WhatsApp: ವಾಟ್ಸ್​ಆ್ಯಪ್​ನಲ್ಲಿ ನಿಮ್ಮನ್ನ ಯಾರೆಲ್ಲ ಬ್ಲಾಕ್ ಮಾಡಿದ್ದಾರೆಂದು ತಿಳಿಯಬೇಕೇ?: ಇಲ್ಲಿದೆ ಸುಲಭ ಟ್ರಿಕ್ಸ್

How to Check if Someone Has Blocked You?: ವಾಟ್ಸ್​ಆ್ಯಪ್​ನಲ್ಲಿ ನಿಮ್ಮನ್ನು ಯಾರಾದರೂ ಬ್ಲಾಕ್ ಮಾಡಿದ್ದಾರೆಯೇ ಎಂದು ತಿಳಿಯಲು ಇರುವ ಅತ್ಯಂತ ಸುಲಭ ವಿಧಾನ ಎಂದರೆ ವಾಟ್ಸ್​ಆ್ಯಪ್​​ ಗ್ರೂಪ್ ಮಾಡಿ ಚೆಕ್ ಮಾಡುವುದು. ಅದು ಹೇಗೆ?, ಬೇರೆ ದಾರಿ ಏನಿದೆ ಎಂಬುದನ್ನು ಇಲ್ಲಿ ತಿಳಿಸಲಾಗಿದೆ.

WhatsApp: ವಾಟ್ಸ್​ಆ್ಯಪ್​ನಲ್ಲಿ ನಿಮ್ಮನ್ನ ಯಾರೆಲ್ಲ ಬ್ಲಾಕ್ ಮಾಡಿದ್ದಾರೆಂದು ತಿಳಿಯಬೇಕೇ?: ಇಲ್ಲಿದೆ ಸುಲಭ ಟ್ರಿಕ್ಸ್
WhatsApp Block
Follow us
TV9 Web
| Updated By: Vinay Bhat

Updated on: Nov 07, 2021 | 3:28 PM

ಇಂದು ವಾಟ್ಸ್​ಆ್ಯಪ್ (WhatsApp) ಮೆಸೆಂಜರ್ ಬಳಕೆ ಮಾಡುವವರ ಸಂಖ್ಯೆ ಗಗನಕ್ಕೇರಿದೆ. ಇದು ಮನುಷ್ಯನ ಜೀವನದ ಒಂದು ಭಾಗವಾಗಿ ಬಿಟ್ಟಿದೆ. ಹಿರಿಯರಿಂದ ಹಿಡಿದು ಕಿರಿಯರವರೆಗೂ ಸಹ ವಾಟ್ಸ್​ಆ್ಯಪ್​ ಬಳಕೆ ಮಾಡುತ್ತಿದ್ದಾರೆ. ಇಂಥ ಸಂದರ್ಭದಲ್ಲಿ ಕೆಲವೊಮ್ಮೆ ನಾವು ಇನ್ನೊಬ್ಬರನ್ನು ಅಥವಾ ನಮ್ಮನ್ನು ಮತ್ತೊಬ್ಬರು ವಾಟ್ಸ್​ಆ್ಯಪ್​​ನಲ್ಲಿ ಬ್ಲಾಕ್ (WhatsApp Block) ಮಾಡುವ ಸಂದರ್ಭಗಳು ಬರುತ್ತವೆ. ಹೀಗೆ ನಿಮ್ಮನ್ನು ಬೇರೆಯವರು ಬ್ಲಾಕ್ ಮಾಡಿದ್ದರೆ?, ಅದನ್ನು ಹೇಗೆ ತಿಳಿಯುವುದು ಎಂಬುದು ಅನೇಕರಿಗೆ ತಿಳಿದಿಲ್ಲ. (Who Blocked Me on Whatsapp) ಈ ಗೊಂದಲಕ್ಕೆ ಇಲ್ಲಿದೆ ಉತ್ತರ.

