AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೀದರ್-ಶ್ರೀರಂಗಪಟ್ಟಣ ಹೆದ್ದಾರಿಯಲ್ಲಿ ಭೀಕರ ಅಪಘಾತ: ಲಾರಿ ಡಿಕ್ಕಿಯಾಗಿ ಕಾರಿನಲ್ಲಿದ್ದ ನಾಲ್ವರು ಸಾವು

ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಹಿಂಡಸಕಟ್ಟೆ ಗ್ರಾಮದ ಬಳಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ನಾಲ್ವರು ಯುವಕರು ದುರ್ಮರಣಕ್ಕೀಡಾಗಿದ್ದಾರೆ. ಬೀದರ್-ಶ್ರೀರಂಗಪಟ್ಟಣ ರಾಜ್ಯ ಹೆದ್ದಾರಿಯಲ್ಲಿ ಕಾರು ಮತ್ತು ಲಾರಿ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಈ ದುರಂತ ಸಂಭವಿಸಿದೆ. ಹಿರಿಯೂರು ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಬೀದರ್-ಶ್ರೀರಂಗಪಟ್ಟಣ ಹೆದ್ದಾರಿಯಲ್ಲಿ ಭೀಕರ ಅಪಘಾತ: ಲಾರಿ ಡಿಕ್ಕಿಯಾಗಿ ಕಾರಿನಲ್ಲಿದ್ದ ನಾಲ್ವರು ಸಾವು
ಭೀಕರ ಅಪಘಾತ
ಬಸವರಾಜ ಮುದನೂರ್, ಚಿತ್ರದುರ್ಗ
| Edited By: |

Updated on:Jan 10, 2026 | 11:08 PM

Share

ಚಿತ್ರದುರ್ಗ, ಜನವರಿ 10: ಬೀದರ್-ಶ್ರೀರಂಗಪಟ್ಟಣ ರಾಜ್ಯ ಹೆದ್ದಾರಿಯಲ್ಲಿ ಭೀಕರ ಅಪಘಾತವೊಂದು (Accident) ಸಂಭವಿಸಿದ್ದು, ಲಾರಿ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ನಾಲ್ವರು ಸಾವನ್ನಪ್ಪಿರುವಂತಹ (death) ಘಟನೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಹಿಂಡಸಕಟ್ಟೆ ಗ್ರಾಮದಲ್ಲಿ ನಡೆದಿದೆ. ವಿಶ್ವನಾಥ್(22), ನಂಜುಂಡಿ(23), ರಾಹುಲ್(23) ಮತ್ತು ಯಶ್ವಂತ್(22) ಮೃತರು. ಮೃತರು ಹಿರಿಯೂರು ತಾಲೂಕಿನ ನಂಜಯ್ಯನಕೊಟ್ಟಿಗೆ ಗ್ರಾಮದವರು. ಹಿರಿಯೂರು ಗ್ರಾಮಾಂತರ ಠಾಣೆ ಸಿಪಿಐ ಆನಂದ್​ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

ದೇವಸ್ಥಾನಕ್ಕೆ ಹೋಗಿ ಬರುತ್ತಿದ್ದ ವಾಹನ ಪಲ್ಟಿ: 12 ಜನರ ಪೈಕಿ ಏಳು ಜನರಿಗೆ ಗಾಯ

ಚಾಲಕನ ನಿಯಂತ್ರಣ ತಪ್ಪಿ ಗೂಡ್ಸ್ ವಾಹನ ಪಲ್ಟಿ ಹೊಡೆದಿದ್ದು, ಹನ್ನೆರಡು ಜನರ ಪೈಕಿ 7 ಜನರಿಗೆ ಗಾಯಗಳಾಗಿರುವಂತಹ ಘಟನೆ  ಬೆಳಗಾವಿ ತಾಲೂಕಿನ ಹಲಗಾ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ. ಸವದತ್ತಿ ಯಲ್ಲಮ್ಮ ದೇಗುಲದಿಂದ ಬೆಳಗಾವಿ ಕಡೆ ಬರುತ್ತಿದ್ದಾಗ ಅಪಘಾತ ಸಂಭವಿಸಿದೆ.

