ನಿಮ್ಮ ಒಳ್ಳೆಯತನ ನಿಮಗೆ ವರವಾಗಿ ಇರಲಿದೆ
ಶಾಲಿವಾಹನ ಶಕವರ್ಷ 1948ರ ಉತ್ತರಾಯಣ, ವಸಂತ ಋತುವಿನ ವೈಶಾಖ ಮಾಸ ಶುಕ್ಲ ಪಕ್ಷದ ದ್ವಿತೀಯಾ ತಿಥಿ, ಮಂಗಳವಾರ ಪರರಿಂದ ಪ್ರಚೋದನೆ, ಮೃಷ್ಟಾನ್ನ ಭೋಜನ, ಉನ್ನತ ಸ್ಥಾನಕ್ಕೆ ಸ್ಪರ್ಧೆ ಇವೆಲ್ಲ ಈ ದಿನದ ವಿಶೇಷ. ಈ ದಿನದ ಭವಿಷ್ಯ. ಇಂದಿನ ದಿನ ಭವಿಷ್ಯದಲ್ಲಿ ಯಾವ ರಾಶಿಗೆ ಯಾವ ಫಲ ಎನ್ನುವುದನ್ನು ತಿಳಿದುಕೊಳ್ಳಿ.

ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ಉತ್ತರಾಯಣ, ಋತು : ವಸಂತ, ಸೌರ ಮಾಸ : ಮೇಷ ಮಾಸ, ಮಹಾನಕ್ಷತ್ರ : ಭರಣೀ, ಮಾಸ : ವೈಶಾಖ, ಪಕ್ಷ : ಶುಕ್ಲ, ವಾರ : ಮಂಗಳ, ತಿಥಿ : ದ್ವಿತೀಯಾ ನಿತ್ಯನಕ್ಷತ್ರ : ಕೃತ್ತಿಕಾ, ಯೋಗ : ಸೌಭ ಅಗ್ಯ ಕರಣ : ಬವ, ಸೂರ್ಯೋದಯ – 06 – 12 am, ಸೂರ್ಯಾಸ್ತ – 06 – 47 pm, ಇಂದಿನ ಶುಭಾಶುಭಕಾಲ : ರಾಹು ಕಾಲ 15:39 – 17:13, ಯಮಘಂಡ ಕಾಲ 09:21 – 10:56, ಗುಳಿಕ ಕಾಲ 12:30 – 14:05
ಮೇಷ ರಾಶಿ: ಹೃದಯ ಭಾಗದಲ್ಲಿ ನೋವು ಕಾಣಿಸಬಹುದು. ಇಂದು ಶ್ರಮಪಟ್ಟು ಮಾಡಿದ ಕೆಲಸವು ಕೊನೆಯ ಕ್ಷಣದಲ್ಲಿ ಹಾಳಾಗಿ, ಬೇಸರವುಂಟಾಗಬಹುದು. ಕರ್ತವ್ಯಗಳನ್ನು ನಿಷ್ಠೆಯಿಂದ ಮಾಡಿ. ಹಿರಿಯರ ದಿನವನ್ನು ಶ್ರದ್ಧೆಯಿಂದ ಮಾಡಿ. ಕುಟುಂಬಕ್ಕೆ ಇದರಿಂದ ಅನೇಕ ಲಾಭಗಳು ನಿಮಗಾಗಲಿವೆ. ಇನ್ನೊಬ್ಬರಿಂದ ಪಡೆದ ಪ್ರಚೋದನೆಯ ಶಕ್ತಿ ಕೆಲ ಕಾಲ ಮಾತ್ರ ಉಳಿಯುವುದು. ಅತಿಯಾದ ಮನೆಯ ಕೆಲಸದಿಂದ ಆಯಾಸವಾಗಬಹುದು. ಅನಿರೀಕ್ಷಿತ ವಾರ್ತೆಯನ್ನು ನೀವು ನಂಬಲಾರಿರಿ. ಬಂಧುಗಳ ಬಗ್ಗೆ ಸಮಾಧಾನವಿರದು. ಕಾರ್ಯಗಳಿಗೆ ಅಪರಿಚಿತರೂ ಸಹಾಯ ಮಾಡಲಿದ್ದಾರೆ. ಕೃತಜ್ಞತೆಯನ್ನು ಅರ್ಪಿಸಲು ಮರೆಯಬೇಡಿ. ನಿಮ್ಮ ಒಳ್ಳೆತನ ನಿಮಗೆ ವರವಾಗಿಯೇ ಇರಲಿದೆ. ದುಡುಕಿದ ಕಾರ್ಯದಿಂದ ಪಶ್ಚಾತ್ತಾಪವಾಗುವುದು. ಬೇಡವೆಂದು ಬಿಟ್ಟ ಕಾರ್ಯಗಳಿಂದಲೇ ಪ್ರಯೋಜನವಾದೀತು. ವಿದ್ಯಾರ್ಥಿಗಳಲ್ಲಿ ಉತ್ಸಾಹಿಗಳು ಎದ್ದು ಕಾಣಲಿವೆ. ಕೃಷಿಯ ಕುರಿತು ಕುತೂಹಲ ಹಾಗೂ ಆಸೆಯು ಬರಬಹುದು.
