Google Search: ಎಚ್ಚರ: ಗೂಗಲ್‌ನಲ್ಲಿ ತಪ್ಪಿಯೂ ಇವುಗಳನ್ನು ಸರ್ಚ್ ಮಾಡಬೇಡಿ
ಸಾಮಾನ್ಯವಾಗಿ ಜನರು ಬ್ಯಾಂಕಿಂಗ್, ಆರೋಗ್ಯ, ರಾಜಕೀಯ, ಮನರಂಜನೆ, ಫೋಟೋಗಳು ಮತ್ತು ಇತರ ಹಲವು ವಿಷಯಗಳನ್ನು ಗೂಗಲ್‌ನಲ್ಲಿ ಹುಡುಕುತ್ತಾರೆ. ಆದರೆ, ಇವುಗಳನ್ನು ಹುಡುಕುವುದು ಎಷ್ಟು ಸುರಕ್ಷಿತ? ಉತ್ತರ ಸುರಕ್ಷಿತವಲ್ಲ.
ನಮಗೆ ಯಾವುದಾದರೂ ವಿಷಯದ ಬಗ್ಗೆ ಮಾಹಿತಿ ಬೇಕೆಂದಲ್ಲಿ ಕೂಡಲೇ ನೆನಪಾಗುವುದು ಗೂಗಲ್ (Google). ಅಡ್ರೆಸ್, ವೆಬ್ಸೈಟ್ಸ್, ಮೂವೀಸ್ ಹೀಗೆ ಯಾವುದರ ಬಗ್ಗೆ ಬೇಕಾದರೂ ಗೂಗಲ್ ಸರ್ಚ್ (Google Search) ಮಾಡುತ್ತೇವೆ, ತಕ್ಷಣ ಉತ್ತರ ಪಡೆದುಕೊಳ್ಳುತ್ತೇವೆ. ಹೀಗಾಗಿ ಇಂಟರ್ನೆಟ್ನಲ್ಲಿ ಗೂಗಲ್ ಸರ್ಚ್ ನಮ್ಮ ಬೆಸ್ಟ್ ಫ್ರೆಂಡ್ ಆಗಿದೆ ಎಂದು ಹೇಳಿದರೆ ತಪ್ಪಾಗಲಾರದು. ಆದರೆ ಕೆಲವೊಂದು ಸಂದರ್ಭದಲ್ಲಿ ಗೂಗಲ್ ಸರ್ಚ್ ನಿಮ್ಮನ್ನು ತೊಂದರೆಗೆ ಸಿಕ್ಕಿಸಬಹುದು. ಗೂಗಲ್‌ನಲ್ಲಿ ನೀವು ಹುಡುಕಿದ ಮಾಹಿತಿಯು ಸರಿಯಾಗಿ ಪರಿಶೀಲನೆ ಆಗದಿದ್ದಾಗ ಸಮಸ್ಯೆ ಉಂಟಾಗಬಹುದು. ಹೀಗಾಗಿ ಕೆಲವೊಂದು ಮಾಹಿತಿಯನ್ನು ನೀವು ಸರ್ಚ್ ಇಂಜಿನ್ ಗೂಗಲ್‌ನಲ್ಲಿ ಹುಡಕಲೇ ಬಾರದು.
ಸಾಮಾನ್ಯವಾಗಿ ಜನರು ಬ್ಯಾಂಕಿಂಗ್, ಆರೋಗ್ಯ, ರಾಜಕೀಯ, ಮನರಂಜನೆ, ಫೋಟೋಗಳು ಮತ್ತು ಇತರ ಹಲವು ವಿಷಯಗಳನ್ನು ಗೂಗಲ್‌ನಲ್ಲಿ ಹುಡುಕುತ್ತಾರೆ. ಆದರೆ, ಇವುಗಳನ್ನು ಹುಡುಕುವುದು ಎಷ್ಟು ಸುರಕ್ಷಿತ? ಉತ್ತರ ಸುರಕ್ಷಿತವಲ್ಲ! ನೀವು ಎಲ್ಲದಕ್ಕೂ ಗೂಗಲ್ ಸರ್ಚ್ ಎಂಜಿನ್ ಅನ್ನು ಆಶ್ರಯಿಸಿದರೆ, ಜಾಗರೂಕರಾಗಿರಿ, ಇಲ್ಲದಿದ್ದರೆ ನೀವು ಅದರ ನಷ್ಟವನ್ನು ಅನುಭವಿಸಬಹುದು. Google ನಲ್ಲಿ ಯಾವ ವಿಷಯಗಳನ್ನು ಹುಡುಕಬೇಕು ಅಥವಾ ಹುಡುಕಬಾರದು ಎಂಬ ಬಗ್ಗೆ ಮಾಹಿತಿ ತಿಳಿದಿರುವುದು ಬಹಳ ಮುಖ್ಯ.
