ಭಾರತಕ್ಕೆ ಬರುತ್ತಿದೆ ಪೋಕೋದ ಹೊಸ ಸ್ಮಾರ್ಟ್​ಫೋನ್: ಟೆಕ್ ಪ್ರಿಯರಲ್ಲಿ ಭಾರೀ ನಿರೀಕ್ಷೆ

|

Updated on: Dec 14, 2023 | 6:55 AM

POCO C65 India Launch: ಪೋಕೋ ಇಂಡಿಯಾ ಮುಖ್ಯಸ್ಥ ಹಿಮಾಂಶು ಟಂಡನ್ ಅವರು ಪೋಕೋ C65 ಡಿಸೆಂಬರ್ 15 ರಂದು ದೇಶದಲ್ಲಿ ಪಾದಾರ್ಪಣೆ ಮಾಡಲಿದೆ ಎಂದು ಅಧಿಕೃತವಾಗಿ ಹೇಳಿದ್ದಾರೆ. ಟೀಸರ್ ಚಿತ್ರವು ಫ್ಲಿಪ್‌ಕಾರ್ಟ್ ಲೋಗೋವನ್ನು ಹೊಂದಿದೆ, ಇದು ಫೋನ್‌ನ ಆನ್‌ಲೈನ್ ಲಭ್ಯತೆಯನ್ನು ಖಚಿತಪಡಿಸಿದೆ.

ಭಾರತಕ್ಕೆ ಬರುತ್ತಿದೆ ಪೋಕೋದ ಹೊಸ ಸ್ಮಾರ್ಟ್​ಫೋನ್: ಟೆಕ್ ಪ್ರಿಯರಲ್ಲಿ ಭಾರೀ ನಿರೀಕ್ಷೆ
POCO C65
Follow us on

ಅಪರೂಪಕ್ಕೆ ಆಕರ್ಷಕ ಸ್ಮಾರ್ಟ್​ಫೋನ್​ಗಳನ್ನು ಬಿಡುಗಡೆ ಮಾಡುವ ಪೋಕೋ ಸಂಸ್ಥೆ ಇದೀಗ ತನ್ನ ನೂತನ ಫೋನಿನ ಬಿಡುಗಡೆ ಬಗ್ಗೆ ಘೋಷಣೆ ಮಾಡಿದೆ. ಪೋಕೋ ಇಂಡಿಯಾ ತನ್ನ ಅಧಿಕೃತ X ನಲ್ಲಿ ಪೋಸ್ಟ್ ಮಾಡುವ ಮೂಲಕ ದೇಶದಲ್ಲಿ ಪೋಕೋ C65 (POCO C65) ಬಿಡುಗಡೆ ದಿನಾಂಕವನ್ನು ಪ್ರಕಟಿಸಿದೆ. ಪೋಕೋ C65 ಕಳೆದ ತಿಂಗಳು ಜಾಗತಿಕವಾಗಿ ಮಾರುಕಟ್ಟೆಗೆ ಪ್ರವೇಶಿಸಿತ್ತು. ಈ ಹ್ಯಾಂಡ್‌ಸೆಟ್ ಡಿಸೆಂಬರ್ 15, 2023 ರಂದು ಮಧ್ಯಾಹ್ನ 12 ಗಂಟೆಗೆ ದೇಶದಲ್ಲಿ ಅನಾವರಣಗೊಳ್ಳಲಿದೆ. ಇದು ಕಳೆದ ಬಿಡುಗಡೆಯಾದ ರೆಡ್ಮಿ 13C 4G ಯ ಮರುಬ್ರಾಂಡ್ ಎಂದು ಹೇಳಲಾಗಿದೆ.

ಪೋಕೋ ಇಂಡಿಯಾ ಮುಖ್ಯಸ್ಥ ಹಿಮಾಂಶು ಟಂಡನ್ ಅವರು ಪೋಕೋ C65 ಡಿಸೆಂಬರ್ 15 ರಂದು ದೇಶದಲ್ಲಿ ಪಾದಾರ್ಪಣೆ ಮಾಡಲಿದೆ ಎಂದು ಅಧಿಕೃತವಾಗಿ ಹೇಳಿದ್ದಾರೆ. ಟೀಸರ್ ಚಿತ್ರವು ಫ್ಲಿಪ್‌ಕಾರ್ಟ್ ಲೋಗೋವನ್ನು ಹೊಂದಿದೆ, ಇದು ಫೋನ್‌ನ ಆನ್‌ಲೈನ್ ಲಭ್ಯತೆಯನ್ನು ಖಚಿತಪಡಿಸಿದೆ. ಪೋಸ್ಟರ್ ಚಿತ್ರವು ಫೋನ್‌ನ ಹಿಂದಿನ ವಿನ್ಯಾಸ ಮತ್ತು ಹೊಸ ನೇರಳೆ ಬಣ್ಣದ ಆಯ್ಕೆಯನ್ನು ತೋರಿಸುತ್ತದೆ.