ವೃಷಭ ರಾಶಿ: ನಿಮಗೆ ಯೋಗ್ಯವಾದ ಸ್ಥಾನ ಕೊಟ್ಟರೆ ಮಾತ್ರ ಜವಾಬ್ದಾರಿಯನ್ನು ನಿರ್ವಹಿಸುವಿರಿ. ಹಣವು ಯಾವುದೋ ಒಂದು ರೀತಿಯಲ್ಲಿ ಖರ್ಚಾಗುವ ಸಾಧ್ಯತೆ ಇದ್ದು, ಅದನ್ನು ನಿಭಾಯಿಸಿ. ಶತ್ರುಗಳು ನಿಮ್ಮ ಪತನವನ್ನು ನಿರೀಕ್ಷಿಸುತ್ತಿರುತ್ತಾರೆ. ಹೊಸ ಉದ್ಯೋಗ ಸಿಗುವುದೋ ಇಲ್ಲವೋ ಎಂಬ ಅನುಮಾನ ಕಾಡುವುದು. ಜಾಗರೂಕರಾಗಿ ಹೆಜ್ಜೆಯನ್ನು ಹಾಕಿ. ಉದ್ಯೋಗದಲ್ಲಿ ನಿಮ್ಮ ಸ್ಥಾನಕ್ಕೆ ಬರಲು ಯಾರಾದರೂ ಕಾಯುತ್ತಿರಬಹುದು. ಹಿತಶತ್ರುಗಳ ಕಿರುಕುಳವನ್ನು ನೀವು ಸಹಿಸಲಾರಿರಿ. ಮೃಷ್ಟಾನ್ನ ಭೋಜನಕ್ಕೆ ಓಡಾಟ ಮಾಡುವಿರಿ. ಮನೆಯ ವಾತಾವರಣವು ಸಂತೋಷವನ್ನು ಕೊಟ್ಟೀತು. ಯಾರ ಸಹಕಾರವನ್ನೂ ಪಡೆಯದೇ ನಿಮ್ಮ ಕಾರ್ಯಗಳನ್ನು ಮಾಡಿಕೊಳ್ಳುವಿರಿ. ಹಿರಿಯರ ಭೇಟಿಯಿಂದ ಜೀವನಕ್ಕೆ ಹಲವು ಪ್ರಯೋಜನಗಳು ಆಗಲಿವೆ. ಇಷ್ಟವಾಗದವರ ಜೊತೆ ವೃಥಾ ಕಾಲಹರಣ ಮಾಡುವುದು ಬೇಡ. ಸ್ಥಾನಮಾನವನ್ನು ಪಡೆಯಲು ಏನಾದರೂ ಮಾಡುವಿರಿ. ಹಣಕಾಸಿನ ತೊಂದರೆಯನ್ನು ಸರಿ ಮಾಡಿಕೊಳ್ಳುವ ಮಾರ್ಗದ ಅನ್ವೇಷಣೆ ಮಾಡುವಿರಿ. ನೀರಿನ ಭೀತಿಯು ಇರಲಿದೆ.
