Tech Tips: ನೀವು ವಾಟ್ಸ್​ಆ್ಯಪ್ ವೆಬ್ ಉಪಯೋಗಿಸುತ್ತಿದ್ದರೆ ಈ ಟ್ರಿಕ್ ತಿಳಿಯಲೇ ಬೇಕು

WhatsApp Tricks: ಕಳೆದ ವರ್ಷದಂತೆ ಈ ವರ್ಷ 2024 ರಲ್ಲಿ ಕೂಡ ವಾಟ್ಸ್​ಆ್ಯಪ್ ಉತ್ತಮ ಆಯ್ಕೆಗಳನ್ನು ಪರಿಚಯಿಸುತ್ತಿದೆ. ಕೇವಲ ಮೊಬೈಲ್​ನಲ್ಲಿ ಮಾತ್ರವಲ್ಲದೆ ಕಂಪ್ಯೂಟರ್​ನಲ್ಲೂ ಬಳಸುತ್ತಿದ್ದಾರೆ. ಇದಕ್ಕಾಗಿ ವಾಟ್ಸ್​ಆ್ಯಪ್ ವೆಬ್ ಎಂಬ ಅಪ್ಲಿಕೇಶನ್ ಇದೆ. ಹೆಚ್ಚಿನವರಿಗೆ ವಾಟ್ಸ್​ಆ್ಯಪ್ ಅನ್ನು ವೆಬ್​ನಲ್ಲಿ ಬಳಕೆ ಮಾಡುವಾಗ ಅದರಲ್ಲಿರುವ ಶಾರ್ಟ್​ಕಟ್ ಕೀ ಬಗ್ಗೆ ತಿಳಿದಿರುವುದಿಲ್ಲ. ಅದನ್ನು ತಿಳಿಸಿಕೊಡುವ ಪ್ರಯತ್ನ ಇದಾಗಿದೆ.

Tech Tips: ನೀವು ವಾಟ್ಸ್​ಆ್ಯಪ್ ವೆಬ್ ಉಪಯೋಗಿಸುತ್ತಿದ್ದರೆ ಈ ಟ್ರಿಕ್ ತಿಳಿಯಲೇ ಬೇಕು
WhatsApp web
Follow us
|

Updated on: Mar 11, 2024 | 6:55 AM

ಮೆಟಾ (Meta) ಮಾಲೀಕತ್ವದ ಪ್ರಸಿದ್ಧ ಮೆಸೇಜಿಂಗ್ ಅಪ್ಲಿಕೇಷನ್ ವಾಟ್ಸ್​ಆ್ಯಪ್ ಇಂದು ಎಷ್ಟು ಜನಪ್ರಿಯತೆ ಪಡೆದುಕೊಂಡಿದೆ ಎಂದರೆ ಬೆಳಗ್ಗೆ ಬೆಡ್​ನಿಂದ ಎಂದ ತಕ್ಷಣ ಇದರಲ್ಲಿ ಏನು ಬಂದಿದೆ ಎಂದು ನೋಡಿಯೋ ಮುಂದಿನ ಕೆಲಸಕ್ಕೆ ಹೋಗುವುದು. ಅಷ್ಟರ ಮಟ್ಟಿಗೆ ವಾಟ್ಸ್​ಆ್ಯಪ್ ಬಳಕೆದಾರರ ನೆಚ್ಚಿನ ಅಪ್ಲಿಕೇಶನ್ ಆಗಿ ಬಿಟ್ಟಿದೆ. ಇದಕ್ಕೆ ತಕ್ಕಂತೆ ಸಂಸ್ಥೆ ಕೂಡ ಬಳಕೆದಾರರಿಗೆ ಅನುಕೂಲಕರವಾಗುವಂತೆ ಹೊಸ ಹೊಸ ಫೀಚರ್​ಗಳುಳ್ಳ ಅಪ್ಡೇಟ್ ಅನ್ನು ನೀಡುತ್ತಿದೆ. ಕಳೆದ ವರ್ಷದಂತೆ ಈ ವರ್ಷ 2024 ರಲ್ಲಿ ಕೂಡ ಉತ್ತಮ ಆಯ್ಕೆಗಳನ್ನು ಪರಿಚಯಿಸುತ್ತಿದೆ. ಇದಕ್ಕಾಗಿಯೆ​ ವಾಟ್ಸ್​ಆ್ಯಪ್ ವಿಶ್ವದಲ್ಲಿ ಅತಿ ಹೆಚ್ಚು ಸಕ್ರಿಯ ಬಳಕೆದಾರರನ್ನು ಹೊಂದಿರುವ ಏಕೈಕ ಮೆಸೇಜಿಂಗ್ ಆ್ಯಪ್ ಆಗಿದೆ.

