Moto G04: ಅಚ್ಚರಿ: ಕೇವಲ 6,999 ರೂ. ಗೆ ಹೊಚ್ಚಹೊಸ ಬೊಂಬಾಟ್ ಫೋನ್ ಪರಿಚಯಿಸಿದ ಮೋಟೋ

Moto G04 Launched in India: ಚೀನಾ ಮೂಲದ ಮೋಟೋರೊಲ ಕಂಪನಿ ಭಾರತದಲ್ಲಿ ಕೇವಲ 6,999 ರೂಪಾಯಿಗೆ ಹೊಸ ಮೋಟೋ G04 ಎಂಬ ಫೋನನ್ನು ಅನಾವರಣ ಮಾಡಿದೆ. ಈ ಫೋನ್ 10W ವೈರ್ಡ್ ಚಾರ್ಜಿಂಗ್‌ನೊಂದಿಗೆ 5,000mAh ಬ್ಯಾಟರಿಯಿಂದ ಬೆಂಬಲಿತವಾಗಿದೆ.

Moto G04: ಅಚ್ಚರಿ: ಕೇವಲ 6,999 ರೂ. ಗೆ ಹೊಚ್ಚಹೊಸ ಬೊಂಬಾಟ್ ಫೋನ್ ಪರಿಚಯಿಸಿದ ಮೋಟೋ
Moto G04
Follow us
|

Updated on: Feb 16, 2024 | 12:42 PM

ಪ್ರಸಿದ್ಧ ಮೋಟೋರೊಲ ಕಂಪನಿ ಈಗೀಗ ಅತಿ ಕಡಿಮೆ ಬೆಲೆಗೆ ಆಕರ್ಷಕ ಸ್ಮಾರ್ಟ್​ಫೋನ್​ಗಳನ್ನು ಬಿಡುಗಡೆ ಮಾಡುತ್ತಿದೆ. ಇದೀಗ ಕಂಪನಿ ಭಾರತದಲ್ಲಿ ಮೋಟೋ G04 (Moto G04) ಎಂಬ ಫೋನನ್ನು ಅನಾವರಣ ಮಾಡಿದೆ. ಇದುಕೂಡ ಬಜೆಟ್ ಫೋನುಗಳ ಸಾಲಿಗೆ ಸೇರ್ಪಡೆಯಾಗಿದೆ. ಈ ಫೋನನ್ನು ಈ ವರ್ಷದ ಜನವರಿಯಲ್ಲಿ ಮೋಟೋ G24 ಜೊತೆಗೆ ಅನಾವರಣಗೊಳಿಸಲಾಗಿತ್ತು. ಕಡಿಮೆ ಬೆಲೆಯಾಗಿದ್ದರೂ ಈ ಫೋನಿನಲ್ಲಿ ಉತ್ತಮ ಪ್ರೊಸೆಸರ್, ಕ್ಯಾಮೆರಾ, ಬಲಿಷ್ಠ ಬ್ಯಾಟರಿ ಆಯ್ಕೆಯನ್ನು ನೀಡಲಾಗಿದೆ. ಇದರ ಬೆಲೆ, ಫೀಚರ್ಸ್ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

ಭಾರತದಲ್ಲಿ ಮೋಟೋ G04 ಬೆಲೆ:

ಕಾನ್ಕಾರ್ಡ್ ಬ್ಲಾಕ್, ಸ್ಯಾಟಿನ್ ಬ್ಲೂ, ಸೀ ಗ್ರೀನ್ ಮತ್ತು ಸನ್‌ರೈಸ್ ಆರೆಂಜ್ ಬಣ್ಣದ ಆಯ್ಕೆಗಳಲ್ಲಿ ಬಿಡುಗಡೆಯಾದ ಮೋಟೋ G04 ಭಾರತದಲ್ಲಿ ಎರಡು ಸ್ಟೋರೇಜ್ ಆಯ್ಕೆಯಲ್ಲಿ ಲಭ್ಯವಿದೆ. ಇದರ 4GB + 64GB ಕಾನ್ಫಿಗರೇಶನ್‌ಗೆ 6,999 ರೂ. ನಿಗದಿ ಮಾಡಲಾಗಿದೆ. ಅಂತೆಯೆ ಇದರ 8GB + 128GB ರೂಪಾಂತರದ ಬೆಲೆ ರೂ. 7,499 ಆಗಿದೆ.

