Kannada News Technology Poco X4 GT launched with 144Hz LCD display 64MP camera launched check price and specs
Poco X4 GT: ಮಾರುಕಟ್ಟೆಗೆ ಲಗ್ಗೆಯಟ್ಟಿದೆ ಪವರ್ಫುಲ್ ಸ್ಮಾರ್ಟ್‌ಫೋನ್: ಇದರ ವಿಶೇಷತೆ ಇಲ್ಲಿದೆ ನೋಡಿ
ಹೆಚ್ಚಾಗಿ ಬಜೆಟ್ ಬೆಲೆಗೆ ಹೊಸ ಸ್ಮಾರ್ಟ್ಫೋನ್ಗಳನ್ನು (Smartphone) ಅನಾವರಣ ಮಾಡುವ ಪೋಕೋ ಇದೀಗ ಮಧ್ಯಮ ಬೆಲೆಗೆ ಪೋಕೋ ಎಕ್ಸ್4 ಜಿಟಿ (POCO X4 GT) ಪವರ್ಫುಲ್ ಫೋನ್ ಬಿಡುಗಡೆ ಮಾಡಿದೆ.
ಭಾರತದಲ್ಲಿ ರಿಯಲ್ ಮಿ, ಸ್ಯಾಮ್ಸಂಗ್, ವಿವೋ, ಶವೋಮಿ (Xiaomi) ಕಂಪನಿ ಪ್ರತಿ ತಿಂಗಳು ಒಂದಲ್ಲಾ ಒಂದು ಹೊಸ ಸ್ಮಾರ್ಟ್ಫೋನ್ಗಳನ್ನು ಪರಿಚಯಿಸುತ್ತವೆ. ಇದೇ ಸಾಲಿಗೆ ಈಗ ಪೋಕೋ ಕೂಡ ಸೇರುತ್ತಿದೆ. ಹೆಚ್ಚಾಗಿ ಬಜೆಟ್ ಬೆಲೆಗೆ ಹೊಸ ಸ್ಮಾರ್ಟ್ಫೋನ್ಗಳನ್ನು (Smartphone) ಅನಾವರಣ ಮಾಡುವ ಪೋಕೋ ಇದೀಗ ಮಧ್ಯಮ ಬೆಲೆಗೆ ಪೋಕೋ ಎಕ್ಸ್4 ಜಿಟಿ (POCO X4 GT) ಪವರ್ಫುಲ್ ಫೋನ್ ಬಿಡುಗಡೆ ಮಾಡಿದೆ. ಈ ಫೋನ್ ಬಲಿಷ್ಠವಾದ ಮೀಡಿಯಾ ಟೆಕ್ Dimensity 8100 SoC ಪ್ರೊಸೆಸರ್ ಸಾಮರ್ಥ್ಯವನ್ನು ಒಳಗೊಂಡಿದ್ದು, ದೀರ್ಘ ಸಮಯ ಬಾಳಿಕೆ ಬರಯವ 5080mAh ಬ್ಯಾಟರಿ ಬ್ಯಾಕ್‌ಅಪ್ ಬೆಂಬಲ ಪಡೆದಿದೆ. ಹಾಗಾದ್ರೆ ಈ ಫೋನಿನ ಬೆಲೆ ಎಷ್ಟು?, ಏನು ವಿಶೇಷತೆ ಎಂಬುದನ್ನು ನೋಡೋಣ.
ಪೋಕೋ X4 GT ಸ್ಮಾರ್ಟ್‌ಫೋನ್ ಸದ್ಯಕ್ಕೆ ಯುರೋಪ್ ಮಾರುಕಟ್ಟೆಯಲ್ಲಿ ಅನಾವರಣಗೊಂಡಿದೆ. ಸದ್ಯದಲ್ಲೇ ಇದು ಭಾರತಕ್ಕೂ ಕಾಲಿಡಲಿದೆ. ಇದರ 8GB + 128 GB ವೇರಿಯಂಟ್ ಬೆಲೆಯು EUR 379 (ಭಾರತದಲ್ಲಿ ಅಂದಾಜು 31,200ರೂ. ಆಗಿದೆ).
