ಆರೋಗ್ಯವನ್ನು ಕಾಪಾಡಿಕೊಳ್ಳಲು ಸತತ ಪ್ರಯತ್ನ ಮಾಡುವಿರಿ
ಶಾಲಿವಾಹನ ಶಕವರ್ಷ 1948ರ ಉತ್ತರಾಯಣ, ವಸಂತ ಋತುವಿನ ವೈಶಾಖ ಮಾಸ ಶುಕ್ಲ ಪಕ್ಷದ ದ್ವಿತೀಯಾ ತಿಥಿ, ಮಂಗಳವಾರ ಪರರಿಂದ ಪ್ರಚೋದನೆ, ಮೃಷ್ಟಾನ್ನ ಭೋಜನ, ಉನ್ನತ ಸ್ಥಾನಕ್ಕೆ ಸ್ಪರ್ಧೆ ಇವೆಲ್ಲ ಈ ದಿನದ ವಿಶೇಷ. ಈ ದಿನದ ಭವಿಷ್ಯ. ಇಂದಿನ ದಿನ ಭವಿಷ್ಯದಲ್ಲಿ ಯಾವ ರಾಶಿಗೆ ಯಾವ ಫಲ ಎನ್ನುವುದನ್ನು ತಿಳಿದುಕೊಳ್ಳಿ.

ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ಉತ್ತರಾಯಣ, ಋತು : ವಸಂತ, ಸೌರ ಮಾಸ : ಮೇಷ ಮಾಸ, ಮಹಾನಕ್ಷತ್ರ : ಭರಣೀ, ಮಾಸ : ವೈಶಾಖ, ಪಕ್ಷ : ಶುಕ್ಲ, ವಾರ : ಮಂಗಳ, ತಿಥಿ : ದ್ವಿತೀಯಾ ನಿತ್ಯನಕ್ಷತ್ರ : ಕೃತ್ತಿಕಾ, ಯೋಗ : ಸೌಭ ಅಗ್ಯ ಕರಣ : ಬವ, ಸೂರ್ಯೋದಯ – 06 – 12 am, ಸೂರ್ಯಾಸ್ತ – 06 – 47 pm, ಇಂದಿನ ಶುಭಾಶುಭಕಾಲ : ರಾಹು ಕಾಲ 15:39 – 17:13, ಯಮಘಂಡ ಕಾಲ 09:21 – 10:56, ಗುಳಿಕ ಕಾಲ 12:30 – 14:05
ತುಲಾ ರಾಶಿ: ಆಸ್ತಿಯ ವಿಭಾಗವಾಗುವಾಗ ಯಾವುದೇ ಮನಸ್ತಾಪ ಬರದಂತೆ ಜಾಗಾರೂಕರೆ ಬೇಕು. ನಿಮ್ಮ ಒಳ್ಳೆಯತನಕ್ಕೆ ಯಾವ ಫಲವಿಲ್ಲ ಎಂಬ ಬೇಸರವಿರಲಿದೆ. ಎಲ್ಲ ನಿರ್ಥಕ ಎನ್ನುವ ಭಾವನೆಯು ನಿಮ್ಮಲ್ಲಿ ಬರಬಹುದು. ಯಾವ ಸಸಿಯೂ ನೆಟ್ಟ ಮರುಕ್ಷಣವೇ ಫಲವನ್ನು ಕೊಡುವುದಿಲ್ಲ ಎಂಬ ವಿಚಾರವು ನಿಮ್ಮೊಳಗೆ ಸರಿಯಾಗಿ ಬೇರೂರಿರಲಿ. ನಮ್ಮ ಪೂರ್ಣವಾಗಿ ನಂಬಲಾರಿರಿ. ನಿಮಗೆ ಬೇಡ ಎನಿಸಿದ ವಿಚಾರವೇ ಮತ್ತೆ ಮತ್ತೆ ಕೇಳಿ ಬಂದು ಮಾನಸಿಕ ಹಿಂಸೆಯಾದೀತು. ಆಲಸ್ಯದಿಂದ ನಿಮ್ಮ ಕಾರ್ಯಗಳು