Budget Laptop: ಕೇವಲ 20,000 ರೂ. ಒಳಗೆ ಸಿಗುತ್ತಿರುವ ಬೆಸ್ಟ್​ ಲ್ಯಾಪ್​ಟಾಪ್​ಗಳು ಇಲ್ಲಿದೆ ನೋಡಿ

20,000 ರೂ. ಕ್ಕಿಂತ ಕಡಿಮೆ ಬೆಲೆಯಲ್ಲಿ (Laptops under 20000) ಲಭ್ಯವಾಗುವ ಬೆಸ್ಟ್ ಲ್ಯಾಪ್​​ಟಾಪ್‌ಗಳು ಯಾವುವು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ.

Budget Laptop: ಕೇವಲ 20,000 ರೂ. ಒಳಗೆ ಸಿಗುತ್ತಿರುವ ಬೆಸ್ಟ್​ ಲ್ಯಾಪ್​ಟಾಪ್​ಗಳು ಇಲ್ಲಿದೆ ನೋಡಿ
Laptops
Follow us
| Updated By: Vinay Bhat

Updated on: Jun 24, 2022 | 12:08 PM

ಲ್ಯಾಪ್​​ಟಾಪ್ (Laptop) ಖರೀದಿಸುವುದಕ್ಕೆ ಮೊದಲೆಲ್ಲ ಬಳಕೆದಾರರಿಗೆ ಬೆಲೆಯೇ ಒಂದು ದೊಡ್ಡ ವಿಚಾರವಾಗಿರುತ್ತಿತ್ತು. ಆದರೆ ಕಾಲಕ್ರಮೇಣ ಟ್ರೆಂಡ್ ಬದಲಾಗುತ್ತಾ ಬಂದಿದ್ದು ಈಗಂತು ಅತ್ಯಂತ ಕಡಿಮೆ ಬೆಲೆಯಲ್ಲಿ ಲ್ಯಾಪ್​​ಟಾಪ್​​ಗಳನ್ನು ಖರೀದಿಸಬಹುದು. ಅಲ್ಲದೆ ಕೊರೊನಾ (Corona) ಕಾರಣದಿಂದ ಹೆಚ್ಚಿನವರು ಮನೆಯಿಂದ ಕೆಲಸ ಮಾಡುತ್ತಿರುವುದರಿಂದ ಲ್ಯಾಪ್​ಟಾಪ್​ ತಯಾರಿಕೆ ಮಾಡುವ ಕಂಪನಿಗಳು ಕೂಡ ಜನರಿಗೆ ಕೈಗೆಟಕುವ ಬೆಲೆಗಳಲ್ಲಿ ತಮ್ಮ ಬ್ರಾಂಡೆಡ್ ಲ್ಯಾಪ್​ಟಾಪ್​​ಗಳನ್ನು ಮಾರಾಟ ಮಾಡುತ್ತಿವೆ. ಹಾಗಾದ್ರೆ 20,000 ರೂ. ಕ್ಕಿಂತ ಕಡಿಮೆ ಬೆಲೆಯಲ್ಲಿ (Laptops under 20000) ಲಭ್ಯವಾಗುವ ಬೆಸ್ಟ್ ಲ್ಯಾಪ್​​ಟಾಪ್‌ಗಳು ಯಾವುವು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ.

