ಚೀನಾ ಮೂಲದ ಪ್ರಸಿದ್ಧ ಪೋಕೋ ಸಂಸ್ಥೆ ಇತ್ತೀಚೆಗಷ್ಟೆ ಭಾರತದಲ್ಲಿ ತನ್ನ ಪೋಕೋ X6 ಸರಣಿಯನ್ನು ಬಿಡುಗಡೆ ಮಾಡಿದೆ. ಇದು ಪೋಕೋ X6 ಮತ್ತು ಪೋಕೋ X6 ಪ್ರೊ ಎಂಬ ಎರಡು ಫೋನ್‌ಗಳನ್ನು ಒಳಗೊಂಡಿದೆ. ಮಧ್ಯಮ ಬೆಲೆಯ ಪೋಕೋ X6 ಫೋನ್ ಅದ್ಭುತವಾಗಿದ್ದು, ಅತ್ಯುತ್ತ, ಪ್ರೊಸೆಸರ್, ಬ್ಯಾಟರಿ, ಕ್ಯಾಮೆರಾ ಆಯ್ಕೆಯನ್ನು ನೀಡಲಾಗಿದೆ. ಜೊತೆಗೆ 5ಜಿ ಸಂಪರ್ಕ ಕೂಡ ಪಡೆದುಕೊಂಡಿದೆ. ಸುಮಾರು ಒಂದು ತಿಂಗಳ ಕಾಲ ಪೋಕೋ X6 ಫೋನನ್ನು ಬಳಸಿದ ನಂತರ, ಇದೀಗ ಈ ಫೋನಿನ ವಿಮರ್ಶೆ ಇಲ್ಲಿ ನೀಡಲಾಗಿದೆ.
5G ಸರಣಿಯ ಈ ಪೋಕೋ ಫೋನ್ ಅನ್ನು ನೀವು ಭಾರತದಲ್ಲಿ ರೂ. 21,999 ಕ್ಕೆ ಖರೀದಿಸಬಹುದು. ಹ್ಯಾಂಡ್ಸೆಟ್ನ ಕಾರ್ಯಕ್ಷಮತೆ ಉತ್ತಮವಾಗಿದೆ, ಡಿಸ್ಪ್ಲೇ ಕೂಡ ಅತ್ಯುತ್ತಮವಾಗಿದೆ. ಅಲ್ಲದೆ, ಈ ಫೋನ್ ಅತ್ಯಂತ ವೇಗವಾಗಿ ಸಂಪೂರ್ಣವಾಗಿ ಚಾರ್ಜ್ ಆಗುತ್ತದೆ. ಕ್ಯಾಮೆರಾದ ಬಗ್ಗೆ ಮಾತನಾಡುತ್ತಾ, ಪೋಕೋ X6 5G ಯಲ್ಲಿ ಕಡಿಮೆ ಬೆಳಕಿನಲ್ಲಿಯೂ ಉತ್ತಮ ಫೋಟೋಗಳನ್ನು ಕ್ಲಿಕ್ ಮಾಡಬಹುದು.
ಪೋಕೋ X6 5G ಆಕರ್ಷಕ ವಿನ್ಯಾಸದೊಂದಿಗೆ ಬರುತ್ತದೆ, ಇದರ ಹಿಂಭಾಗದಲ್ಲಿ ಕ್ಯಾಮೆರಾ ಸಂವೇದಕಕ್ಕಾಗಿ ದೊಡ್ಡ ಆಯತಾಕಾರದ ಕಟೌಟ್ ನೀಡಲಾಗಿದೆ. ಇದು ಫೋನಿಗೆ ಹೊಸ ಲುಕ್ ನೀಡುತ್ತದೆ. ಫ್ಲಾಟ್ ರಿಯರ್ ಬಾಡಿಯೊಂದಿಗೆ ಬರುವ ಈ ಫೋನ್ ಉತ್ತಮ ಗ್ರಿಪ್ ಅನ್ನು ಕೂಡ ಹೊಂದಿದೆ. ಈ ಫೋನ್‌ನೊಂದಿಗೆ ಕೇಸ್ ಕವರ್ ನೀಡಲಾಗಿದ್ದು, ಇದು ಧೂಳು ಮತ್ತು ಫಿಂಗರ್‌ಪ್ರಿಂಟ್‌ಗಳಿಂದ ಆಗುವ ಕಲೆಯಿಂದ ರಕ್ಷಿಸುತ್ತದೆ. ಹಿಂಭಾಗದ ವಿನ್ಯಾಸವನ್ನು ಕಪ್ಪು ಚರ್ಮದಲ್ಲಿ ನೀಡಲಾಗಿದೆ.