ನಿಧಾನವಾಗಲಿದೆ. ವ್ಯಾಪರಸ್ಥರಿಗೆ ತಕ್ಕಮಟ್ಟಿನ ಲಾಭವು ಸಿಗಲಿದೆ. ಇಂದು ನಿಮ್ಮ ಭವಿಷ್ಯದ ಗುರಿಯನ್ನು ನಿರ್ಧಾರ ಮಾಡಿಕೊಳ್ಳುವುದು ಉತ್ತಮ. ನಿಮ್ಮ ಪ್ರಶಂಸೆಗೂ ಒಂದು ಬೆಲೆ ಇಂದು ಸಿಗುವುದು. ಆಧ್ಯಾತ್ಮಿಕ ಚಿಂತನೆಯನ್ನು ಹೆಚ್ಚು ಮಾಡುವಿರಿ. ನಿಮ್ಮ ತುಮುಲವನ್ನು ಅರಿತುಕೊಳ್ಳಲಾರರು. ಹತ್ತಿರದ ಬಂಧುಗಳ ಒಡನಾಟವು ಹೆಚ್ಚಿರಲಿದೆ.
ವೃಶ್ಚಿಕ ರಾಶಿ: ವಾಕ್ಸಮರದಿಂದ ನೆಮ್ಮದಿ ಹಾಳು. ಇಂದು ನಿಮ್ಮ ಉತ್ತಮ ನಡತೆಗೆ ಪ್ರಶಂಸೆ ಸಿಗಲಿದೆ. ಕೃಷಿ ಚಟುವಟಿಕೆಯಲ್ಲಿ ಆಸಕ್ತಿಯನ್ನು ತೋರಿಸುವಿರಿ. ವಾಹನಕ್ಕೋಸ್ಕರ ಸಾಲ ಮಾಡುವ ಸ್ಥಿತಿಯು ಬರಬಹುದು. ಮನಸ್ಸಿನ ಸ್ಥಿರತೆಯಲ್ಲಿ ಅಭಾವವಿದ್ದು ನಿಮ್ಮ ಗುರಿಯೂ ಬದಲಾಗುವುದು. ಪ್ರೇಮವು ಕೊನೆಗೂ ಅಂದುಕೊಂಡಂತೆ ಆಗಲಿದೆ. ನಕಾರಾತ್ಮ ಯೋಚನೆಗಳು ನಿಮ್ಮ ಮನಸ್ಸಿನಲ್ಲಿ ಸುಳಿಯಬಹುದು. ಸರ್ಕಾರಿ ಕೆಲಸಕ್ಕೆ ಅರ್ಜಿ ಹಾಕಿದ್ದರೆ ಸಂತೋಷಕರವಾದ ಸುದ್ದಿಯೊಂದು ನಿಮ್ಮ ಪಾಲಿಗಿರುತ್ತದೆ. ನಿರುತ್ಸಾಹಿಗಳಾಗಿ ಕುಳಿತುಕೊಳ್ಳದೇ ಏನನ್ನಾದರೂ ಸಾಧಿಸಬೇಕು ಎಂಬ ಮನಸ್ಸು ನಿಮಗೆ ಬರುತ್ತದೆ. ಒತ್ತಡದಿಂದ ಯಾವುದನ್ನೂ ಮಾಡಲು ಹೋಗಬೇಡಿ. ಕಳೆದುಹೋದುದನ್ನು ಹುಡುಕಿ ಪ್ರಯೋಜನ ಇಲ್ಲ. ಕುಟುಂಬದ ಜೊತೆ ನಿಕಟ ಸಂಬಂಧವನ್ನು ಇಟ್ಟುಕೊಳ್ಳುವ ಮನಸ್ಸಾಗುವುದು. ಕಾರ್ಯಗಳಿಂದ ಹೆಚ್ಚಿನ ಯಶಸ್ಸನ್ನು ಪಡೆಯುವ ಸಾಧ್ಯತೆಯಿದೆ. ಉದ್ಯಮದಲ್ಲಿ ಜನರ ವಿಶ್ವಾಸವನ್ನು ಗಳಿಸುವುದು ಮುಖ್ಯವಾಗಿರುವುದು. ಪ್ರವಾಸ ಹೋಗುವ ಮನಸ್ಸಾದೀತು. ಅಧಿಕಾರಿಗಳು ನಿಮ್ಮ ಉದ್ಯಮವನ್ನು ಪರಿಶೀಲಿಸಬಹುದು.
