20,000 ರೂ. ಒಳಗೆ ಕಣ್ಮನ ಸೆಳೆಯುವ ಫೀಚರ್ಸ್: ಈ ಸ್ಮಾರ್ಟ್‌ಫೋನ್‌ಗಳನ್ನು ಮಿಸ್ ಮಾಡ್ಬೇಡಿ
Best Smartphones Under Rs. 20000: ಇಂದು ಸುಧಾರಿತ ವೈಶಿಷ್ಟ್ಯಗಳೊಂದಿಗೆ ಅನೇಕ ಹೊಸ ಫೋನ್‌ಗಳು ಮಾರುಕಟ್ಟೆಗೆ ಲಗ್ಗೆಯಿಡುತ್ತಿವೆ. ನೀವು ಹೊಸ ಫೋನ್ ಖರೀದಿಸಲು ಯೋಜಿಸುತ್ತಿದ್ದೀರಾ?. ನಿಮ್ಮ ಬಜೆಟ್ ರೂ. 20,000 ದ ಒಳಗೆ ಇದೆಯೇ?. ಹಾಗಾದರೆ ನಿಮ್ಮ ಬಜೆಟ್‌ನಲ್ಲಿ ಲಭ್ಯವಿರುವ ಕೆಲವು ಅತ್ಯುತ್ತಮ ಫೋನ್‌ಗಳನ್ನು ಇಲ್ಲಿದೆ ನೀಡಲಾಗಿದೆ.
ಇಂದು ಭಾರತ ಸೇರಿದಂತೆ ವಿಶ್ವದಲ್ಲಿ ಸ್ಮಾರ್ಟ್ಫೋನ್ಗಳ (Smartphones) ಬಳಕೆ ಹೆಚ್ಚಾಗಿದೆ. ಒಬ್ಬರಲ್ಲಿ ಎರಡರಿಂದ ಮೂರು ಫೋನುಗಳು ಇರುತ್ತವೆ. ಇದಕ್ಕೆ ತಕ್ಕಂತೆ ದಿನಕ್ಕೊಂದು ಹೊಸ ಸ್ಮಾರ್ಟ್ಫೋನ್ಗಳು ಮಾರುಕಟ್ಟೆಗೆ ಬರುತ್ತಿವೆ. ಇವುಗಳ ಬೆಲೆ ಕೂಡ ದುಬಾರಿ ಏನಿಲ್ಲ. ಕೈಗೆಟಕುವ ಬೆಲೆಗೆ ಫೋನುಗಳು ರಿಲೀಸ್ ಆಗುತ್ತವೆ. ಸುಧಾರಿತ ವೈಶಿಷ್ಟ್ಯಗಳೊಂದಿಗೆ ಹೊಸ ಫೋನ್‌ಗಳನ್ನು ನವೀಕರಿಸಲಾಗುತ್ತಿದೆ. ನೀವು ಹೊಸ ಫೋನ್ ಖರೀದಿಸಲು ಯೋಜಿಸುತ್ತಿದ್ದೀರಾ?. ನಿಮ್ಮ ಬಜೆಟ್ ರೂ. 20,000 ದ ಒಳಗೆ ಇದೆಯೇ?. ಹಾಗಾದರೆ ನಿಮ್ಮ ಬಜೆಟ್‌ನಲ್ಲಿ ಲಭ್ಯವಿರುವ ಕೆಲವು ಅತ್ಯುತ್ತಮ ಫೋನ್‌ಗಳನ್ನು ಇಲ್ಲಿದೆ ನೀಡಲಾಗಿದೆ, ಗಮನಿಸಿ.
ರೂ. 20,000 ಅಡಿಯಲ್ಲಿ ಲಭ್ಯವಿರುವ ಅತ್ಯುತ್ತಮ ಫೋನ್ ಮೋಟೋ G84 5G ಆಗಿದೆ. ಈ ಫೋನ್ 6.55-ಇಂಚಿನ ಪೂರ್ಣ HD ಪ್ಲಸ್ AMOLED ಡಿಸ್ಪ್ಲೇ ಹೊಂದಿದೆ. ಈ ಫೋನ್ ಕ್ವಾಲ್ಕಂ ಸ್ನಾಪ್ಡ್ರಾಗನ್ 695 ಚಿಪ್‌ಸೆಟ್‌ನಿಂದ ಚಾಲಿತವಾಗಿದೆ. 12 GB RAM ಮತ್ತು 256 GB ಸ್ಟೋರೇಜ್ ರೂಪಾಂತರದ ಮೋಟೋ G84 5G ಸ್ಮಾರ್ಟ್‌ಫೋನ್ ಬೆಲೆ ರೂ. 17,999 ಆಗಿದೆ.