ವಾಟ್ಸ್​ಆ್ಯಪ್​ ಅನ್ನು ಕೇವಲ ಮೊಬೈಲ್​ನಲ್ಲಿ ಮಾತ್ರವಲ್ಲದೆ ಕಂಪ್ಯೂಟರ್​ನಲ್ಲೂ ಬಳಸಬಹುದಾಗಿದೆ. ಇದಕ್ಕಾಗಿ ವಾಟ್ಸ್​ಆ್ಯಪ್ ವೆಬ್ ಎಂಬ ಅಪ್ಲಿಕೇಶನ್ ಇದೆ. ದಿನನಿತ್ಯ ಲ್ಯಾಪ್​ಟಾಪ್ ಅಥವಾ ಡೆಸ್ಕ್​ಟಾಪ್​ನಲ್ಲಿ ಕೆಲಸ ಮಾಡುವ ಅನೇಕರು ವಾಟ್ಸ್​ಆ್ಯಪ್ ವೆಬ್ ಅನ್ನು ಉಪಯೋಗಿಸಿಯೇ ಇರುತ್ತಾರೆ. ಆದರೆ, ಹೆಚ್ಚಿನವರಿಗೆ ವಾಟ್ಸ್​ಆ್ಯಪ್ ಅನ್ನು ವೆಬ್​ನಲ್ಲಿ ಬಳಕೆ ಮಾಡುವಾಗ ಅದರಲ್ಲಿರುವ ಶಾರ್ಟ್​ಕಟ್ ಕೀ ಬಗ್ಗೆ ತಿಳಿದಿರುವುದಿಲ್ಲ. ಅದನ್ನು ತಿಳಿಸಿಕೊಡುವ ಪ್ರಯತ್ನ ಇದಾಗಿದೆ.

20,000 ರೂ. ಒಳಗೆ ಕಣ್ಮನ ಸೆಳೆಯುವ ಫೀಚರ್ಸ್: ಈ ಸ್ಮಾರ್ಟ್‌ಫೋನ್‌ಗಳನ್ನು ಮಿಸ್ ಮಾಡ್ಬೇಡಿ

ವಾಟ್ಸ್ಆ್ಯಪ್ ವೆಬ್ ಆವೃತ್ತಿಯಲ್ಲಿ ಹಲವು ಕಾರ್ಯಗಳನ್ನು ನಿರ್ವಹಿಸಬಹುದಾಗಿದೆ. ಪ್ರಮುಖವಾಗಿ ವಾಟ್ಸ್​​ಆ್ಯಪ್ ವೆಬ್​ನಲ್ಲಿ ಶಾರ್ಟ್‌ಕಟ್‌ ಕೀ ಬಳಸಿ ಉಪಯೋಗಿಸುವುದು ತುಂಬಾನೆ ಸುಲಭ. ಈ ಶಾರ್ಟ್‌ಕಟ್‌ಗಳನ್ನು ಬಳಸುವ ಮೂಲಕ ಬಳಕೆದಾರರು ತಮ್ಮ ಫಾಂಟ್ ಸೈಜ್‌ ಅನ್ನು ಎಡಿಟ್‌ ಮಾಡಬಹುದು. ಸ್ಟಿಕ್ಕರ್‌ಗಳು, ಜಿಐಎಫ್‌ಗಳು ಮತ್ತು ಎಮೋಜಿ ಸೇರದಂತೆ ಅನೇಕ ಪ್ರಯೋಜನ ವೇಗವಾಗಿ ಪಡೆಯಬಹುದು.