ಧನು ರಾಶಿ: ಆರೋಗ್ಯವನ್ನು ಕಾಪಾಡಿಕೊಳ್ಳಲು ಸತತ ಪ್ರಯತ್ನ ಮಾಡುವಿರಿ. ಇಂದು ನೀವು ನೋಡಲು ಸಾಮಾನ್ಯರಂತೆ ಕಂಡರೂ ನಿಮ್ಮ ಪ್ರಭಾವವು ಅಧಿಕವಾಗಿರುತ್ತದೆ. ಸಾಮಾಜಿಕವಾಗಿ ನಿಮ್ಮನ್ನು ಗುರುತಿಸಿ ಸಮ್ಮಾನಿಸಬಹುದು. ಕಲಾವಿದರಾಗುವ ಆಸೆ ಪೂರ್ಣವಾಗುವುದು. ದಾಂಪತ್ಯದಲ್ಲಿ ಸಾಮರಸ್ಯದ ಕೊರತೆ ಬಗೆ ಹರಿಯಬಹುದು. ಕುಟುಂಬದ ನೆಮ್ಮದಿಯು ನಿಮ್ಮ ಮಾತಿನಿಂದ ವಿಚಲಿತವಾಗುವುದು. ಕೇಳಿದ್ದಕ್ಕಿಂತ ಹೆಚ್ಚಿನ ಹಣ ಸಿಗುವ ಸಾಧ್ಯತೆ ಇದೆ. ಆಕಸ್ಮಿಕ ಧನಲಾಭವು ನಿಮ್ಮ ಬದುಕನ್ನು ಖುಷಿಯಾಗಿ ಇಡಲಿದೆ. ಮತ್ತೊಬ್ಬರಿಗೆ ಸಹಾಯ ಮಾಡುವ ಅವಕಾಶ ಬಂದಾಗ ಅದನ್ನು ಅಲ್ಲಗಳೆಯಬೇಡಿ. ಉದ್ಯೋಗದ ಸ್ಥಳ ನಿಮಗೆ ಅನೇಕ ಅನುಕೂಲಗಳನ್ನು ಮಾಡಬಹುದು. ವಿದ್ಯಾಭ್ಯಾಸಕ್ಕೆ ಅತಿಯಾದ ಹಣಕಾಸಿನ ಖರ್ಚು ಬರಲಿದ್ದು, ನಿಮಗೆ ಕಷ್ಟವಾಗುವುದು. ಅಸೂಯೆಯಿಂದಾಗಿ ನಿಮ್ಮ ವ್ಯಕ್ತಿತ್ವವನ್ನು ಹಾಳು ಮಾಡಿಕೊಳ್ಳುವ ಸಾಧ್ಯತೆ ಇದೆ. ಆಕಸ್ಮಿಕವಾಗಿ ಧನಲಾಭವು ನಿಮಗೆ ಆಶ್ಚರ್ಯವನ್ನು ಉಂಟುಮಾಡಬಹುದು.