ಮಿಥುನ ರಾಶಿ: ಪ್ರಯಾಣದಲ್ಲಿ ಪರಿಚಿತರ ಭೇಟಿ. ನಾಲ್ಕು ಜನರನ್ನು ಕೇಳಿಯಾದರೂ ತೊಂದರೆಯಿಲ್ಲ, ನೀವಿಡುವ ಹೆಜ್ಜೆಗಳು ಸರಿಯಾಗಿರಿಲಿ. ಉನ್ನತ ಚಿಂತನೆಗಳು ನಿಮ್ಮನ್ನು ಎತ್ತರಕ್ಕೆ ಒಯ್ಯುವುದು. ಎಲ್ಲರ ಜೊತೆಗೆ ಸ್ನೇಹದಿಂದ ಮಾತನಾಡುವಿರಿ. ಆಪ್ತಬಂಧುಗಳ ಅಗಲಿಕೆಯಿಂದ ನೋವಾಗಬಹುದು. ಸರಕಿನ ಉದ್ಯಮದಿಂದ ಆತಂಕ. ಸಣ್ಣ ಕಲಾವಿದರಿಗೆ ಪ್ರೋತ್ಸಾಹವು ಸಿಗಲಿದೆ. ಮಕ್ಕಳನ್ನು ವಿದ್ಯಾಭ್ಯಾಸಕ್ಕಾಗಿ ಮನೆಯಿಂದ ದೂರ ಕಳಿಸುವಿರಿ. ಒತ್ತಡದಿಂದ ನೀವು ಉದ್ವೇಗಕ್ಕೆ ಒಳಗಾಗಬಹುದು. ಯಾರ ಜೊತೆಗೂ ನಿಮ್ಮ ವರ್ತನೆಯು ಸಹಜತವಾಗಿ ಇರದು. ಯಂತ್ರಗಳ ಕೆಲಸವು ನಿಮಗೆ ಸಾಕೆನಿಸಬಹುದು. ಆಸ್ತಿಯ ವಿಚಾರದಲ್ಲಿ ಆಕಸ್ಮಿಕ ತಿರುವು ಬರಬಹುದು. ಇಷ್ಟವಿಲ್ಲದಿದ್ದರೂ ಬಂಧುಗಳ ಮನೆಗೆ ಗಮನ. ನಂಬಿಕೆಯನ್ನು ಗಳಿಸಲು ಸತತ ಪ್ರಯತ್ನವನ್ನು ಮಾಡುವಿರಿ. ಶ್ರೇಷ್ಠ ವ್ಯಕ್ತಿಗಳ ಭೇಟಿಯಿಂದ ಹೊಸ ಕಾರ್ಯಗಳನ್ನು ಮಾಡಲು ಉತ್ಸುಕರಾಗಿರುವಿರಿ. ನಿಮ್ಮಮಾತಿಗೆ ಸಮಜಾಯಿಷಿ ಕೊಡಬೇಕಾದೀತು. ಕುಟುಂಬಕ್ಕೆ ಸಾಕಷ್ಟು ಸಮಯವನ್ನು ನೀಡುವುದಿಲ್ಲ ಬೇಸರವೂ ಇರುವುದು. ಆರ್ಥಿಕ ಪರಿಸ್ಥಿತಿ ಸುಧಾರಿಸಿ ನೆಮ್ಮದಿ ಸಿಗುವುದು.