 

ಪೋಕೋ ಸಿ55 ಸ್ಮಾರ್ಟ್​ಫೋನ್ ಟ್ರಿಪಲ್ ಕ್ಯಾಮೆರಾ ಸಂವೇದಕಗಳು ಮತ್ತು ಎಲ್ಇಡಿ ಫ್ಲ್ಯಾಷ್ ಇರುವುದು ಖಚಿತವಾಗಿದೆ. ಹಿಂದಿನ ಪ್ಯಾನೆಲ್‌ನಲ್ಲಿ ’50MP AI ಕ್ಯಾಮ್’ ಅನ್ನು ಸಹ ನೋಡಬಹುದು. ಸಿಮ್ ಟ್ರೇ ವಿಭಾಗವು ಎಡ ತುದಿಯಲ್ಲಿದೆ. ಪೋಕೋ C65 ಈ ವರ್ಷದ ಆರಂಭದಲ್ಲಿ ರಿಲೀಸ್ ಆದ ಪೋಕೋ C55 ನ ಉತ್ತರಾಧಿಕಾರಿಯಾಗಿದೆ.

ಪೋಕೋ C65 ಬೆಲೆ ಎಷ್ಟಿರಬಹುದು?

ಪೋಕೋ C65 ಸ್ಮಾರ್ಟ್​ಫೋನ್​ನ 6GB+128GB ಮಾಡೆಲ್‌ಗೆ $129 (ಭಾರತದಲ್ಲಿ ಅಂದಾಜಿ 10,800 ರೂ.). 8GB+256GB ಸ್ಟೋರೇಜ್ ರೂಪಾಂತರಕ್ಕೆ $149 (ಸುಮಾರು ರೂ. 12,500) ಆಗಿದೆ. ಭಾರತದಲ್ಲಿ ಇದರ ಖಚಿತ ಬೆಲೆ ಇನ್ನೂ ಬಹಿರಂಗಗೊಂಡಿಲ್ಲ.

ಪೋಕೋ C65 ಫೀಚರ್ಸ್:

ಡಿಸ್‌ಪ್ಲೇ: ಪೋಕೋ C65 ಸ್ಮಾರ್ಟ್​ಫೋನ್ ವಾಟರ್‌ಡ್ರಾಪ್ ನಾಚ್‌ನೊಂದಿಗೆ 6.74-ಇಂಚಿನ ಡಿಸ್‌ಪ್ಲೇ, 90Hz ರಿಫ್ರೆಶ್ ರೇಟ್, 600 nits ಪೀಕ್ ಬ್ರೈಟ್‌ನೆಸ್ ಮತ್ತು ಗೊರಿಲ್ಲಾ ಗ್ಲಾಸ್ ರಕ್ಷಣೆಯನ್ನು ಹೊಂದಿದೆ.

ಚಿಪ್ಸೆಟ್: ಈ ಹ್ಯಾಂಡ್ಸೆಟ್ ಮೀಡಿಯಾಟೆಕ್ ಹಿಲಿಯೊ G85 ಪ್ರೊಸೆಸರ್​ನಿಂದ ಚಾಲಿತವಾಗಿದೆ.

ಸಂಗ್ರಹಣೆ: ಈ ಚಿಪ್‌ಸೆಟ್ ಅನ್ನು 6GB+128GB ಮತ್ತು 8GB+256GB ಸ್ಟೋರೇಜ್ ರೂಪಾಂತರಗಳೊಂದಿಗೆ ಜೋಡಿಸಲಾಗಿದೆ.

OS: ಈ ಪೋಕೋ ಸ್ಮಾರ್ಟ್​ಫೋನ್ MIUI 14 ನಲ್ಲಿ ರನ್ ಆಗುತ್ತದೆ.

ಬ್ಯಾಟರಿ: 18W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ 5,000mAh ಬ್ಯಾಟರಿ ಇದೆ.

ಕನೆಕ್ಟಿವಿಟಿ: ಕನೆಕ್ಟಿವಿಟಿ ಆಯ್ಕೆಗಳಲ್ಲಿ 4G LTE, WiFi, ಬ್ಲೂಟೂತ್, NFC, 3.5mm ಆಡಿಯೋ ಜ್ಯಾಕ್ ಮತ್ತು USB ಟೈಪ್-C ಪೋರ್ಟ್ ಸೇರಿವೆ.

ಕ್ಯಾಮೆರಾಗಳು: ಪೋಕೋ C65 ಹಿಂಭಾಗದಲ್ಲಿ ಎರಡು ಕ್ಯಾಮೆರಾ ಸಂವೇದಕಗಳನ್ನು ನೀಡಲಾಗಿದೆ. 50MP ಮುಖ್ಯ ಹಿಂಬದಿಯ ಕ್ಯಾಮೆರಾ ಮತ್ತು 2MP ಮ್ಯಾಕ್ರೋ ಲೆನ್ಸ್ ಹಾಗೂ ಸೆಲ್ಫಿಗಾಗಿ 8MP ಮುಂಭಾಗದ ಕ್ಯಾಮೆರಾ ಅಳವಡಿಸಲಾಗಿದೆ.

ಭದ್ರತೆ: ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸರ್ ಮತ್ತು ಫೇಸ್ ಅನ್‌ಲಾಕ್ ಫೀಚರ್ ಇದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