ಮಕರ ರಾಶಿ: ಇಂದು ನಿಮ್ಮ ಮೌನವೂ ಅನರ್ಥಕ್ಕೆ ಕಾರಣವಾಗಬಹುದು. ನಿಮ್ಮ ಕಾರ್ಯದ ದಕ್ಷತೆಯನ್ನು ಗಮನಿಸಿ, ಉನ್ನತ ಸ್ಥಾನವು ಸುಗುವುದು. ಕೆಲವರಿಗೆ ವೃತ್ತಿಯನ್ನು ಬದಲಿಸಬೇಕಾಗಿ ಬರಬಹುದು. ಮನೆಯಲ್ಲಿ ಸುಂದರ ವಾತಾವರಣವಿರುತ್ತದೆ. ಸಂಗಾತಿಯಿಂದ ದೂರ ಉಳಿಯಬೇಕಾದ ಸ್ಥಿತಿ ಬರಬಹುದು. ಸ್ಥಾನವನ್ನು ಪಡೆಯಲು ಹಣವನ್ನು ಖರ್ಚುಮಾಡುವಿರಿ. ಮಾತಿನಿಂದ ಯಾರನ್ನೂ ಟೀಕಿಸಲು ಹೋಗಬೇಡಿ. ನಿಮ್ಮನ್ನು ಟೀಕಿಸಲು ಜನರು ಕಾದುಕುಳಿತಿರುತ್ತಾರೆ. ಎಷ್ಟೋ ವಿಷಯಗಳು ಅರ್ಥವಾಗದೇ ಮುಗಿದುಹೋಗಿದೆ ಎಂದು ಅನ್ನಿಸುತ್ತಿರುತ್ತದೆ. ಇಂದು ನಿಮಗೆ ರಾಜಕೀಯ ವ್ಯಕ್ತಿಗಳ ಭೇಟಿಯಾಗುವುದು. ಮಾರುಕಟ್ಟೆಗೆ ಸಂಬಂಧಿತ ಕಾರ್ಯಗಳನ್ನು ಮಾಡಲು ಸರಿಯಾದ ಸಮಯ. ಹೊಸಬರನ್ನು ಸಾಮಾಜಿಕ ತಾಣದಲ್ಲಿ ಪರಿಚಯ ಮಾಡಿಕೊಳ್ಳುವಿರಿ. ತಂದೆಯ ಮಾತನ್ನು ಉಳಿಸಿಕೊಳ್ಳಲು ನಿಮ್ಮ ಶ್ರಮವು ಬಳಕೆಯಾಗುವುದು.
ಕುಂಭ ರಾಶಿ: ಆರ್ಥಿಕ ವ್ಯವಹಾರದಲ್ಲಿ ಋಜುತ್ವ ಬಹಳ ಮುಖ್ಯ. ಇಂದು ನಿಮ್ಮ ಸಂಬಂಧದ ಮೌಲ್ಯವು ತಿಳಿಯುವುದು. ಮನೆಯವರ ಚಿಂತೆಯು ನಿಮ್ಮನ್ನು ಬಹಳ ಕಾಡಬಹುದು. ಸಹೋದರರ ಜೊತೆ ಕಲಹವು ಏರ್ಪಟ್ಟು ಕೆಲವು ಕಾಲ ಮೌನವಹಿಸುವಿರಿ. ಇಂದು ನೀವು ಒಗ್ಗಟ್ಟಿನಿಂದ ಕಾರ್ಯವನ್ನು ಸಾಧಿಸುವಿರಿ. ಕೃಷಿಯ ಜೀವನ ನಿಮಗೆ ಬಹಳ ಸುಖವನ್ನು ನೀಡುತ್ತದೆ ಎಂದನ್ನಿಸುತ್ತಿರುತ್ತದೆ. ಧಾರ್ಮಿಕ ಕಾರ್ಯದಲ್ಲಿ ಆಸಕ್ತಿಯು ಹೆಚ್ಚಾಗಲಿದೆ. ನೀವು ಇಂದು ಜನರೊಡನೆ ಬೆರೆಯಲು ಬಿಡುವಿನ ವೇಳೆಯನ್ನು ಹೊಂದಿದ್ದೀರಿ. ಏನಾದರೂ ಅವಘಡಗಳು ಸಂಭವಿಸಬಹುದು. ವೈವಾಹಿಕ ಸಂಬಂಧಗಳಲ್ಲಿ ಸಾಮರಸ್ಯ ಇರಲಿದೆ. ಮನೋಭಿಲಾಷೆಯ ಪೂರೈಕೆಯಿಂದ ಸಂತೃಪ್ತಿ ಇರುವುದು. ಮಕ್ಕಳ ವಿದ್ಯಾಭ್ಯಾಸದ ಚಿಂತೆಯು ದೂರಾಗುವುದು. ಉತ್ತಮ ಸ್ಥಳವು ಸಿಕ್ಕಿದ್ದು ನಿಮಗೆ ಖುಷಿಯೂ ಆಗುವುದು. ಅಪರಿಚಿತರ ಜೊತೆ ಜಗಳವಾಡಿ ಸಮಯವನ್ನು ವ್ಯರ್ಥ ಮಾಡುವಿರಿ. ಪ್ರೀತಿಗೆ ಯೋಗ್ಯರನ್ನು ಹುಡುಕುವಿರಿ. ವಿದ್ಯಾಭ್ಯಾಸದ ಪ್ರಗತಿಯಿಂದ ಮನೆಯಲ್ಲಿ ಖುಷಿ ಇರಲಿದೆ.