ಐಬಾಲ್ ಕಂಪನಿಯ ಕಾಮ್‌ಬುಕ್ ಪೆಂಟಿಯಮ್ ಕ್ವಾಡ್ ಕೋರ್ ಲ್ಯಾಪ್‌ಟಾಪ್ ಕಡಿಮೆ ಬೆಲೆಗೆ ಲಭ್ಯವಿದೆ. ಲ್ಯಾಪ್‌ಟಾಪ್ 4 ಜಿಬಿ RAM ಹೊಂದಿದೆ. 14 ಇಂಚಿನ ಪರದೆಯನ್ನು ಸಹ ನೀಡಲಾಗಿದೆ. ಕಂಪನಿಯು ಅದರೊಂದಿಗೆ ವಿಂಡೋಸ್ 10 ಅನ್ನು ನೀಡುತ್ತಿದೆ. ಇದು 14 ಇಂಚಿನ ಫುಲ್ ಎಚ್ಡಿ ಎಲ್ಇಡಿ ಬ್ಯಾಕ್ಲಿಟ್ ಐಪಿಎಸ್ ಡಿಸ್ಪ್ಲೇ ಹೊಂದಿದೆ. ಈ ಲ್ಯಾಪ್‌ಟಾಪ್ ಅನ್ನು ಫ್ಲಿಪ್‌ಕಾರ್ಟ್‌ನಲ್ಲಿ ಕೇವಲ 13,990 ರೂಗಳಿಗೆ ಲಭ್ಯವಿದೆ.

ಅವಿತಾ ಕಾಸ್ಮೊಸ್ 2 ಇನ್ 1 ಲ್ಯಾಪ್‌ಟಾಪ್ ಫ್ಲಿಪ್‌ಕಾರ್ಟ್‌ನಲ್ಲಿ ಲಭ್ಯವಿದೆ. ಇದು 4 ಜಿಬಿ RAM ಮತ್ತು 64 ಜಿಬಿ ಸ್ಟೋರೇಜ್ ಅನ್ನು ಹೊಂದಿದೆ. ಇದು 11.6 ಇಂಚಿನ ಪರದೆಯನ್ನು ಹೊಂದಿದೆ. ಈ ಲ್ಯಾಪ್‌ಟಾಪ್‌ನ ವಿಶೇಷವೆಂದರೆ ಅದರ ಕೀಬೋರ್ಡ್ ಅನ್ನು ಬೇರ್ಪಡಿಸಬಹುದು. ನಂತರ ನೀವು ಅದನ್ನು ಟ್ಯಾಬ್ಲೆಟ್ ಆಗಿ ಸಹ ಬಳಸಬಹುದು. ಇದರ ಬೆಲೆ 17,990 ರೂ.

ಇದನ್ನೂ ಓದಿ
Image
Realme 9 Pro Plus 5G: ರಿಯಲ್ ಮಿ 9 ಪ್ರೋ ಪ್ಲಸ್ ಖರೀದಿಗೆ ಕ್ಯೂ ನಿಂತ ಜನರು: ಕೇವಲ 7,000 ರೂ. ಗೆ ನಿಮ್ಮದಾಗಿಸಿ
Image
POCO F4: ಕ್ಯಾಮೆರಾ ಪ್ರಿಯರೇ ಗಮನಿಸಿ: ಜಾಗತೀಕ ಮಾರುಕಟ್ಟೆಯಲ್ಲಿ ಇಂದು ರಿಲೀಸ್ ಆಗಲಿದೆ ಪೋಕೋ F4
Image
OnePlus Nord 2T: ವಿದೇಶದಲ್ಲಿ ಧೂಳೆಬ್ಬಿಸಿದ ಈ ಸ್ಮಾರ್ಟ್​​ಫೋನ್ ಜುಲೈ 1ಕ್ಕೆ ಭಾರತದಲ್ಲಿ ರಿಲೀಸ್
Image
TCS: ಈ ವರ್ಷದ ಕೊನೆಯಲ್ಲಿ ಭಾರತದಲ್ಲಿ ಸಿಗಲಿದೆ ಚಿಪ್‌ ಆಧಾರಿತ ಇ- ಪಾಸ್​ಪೋರ್ಟ್

Google Pixel 6a: ಭಾರತದಲ್ಲಿ ಗೂಗಲ್‌ ಪಿಕ್ಸೆಲ್‌ 6a ಬಿಡುಗಡೆಗೆ ದಿನಾಂಕ ನಿಗದಿ: ಬೆಲೆ ಎಷ್ಟು?