ಕರ್ಕಾಟಕ ರಾಶಿ: ಸಮಯದ ಸದುಪಯೋಗಕ್ಕೆ ಪ್ರಶಂಸೆ ಸಿಗುವುದು. ಇಂದು ಮನೆಯ ಹಿರಿಯರ ಸಹವಾಸವನ್ನು ಮಾಡುವಿರಿ. ಅವರ ಸೇವೆಯಿಂದ ತೃಪ್ತಿ ಇರಲಿದೆ. ತಂತ್ರಜ್ಞರು ಉನ್ನತ ಸ್ಥಾನದ ಬಯಕೆಯಿಂದ ಕಛೇರಿಯನ್ನು ಬಿಡಬಹುದು. ಸರಿಯಾದ ಸ್ಥಳದಲ್ಲಿ ಹೂಡಿಕೆಯಿಂದ ಲಾಭ. ನಿಮ್ಮ ಕೈ ಮೀರಿದ ಕೆಲಸದಲ್ಲಿ ನಿಮಗೆ ಆತಂಕ ಬೇಡ. ಪ್ರೇಮವು ನಿಮಗೆ ಬಂಧನದಂತೆ ಕಾಣಿಸುವುದು. ನಿಮ್ಮ ಸೋಲನ್ನು ನೀವು ಒಪ್ಪಿಕೊಳ್ಳಲಾರಿರಿ. ಅನಿರೀಕ್ಷಿತ ವಾರ್ತೆಯು ನಿಮ್ಮನ್ನು ಚಿಂತೆಗೆ ದೂಡಲಿದೆ. ಪ್ರಶಾಂತವಾದ ವಾತಾವರಣದಲ್ಲಿ ಕೆಲವು ಸಮಯವನ್ನು ಕಳೆದು ಬನ್ನಿ. ಉನ್ನತ ಹುದ್ದೆಗಾಗಿ ಬರೆಯುವ ಪರೀಕ್ಷೆಯಲ್ಲಿ ನಿಮಗೆ ಜಯ ಸಿಗಲಿದೆ. ಇಂದಿನ ನಿಮ್ಮ ವ್ಯಾಪಾರ ವಿಳಂಬವಾಗಿ ಆರಂಭವಾಗುವುದು. ದೂರದ ಊರಿಗೆ ಪ್ರಯಾಣ ಮಾಡಲಿದ್ದೀರಿ. ನಿಮ್ಮ ಸಕಾರಾತ್ಮಕ ಆಲೋಚನೆಗಳೂ ನಿಮಗೆ ಸಹಕಾರವನ್ನು ಕೊಡದು. ಕುಟುಂಬದಲ್ಲಿ ಜವಾಬ್ದಾರಿಯ ಸ್ಥಾನವನ್ನು ಪಡೆಯಬೇಕಾಗುವುದು. ನಿಮ್ಮ ಮಾತು ಸುಳ್ಳಾಗಬಹುದು. ವಸ್ತುಗಳ ಖರೀದಿಯು ಖರ್ಚನ್ನು ಹೆಚ್ಚು ಮಾಡುವುದು.
ಸಿಂಹ ರಾಶಿ: ರಹಸ್ಯ ಬಯಲಾಗುವ ಆತಂಕವಿರುವುದು. ನಿಮ್ಮ ಅನಾರೋಗ್ಯದಿಂದ ಅಭ್ಯಾಸಕ್ಕೆ ತೊಂದರೆಯಾಗಲಿದೆ. ಪೂರ್ಣವಿಶ್ರಾಂತಿಗೆ ನೀವು ಒಳಪಡಬೇಕಾದೀತು. ಅರ್ಥಿಕತೆಯು ಏರಿಕೆಯಾಗಲಿದೆ. ಫಲಾಪೇಕ್ಷೆ ಇಲ್ಲದೇ ಮಾಡುವ ಸಹಾಯದ ಮೌಲ್ಯ ಅರಿವಾಗುವುದು. ಸ್ನೇಹಿತರ ಜೊತೆ ಮೋಜಿನಲ್ಲಿ ಇರುವ ಮನಸ್ಸು ಮಾಡುವಿರಿ. ಸಾಮಾಜಿಕ ಕೆಲಸಗಳು ನಿಮಗೆ ಇನ್ನಷ್ಟೂ ಉತ್ಸಾಹವನ್ನು ಕೊಡುವುದು. ವೈದ್ಯರ ಬಳಿ ಸಾವಧಾನತೆಯಿಂದ ಮಾತನಾಡಿ. ನೀವು ಕಷ್ಟವನ್ನು ಆನಂದದಿಂದ ಕಳೆಯುವಿರಿ. ಅನಕ್ಷರಸ್ಥರ ಜೊತೆ ವಾಗ್ವಾದ ಸಲ್ಲ. ಇಂದು ಕೆಲಸಕ್ಕಿಂತ ಪ್ರಯಾಣವೇ ಹೆಚ್ಚಾಗಿರುವುದು. ಮಕ್ಕಳಿಂದ ನಿಮ್ಮ ಕೀರ್ತಿಯು ಹಾಳಾಗಬಹುದು. ನಿಮ್ಮ ಮಾತಿಗೆ ಬೆಲೆಯು ಬರುವಂತೆ ಮಾತನಾಡಿ. ಆದಾಯದಲ್ಲಿ ಇತರರಿಗೆ ಸಮಾನವಾಗಿದ್ದರೂ ಖರ್ಚು ಹಾಗಿರುವುದಿಲ್ಲ. ಏನಾದರೊಂದು ಹುಟ್ಟಿಕೊಳ್ಳುತ್ತದೆ. ಶಕ್ತಿ ಮೀರಿದ ಕೆಲಸವನ್ನು ಮಾಡಿ ಆಯಾಸ ಮಾಡಿಕೊಳ್ಳುವುದು ಬೇಡ. ಕುಟುಂಬಕ್ಕೆ ನಿಮ್ಮಿಂದ ಧನಸಹಾಯದ ಅಪೇಕ್ಷೆ ಇರುವುದು.