ಇನ್ನು 8GB RAM ಹಾಗೂ 256 GB ಸ್ಟೋರೇಜ್ ವೇರಿಯಂಟ್ ಬೆಲೆಯು EUR 429 (ಭಾರತದಲ್ಲಿ ಅಂದಾಜು 35,300 ರೂ. ಆಗಿದೆ). ಇನ್ನು ಈ ಫೋನ್ ನೀಲಿ, ಕಪ್ಪು ಮತ್ತು ಬೆಳ್ಳಿ ಬಣ್ಣದ ಆಯ್ಕೆಗಳ ಆಯ್ಕೆ ಹೊಂದಿದೆ.
ಈ ಫೋನ್ ಅಧಿಕ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ 6.6 ಇಂಚಿನ ಪೂರ್ಣ HD+ LCD ಡಿಸ್‌ಪ್ಲೇಯನ್ನು ಹೊಂದಿದೆ. ಇದರೊಂದಿಗೆ ಇದು 144 Hz ಸ್ಕ್ರೀನ್ ರಿಫ್ರೆಶ್ ರೇಟ್ ಸಹ ಪಡೆದಿದೆ.
ಮೀಡಿಯಾ ಟೆಕ್ ಡೈಮೆನ್ಸಿಟಿ 8100 SoC ಪ್ರೊಸೆಸರ್ ಪವರ್‌ನಲ್ಲಿ ಕಾರ್ಯ ನಿರ್ವಹಿಸಲಿದೆ. ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್ 12 ಓಎಸ್ ಸಪೋರ್ಟ್ ಸಹ ಒಳಗೊಂಡಿದೆ.
ಇದನ್ನೂ ಓದಿ
Flipkart: ಫ್ಲಿಪ್ಕಾರ್ಟ್ನಲ್ಲಿ ಶುರುವಾಗಿದೆ ಎಲೆಕ್ಟ್ರಾನಿಕ್ ಸೇಲ್: ಸ್ಮಾರ್ಟ್ಫೋನ್ಗಳಿಗೆ ಬಂಪರ್ ಡಿಸ್ಕೌಂಟ್
Budget Laptop: ಕೇವಲ 20,000 ರೂ. ಒಳಗೆ ಸಿಗುತ್ತಿರುವ ಬೆಸ್ಟ್ ಲ್ಯಾಪ್ಟಾಪ್ಗಳು ಇಲ್ಲಿದೆ ನೋಡಿ
Google Pixel 6a: ಭಾರತದಲ್ಲಿ ಗೂಗಲ್ ಪಿಕ್ಸೆಲ್ 6a ಬಿಡುಗಡೆಗೆ ದಿನಾಂಕ ನಿಗದಿ: ಬೆಲೆ ಎಷ್ಟು?
Galaxy F13: 6000mAh ಬ್ಯಾಟರಿ, 50MP ಕ್ಯಾಮೆರಾ: ಕೇವಲ 11,499 ರೂ. ಗೆ ಸ್ಯಾಮ್ಸಂಗ್ ಗ್ಯಾಲಕ್ಸಿ F13 ಬಿಡುಗಡೆ
ಪೊಕೊ X4 GT ಸ್ಮಾರ್ಟ್‌ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 64 ಮೆಗಾ ಪಿಕ್ಸೆಲ್ ಸೆನ್ಸಾರ್, ಸೆಕೆಂಡರಿ ಕ್ಯಾಮೆರಾವು 8 ಮೆಗಾ ಪಿಕ್ಸಲ್ ವೈಡ್ ಆಂಗಲ್ ಲೆನ್ಸ್ ಹೊಂದಿದೆ.
ಇನ್ನು ಈ ಫೋನಿನ ಮೂರನೇ ಕ್ಯಾಮೆರಾ 2 ಮೆಗಾ ಪಿಕ್ಸೆಲ್ ಮ್ಯಾಕ್ರೋ ಸೆನ್ಸಾರ್ ಅನ್ನು ಒಳಗೊಂಡಿದೆ. ಇದಲ್ಲದೆ 16 ಮೆಗಾ ಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಕೂಡ ಹೊಂದಿದೆ.
ಪೊಕೊ X4 GT ಸ್ಮಾರ್ಟ್‌ಫೋನ್ 5080mAh ಬ್ಯಾಟರಿ ಬ್ಯಾಕ್‌ಅಪ್ ಹೊಂದಿದೆ. ಇದಕ್ಕೆ ಪೂರಕವಾಗಿ 67W ಸಾಮರ್ಥ್ಯದ ಫಾಸ್ಟ್ ಚಾರ್ಜಿಂಗ್‌ಗೆ ಸಪೋರ್ಟ್ ಅನ್ನು ಒಳಗೊಂಡಿದೆ.