ಡೇಟಾ ಜೊತೆಗೆ OTT ಕೂಡ ಫ್ರೀ: ರಿಲಯನ್ಸ್ ಜಿಯೋದ ಈ ಪ್ಲಾನ್ಗೆ ಭರ್ಜರಿ ಡಿಮ್ಯಾಂಡ್
ಈ ಸ್ಮಾರ್ಟ್‌ಫೋನ್ ದಪ್ಪ 7.9mm ಮತ್ತು ಇದು 6.67 ಇಂಚಿನ ಡಿಸ್ಪ್ಲೇ ಹೊಂದಿದೆ. ಫೋನ್‌ನ ದಪ್ಪದ ಜೊತೆಗೆ ಅದರ ಗಾತ್ರವು ಕೆಲವರಿಗೆ ಸ್ವಲ್ಪ ಭಾರ ಎನಿಸಬಹುದು. ಇದರಲ್ಲಿ 1.5k ಫ್ಲೋ AMOLED ಕ್ರಿಸ್ಟಲ್ ರೇಸ್ ಪ್ಯಾನೆಲ್ ಅನ್ನು 446 ppi ಪಿಕ್ಸೆಲ್‌ಗಳು ಮತ್ತು 1800 nits ನ ಗರಿಷ್ಠ ಹೊಳಪನ್ನು ನೀಡಿದೆ. ಇದಲ್ಲದೆ, ಈ ಫೋನ್ 120Hz ನ ರಿಫ್ರೆಶ್ ದರ ಮತ್ತು 240Hz ಟಚ್ ಮಾದರಿ ದರವನ್ನು ಹೊಂದಿದೆ. ಇದು ಗೇಮಿಂಗ್ ಸಮಯದಲ್ಲಿ ಬೇರಯದೇ ಅನುಭವ ನೀಡುತ್ತದೆ. ಅಲ್ಲದೆ, ಡಿಸ್ಪ್ಲೇಯ ರಕ್ಷಣೆಗಾಗಿ, ಗೊರಿಲ್ಲಾ ಗ್ಲಾಸ್ ವಿಕ್ಟಸ್ ರಕ್ಷಣೆಯನ್ನು ಒದಗಿಸಲಾಗಿದೆ.
ಪೋಕೋ ಫೋನ್ f/2.45 ಅಪರ್ಚರ್ ಜೊತೆಗೆ 16MP ಫ್ರಂಟ್ ಕ್ಯಾಮೆರಾವನ್ನು ಹೊಂದಿದೆ. ಹಿಂಭಾಗದಲ್ಲಿ OIS ಜೊತೆಗೆ 64-ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ, 8-ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್-ಆಂಗಲ್ ಕ್ಯಾಮೆರಾ ಮತ್ತು 2-ಮೆಗಾಪಿಕ್ಸೆಲ್ ಮ್ಯಾಕ್ರೋ ಕ್ಯಾಮೆರಾವನ್ನು ನೀಡಲಾಗಿದೆ. ವಿಶೇಷವಾಗಿ ರಿಫ್ಯಾಕ್ಟರೇಟೆಡ್ ಕ್ಯಾಮೆರಾ ಆರ್ಕಿಟೆಕ್ಚರ್ ಮತ್ತು ಇಂಟಿಗ್ರೇಟೆಡ್ ಹಾರ್ಡ್‌ವೇರ್ ಮತ್ತು ಸಾಫ್ಟ್‌ವೇರ್ ಅಳವಡಿಸಲಾಗಿದ್ದು, ಇದು ಇಮೇಜ್ ಎಂಜಿನ್ ಅನ್ನು ಸುಧಾರಿಸುತ್ತದೆ ಎಂದು ಬ್ರ್ಯಾಂಡ್ ಹೇಳಿಕೊಂಡಿದೆ. ಫೋನ್‌ನ ಸೆಲ್ಫಿ ಕ್ಯಾಮೆರಾದಲ್ಲಿ ಫೋಟೋ ತೆಗೆದಾಗ ಮುಖದ ವಿವರಗಳು ಉತ್ತಮವಾಗಿ ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದೆ. ಹಾಗೆಯೆ ಪೋರ್ಟ್ರೇಟ್ ಫೋಟೋ ಕೂಡ ಉತ್ತಮವಾಗಿ ಬರುತ್ತದೆ.