ವಾಟ್ಸ್​ಆ್ಯಪ್​​ ಚಾಟ್ ವಿಂಡೋದಲ್ಲಿ ನಮಗೆ ಬೇಕಾದವರ ಲಾಸ್ಟ್ ಸೀನ್ ಅಥವಾ ಆನ್​ಲೈನ್ ಸ್ಟೇಟಸ್ ಪರಿಶೀಲಿಸುವುದರ ಮೂಲಕ ಅವರು ನಮ್ಮನ್ನು ಬ್ಲಾಕ್ ಮಾಡಿದ್ದನ್ನು ತಿಳಿಯಬಹುದು. ಆದರೆ, ಅವರು ತಮ್ಮ ಲಾಸ್ಟ್ ಸೀನ್ ಆಯ್ಕೆಯನ್ನು ನಿಷ್ಕ್ರಿಯಗೊಳಿಸಿದ್ದರೆ ಈ ವಿಧಾನ ಕೆಲಸಕ್ಕೆ ಬರಲಾರದು. ಅಥವಾ ಒಂದೊಮ್ಮೆ ನಿಮ್ಮ ಗೆಳೆಯರೊಬ್ಬರು ನಿಮ್ಮನ್ನು ವಾಟ್ಸ್​ಆ್ಯಪ್​ನಲ್ಲಿ ಬ್ಲಾಕ್ ಮಾಡಿದ್ದರೆ ಅವರ ಪ್ರೊಫೈಲ್ ಫೋಟೋ ನಿಮಗೆ ಕಾಣಿಸುವುದು ನಿಂತು ಹೋಗುತ್ತದೆ. ಆದರೂ ಆ ಕಡೆಯವರು ನಿಮ್ಮನ್ನು ಬ್ಲಾಕ್ ಮಾಡಿದ ಕೆಲ ಸಂದರ್ಭಗಳಲ್ಲಿ ಅವರ ಪ್ರೊಫೈಲ್ ಫೋಟೋ ನಿಮಗೆ ಕಾಣಿಸುತ್ತಿರಬಹುದು. ಆದರೆ ಅವರು ತಮ್ಮ ಪ್ರೊಫೈಲ್ ಫೋಟೋ ಅಪ್ಡೇಟ್ ಮಾಡಿದಾಗ ಅದು ನಿಮಗೆ ಕಾಣಿಸಲಾರದು.

ಸುಲಭ ವಿಧಾನ ಎಂದರೆ ವಾಟ್ಸ್​ಆ್ಯಪ್​​ ಗ್ರೂಪ್ ಮಾಡಿ ಚೆಕ್ ಮಾಡುವುದು. ಇದಕ್ಕಾಗಿ ನೀವು ವಾಟ್ಸ್​ಆ್ಯಪ್​​ನಲ್ಲಿ ಹೊಸ ಗ್ರೂಪ್ ವೊಂದನ್ನು ತೆರೆಯಬೇಕು. ನಂತರ ಹೊಸ ಹೆಸರು ನಮೂದಿಸಿದ ಮೇಲೆ ನೆಕ್ಸ್ಟ್ ಆಯ್ಕೆ ಮೇಲೆ ಕ್ಲಿಕ್ ಮಾಡಿ. ಆಗ ನಿಮಗೆ ಹೊಸ ಸದಸ್ಯರನ್ನು ಸೇರಿಸುವ ಅವಕಾಶ ಇರುತ್ತದೆ. ಇಲ್ಲಿ ನಿಮ್ಮನ್ನು ಬ್ಲಾಕ್ ಮಾಡದವರ ಹೆಸರನ್ನು ಕಂಡುಹಿಡಿದುಕೊಳ್ಳಬಹುದು. ಪ್ಲಸ್ ಆಯ್ಕೆ ಮೇಲೆ ಕ್ಲಿಕ್ ಮಾಡುವ ಮೂಲಕ ಅವರ ನಂಬರನ್ನು ಸಹ ಸೇರಿಸಿಕೊಳ್ಖಬಹುದು. ಹಾಗೆ ನೀವು ಆಯ್ಕೆ ಮಾಡಿದ ವ್ಯಕ್ತಿ ಗ್ರೂಪ್ ಸದಸ್ಯನಾಗುತ್ತಾನೆ.  ನೀವು ತೆಗೆದುಕೊಂಡ ನಂಬರ್ ಮೇಲೆ ಮಾಡಿ ಕ್ರೀಯೆಟ್ ಅಂತ ಹೇಳಿದರೆ ಹೊಸ ಗ್ರೂಪ್ ಆರಂಭವಾಗುತ್ತದೆ. ಕ್ರೀಯೆಟ್ ಮಾಡಿದ ಗ್ರೂಪ್​ಗೆ ನೀವು ತೆಗೆದುಕೊಂಡ ಸೇರದಿದ್ದರೆ ಅವರು ನಿಮ್ಮನ್ನು ಬ್ಲಾಕ್ ಲಿಸ್ಟ್ ನಲ್ಲಿ ಇಟ್ಟಿದ್ದಾರೆ ಎಂದು ಗೊತ್ತಾಗುತ್ತದೆ.

