ಇಂಧನ ಬೇಡಿಕೆಯಲ್ಲಿ ಗಣನೀಯ ಇಳಿಕೆ; 5 ತಿಂಗಳ ಕನಿಷ್ಠಮಟ್ಟಕ್ಕೆ ಪೆಟ್ರೋಲ್-ಡೀಸೆಲ್ ಬಳಕೆ

ಒಂದೆಡೆ ಇಂಧನ ಮಾರಾಟ ದರ ಸರಾಗವಾಗಿ ಏರಿಕೆಯಾಗುತ್ತಿದೆ. ಕೊರೊನಾ, ಲಾಕ್​ಡೌನ್​ನಿಂದ ಆರ್ಥಿಕವಾಗಿ ಜರ್ಜರಿತನಾಗಿದ್ದ ಗ್ರಾಹಕ ಬೇರೆ ದಾರಿ ಕಾಣದಾಗಿದೆ ಎಂದು ಕೊನೆಗೆ ಇಂಧನ ಬಳಕೆಗೆ ಕಡಿವಾಣ ಹಾಕಿದ್ದಾನೆ.

ಇಂಧನ ಬೇಡಿಕೆಯಲ್ಲಿ ಗಣನೀಯ ಇಳಿಕೆ; 5 ತಿಂಗಳ ಕನಿಷ್ಠಮಟ್ಟಕ್ಕೆ ಪೆಟ್ರೋಲ್-ಡೀಸೆಲ್ ಬಳಕೆ
ಸಾಂದರ್ಭಿಕ ಚಿತ್ರ
TV9kannada Web Team

| Edited By: ganapathi bhat

Apr 06, 2022 | 7:06 PM

ಭಾರತದಲ್ಲಿ ಒಂದೆಡೆ ಪೆಟ್ರೋಲ್ ದರ ಏರಿಕೆ ಆಗುತ್ತಿದ್ದರೆ ಮತ್ತೊಂದೆಡೆ ಇಂಧನ ಬಳಕೆಯ ಪ್ರಮಾಣ ಗಣನೀಯವಾಗಿ ಇಳಿಕೆಯಾಗುತ್ತಿದೆ. ಜನವರಿ ನಂತರ ಫೆಬ್ರವರಿಯಲ್ಲಿ ಇಂಧನ ಬಳಸುವ ಪ್ರಮಾಣದಲ್ಲಿ ಮತ್ತೆ ಇಳಿಕೆ ಕಂಡುಬಂದಿದೆ. ಇದು ಕಳೆದ ವರ್ಷದ ಸಪ್ಟೆಂಬರ್ ನಂತರ ದಾಖಲಾದ ಅತಿ ಕಡಿಮೆ ಇಂಧನ ಬಳಕೆಯಾಗಿದೆ. ಒಂದೆಡೆ ಇಂಧನ ಮಾರಾಟ ದರ ಸರಾಗವಾಗಿ ಏರಿಕೆಯಾಗುತ್ತಿದೆ. ಕೊರೊನಾ, ಲಾಕ್​ಡೌನ್​ನಿಂದ ಆರ್ಥಿಕವಾಗಿ ಜರ್ಜರಿತನಾಗಿದ್ದ ಗ್ರಾಹಕ ಬೇರೆ ದಾರಿ ಕಾಣದಾಗಿದೆ ಎಂದು ಕೊನೆಗೆ ಇಂಧನ ಬಳಕೆಗೆ ಕಡಿವಾಣ ಹಾಕಿದ್ದಾನೆ. ವಿಶ್ವದ ಮೂರನೇ ಅತಿ ದೊಡ್ಡ ತೈಲ ಆಮದು ಮತ್ತು ಬಳಕೆ ಮಾಡುವ ದೇಶವಾದ ಭಾರತದಲ್ಲೇ ಈ ಸ್ಥಿತಿ ಉಂಟಾಗಿದೆ.

ಪೆಟ್ರೋಲಿಯಂ ಪ್ಲಾನಿಂಗ್ ಮತ್ತು ಅನಾಲಿಸಿಸ್ ಸೆಲ್ (PPAC) ಅಂಕಿ ಅಂಶಗಳು ತಿಳಿಸುವಂತೆ, ಕಳೆದ ವರ್ಷ ಫೆಬ್ರುವರಿಯಲ್ಲಿ ಬಳಕೆಯಾಗಿದ್ದ ಇಂಧನ ಪ್ರಮಾಣಕ್ಕೆ ಹೋಲಿಸಿದರೆ ಈ ವರ್ಷದ ಫೆಬ್ರುವರಿಯಲ್ಲಿ ಬಳಕೆಯಾಗಿರುವ ಇಂಧನ ಪ್ರಮಾಣ ಶೇ 4.9ರಷ್ಟು ಕಡಿಮೆಯಾಗಿದೆ. ಮಾಸಿಕ ಸರಾಸರಿಯಲ್ಲಿ ಲೆಕ್ಕ ಹಾಕಿದರೆ ಬೇಡಿಕೆ ಪ್ರಮಾಣ ಶೇ 4.6ರಷ್ಟು ಕಡಿಮೆಯಾಗಿರುವ ಸಂಗತಿ ತಿಳಿದುಬರುತ್ತದೆ.