ಕಸ್ಟಮರ್ ಕೇರ್ ಕಾಂಟ್ಯಾಕ್ಟ್ ನಂಬರ್ ಸರ್ಚ್ ಮಾಡುವಾಗ ಎಚ್ಚರ:
ಇದೊಂದು ಜನಪ್ರಿಯ ಆನ್‌ಲೈನ್ ಹಗರಣಗಳಲ್ಲಿ ಒಂದಾಗಿದೆ. ವಂಚಕರು ಫೇಕ್ ಅಥವಾ ನಕಲಿ ಬ್ಯುಸಿನೆಸ್ ಲಿಸ್ಟ್ ಮತ್ತು ಕಸ್ಟಮರ್ ಕೇರ್ ನಂಬರ್ಗಳನ್ನು ವೆಬ್ಸೈಟ್ಗಳಲ್ಲಿ ಪೋಸ್ಟ್ ಮಾಡಿರುತ್ತಾರೆ. ಇದನ್ನರಿಯದ ಜನರು ಅದೇ ನಿಜವಾದ ಮಾಹಿತಿ ಎಂದು ನಂಬುತ್ತಾರೆ. ಹೆಚ್ಚಿನ ಅಪ್ಲಿಕೇಶನ್‌ಗಳು ಇನ್ ಬಿಲ್ಟ್ ಕಸ್ಟಮರ್ ಕೇರ್ ಚಾಟ್ ವಿಂಡೋಸ್ನ್ನು ಹೊಂದಿರುತ್ತವೆ. ಆದರೆ ನೀವು ಕರೆ ಮಾಡಬಹುದಾದ ಕಾಂಟ್ಯಾಕ್ಟ್ ನಂಬರ್ನ್ನು ಹೊಂದಿರುವುದಿಲ್ಲ.
ಆನ್‌ಲೈನ್ ಬ್ಯಾಂಕಿಂಗ್ ವೆಬ್‌ಸೈಟ್:
ಗೂಗಲ್‌ನಲ್ಲಿ ಬ್ಯಾಂಕಿನ ವೆಬ್‌ಸೈಟ್ ಮತ್ತು URL ಅನ್ನು ಸರ್ಚ್ ಮಾಡುತ್ತಾರೆ. ಆದರೆ, ಈ ಹುಡುಕಾಟವು ನಿಮಗೆ ಅಪಾಯದಿಂದ ಮುಕ್ತವಾಗಿಲ್ಲ. ಇಲ್ಲಿಂದ, ನಿಮ್ಮ ವಿವರಗಳನ್ನು ಹ್ಯಾಕರ್‌ಗಳು ಹಿಡಿಯಬಹುದು. ಆನ್‌ಲೈನ್ ಬ್ಯಾಂಕಿಂಗ್ ಅನ್ನು ಬಳಸಬೇಕಾದರೆ, ಬ್ಯಾಂಕಿನ ಅಧಿಕೃತ ವೆಬ್‌ಸೈಟ್‌ನ URL ಅನ್ನು ನೇರವಾಗಿ ನಮೂದಿಸಿ. ಗೂಗಲ್‌ನಲ್ಲಿ ಬ್ಯಾಂಕಿಂಗ್ ಸೈಟ್‌ಗಳನ್ನು ಹುಡುಕುವುದು ಮತ್ತು ತೆರೆಯುವುದು ಇತರ ಫಿಶಿಂಗ್ ವೆಬ್‌ಸೈಟ್‌ಗಳನ್ನು ಸಹ ಬಹಿರಂಗಪಡಿಸಬಹುದು. ತಿಳಿಯದೆ ನೀವು ಈ ವೆಬ್‌ಸೈಟ್‌ಗಳನ್ನು ತೆರೆಯಬಹುದು. ನೀವು ಇಲ್ಲಿ ಬ್ಯಾಂಕಿಂಗ್ ವಿವರಗಳನ್ನು ನಮೂದಿಸಿದರೆ, ಅದನ್ನು ಹ್ಯಾಕರ್‌ಗಳು ಹಿಡಿಯಬಹುದು ಮತ್ತು ನಿಮ್ಮ ಖಾತೆಯು ಖಾಲಿಯಾಗಬಹುದು.