ಅಚ್ಚರಿ: ಕೇವಲ 6,999 ರೂ. ಗೆ ಹೊಚ್ಚಹೊಸ ಬೊಂಬಾಟ್ ಫೋನ್ ಪರಿಚಯಿಸಿದ ಮೋಟೋ
ವಿಡಿಯೋ ರೆಕಾರ್ಡಿಂಗ್‌ಗೆ ಸಂಬಂಧಿಸಿದಂತೆ, 60fps/30fps ನಲ್ಲಿ 1080p ವಿಡಿಯೋವನ್ನು ಮತ್ತು 30fps ನಲ್ಲಿ 720p ವಿಡಿಯೋವನ್ನು ರೆಕಾರ್ಡ್ ಮಾಡಬಹುದು. 4K ರೆಸಲ್ಯೂಶನ್‌ನಲ್ಲಿಯೂ ಸಹ ವಿಡಿಯೋ ಗುಣಮಟ್ಟ ಉತ್ತಮವಾಗಿದೆ.
ಈ ಫೋನ್ ಸ್ನಾಪ್‌ಡ್ರಾಗನ್ 7s Gen 2 ಚಿಪ್‌ಸೆಟ್ ಅನ್ನು ಹೊಂದಿದೆ. ಇದು ಬಹುಕಾರ್ಯಕವನ್ನು ಸುಲಭವಾಗಿ ಪೂರ್ಣಗೊಳಿಸುತ್ತದೆ. ಈ ಫೋನ್ 12GB RAM ಮತ್ತು 512GB ಸ್ಟೋರೇಜ್ ಹೊಂದಿದೆ. ಫೋನ್‌ನ RAM ಅನ್ನು 12GB ಯಿಂದ 24GB ಗೆ ಹೆಚ್ಚಿಸಬಹುದು. ಫೋನ್‌ನ ಬಳಕೆಯ ಬಗ್ಗೆ ಮಾತನಾಡಿದರೆ, ಈ ಫೋನ್‌ನಲ್ಲಿ ಅಪ್ಲಿಕೇಶನ್ ಕ್ರ್ಯಾಶ್ ಅಥವಾ ಅಪ್ಲಿಕೇಶನ್ ಹ್ಯಾಂಗಿಂಗ್‌ನಂತಹ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ. ಫೋನ್‌ನ AnTuTu ಬೆಂಚ್‌ಮಾರ್ಕ್ ಪರೀಕ್ಷಾ ಸ್ಕೋರ್ 593702 ಮತ್ತು ಗೀಕ್‌ಬೆಂಚ್‌ನಲ್ಲಿ ಹ್ಯಾಂಡ್‌ಸೆಟ್ ಸಿಂಗಲ್ ಕೋರ್ ಸ್ಕೋರ್ 1025 ಮತ್ತು ಮಲ್ಟಿ ಕೋರ್ ಸ್ಕೋರ್ 2951 ಅನ್ನು ಹೊಂದಿದೆ.