ನಿಮ್ಮನ್ನು ಬ್ಲಾಕ್ ಮಾಡಿದವರಿಗೆ ನೀವು ವಾಟ್ಸ್​ಆ್ಯಪ್​​ ಕಾಲ್ ಮಾಡಲು ಪ್ರಯತ್ನಿಸಿದಾಗ ಕಾಲ್ ಕನೆಕ್ಟ್ ಆಗುವುದಿಲ್ಲ. ಕಾಲ್ ಕನೆಕ್ಟ್ ಆಗುತ್ತಿದೆ ಎಂದು ವಾಟ್ಸ್​ಆ್ಯಪ್​​ ತೋರಿಸಿದರೂ ನಿಜವಾಗಿ ಹಾಗೆ ಆಗುತ್ತಿರುವುದಿಲ್ಲ. ಆದರೆ, ಆ ಕಡೆಯವರು ತಮ್ಮ ಇಂಟರ್ನೆಟ್ ಸಂಪರ್ಕ ಬಂದ್ ಮಾಡಿದ್ದರೂ ಹೀಗೇ ಆಗುತ್ತದೆ. ವಾಟ್ಸ್​ಆ್ಯಪ್​​ನಲ್ಲಿ ನಾವು ಕಳುಹಿಸಿದ ಮೆಸೇಜ್ ಆ ಕಡೆಯವರಿಗೆ ತಲುಪಿದಾಗ ಎರಡು ಟಿಕ್ ಮಾರ್ಕ್ ಕಾಣಿಸುತ್ತವೆ. ಆದರೆ ಒಂದೊಮ್ಮೆ ಆ ಕಡೆಯವರು ನಿಮ್ಮನ್ನು ಬ್ಲಾಕ್ ಮಾಡಿದ್ದಲ್ಲಿ ಒಂದು ಟಿಕ್ ಮಾರ್ಕ್ ಮಾತ್ರ ಕಾಣಿಸುತ್ತದೆ.

Google Search: ಎಚ್ಚರ: ಗೂಗಲ್​ನಲ್ಲಿ ತಪ್ಪಿಯೂ ಇವುಗಳನ್ನು ಸರ್ಚ್​ ಮಾಡಬೇಡಿ

Moto E30: 48MP ಕ್ಯಾಮೆರಾ, 5000mAh ಬ್ಯಾಟರಿಯ ಹೊಸ ಮೋಟೋ E30 ಸ್ಮಾರ್ಟ್​ಫೋನ್ ಬಿಡುಗಡೆ: ಬೆಲೆ?

(WhatsApp Block Here is the WhatsApp tricks to find out if you have been blocked)

Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