ಮೆಡಿಸಿನ್ ಬಗ್ಗೆ ಸರ್ಚ್ ಮಾಡುವಾಗ ಎಚ್ಚರ:
ನಿಮಗೆ ಆರೋಗ್ಯ ಹದಗೆಟ್ಟರೆ ವೈದ್ಯರ ಬಳಿ ಹೋಗಿ. ಆದರೆ ಗೂಗಲ್‌ನಲ್ಲಿ ಮೆಡಿಸಿನ್ ಅಥವಾ ಆರೋಗ್ಯ ಸಲಹೆಗಳ ಬಗ್ಗೆ ಸರ್ಚ್ ಮಾಡಬೇಡಿ. ಯಾಕೆಂದರೆ ಗೂಗಲ್‌ನಲ್ಲಿ ಈ ಬಗ್ಗೆ ಸ್ಪಷ್ಟವಾದ ಮಾಹಿತಿ ಇರುವುದಿಲ್ಲ. ಗೂಗಲ್ ಮಾಹಿತಿಗಿಂತ ವೈದ್ಯರ ಸಲಹೆ ಪಡೆಯುವುದು ಉತ್ತಮ. ಜೊತೆಗೆ ಗೂಗಲ್ ಸಲಹೆ ಮೇರೆಗೆ ಮೆಡಿಸಿನ್ ತೆಗೆದುಕೊಳ್ಳವುದೂ ಸಹ ಅಷ್ಟೇ ಅಪಾಯಕಾರಿ.
ಅಪ್ಲಿಕೇಶನ್ ಅಥವಾ ಸಾಫ್ಟ್‌ವೇರ್:
ಹೆಚ್ಚಿನ ಅಪ್ಲಿಕೇಶನ್‌ಗಳು ಅಥವಾ ಸಾಫ್ಟ್‌ವೇರ್‌ಗಳನ್ನು ಗೂಗಲ್‌ನಲ್ಲಿ ಹುಡುಕಲಾಗುತ್ತದೆ. ಯಾವುದೇ ಹೊಸ ಅಪ್ಲಿಕೇಶನ್ ಬಂದಾಗ, ಅದರ ಹುಡುಕಾಟವು ಗಮನಾರ್ಹವಾಗಿ ಹೆಚ್ಚಾಗುತ್ತದೆ. ಗೂಗಲ್ ಹುಡುಕಾಟವು ಕೆಲವೊಮ್ಮೆ ಫಿಶಿಂಗ್ ಅಥವಾ ನಕಲಿ ಅಪ್ಲಿಕೇಶನ್‌ಗಳು ಮತ್ತು ಸಾಫ್ಟ್‌ವೇರ್ ಅನ್ನು ಒಳಗೊಂಡಿರಬಹುದು. ಅದು ನಮ್ಮ ಸಾಧನವನ್ನು ಹಾನಿಗೊಳಿಸುತ್ತದೆ ಮತ್ತು ನಮ್ಮ ವಿವರಗಳನ್ನು ಸೋರಿಕೆ ಮಾಡುತ್ತದೆ. ಅಪ್ಲಿಕೇಶನ್ ಅನ್ನು ಗೂಗಲ್ ಪ್ಲೇ ಸ್ಟೋರ್ ಅಥವಾ ಆಪಲ್ ಆಪ್ ಸ್ಟೋರ್‌ನಿಂದ ಮಾತ್ರ ಡೌನ್‌ಲೋಡ್ ಮಾಡಬೇಕು.
Moto E30: 48MP ಕ್ಯಾಮೆರಾ, 5000mAh ಬ್ಯಾಟರಿಯ ಹೊಸ ಮೋಟೋ E30 ಸ್ಮಾರ್ಟ್ಫೋನ್ ಬಿಡುಗಡೆ: ಬೆಲೆ?
Galaxy A13 5G: ಭರ್ಜರಿ ಸೇಲ್ ಆಗುತ್ತಿರುವ ಗ್ಯಾಲಕ್ಸಿ A ಸರಣಿಯಲ್ಲಿ ಬರುತ್ತಿದೆ ಮತ್ತೊಂದು ಹೊಸ ಸ್ಮಾರ್ಟ್ಫೋನ್
(Be very careful Dont search these things on Google)