಫೋನ್​ನಲ್ಲಿ ಒಂದು ಹಿಂಬದಿ ಕ್ಯಾಮರಾ ಇರಲಿದೆ. ಎಲ್​ಇಡಿ ಫ್ಲಾಶ್ ಲೈಟ್​ನೊಂದಿಗೆ ಒಂದು ರೇರ್ ಕ್ಯಾಮರಾ ಇರಲಿದೆ. ಜೊತೆಗೆ, ಒಂದು ಸೆಲ್ಫೀ ಕ್ಯಾಮರಾ ಕೂಡ ಇರಲಿದೆ. ಉಳಿದಂತೆ, ವೈಫೈ, ಬ್ಲೂಟೂಥ್​ನಂತ ವ್ಯವಸ್ಥೆ ಇರಲಿದೆ.

ಗೂಗಲ್, ಜಿಯೋ ಸೇವೆಗಳು ಇಷ್ಟೇ ಅಲ್ಲದೆ, ಜಿಯೋಫೋನ್ ನೆಕ್ಸ್ಟ್​ಗೆ ಹೊಸ ಆಂಡ್ರಾಯ್ಡ್ ರಿಲೀಸ್​ಗಳನ್ನು, ಸುರಕ್ಷತಾ ಮಾಹಿತಿಗಳನ್ನು ನೀಡುವುದಾಗಿ ಗೂಗಲ್ ಭರವಸೆ ನೀಡಿದೆ. ಗೂಗಲ್ ಪ್ಲೇ ಸ್ಟೋರ್ ಮತ್ತು ಗೂಗಲ್ ಪ್ಲೇ ಪ್ರೊಟೆಕ್ಟ್ ಆಪ್ ಫೋನ್​ನಲ್ಲಿ ಮೊದಲೇ ಡೌನ್​ಲೋಡ್ ಆಗಿರಲಿದೆ.

ಅಪ್ಲಿಕೇಷನ್ ಕಾರ್ಯನಿರ್ವಹಿಸಲು ಬಳಕೆದಾರರು, ಗೂಗಲ್ ಅಸಿಸ್ಟಂಟ್​ನ್ನು ಬಳಸಬಹುದಾಗಿದೆ. ಜಿಯೋ ಆಪ್​ ಕೂಡ ಬಳಸಬಹುದಾಗಿದ್ದು ಹವಾಮಾನ ವರದಿ, ಕ್ರಿಕೆಟ್ ಸ್ಕೋರ್ ಇತ್ಯಾದಿ ಮಾಹಿತಿ ಪಡೆಯಬಹುದಾಗಿದೆ. ಗೂಗಲ್ ಅಸಿಸ್ಟಂಟ್ ಬಳಸಿಕೊಂಡು ಜಿಯೋಸಾವ್ನ್​ನಲ್ಲಿ ಹಾಡು ಕೇಳಬಹುದು. ಮೈ ಜಿಯೋ ಮೂಲಕ ಮೊಬೈಲ್ ಬ್ಯಾಲೆನ್ಸ್ ಮಾಹಿತಿ ಪಡೆಯಬಹುದಾಗಿದೆ.

ಇದನ್ನೂ ಓದಿ: Pay Your Contact: ಕೊಟಕ್ ಮಹೀಂದ್ರಾ ಬ್ಯಾಂಕ್ ಗ್ರಾಹಕರು ಮೊಬೈಲ್​ ನಂಬರ್ ಮೂಲಕವೇ ಹಣ ಪಾವತಿಸಬಹುದು

JioPhone Next: ಗೂಗಲ್- ಜಿಯೋ ಸ್ಮಾರ್ಟ್​ಫೋನ್ ಸೆಪ್ಟೆಂಬರ್​ನಲ್ಲಿ ಬಿಡುಗಡೆ ಘೋಷಿಸಿದ ಮುಕೇಶ್ ಅಂಬಾನಿ

ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಸ್ಮಶಾನ, ಕೆರೆ ಜಮೀನು ಕೃಷ್ಣಭೈರೇಗೌಡರ ಪಿತ್ರಾರ್ಜಿತ ಆಸ್ತಿಯಾ?
ಸ್ಮಶಾನ, ಕೆರೆ ಜಮೀನು ಕೃಷ್ಣಭೈರೇಗೌಡರ ಪಿತ್ರಾರ್ಜಿತ ಆಸ್ತಿಯಾ?
ಶಕ್ತಿ ಯೋಜನೆಗೆ 4 ಸಾವಿರ ಕೋಟಿ ಬಾಕಿ ಒಪ್ಪಿಕೊಂಡ ಸಾರಿಗೆ ಸಚಿವ
ಶಕ್ತಿ ಯೋಜನೆಗೆ 4 ಸಾವಿರ ಕೋಟಿ ಬಾಕಿ ಒಪ್ಪಿಕೊಂಡ ಸಾರಿಗೆ ಸಚಿವ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಆ ಪತ್ರವೇ ಸಾಕ್ಷಿ! ರಾಜಣ್ಣ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಆ ಪತ್ರವೇ ಸಾಕ್ಷಿ! ರಾಜಣ್ಣ