ಕನ್ಯಾ ರಾಶಿ: ದ್ವಂದ್ವದಿಂದ ಹೊರಗೆ ಬರವುದು ಉತ್ತಮ. ನೀವು ಕುಟುಂಬಕ್ಕೆ ಯೋಗ್ಯವಾದ ಹೆಸರನ್ನು ತಂದುಕೊಡಲಿದ್ದೀರಿ. ವಿದೇಶಕ್ಕೆ ಹೋಗಲು ನಿಮಗೆ ಕಛೇರಿಯಲ್ಲಿ ಅನುಮೋದನೆ ಸಿಗಬಹುದು. ಪುಣ್ಯಸ್ಥಳಗಳಿಗೆ ಅನಿರೀಕ್ಷಿತ ಭೇಟಿ. ಹಣಕಾಸಿನ ವಿಚಾರಕ್ಕೆ ಸಂಗಾತಿಯ ಜೊತೆ ಮಾತಾಗಬಹುದು. ನೇರ ನುಡಿಯಿಂದ ಆಪ್ತರು ದೂರ ಸರಿಯಬಹುದು. ಮನೋರಂಜನೆಯಿಂದ ನಿಮಗೆ ಸಮಾಧಾನ ಸಿಗಲಿದೆ. ಮನೆಯ ಹಿರಿಯರನ್ನು ಸಂತೋಷಪಡಿಸಿದರೆ ಅದೇ ಆಶೀಋವಾದ. ಕೆಲವು ವಿಚಾರಗಳಿಗೆ ಸುಮ್ಮನೇ ಪ್ರತಿಕ್ರಿಯೆ ನೀಡಬೇಕಿಲ್ಲ. ಹೊರದೇಶದಲ್ಲಿ ಹೊಸದಾಗಿ ಕೆಲಸವನ್ನು ಹುಡುಕುತ್ತಿದ್ದರೆ ಅದನ್ನು ನಿಲ್ಲಿಸಿ. ಸದ್ಯ ವಿದೇಶದ ಕಡೆಗೆ ಗಮನವನ್ನು ಕೊಡಬೇಡಿ. ಇರುವ ಸ್ಥಳದಲ್ಲಿಯೇ ಸಿಕ್ಕ ಉತ್ತಮ ಕೆಲಸವನ್ನು ಮಾಡಿ. ನಿಮ್ಮನ್ನು ಆಡಿಕೊಳ್ಳುವ ಜನರು ನಿಮ್ಮ ಪಕ್ಕದಲ್ಲಿಯೇ ಇರುತ್ತಾರೆ. ಅವರಿಗೆ ಕಾಣಿಸುವಂತೆ ಏನನ್ನೂ ಮಾಡಬೇಡಿ. ಇಂದು ಆರಂಭಿಸಿದ ಕೆಲಸಗಳನ್ನು ಇಂದೇ ಮುಗಿಸುವಂತೆ ನೋಡಿಕೊಳ್ಳಿ.