ವಾಟ್ಸ್ಆ್ಯಪ್ ವೆಬ್​ನಲ್ಲಿ ಬಳಸಬಹುದಾದ ಶಾರ್ಟ್ ಕಟ್ ಕೀಗಳು:

ಪದ ಅಥವಾ ಪದಗುಚ್ಚವನ್ನು ಸರ್ಚ್ ಮಾಡಲು Ctrl + F ಒತ್ತಿರಿ

ಹೊಸ ಚಾಟ್ ಪ್ರಾರಂಭಿಸಲು, Ctrl + N ಒತ್ತಿರಿ

ಶಿಫ್ಟ್ + ಟ್ಯಾಬ್ ಬಟನ್ ಎಮೋಜಿಗಳನ್ನು ಫೋಕಸ್ ಮಾಡಲಿದೆ.

ಹೊಸ ಗುಂಪನ್ನು ಪ್ರಾರಂಭಿಸಲು, Ctrl + Shift + N ಒತ್ತಿರಿ

ಮುಂದಿನ ಚಾಟ್​​ಗೆ ಹೋಗಲು, Ctrl + Shift + ಒತ್ತಿರಿ

ಚಾಟ್ ಅನ್ನು ಆರ್ಕೈವ್ ಮಾಡಲು, Ctrl + E ಒತ್ತಿರಿ

ನಿಮ್ಮ ಹಿಂದಿನ ಚಾಟ್​ಗೆ ಹೋಗಲು, Ctrl + Shift + ಅನ್ನು ಒತ್ತಿರಿ

ಚಾಟ್ ಅನ್ನು ಮ್ಯೂಟ್ ಮಾಡಲು, Ctrl + Shift + M

ಮಾರ್ಚ್ 13 ಕ್ಕೆ ಪೋಕೋ X6 ನಿಯೋ ಲಾಂಚ್; ಫ್ಲಿಪ್‌ಕಾರ್ಟ್​ನಲ್ಲಿ ರಿವೀಲ್ ಆಯಿತು ದೊಡ್ಡ ಮಾಹಿತಿ

ಓದುವ ಸ್ಥಿತಿಯನ್ನು ಬದಲಾಯಿಸಲು, Ctrl + Shift + U

ಪ್ರೊಫೈಲ್ ತೆರೆಯಲು, Ctrl + P

ಫಾಂಟ್ ಗಾತ್ರವನ್ನು ಹೆಚ್ಚಿಸಲು, Ctrl + = ಒತ್ತಿರಿ

ಚಾಟ್ ಅಳಿಸಲು, Ctrl + Del

ಫಾಂಟ್ ಗಾತ್ರವನ್ನು ಕಡಿಮೆ ಮಾಡಲು, Ctrl + ಒತ್ತಿರಿ

ಪಠ್ಯವನ್ನು ದಪ್ಪವಾಗಿಸಲು * text * ಬಳಸಿ

ಪಠ್ಯವನ್ನು ಇಟಲೈಸ್ ಮಾಡಲು _text_ ಬಳಸಿ

ಡೀಫಾಲ್ಟ್ ಗಾತ್ರಕ್ಕೆ ಹಿಂತಿರುಗಲು, Ctrl + 0

ಪಠ್ಯವನ್ನು ಹೊಡೆಯಲು ~ text ~

ಎಮೋಜಿಯನ್ನು ಸೇರಿಸಲು, ಕೊಲೊನ್ ಒತ್ತಿರಿ.