ಮೀನ ರಾಶಿ: ಸ್ತ್ರೀಯರಿಗೆ ಮಾನಸಿಕ ಕ್ಷೇಶದಿಂದ ದಿನದ ಕಾರ್ಯಗಳು ಅಸ್ತವ್ಯಸ್ತ. ನೀವು ಭೂಮಿಯ ವ್ಯವಹಾರವನ್ನು ಮಾಡಿದರೆ ಲಾಭವನ್ನು ಇಟ್ಟಕೊಳ್ಳಬೇಡಿ. ನೀವು ಪ್ರಯತ್ನಿಸಿದ ಕಾರ್ಯಗಳು ಫಲವನ್ನು ಕೊಡಲಿವೆ. ವಾಹನವನ್ನು ಓಡಿಸುವ ಎಚ್ಚರಿಕೆಯಿಂದ ಇರಿ. ದೂರದ ಊರಿಗೆ ಅನಿವಾರ್ಯವಾಗಿ ಹೋಗಿ ಆರೋಗ್ಯವನ್ನು ಕೆಡಿಸಿಕೊಳ್ಳುವಿರಿ. ಕಳ್ಳತನದ ಅಪವಾದಿಂದ ವಾಗ್ವಾದ. ಯಾರದೋ ಸಿಟ್ಟನ್ನು ಯಾರ ಮೇಲೋ ತೀರಿಸಿಕೊಳ್ಳುವ ನಿಮ್ಮ ಸ್ವಭಾವವು ಒಳ್ಳೆಯದಲ್ಲ. ತಿದ್ದಿಕೊಳ್ಳಲು ಪ್ರಯತ್ನಿಸಿ. ನಿಮ್ಮ ಕರ್ತವ್ಯಗಳನ್ನು ಮಾಡಲು ಹಿಂದೇಟು ಹಾಕದಿರಿ. ಸಂತಸದ ಪ್ರಯಾಣ ತೃಪ್ತಿಕರವಾಗಿರುತ್ತದೆ. ನಿಮ್ಮ ಮದುವೆ ಈ ದಿನ ಒಂದು ತಿರುವನ್ನು ತೆಗೆದುಕೊಳ್ಳುತ್ತದೆ. ದಾಂಪತ್ಯದಲ್ಲಿ ನೆಮ್ಮದಿ ಇಲ್ಲದೇ ಪರಸ್ಪರ ಕಲಹವಾಗಬಹುದು. ನಿಮ್ಮ ಗುರಿಯ ಬಗ್ಗೆ ವಿಶ್ವಾಸವು ನಿಮಗಿರಲಿ. ನಿಮ್ಮಿಂದ ಸಹಾಯ ಪಡೆಯಲು ನಿಮ್ಮನ್ನು ಹೊಗಳುವರು. ಮನೆಯ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಜೀವನ ಸಂಗಾತಿಯು ಸಂಪೂರ್ಣ ಬೆಂಬಲವನ್ನು ನೀಡುತ್ತಾನೆ.