ಇದನ್ನೂ ಓದಿ: ತುಮಕೂರು: ಭೀಕರ ಅಪಘಾತ, ಶಬರಿಮಲೆಗೆ ಹೋಗಿ ಬರುತ್ತಿದ್ದ ಯಲಬುರ್ಗಾ ಮೂಲದ ನಾಲ್ವರು ಸ್ಥಳದಲ್ಲೇ ಸಾವು

ಸದ್ಯ ಗಾಯಾಳುಗಳನ್ನು ಬೆಳಗಾವಿಯ ಬಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಹಿರೇಬಾಗೇವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಗುಂಡಿಗೆ ಬಿದ್ದ ಕಾರು: ವ್ಯಕ್ತಿ ಸಾವು, ನಾಲ್ವರಿಗೆ ಗಂಭೀರ ಗಾಯ

ಚಾಲಕನ ನಿಯಂತ್ರಣ ತಪ್ಪಿ ಹೊಂಡಾ ಸಿಟಿ ಕಾರು ಗುಂಡಿಗೆ ಬಿದ್ದ ಪರಿಣಾಮ ಕಾರಿನಲ್ಲಿದ್ದ ಓರ್ವ ವ್ಯಕ್ತಿ ಸಾವನ್ನಪ್ಪಿದ್ದು, ನಾಲ್ವರಿಗೆ ಗಂಭೀರ ಗಾಯಗಳಾಗಿರುವ ಘಟನೆ ಕೋಲಾರದಲ್ಲಿ ನಡೆದಿದೆ. ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕು ಕಪ್ಪಲ್ಲಿ ಗ್ರಾಮದ ಬಳಿ ಘಟನೆ ನಡೆದಿದ್ದು, ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿಯ ಕುಶಾಲ್ (25) ಮೃತ ಯುವಕ.

ಓರ್ವ ಯುವತಿ ಸೇರಿ ನಾಲ್ವರಿಗೆ ಗಂಭೀರ ಗಾಯಗಳಾಗಿದ್ದು, ಗಾಯಾಳುಗಳು ಕೋಲಾರದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗಿದೆ. ಇನ್ನು ಚಿಂತಾಮಣಿಯಿಂದ ಲಕ್ಷ್ಮೀಪುರ ಕ್ರಾಸ್ ಬಳಿ ರೆಸ್ಟೋರೆಂಟ್‌ಗೆ ತೆರಳಿ ಬಳಿಕ ವಾಪಸ್​ ಆಗುವ ವೇಳೆ ಘಟನೆ ನಡೆದಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 10:58 pm, Sat, 10 January 26

