ಮಾರ್ಚ್ 13 ಕ್ಕೆ ಪೋಕೋ X6 ನಿಯೋ ಲಾಂಚ್; ಫ್ಲಿಪ್‌ಕಾರ್ಟ್​ನಲ್ಲಿ ರಿವೀಲ್ ಆಯಿತು ದೊಡ್ಡ ಮಾಹಿತಿ

|

Updated on: Mar 10, 2024 | 12:27 PM

Poco X6 Neo Launched: ಪೋಕೋ X6 ನಿಯೋ ಭಾರತದಲ್ಲಿ ಮಾರ್ಚ್ 13 ರಂದು ಮಧ್ಯಾಹ್ನ 12 ಗಂಟೆಗೆ ಬಿಡುಗಡೆಯಾಗಲಿದೆ ಎಂದು ಪೋಕೋ ಇಂಡಿಯಾ X (ಹಿಂದೆ Twitter) ನಲ್ಲಿ ಪೋಸ್ಟ್ ಮೂಲಕ ದೃಢಪಡಿಸಿದೆ. ಈ ಫೋನ್ ಫ್ಲಿಪ್‌ಕಾರ್ಟ್ ಮೂಲಕ ಲಭ್ಯವಿರುತ್ತದೆ.

ಮಾರ್ಚ್ 13 ಕ್ಕೆ ಪೋಕೋ X6 ನಿಯೋ ಲಾಂಚ್; ಫ್ಲಿಪ್‌ಕಾರ್ಟ್​ನಲ್ಲಿ ರಿವೀಲ್ ಆಯಿತು ದೊಡ್ಡ ಮಾಹಿತಿ
Poco X6 Neo
Follow us on

ಪ್ರಸಿದ್ಧ ಪೋಕೋ ಸಂಸ್ಥೆ ಭಾರತದಲ್ಲಿ ಶೀಘ್ರದಲ್ಲೇ ತನ್ನ ಹೊಸ ಪೋಕೋ X6 ನಿಯೋ (Poco X6 Neo) ಸ್ಮಾರ್ಟ್​ಫೋನ್ ಬಿಡುಗಡೆ ಮಾಡುವುದಾಗಿ ದೃಢಪಡಿಸಿದೆ. ಕಂಪನಿಯು ಲಾಂಚ್ ದಿನಾಂಕದ ಜೊತೆಗೆ ಫೋನ್‌ನ ವಿನ್ಯಾಸವನ್ನು ಅಧಿಕೃತವಾಗಿ ತಿಳಿಸಿದೆ. ಕಳೆದ ಕೆಲವು ವಾರಗಳಿಂದ ಒಂದೊಂದೆ ಮಾಹಿತಿ ಈ ಫೋಣಿನ ಕುರಿತು ಸೋರಿಕೆ ಆಗುತ್ತಿದೆ. X6 ನಿಯೋ ಸ್ಮಾರ್ಟ್​ಫೋನ್ ರೆಡ್ಮಿ ನೋಟ್ 13R ಪ್ರೊನ ರೀಬ್ರಾಂಡೆಡ್ ರೂಪಾಂತರವಾಗಿದೆ ಎಂದು ಹೇಳಲಾಗುತ್ತಿದೆ. ಈ ಫೋನ್ ಫ್ಲಿಪ್​ಕಾರ್ಟ್​ನಲ್ಲಿ ಸೇಲ್ ಕಾಣಲಿದೆ ಎಂಬ ಮಾಹಿತಿ ಬಹಿರಂಗವಾಗಿದೆ.

ಪೋಕೋ X6 ನಿಯೋ ಭಾರತದಲ್ಲಿ ಮಾರ್ಚ್ 13 ರಂದು ಮಧ್ಯಾಹ್ನ 12 ಗಂಟೆಗೆ ಬಿಡುಗಡೆಯಾಗಲಿದೆ ಎಂದು ಪೋಕೋ ಇಂಡಿಯಾ X (ಹಿಂದೆ Twitter) ನಲ್ಲಿ ಪೋಸ್ಟ್ ಮೂಲಕ ದೃಢಪಡಿಸಿದೆ. ಈ ಫೋನ್ ಫ್ಲಿಪ್‌ಕಾರ್ಟ್ ಮೂಲಕ ಲಭ್ಯವಿರುತ್ತದೆ ಎಂದು ಖಚಿತಪಡಿಸಲಾಗಿದೆ. ಇ-ಕಾಮರ್ಸ್ ವೆಬ್‌ಸೈಟ್‌ನಲ್ಲಿರುವ ಮೈಕ್ರೋಸೈಟ್ ಮುಂಬರುವ ಹ್ಯಾಂಡ್‌ಸೆಟ್ ನೀಲಿ ಬಣ್ಣದ ಆಯ್ಕೆಯಲ್ಲಿ ಇರುತ್ತದೆ ಎಂದು ಹೇಳಿದೆ.