ಗೇಮಿಂಗ್ ಆಡುವಾಗ ಕೂಡ ಯಾವುದೇ ತೊಂದರೆ ಉಂಟಾಗಿಲ್ಲ. ಬ್ಯಾಟಲ್‌ಗ್ರೌಂಡ್ಸ್ ಮೊಬೈಲ್ ಇಂಡಿಯಾ, NBA 2K, EA Sports FC ಮೊಬೈಲ್ ಫುಟ್‌ಬಾಲ್‌ನಂತಹ ಗ್ರಾಫಿಕ್ ಆಟಗಳನ್ನು ಸುಲಭವಾಗಿ ಆಡಬಹುದು. ಈ ಎಲ್ಲಾ ಗೇಮ್‌ಗಳನ್ನು ಆಡುವಾಗ ಯಾವುದೇ ಹ್ಯಾಂಗ್ ಅಥವಾ ಗ್ರಾಫಿಕ್ಸ್ ಸಮಸ್ಯೆ ಇರಲಿಲ್ಲ. 30 ನಿಮಿಷಗಳ ಕಾಲ ನಿರಂತರವಾಗಿ ಗೇಮ್ ಆಡಿದರೂ ಈ ಸ್ಮಾರ್ಟ್‌ಫೋನ್ ಬಿಸಿಯಾಗಿಲ್ಲ.
256GB ಸ್ಟೋರೇಜ್, 32MP ಸೆಲ್ಫಿ ಕ್ಯಾಮೆರಾ: ಇನ್ಫಿನಿಕ್ಸ್ನಿಂದ 9,999 ರೂ. ಗೆ ಬೆರಗುಗೊಳಿಸುವ ಫೋನ್
ಈ ಪೋಕೋ ಫೋನ್ 5100mAh ಬ್ಯಾಟರಿಯನ್ನು ಹೊಂದಿದ್ದು, 67W ವೇಗದ ಚಾರ್ಜರ್ ಅನ್ನು ಬೆಂಬಲಿಸುತ್ತದೆ. 0 ರಿಂದ 100 ಪ್ರತಿಶತದಷ್ಟು ಚಾರ್ಜ್ ಮಾಡಲು ಕೇವಲ 45 ನಿಮಿಷಗಳನ್ನು ತೆಗೆದುಕೊಳ್ಳುತ್ತದೆಯಷ್ಟೆ. ಇದರೊಂದಿಗೆ, ಈ ಫೋನ್‌ನ ಸೆಟ್ಟಿಂಗ್‌ಗಳಲ್ಲಿ ಸ್ಮಾರ್ಟ್ ಚಾರ್ಜಿಂಗ್ ವೈಶಿಷ್ಟ್ಯವನ್ನು ಸಹ ಒದಗಿಸಲಾಗಿದೆ, ಇದನ್ನು ಸಕ್ರಿಯಗೊಳಿಸಿದಾಗ ಬ್ಯಾಟರಿ ಬಳಕೆ ಕಡಿಮೆಯಾಗಲು ಪ್ರಾರಂಭಿಸುತ್ತದೆ.
ಪೋಕೋ X6 5G ಅತ್ಯುತ್ತಮ ಫೋನ್ ಆಗಿದ್ದು ಗೇಮಿಂಗ್, ವಿಡಿಯೋ ಮತ್ತು ಮಲ್ಟಿಟಾಸ್ಕಿಂಗ್ ವಿಷಯದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ. ಫೋನ್‌ನಲ್ಲಿ ನೀಡಲಾದ 67W ವೇಗದ ಚಾರ್ಜಿಂಗ್ ಬೆಂಬಲವು ಚೆನ್ನಾಗಿದೆ. ಫೋನ್ ವಿನ್ಯಾಸದ ಬಗ್ಗೆ ಮಾತನಾಡುತ್ತಾ, ನೀವು ಯಾವುದೇ ಕೇಸ್ ಕವರ್ ಬಳಸದಿದ್ದರೆ ತೊಂದರೆ ಉಂಟುಮಾಡಬಹುದು. ಈ ಫೋನ್ಗೆ ನಮ್ಮ ರೇಟಿಂಗ್ 3.5/5.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