Poco M4 Pro 5G: ಇಂದು ಬಹುನಿರೀಕ್ಷಿತ ಪೋಕೋ M4 ಪ್ರೋ 5G ಬಿಡುಗಡೆ: ಕಾದು ಕುಳಿತಿರುವ ಸ್ಮಾರ್ಟ್​ಫೋನ್ ಪ್ರಿಯರು

| Updated By: Vinay Bhat

Updated on: Nov 09, 2021 | 12:10 PM

ಪೋಕೋ M4 ಪ್ರೊ 5G ಸ್ಮಾರ್ಟ್‌ಫೋನ್‌ ಬಗೆಗಿನ ವಿಶೇಷತೆ ಬಗ್ಗೆ ಕಂಪನಿ ಯಾವುದೇ ಖಚಿತ ಮಾಹಿತಿ ಹೊರಹಾಕಿಲ್ಲ. ಆದರೆ, ಮೂಲಗಳ ಪ್ರಕಾರ ಇದು 1080 x 2400 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.6 ಇಂಚಿನ ಐಪಿಎಸ್‌ ಎಲ್‌ಸಿಡಿ ಡಿಸ್‌ಪ್ಲೇ ಹೊಂದಿರಲಿದೆ ಎನ್ನಲಾಗಿದೆ.

Poco M4 Pro 5G: ಇಂದು ಬಹುನಿರೀಕ್ಷಿತ ಪೋಕೋ M4 ಪ್ರೋ 5G ಬಿಡುಗಡೆ: ಕಾದು ಕುಳಿತಿರುವ ಸ್ಮಾರ್ಟ್​ಫೋನ್ ಪ್ರಿಯರು
Poco M4 Pro 5G
Follow us on

ಭಾರತದ ಸ್ಮಾರ್ಟ್‌ಫೋನ್‌ (Smartphone) ಮಾರುಕಟ್ಟೆಯಲ್ಲಿ ಸದ್ದಿಲ್ಲದೆ ತನ್ನ ಸ್ಥಾನವನ್ನು ಭದ್ರಪಡಿಸಿಕೊಳ್ಳುತ್ತಿರುವ ಪೋಕೋ ಕಂಪನಿ ಈಗಾಗಲೇ ಆಕರ್ಷಕ ಫೋನ್​ಗಳನ್ನು ಅನಾವರಣ ಮಾಡಿ ಯಶಸ್ಸು ಕಂಡಿದೆ. ಇದೇ ಸಾಲಿಗೆ ಈಗ ಮತ್ತೊಂದು ಸ್ಮಾರ್ಟ್​ಫೋನ್ ಸೇರ್ಪಡೆಯಾಗುತ್ತಿದೆ. ಹೌದು ಪೋಕೋ (Poco) ಸಂಸ್ಥೆ ತನ್ನ ಹೊಸ ಪೋಕೋ ಎಮ್​4 ಪ್ರೊ 5ಜಿ (POCO M4 Pro 5G) ಸ್ಮಾರ್ಟ್​ಫೋನ್ ಬಿಡುಗಡೆ ಮಾಡಲು ಸಿದ್ಧತೆ ನಡೆಸುತ್ತಿದೆ. ಅಲ್ಟ್ರಾ-ಫಾಸ್ಟ್ ಪ್ರೊಸೆಸರ್, ವೇಗದ ಚಾರ್ಜಿಂಗ್ ಸಾಮರ್ಥ್ಯ ಜೊತೆಗೆ ಅತ್ಯುತ್ತಮ ಕ್ಯಾಮೆರಾ, ಬ್ಯಾಟರಿ ಇದೆ ಎನ್ನಲಾಗುತ್ತಿರುವ ಪೋಕೋ M4 ಪ್ರೊ 5G ಸ್ಮಾರ್ಟ್​ಫೋನ್ ನವೆಂಬರ್ 9ರಂದು ಜಾಗತಿಕವಾಗಿ ಬಿಡುಗಡೆಯಾಗಲಿದೆ.

ಈ ಪೋಕೋ M4 ಪ್ರೊ 5G ಸ್ಮಾರ್ಟ್‌ಫೋನ್‌ ಬಗೆಗಿನ ವಿಶೇಷತೆ ಬಗ್ಗೆ ಕಂಪನಿ ಯಾವುದೇ ಖಚಿತ ಮಾಹಿತಿ ಹೊರಹಾಕಿಲ್ಲ. ಆದರೆ, ಮೂಲಗಳ ಪ್ರಕಾರ ಇದು 1080 x 2400 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.6 ಇಂಚಿನ ಐಪಿಎಸ್‌ ಎಲ್‌ಸಿಡಿ ಡಿಸ್‌ಪ್ಲೇ ಹೊಂದಿರಲಿದೆ ಎನ್ನಲಾಗಿದೆ. ಮೀಡಿಯಾ ಟೆಕ್ ಡೈಮೆನ್ಸಿಟಿ 810 SoC ಅಥವಾ ಡೈಮೆನ್ಸಿಟಿ 700 SoC ಪ್ರೊಸೆಸರ್‌ ಸಾಮರ್ಥ್ಯವನ್ನು ಹೊಂದಿರುವ ಸಾಧ್ಯತೆ ಇದೆ. ಇದು ಆಂಡ್ರಾಯ್ಡ್‌ 11 ಸಾಫ್ಟ್‌ವೇರ್ ಔಟ್-ಆಫ್-ಬಾಕ್ಸ್‌ನಲ್ಲಿ ಕಾರ್ಯನಿರ್ವಹಿಸಲಿದೆ ಎಂದು ಬಹಿರಂಗಪಡಿಸಿದೆ.