ಡಿಸ್ನಿ ಹಾಟ್‌ಸ್ಟಾರ್​ನಲ್ಲಿ ವಿಡಿಯೋ ನೋಡುವಾಗ ಜಾಹೀರಾತು ಬಾರದಂತೆ ಮಾಡುವುದು ಹೇಗೆ?: ಇಲ್ಲಿದೆ ಟ್ರಿಕ್

ಇದು ಆಯತಾಕಾರದ ಹಿಂಬದಿಯ ಕ್ಯಾಮೆರಾ ಮಾಡ್ಯೂಲ್‌ನೊಂದಿಗೆ ಕಂಡುಬರುತ್ತದೆ, ಎಲ್ಇಡಿ ಫ್ಲ್ಯಾಷ್ ಜೊತೆಗೆ ಎರಡು ಕ್ಯಾಮೆರಾ ಸಂವೇದಕಗಳನ್ನು ಹೊಂದಿದೆ. ಪೋಕೋ X6 ನಿಯೋ ಫೋನ್ ರೆಡ್ಮಿ ನೋಟ್ 13R ಪ್ರೊ ನಂತೆಯೇ ವೈಶಿಷ್ಟ್ಯಗಳು ಮತ್ತು ವಿಶೇಷಣಗಳನ್ನು ಹೊಂದಿರಬಹುದು ಎನ್ನಲಾಗಿದೆ. ಈ ಸ್ಮಾರ್ಟ್‌ಫೋನ್ ಅನ್ನು ಇತ್ತೀಚೆಗೆ ಚೀನಾದಲ್ಲಿ ಬಿಡುಗಡೆ ಮಾಡಲಾಗಿತ್ತು. ಭಾರತದಲ್ಲಿ ಇದು ಪೋಕೋ X6 ನಿಯೋ ಹೆಸರಿನಲ್ಲಿ ಲಾಂಚ್ ಆಗಲಿದೆಯಂತೆ.

ಈ ಫೋನ್​ನಲ್ಲಿ ಹಿಂಬದಿಯ ಕ್ಯಾಮೆರಾ 108-ಮೆಗಾಪಿಕ್ಸೆಲ್​ನಿಂದ ಕೂಡಿದೆ. ಇದು ಪ್ರಾಥಮಿಕ ಹಿಂಭಾಗದ ಸಂವೇದಕವಾಗಿದೆ. ಈ ಹ್ಯಾಂಡ್‌ಸೆಟ್ 93.3 ಪ್ರತಿಶತ ಸ್ಕ್ರೀನ್-ಟು-ಬಾಡಿ ಅನುಪಾತದೊಂದಿಗೆ “ಬೆಜೆಲ್-ಲೆಸ್ ಡಿಸೈನ್” ಅನ್ನು ಹೊಂದಿದೆ ಎಂದು ಹೇಳಲಾಗಿದೆ. ಟೀಸರ್ ಚಿತ್ರಗಳಲ್ಲಿ, ಫ್ಲಾಟ್ ಸೆಂಟರ್ಡ್ ಹೋಲ್-ಪಂಚ್ ಡಿಸ್ಪ್ಲೇಯೊಂದಿಗೆ ಮಾದರಿಯನ್ನು ಕಾಣಬಹುದು.

ಐಕ್ಯೂ Z9 5G ಬೆಲೆ ಬಹಿರಂಗ: 20 ಸಾವಿರಕ್ಕಿಂತ ಕಡಿಮೆಗೆ ಸ್ಟ್ರಾಂಗ್ ಫೀಚರ್​ಗಳ ಫೋನ್

ಪೋಕೋ X6 ನಿಯೋ ಭಾರತದಲ್ಲಿ 8GB RAM ಮತ್ತು ಎರಡು ಸ್ಟೋರೇಜ್ ಆಯ್ಕೆಗಳೊಂದಿಗೆ ಬಿಡುಗಡೆ ಆಗುವ ನಿರೀಕ್ಷೆಯಿದೆ. ಇದರ ಬೆಲೆಯೂ 18,000 ರೂ. ಗಿಂತ ಕಡಿಮೆ ಇದೆ ಎನ್ನಲಾಗಿದೆ. ಹಿಂದಿನ ಸೋರಿಕೆಗಳು ಈ ಫೋನ್ OLED ಡಿಸ್ಪ್ಲೇ ಮತ್ತು 33W ವೈರ್ಡ್ ಫಾಸ್ಟ್ ಚಾರ್ಜಿಂಗ್ ಬೆಂಬಲದೊಂದಿಗೆ 5,000mAh ಬ್ಯಾಟರಿ ಇದೆ ಎಂದು ಹೇಳಿತ್ತು.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