Follow Us
ಮುಂಬೈ ವಿಮಾನ ನಿಲ್ದಾಣದೊಳಗೆ ಭಾರಿ ಬೆಂಕಿ ಅವಘಡ
ಮುಂಬೈ ವಿಮಾನ ನಿಲ್ದಾಣದೊಳಗೆ ಭಾರಿ ಬೆಂಕಿ ಅವಘಡ
600ಕ್ಕೆ 597 ಅಂಕ ಗಳಿಸಿದ ವಿದ್ಯಾರ್ಥಿನಿಯರು: ಪೋಷಕರ ಭಾವುಕ ಮಾತು
600ಕ್ಕೆ 597 ಅಂಕ ಗಳಿಸಿದ ವಿದ್ಯಾರ್ಥಿನಿಯರು: ಪೋಷಕರ ಭಾವುಕ ಮಾತು
ಎಲ್​ಪಿಜಿ ಕೊರತೆ: ಆಟೋ ಚಾಲಕರಿಗೆ ದಿನಸಿ ಕಿಟ್ ನೀಡಿದ ನಟ ವಿನೋದ್ ರಾಜ್
ಎಲ್​ಪಿಜಿ ಕೊರತೆ: ಆಟೋ ಚಾಲಕರಿಗೆ ದಿನಸಿ ಕಿಟ್ ನೀಡಿದ ನಟ ವಿನೋದ್ ರಾಜ್
ಧಾರ್ಮಿಕ ಆಚರಣೆಗಾಗಿ ನರ್ಮದಾ ನದಿಗೆ 11 ಸಾವಿರ ಲೀಟರ್ ಹಾಲು ಸುರಿದ ಭಕ್ತರು!
ಧಾರ್ಮಿಕ ಆಚರಣೆಗಾಗಿ ನರ್ಮದಾ ನದಿಗೆ 11 ಸಾವಿರ ಲೀಟರ್ ಹಾಲು ಸುರಿದ ಭಕ್ತರು!
ಬೆಂಗಳೂರು ಓಟ: 10 ಕಿಮೀ ರಸ್ತೆ ದುರಸ್ತಿಗೆ ತೇಜಸ್ವಿ ಸೂರ್ಯ ಆಗ್ರಹ
ಬೆಂಗಳೂರು ಓಟ: 10 ಕಿಮೀ ರಸ್ತೆ ದುರಸ್ತಿಗೆ ತೇಜಸ್ವಿ ಸೂರ್ಯ ಆಗ್ರಹ
ಟಿವಿಕೆಗೆ ಕಾಂಗ್ರೆಸ್ ಬೆಂಬಲ ನೀಡಿಲ್ಲ; ವಿಜಯ್ ಹೇಳಿಕೆಗೆ ಡಿಕೆಶಿ ತಿರುಗೇಟು
ಟಿವಿಕೆಗೆ ಕಾಂಗ್ರೆಸ್ ಬೆಂಬಲ ನೀಡಿಲ್ಲ; ವಿಜಯ್ ಹೇಳಿಕೆಗೆ ಡಿಕೆಶಿ ತಿರುಗೇಟು
ಪಿಯುಸಿ ಫಲಿತಾಂಶ 2026: ಸಚಿವ ಮಧುಬಂಗಾರಪ್ಪ ಸುದ್ದಿಗೋಷ್ಠಿ ನೇರಪ್ರಸಾರ
ಪಿಯುಸಿ ಫಲಿತಾಂಶ 2026: ಸಚಿವ ಮಧುಬಂಗಾರಪ್ಪ ಸುದ್ದಿಗೋಷ್ಠಿ ನೇರಪ್ರಸಾರ
ಯಾರು‌ ಮತದಾನ ಮಾಡಿಲ್ಲ ಹೋಗಿ ಓಟ್ ಮಾಡಿ: ಮಸೀದಿಯಿಂದ ಸಂದೇಶ
ಯಾರು‌ ಮತದಾನ ಮಾಡಿಲ್ಲ ಹೋಗಿ ಓಟ್ ಮಾಡಿ: ಮಸೀದಿಯಿಂದ ಸಂದೇಶ
ರಸ್ತೆಯಲ್ಲಿ ಹೊಡೆದಾಕ್ತಾರೆ: ರೌಡಿಶೀಟರ್​ನಲ್ಲಿರೋ ಅಪ್ಪ ಮಗನಿಗೆ ತರಾಟೆ
ರಸ್ತೆಯಲ್ಲಿ ಹೊಡೆದಾಕ್ತಾರೆ: ರೌಡಿಶೀಟರ್​ನಲ್ಲಿರೋ ಅಪ್ಪ ಮಗನಿಗೆ ತರಾಟೆ
ದ್ವಿತೀಯ ಪಿಯು ರಿಸಲ್ಟ್: ಕಾಮರ್ಸ್​​ನಲ್ಲಿ ಮಂಗಳೂರಿನ ದಿಶಾ ಟಾಪರ್​​
ದ್ವಿತೀಯ ಪಿಯು ರಿಸಲ್ಟ್: ಕಾಮರ್ಸ್​​ನಲ್ಲಿ ಮಂಗಳೂರಿನ ದಿಶಾ ಟಾಪರ್​​