ಮಾರ್ಚ್ 13 ಕ್ಕೆ ಪೋಕೋ X6 ನಿಯೋ ಲಾಂಚ್; ಫ್ಲಿಪ್ಕಾರ್ಟ್ನಲ್ಲಿ ರಿವೀಲ್ ಆಯಿತು ದೊಡ್ಡ ಮಾಹಿತಿ
ಪ್ರೀಮಿಯಂ ಸ್ಮಾರ್ಟ್‌ಫೋನ್ ಬ್ರ್ಯಾಂಡ್ ಆಗಿ ಮಾರುಕಟ್ಟೆಗೆ ಪ್ರವೇಶ ಪಡೆದ ಪ್ರಸಿದ್ಧ ಒನ್ಪ್ಲಸ್ ಕಂಪನಿ ಈಗ ಬಜೆಟ್ ಫೋನ್‌ಗಳನ್ನು ಕೂಡ ಬಿಡುಗಡೆ ಮಾಡುತ್ತಿವೆ. ಇದರಲ್ಲಿ ಒನ್ಪ್ಲಸ್ ನಾರ್ಟ್ CE3 ಲೈಟ್ 5G ಕೂಡ ಒಂದು. ಈ ಫೋನ್ 120Hz ರಿಫ್ರೆಶ್ ದರದೊಂದಿಗೆ LCD ಡಿಸ್ಪ್ಲೇಯನ್ನು ಹೊಂದಿದೆ. ಈ ಫೋನ್‌ನ ಪ್ರೊಸೆಸರ್‌ಗಾಗಿ ಕ್ವಾಲ್ಕಂ ಸ್ನಾಪ್ಡ್ರಾಗನ್ 695 5G ಚಿಪ್‌ಸೆಟ್ ಅನ್ನು ಒದಗಿಸಲಾಗಿದೆ. 108 MP ಹಿಂಬದಿಯ ಕ್ಯಾಮೆರಾ ಮತ್ತು 16 MP ಮುಂಭಾಗದ ಕ್ಯಾಮೆರಾ ಇದೆ. ಈ ಫೋನ್ ರೂ. 17,999ಕ್ಕೆ ಲಭ್ಯವಿದೆ.
ಮತ್ತೊಂದು ಕಡಿಮೆ ಬಜೆಟ್ ಫೋನ್ ರಿಯಲ್ ಮಿ ನಾರ್ಜೊ 60 5G ಆಗಿದೆ. ಈ ಫೋನ್ 6.43-ಇಂಚಿನ ಪೂರ್ಣ HD AMOLED ಡಿಸ್ಪ್ಲೇ ಹೊಂದಿದೆ. ಮೀಡಿಯಾಟೆಕ್ ಡೈಮನ್ಸಿಟಿ 6020 ಚಿಪ್‌ಸೆಟ್ ಈ ಫೋನ್‌ನಲ್ಲಿ ನೀಡಲಾಗಿದೆ. ಇದರ 8GB RAM + 256GB ಸ್ಟೋರೇಜ್ ರೂಪಾಂತರದ ಬೆಲೆ 16,999 ರೂ. ಆಗಿದೆ.
ರೆಡ್ಮಿ ನೋಟ್ 13 5G ಸ್ಮಾರ್ಟ್‌ಫೋನ್ 8GB RAM, 256GB ಸ್ಟೋರೇಜ್ ರೂಪಾಂತರದ ಬೆಲೆ ರೂ. 17,999. ಇದು 6.67-ಇಂಚಿನ ಪೂರ್ಣ HD ಪ್ಲಸ್ OLED ಡಿಸ್ಪ್ಲೇಯನ್ನು ಹೊಂದಿದೆ. 108 MP ಹಿಂಬದಿಯ ಕ್ಯಾಮೆರಾ ಮತ್ತು 16 MP ಮುಂಭಾಗದ ಕ್ಯಾಮೆರಾದೊಂದಿಗೆ ಬರುತ್ತದೆ. 33 ವ್ಯಾಟ್‌ಗಳ ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ 5000mAh ಬ್ಯಾಟರಿಯನ್ನು ಒದಗಿಸಲಾಗಿದೆ.
ಡಿಸ್ನಿ ಹಾಟ್ಸ್ಟಾರ್ನಲ್ಲಿ ವಿಡಿಯೋ ನೋಡುವಾಗ ಜಾಹೀರಾತು ಬಾರದಂತೆ ಮಾಡುವುದು ಹೇಗೆ?: ಇಲ್ಲಿದೆ ಟ್ರಿಕ್
ಕಡಿಮೆ ಬಜೆಟ್‌ನಲ್ಲಿ ಲಭ್ಯವಿರುವ ಮತ್ತೊಂದು ಅತ್ಯುತ್ತಮ ಫೋನ್ ಸ್ಯಾಮ್‌ಸಂಗ್ ಗ್ಯಾಲಕ್ಸಿ A15 5G ಆಗಿದೆ. ಈ ಫೋನ್ 6.5 ಇಂಚಿನ HD Plus ಡಿಸ್ಪ್ಲೇಯನ್ನು ಹೊಂದಿದೆ. ಮೀಡಿಯಾಟೆಕ್ ಡೈಮೆನ್ಸಿಟಿ 6100 ಚಿಪ್‌ಸೆಟ್ ಪ್ರೊಸೆಸರ್‌ನಿಂದ ನಡೆಸಲ್ಪಡುತ್ತಿದೆ. ಇದು 50 MP ಹಿಂಬದಿಯ ಕ್ಯಾಮೆರಾ ಮತ್ತು 13 MP ಮುಂಭಾಗದ ಕ್ಯಾಮೆರಾವನ್ನು ಹೊಂದಿದೆ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