ಡ್ಯುಯಲ್‌ ರಿಯರ್‌ ಕ್ಯಾಮೆರಾ ಸೆಟಪ್‌ ಅನ್ನು ಹೊಂದಿರಲಿದೆಯಂತೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್‌ ಸೆನ್ಸಾರ್‌ f/1.79 ವೈಡ್‌ ಆಂಗಲ್‌ ಲೆನ್ಸ್‌ ಹೊಂದಿರುವ ಸಾಧ್ಯತೆ ಇದೆ. ಎರಡನೇ ಕ್ಯಾಮೆರಾ 8 ಮೆಗಾಪಿಕ್ಸೆಲ್‌ ಸೆನ್ಸಾರ್‌ ಹೊಂದಿರಲಿದೆ. ಇದಲ್ಲದೆ 16 ಮೆಗಾಪಿಕ್ಸೆಲ್‌ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಪಡೆದುಕೊಂಡಿರುವ ಸಾಧ್ಯತೆ ಇದೆ. ಇನ್ನು ಕ್ಯಾಮೆರಾ ಫೀಚರ್ಸ್‌ಗಳಲ್ಲಿ ಡಿಜಿಟಲ್ ಜೂಮ್, ಆಟೋ ಫ್ಲ್ಯಾಶ್, ಫೇಸ್‌ ಡಿಟೆಕ್ಷನ್‌, ಟಚ್‌ ಟು ಫೋಕಸ್‌ ಅನ್ನು ಒಳಗೊಂಡಿರಲಿದೆ.

ಅಧಿಕೃತ ಟೀಸರ್ ಮೂಲಕ 5000mAh ಸಾಮರ್ಥ್ಯದ ಬ್ಯಾಟರಿ ಹೊಂದಿರುವ ಸಾಧ್ಯತೆ ಇದೆ. ಇದು 33W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ ಬರಲಿದೆ ಎಂದು ಬಹಿರಂಗಪಡಿಸಿದ್ದಾರೆ. ಇನ್ನು ಕನೆಕ್ಟಿವಿಟಿ ಆಯ್ಕೆಯಲ್ಲಿ ಹಾಟ್‌ಸ್ಪಾಟ್‌, ಬ್ಲೂಟೂತ್‌, ವೈಫೈ, ಯುಎಸ್‌ಬಿ ಟೈಪ್‌ ಸಿ, ಜಿಪಿಎಸ್‌ ಅನ್ನು ಬೆಂಬಲಿಸಲಿದೆ. ಇದಲ್ಲದೆ ಎಕ್ಸೆಲೋಮೀಟರ್, ಏಂಬಿಯಂಟ್ ಲೈಟ್ ಸೆನ್ಸಾರ್, ಗೈರೋಸ್ಕೋಪ್‌ ಮತ್ತು ಪ್ರಾಕ್ಸಿಮಿಟಿ ಸೆನ್ಸರ್ ಗಳನ್ನು ಒಳಗೊಂಡಿರುತ್ತದೆ.

ಪೋಕೋ M4 ಪ್ರೊ ಸ್ಮಾರ್ಟ್‌ಫೋನ್‌ ಇದೇ ನವೆಂಬರ್ 9 ರಂದು ಜಾಗತಿಕ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಿದೆ. ವದಂತಿಗಳ ಪ್ರಕಾರ ಇದು ಈ ತಿಂಗಳ ಕೊನೆಯಲ್ಲಿ ಇದು ಭಾರತದಲ್ಲಿ ಲಾಂಚ್‌ ಆಗುವ ಸಾದ್ಯತೆ ಇದೆ. ಜೊತೆಗೆ ಈ ಸ್ಮಾರ್ಟ್‌ಫೋನ್‌ 4GB RAM ಮತ್ತು 128GB, 6GB RAM ಮತ್ತು 128GB ಹಾಗೂ 8GB RAM ಮತ್ತು 128GB ಆಯ್ಕೆಯಲ್ಲಿ ಬರಲಿದೆ ಎನ್ನಲಾಗಿದೆ. ಇದರ ಬೆಲೆ ಎಷ್ಟಿರಬಹುದು ಎಂಬುದುಕೂಡ ಇನ್ನೂ ಬಹಿರಂಗವಾಗಿಲ್ಲ.

WhatsApp: ವಾಟ್ಸ್​ಆ್ಯಪ್​ನಲ್ಲಿ ನಿಮ್ಮನ್ನ ಯಾರೆಲ್ಲ ಬ್ಲಾಕ್ ಮಾಡಿದ್ದಾರೆಂದು ತಿಳಿಯಬೇಕೇ?: ಇಲ್ಲಿದೆ ಸುಲಭ ಟ್ರಿಕ್ಸ್

Google Search: ಎಚ್ಚರ: ಗೂಗಲ್​ನಲ್ಲಿ ತಪ್ಪಿಯೂ ಇವುಗಳನ್ನು ಸರ್ಚ್​ ಮಾಡಬೇಡಿ

(Poco M4 Pro 5G is set for its global launch on tomorrow November 9)

Published On - 1:22 pm, Mon, 8 November 21