ಮೊನೊಸ್ಪೇಸ್ಡ್ ಫಾಂಟ್​ಗೆ ‘‘ ‘text’ ‘‘ ಬಳಸಿ

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಪ್ರದೀಪ್ ಈಶ್ವರ್ ಫೋಟೋ ಹಾಕಿಲ್ಲ ಎಂದು ಗಲಾಟೆ
ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಪ್ರದೀಪ್ ಈಶ್ವರ್ ಫೋಟೋ ಹಾಕಿಲ್ಲ ಎಂದು ಗಲಾಟೆ
ಗಾಂಧಿ ಜಯಂತಿ: ಪೊರಕೆ ಹಿಡಿದ ಸಚಿವ ಪ್ರಲ್ಹಾದ್ ಜೋಶಿ, ವಿಜಯೇಂದ್ರ!
ಗಾಂಧಿ ಜಯಂತಿ: ಪೊರಕೆ ಹಿಡಿದ ಸಚಿವ ಪ್ರಲ್ಹಾದ್ ಜೋಶಿ, ವಿಜಯೇಂದ್ರ!
ಸಿಎಂ ಸಿದ್ದರಾಮಯ್ಯಗೆ ಗಾಂಧಿ ಟೋಪಿ ಹಾಕಿದ ಡಿಕೆ ಶಿವಕುಮಾರ್​
ಸಿಎಂ ಸಿದ್ದರಾಮಯ್ಯಗೆ ಗಾಂಧಿ ಟೋಪಿ ಹಾಕಿದ ಡಿಕೆ ಶಿವಕುಮಾರ್​
ಗಾಂಧಿ ಜಂಯತಿ 2024: ವಿಧಾನಸೌಧದವರೆಗೂ ನಡೆದುಕೊಂಡೇ ಹೋದ ಸಿಎಂ, ಡಿಸಿಎಂ
ಗಾಂಧಿ ಜಂಯತಿ 2024: ವಿಧಾನಸೌಧದವರೆಗೂ ನಡೆದುಕೊಂಡೇ ಹೋದ ಸಿಎಂ, ಡಿಸಿಎಂ
ಇದು ಪ್ರಾರಂಭ ಅಷ್ಟೆ, ಪಿಕ್ಚರ್ ಇನ್ನೂ ಬಾಕಿ ಇದೆ ಎಂದ ಜಗದೀಶ್
ಇದು ಪ್ರಾರಂಭ ಅಷ್ಟೆ, ಪಿಕ್ಚರ್ ಇನ್ನೂ ಬಾಕಿ ಇದೆ ಎಂದ ಜಗದೀಶ್
ಗಾಂಧಿ ಜಯಂತಿ: ಮಕ್ಕಳೊಂದಿಗೆ ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡ ಮೋದಿ
ಗಾಂಧಿ ಜಯಂತಿ: ಮಕ್ಕಳೊಂದಿಗೆ ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡ ಮೋದಿ
ಬೆಂಗಳೂರು ಹನುಮಂತನಗರದಲ್ಲಿ ಲಾಂಗ್, ಬ್ಯಾಟ್ ಹಿಡಿದು ಪುಡಿ ರೌಡಿಗಳ ಅಟ್ಟಹಾಸ
ಬೆಂಗಳೂರು ಹನುಮಂತನಗರದಲ್ಲಿ ಲಾಂಗ್, ಬ್ಯಾಟ್ ಹಿಡಿದು ಪುಡಿ ರೌಡಿಗಳ ಅಟ್ಟಹಾಸ
ರಾಜ್​ಘಾಟ್​ನಲ್ಲಿ ರಾಷ್ಟ್ರಪಿತನಿಗೆ ಪುಷ್ಟನಮನ ಸಲ್ಲಿಸಿದ ಪ್ರಧಾನಿ ಮೋದಿ
ರಾಜ್​ಘಾಟ್​ನಲ್ಲಿ ರಾಷ್ಟ್ರಪಿತನಿಗೆ ಪುಷ್ಟನಮನ ಸಲ್ಲಿಸಿದ ಪ್ರಧಾನಿ ಮೋದಿ
ಪ್ರಯಾಣಿಕರ ಗಮನಕ್ಕೆ: ಬೆಳಗಾವಿ-ಮೀರಜ್ ನಡುವೆ ವಿಶೇಷ ರೈಲು ಸೇವೆ
ಪ್ರಯಾಣಿಕರ ಗಮನಕ್ಕೆ: ಬೆಳಗಾವಿ-ಮೀರಜ್ ನಡುವೆ ವಿಶೇಷ ರೈಲು ಸೇವೆ
ಕೇತುಗ್ರಸ್ತ ಸೂರ್ಯಗ್ರಹಣ ಪ್ರಭಾವ ಹೇಗಿರುತ್ತೆ ತಿಳಿಯಿರಿ
ಕೇತುಗ್ರಸ್ತ ಸೂರ್ಯಗ್ರಹಣ ಪ್ರಭಾವ ಹೇಗಿರುತ್ತೆ ತಿಳಿಯಿರಿ