ಇಂಧನ ದರದಲ್ಲಿ ಇಳಿಕೆಯಾಗಬೇಕು ಅಥವಾ ಕೊರೊನಾ ಪ್ರಕರಣಗಳ ಸಂಖ್ಯೆ ಕಡಿಮೆ ಆಗಬೇಕು. ಆಗ ಮಾತ್ರ ಇಂಧನ ದರದಲ್ಲಿ ನಿಜವಾದ ಇಳಿಕೆ ಕಾಣಲು ಸಾಧ್ಯ ಎಂದು ರಿಫಿನಿಟಿವ್ ತಜ್ಞ ಇಶಾನ್ ಉಲ್ ಹಕ್ ತಿಳಿಸಿದ್ದಾರೆ. ಜನವರಿಯಲ್ಲಿ ಮೊದಲ ಬಾರಿಗೆ ಇಂಧನ ಬಳಕೆಯ ಪ್ರಮಾಣ ಕಡಿಮೆ ಆಗಲು ತೊಡಗಿತು. ಪೆಟ್ರೋಲ್ ಮತ್ತು ಡೀಸೆಲ್ ದರ ದಾಖಲೆಯ ಮಟ್ಟದಲ್ಲಿ ಏರಿಕೆ ಆಗಿರುವಾಗ ಬಳಸುವವರು ಜಾಗೃತರಾದರು. ಅದರಿಂದಾಗಿ ಐದು ತಿಂಗಳಲ್ಲೇ ಇಂಧನ ಬಳಕೆ ಕಡಿಮೆ ಆಗಿದೆ.

ಕೊರೊನಾ ವೈರಾಣು ಮತ್ತು ಲಾಕ್​ಡೌನ್ ಪರಿಣಾಮವನ್ನು ಕಡಿಮೆ ಮಾಡಲು ಏನೆಲ್ಲಾ ಮಾಡಬಹುದೋ ಅದೆಲ್ಲವನ್ನೂ ಭಾರತ ಮಾಡುತ್ತಿದೆ. ಆದರೂ ಭಾರತಕ್ಕೆ ಒಪೆಕ್ ರಾಷ್ಟ್ರಗಳಿಂದ (OPEC) ಸಹಕಾರ ಬೇಕು ಎಂದು ಇಶಾನ್ ಉಲ್ ಹಕ್ ಹೇಳಿದ್ದಾರೆ.

ಆರ್ಥಿಕ ಚೇತರಿಕೆ ವಿಚಾರದಲ್ಲಿ ಡೀಸೆಲ್ ಬಳಕೆ ಪ್ರಮಾಣ ಒಂದು ಮುಖ್ಯ ಮಾಪಕವಾಗಿದೆ. ಇಂಧನ ಮಾರಾಟದಲ್ಲಿ ಡೀಸೆಲ್ ಪಾಲು ಶೇ 40ರಷ್ಟು ಇದೆ. ಕಳೆದ ತಿಂಗಳಿಗೆ ಹೋಲಿಸಿದರೆ ಈ ಪ್ರಮಾಣ ಶೇ 3.8ರಷ್ಟು ಕಡಿಮೆಯಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಶೇ 8.5ರಷ್ಟು ಕಡಿಮೆ ಆಗಿದೆ. ನೈಸರ್ಗಿಕ ಅನಿಲ ಮತ್ತು ಪೆಟ್ರೋಲ್ ಮಾರಾಟವು ಫೆಬ್ರವರಿಯಲ್ಲಿ ಶೇ 6.5ರಷ್ಟು ಕಡಿಮೆಯಾಗಿದೆ. ಕಳೆದ ವರ್ಷದ ಪ್ರಮಾಣಕ್ಕೆ ಹೋಲಿಸಿದರೆ ಶೇ 3ರಷ್ಟು ಇಳಿಕೆ ಕಂಡಿದೆ.

ಇದನ್ನೂ ಓದಿ: ಬೆಂಗಳೂರು: ಪೆಟ್ರೋಲ್ ಕಳ್ಳರ ಕೈಚಳಕ ಸಿಸಿಟಿವಿಯಲ್ಲಿ ಸೆರೆ

ಇದನ್ನೂ ಓದಿ: ಒಡಿಶಾ ರೈತ ತಯಾರಿಸಿದ ವಿಶೇಷ ವಾಹನ; ಪೆಟ್ರೋಲ್​-ಡೀಸೆಲ್​ ಬೇಡ್ವೇ ಬೇಡ, ಒಮ್ಮೆ ಬ್ಯಾಟರಿ ಚಾರ್ಜ್ ಮಾಡಿದರೆ 300 ಕಿಮೀ ದೂರ ಓಡಿಸಬಹುದು !

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada