ಮಾರ್ಚ್ 13 ಕ್ಕೆ ಪೋಕೋ X6 ನಿಯೋ ಲಾಂಚ್; ಫ್ಲಿಪ್ಕಾರ್ಟ್ನಲ್ಲಿ ರಿವೀಲ್ ಆಯಿತು ದೊಡ್ಡ ಮಾಹಿತಿ
Poco X6 Neo Launched: ಪೋಕೋ X6 ನಿಯೋ ಭಾರತದಲ್ಲಿ ಮಾರ್ಚ್ 13 ರಂದು ಮಧ್ಯಾಹ್ನ 12 ಗಂಟೆಗೆ ಬಿಡುಗಡೆಯಾಗಲಿದೆ ಎಂದು ಪೋಕೋ ಇಂಡಿಯಾ X (ಹಿಂದೆ Twitter) ನಲ್ಲಿ ಪೋಸ್ಟ್ ಮೂಲಕ ದೃಢಪಡಿಸಿದೆ. ಈ ಫೋನ್ ಫ್ಲಿಪ್ಕಾರ್ಟ್ ಮೂಲಕ ಲಭ್ಯವಿರುತ್ತದೆ.
ಪ್ರಸಿದ್ಧ ಪೋಕೋ ಸಂಸ್ಥೆ ಭಾರತದಲ್ಲಿ ಶೀಘ್ರದಲ್ಲೇ ತನ್ನ ಹೊಸ ಪೋಕೋ X6 ನಿಯೋ (Poco X6 Neo) ಸ್ಮಾರ್ಟ್ಫೋನ್ ಬಿಡುಗಡೆ ಮಾಡುವುದಾಗಿ ದೃಢಪಡಿಸಿದೆ. ಕಂಪನಿಯು ಲಾಂಚ್ ದಿನಾಂಕದ ಜೊತೆಗೆ ಫೋನ್ನ ವಿನ್ಯಾಸವನ್ನು ಅಧಿಕೃತವಾಗಿ ತಿಳಿಸಿದೆ. ಕಳೆದ ಕೆಲವು ವಾರಗಳಿಂದ ಒಂದೊಂದೆ ಮಾಹಿತಿ ಈ ಫೋಣಿನ ಕುರಿತು ಸೋರಿಕೆ ಆಗುತ್ತಿದೆ. X6 ನಿಯೋ ಸ್ಮಾರ್ಟ್ಫೋನ್ ರೆಡ್ಮಿ ನೋಟ್ 13R ಪ್ರೊನ ರೀಬ್ರಾಂಡೆಡ್ ರೂಪಾಂತರವಾಗಿದೆ ಎಂದು ಹೇಳಲಾಗುತ್ತಿದೆ. ಈ ಫೋನ್ ಫ್ಲಿಪ್ಕಾರ್ಟ್ನಲ್ಲಿ ಸೇಲ್ ಕಾಣಲಿದೆ ಎಂಬ ಮಾಹಿತಿ ಬಹಿರಂಗವಾಗಿದೆ.
ಪೋಕೋ X6 ನಿಯೋ ಭಾರತದಲ್ಲಿ ಮಾರ್ಚ್ 13 ರಂದು ಮಧ್ಯಾಹ್ನ 12 ಗಂಟೆಗೆ ಬಿಡುಗಡೆಯಾಗಲಿದೆ ಎಂದು ಪೋಕೋ ಇಂಡಿಯಾ X (ಹಿಂದೆ Twitter) ನಲ್ಲಿ ಪೋಸ್ಟ್ ಮೂಲಕ ದೃಢಪಡಿಸಿದೆ. ಈ ಫೋನ್ ಫ್ಲಿಪ್ಕಾರ್ಟ್ ಮೂಲಕ ಲಭ್ಯವಿರುತ್ತದೆ ಎಂದು ಖಚಿತಪಡಿಸಲಾಗಿದೆ. ಇ-ಕಾಮರ್ಸ್ ವೆಬ್ಸೈಟ್ನಲ್ಲಿರುವ ಮೈಕ್ರೋಸೈಟ್ ಮುಂಬರುವ ಹ್ಯಾಂಡ್ಸೆಟ್ ನೀಲಿ ಬಣ್ಣದ ಆಯ್ಕೆಯಲ್ಲಿ ಇರುತ್ತದೆ ಎಂದು ಹೇಳಿದೆ.
ಡಿಸ್ನಿ ಹಾಟ್ಸ್ಟಾರ್ನಲ್ಲಿ ವಿಡಿಯೋ ನೋಡುವಾಗ ಜಾಹೀರಾತು ಬಾರದಂತೆ ಮಾಡುವುದು ಹೇಗೆ?: ಇಲ್ಲಿದೆ ಟ್ರಿಕ್
ಇದು ಆಯತಾಕಾರದ ಹಿಂಬದಿಯ ಕ್ಯಾಮೆರಾ ಮಾಡ್ಯೂಲ್ನೊಂದಿಗೆ ಕಂಡುಬರುತ್ತದೆ, ಎಲ್ಇಡಿ ಫ್ಲ್ಯಾಷ್ ಜೊತೆಗೆ ಎರಡು ಕ್ಯಾಮೆರಾ ಸಂವೇದಕಗಳನ್ನು ಹೊಂದಿದೆ. ಪೋಕೋ X6 ನಿಯೋ ಫೋನ್ ರೆಡ್ಮಿ ನೋಟ್ 13R ಪ್ರೊ ನಂತೆಯೇ ವೈಶಿಷ್ಟ್ಯಗಳು ಮತ್ತು ವಿಶೇಷಣಗಳನ್ನು ಹೊಂದಿರಬಹುದು ಎನ್ನಲಾಗಿದೆ. ಈ ಸ್ಮಾರ್ಟ್ಫೋನ್ ಅನ್ನು ಇತ್ತೀಚೆಗೆ ಚೀನಾದಲ್ಲಿ ಬಿಡುಗಡೆ ಮಾಡಲಾಗಿತ್ತು. ಭಾರತದಲ್ಲಿ ಇದು ಪೋಕೋ X6 ನಿಯೋ ಹೆಸರಿನಲ್ಲಿ ಲಾಂಚ್ ಆಗಲಿದೆಯಂತೆ.
ಈ ಫೋನ್ನಲ್ಲಿ ಹಿಂಬದಿಯ ಕ್ಯಾಮೆರಾ 108-ಮೆಗಾಪಿಕ್ಸೆಲ್ನಿಂದ ಕೂಡಿದೆ. ಇದು ಪ್ರಾಥಮಿಕ ಹಿಂಭಾಗದ ಸಂವೇದಕವಾಗಿದೆ. ಈ ಹ್ಯಾಂಡ್ಸೆಟ್ 93.3 ಪ್ರತಿಶತ ಸ್ಕ್ರೀನ್-ಟು-ಬಾಡಿ ಅನುಪಾತದೊಂದಿಗೆ “ಬೆಜೆಲ್-ಲೆಸ್ ಡಿಸೈನ್” ಅನ್ನು ಹೊಂದಿದೆ ಎಂದು ಹೇಳಲಾಗಿದೆ. ಟೀಸರ್ ಚಿತ್ರಗಳಲ್ಲಿ, ಫ್ಲಾಟ್ ಸೆಂಟರ್ಡ್ ಹೋಲ್-ಪಂಚ್ ಡಿಸ್ಪ್ಲೇಯೊಂದಿಗೆ ಮಾದರಿಯನ್ನು ಕಾಣಬಹುದು.
ಐಕ್ಯೂ Z9 5G ಬೆಲೆ ಬಹಿರಂಗ: 20 ಸಾವಿರಕ್ಕಿಂತ ಕಡಿಮೆಗೆ ಸ್ಟ್ರಾಂಗ್ ಫೀಚರ್ಗಳ ಫೋನ್
ಪೋಕೋ X6 ನಿಯೋ ಭಾರತದಲ್ಲಿ 8GB RAM ಮತ್ತು ಎರಡು ಸ್ಟೋರೇಜ್ ಆಯ್ಕೆಗಳೊಂದಿಗೆ ಬಿಡುಗಡೆ ಆಗುವ ನಿರೀಕ್ಷೆಯಿದೆ. ಇದರ ಬೆಲೆಯೂ 18,000 ರೂ. ಗಿಂತ ಕಡಿಮೆ ಇದೆ ಎನ್ನಲಾಗಿದೆ. ಹಿಂದಿನ ಸೋರಿಕೆಗಳು ಈ ಫೋನ್ OLED ಡಿಸ್ಪ್ಲೇ ಮತ್ತು 33W ವೈರ್ಡ್ ಫಾಸ್ಟ್ ಚಾರ್ಜಿಂಗ್ ಬೆಂಬಲದೊಂದಿಗೆ 5,000mAh ಬ್ಯಾಟರಿ ಇದೆ ಎಂದು ಹೇಳಿತ್ತು.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