ಲೆನೊವಾ ಐಡಿಯಾಪ್ಯಾಡ್ 330ಎಪಿಯು ಡುಯಲ್ ಕೋರ್ ಎ6 ಲ್ಯಾಪ್​ಟಾಪ್ ಬೆಲೆ ಕೇವಲ 19,990 ರೂ. ಆಗಿದೆ. ಇದು 15.6 ಇಂಚಿನ HD LED ಬ್ಯಾಕ್ ಲಿಟ್ ಆಂಟಿ-ಗ್ಲೇರ್ TN ಡಿಸ್ಪ್ಲೇ ಹೊಂದಿದೆ. 4 GB, 1 TB HDD, DOS, APU ಡುಯಲ್ ಕೋರ್ ಎ6, 2 ಸೆಲ್ ಜೊತೆಗೆ 45 W AC ಅಡಾಪ್ಟರ್​ನೊಂದಿಗೆ ಬರುತ್ತದೆ.

ಅಂತೆಯೆ ಲೆನೊವಾ ಐಡಿಯಾ ಪ್ಯಾಡ್ 130 ಎಪಿಯು ಡುಯಲ್ ಕೋರ್ ಎ6 ಲ್ಯಾಪ್​ಟಾಪ್ 18,490 ರೂ. ಗೆ ನಿಮ್ಮದಾಗಿಸಬಹುದು. ಇದು 15.6 ಇಂಚಿನ HD LED ಬ್ಯಾಕ್ ಲಿಟ್ ಆಂಟಿ-ಗ್ಲೇರ್ TN ಡಿಸ್ಪ್ಲೇ ಹೊಂದಿದೆ. 2.6 GHz ಜೊತೆಗೆ ಟರ್ಬೋ ಬೂಸ್ಟ್ 3 GHz ವರೆಗೆ, APU ಡುಯಲ್ ಕೋರ್ ಎ6,  4 GB RAM, 1 TB HDD, DOS, 2 ಸೆಲ್ ಜೊತೆಗೆ 45 W AC ಅಡಾಪ್ಟರ್ ಬ್ಯಾಟರಿಯೊಂದಿಗೆ ಬರುತ್ತದೆ.

ನೀವು ಅಮೆಜಾನ್‌ನಲ್ಲಿ ಆರ್‌ಡಿಪಿ ಥಿನ್‌ಬುಕ್ 1010 ಅನ್ನು ಖರೀದಿಸಬಹುದು. ಇದು 4 ಜಿಬಿ RAM ಮತ್ತು 64 ಜಿಬಿ ಇಂಟರ್ನಲ್ ಸ್ಟೋರೇಜ್ ಅನ್ನು ಹೊಂದಿದೆ. ವಿಶೇಷವೆಂದರೆ ಅದರಲ್ಲಿ 1 ಟಿಬಿ ಸ್ಟೋರೇಜ್ ಕೂಡಾ ಲಭ್ಯವಿದೆ. ಇದು 14.1 ಇಂಚಿನ ಎಚ್‌ಡಿ ಪರದೆಯನ್ನು ಹೊಂದಿದೆ. ಈ ಲ್ಯಾಪ್‌ಟಾಪ್‌ನಲ್ಲಿ ವಿಂಡೋಸ್ 10 ಪ್ರೊ ಆಪರೇಟಿಂಗ್ ಸಿಸ್ಟಮ್ ಅನ್ನು ನೀಡಲಾಗಿದೆ. ಇದು ವೆಬ್‌ಕ್ಯಾಮ್, ಮೈಕ್ ಮತ್ತು ಟೈಪ್ ಸಿಯನ್ನು  ಬೆಂಬಲಿಸುತ್ತದೆ.  ಇದನ್ನು 19,621 ರೂಗಳಿಗೆ ಖರೀದಿಸಬಹುದು.

Galaxy F13: 6000mAh ಬ್ಯಾಟರಿ, 50MP ಕ್ಯಾಮೆರಾ: ಕೇವಲ 11,499 ರೂ. ಗೆ ಸ್ಯಾಮ್​ಸಂಗ್ ಗ್ಯಾಲಕ್ಸಿ F13 ಬಿಡುಗಡೆ

ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