ಭಾರತಕ್ಕೆ ಅಪ್ಪಳಿಸಿತು 108MP ಕ್ಯಾಮೆರಾದ ಬಂಪರ್ ಸ್ಮಾರ್ಟ್​ಫೋನ್: ಖರೀದಿಗೆ ಕ್ಯೂ ಗ್ಯಾರಂಟಿ

ಮೋಟೋ G04 ಸ್ಮಾರ್ಟ್​ಫೋನ್ ಫ್ಲಿಪ್​ಕಾರ್ಟ್, Motorola.in ಮತ್ತು ಆಫ್‌ಲೈನ್ ಚಿಲ್ಲರೆ ಅಂಗಡಿಗಳ ಮೂಲಕ ಫೆಬ್ರವರಿ 22 ರಂದು ಮಧ್ಯಾಹ್ನ 1 ಗಂಟೆಯಿಂದ ಖರೀದಿಗೆ ಲಭ್ಯವಿರುತ್ತದೆ . ಕಂಪನಿಯು ಪ್ರಸ್ತುತ 64GB ಆಯ್ಕೆಯಲ್ಲಿ 750 ರೂ. ಗಳ ವಿನಿಮಯ ಕೊಡುಗೆ ಘೋಷಿಸಿದೆ. ರಿಲಯನ್ಸ್ ಜಿಯೋ ಬಳಕೆದಾರರು ರೂ. 399 ಪ್ರಿಪೇಯ್ಡ್ ಯೋಜನೆಯಲ್ಲಿ 2000 ರೂ. ಮೌಲ್ಯದ ಕ್ಯಾಶ್‌ಬ್ಯಾಕ್ ಅನ್ನು ಸಹ ಗೆಲ್ಲಬಹುದು.

ಮೋಟೋ G04 ಫೀಚರ್ಸ್:

ಮೋಟೋರೊಲಾದಿಂದ ಹೊಸದಾಗಿ ಬಿಡುಗಡೆಯಾದ ಈ ಬಜೆಟ್ ಹ್ಯಾಂಡ್‌ಸೆಟ್ 6.6-ಇಂಚಿನ HD+ (720×1,600 ಪಿಕ್ಸೆಲ್‌ಗಳು) IPS LCD ಸ್ಕ್ರೀನ್ ಜೊತೆಗೆ 90Hz ರಿಫ್ರೆಶ್ ರೇಟ್, 269ppi ಪಿಕ್ಸೆಲ್ ಸಾಂದ್ರತೆ ಹೊಂದಿದೆ. ಮಾಲಿ G57 GPU ಜೊತೆಗೆ UniSoC T606 SoC ನೀಡಲಾಗಿದೆ. 8GB ವರೆಗೆ ವರ್ಚುವಲ್ RAM ಆಗಿ ಹೆಚ್ಚುವರಿ 8GB ವರೆಗೆ ವಿಸ್ತರಿಸಬಹುದಾಗಿದೆ. ಆಂಡ್ರಾಯ್ಡ್ 14-ಆಧಾರಿತ My UX ನೊಂದಿಗೆ ಫೋನ್ ರವಾನೆಯಾಗುತ್ತದೆ.

ನಿಮ್ಮ ಸ್ಮಾರ್ಟ್​ಫೋನ್​ಗೆ ವಯಸ್ಸಾಗಿದೆಯೇ?: ಹಳೆಯ ಮೊಬೈಲ್ ಅನ್ನು ಹೊಸದರಂತೆ ಮಾಡಿ

ಕ್ಯಾಮೆರಾ ವಿಚಾರಕ್ಕೆ ಬಂದರೆ, ಮೋಟೋ G04 ಒಂದೇ 16-ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಹಿಂಭಾಗದಲ್ಲಿ LED ಫ್ಲ್ಯಾಷ್ ಜೊತೆಗೆ ನೀಡಲಾಗಿದೆ. ಸೆಲ್ಫಿಗಳು ಮತ್ತು ವಿಡಿಯೋ ಕರೆಗಳಿಗಾಗಿ ಮುಂಭಾಗದಲ್ಲಿ 5-ಮೆಗಾಪಿಕ್ಸೆಲ್ ಸಂವೇದಕವನ್ನು ಅಳವಡಿಸಲಾಗಿದೆ. ಇದು 128GB ವರೆಗಿನ ಆನ್‌ಬೋರ್ಡ್ ಸಂಗ್ರಹಣೆಯನ್ನು ಸಹ ಹೊಂದಿದೆ. ಇದನ್ನು ಮೈಕ್ರೋ SD ಕಾರ್ಡ್ ಮೂಲಕ 1TB ವರೆಗೆ ವಿಸ್ತರಿಸಬಹು್ಉ. ಫೋನ್ ಧೂಳು ಮತ್ತು ಸ್ಪ್ಲಾಶ್ ಪ್ರತಿರೋಧಕ್ಕಾಗಿ IP52 ರೇಟಿಂಗ್‌ನೊಂದಿಗೆ ಬರುತ್ತದೆ.

ಮೋಟೋ G04 10W ವೈರ್ಡ್ ಚಾರ್ಜಿಂಗ್‌ನೊಂದಿಗೆ 5,000mAh ಬ್ಯಾಟರಿಯಿಂದ ಬೆಂಬಲಿತವಾಗಿದೆ. ಈ ಹ್ಯಾಂಡ್‌ಸೆಟ್ ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸಂವೇದಕವನ್ನು ಹೊಂದಿದೆ ಮತ್ತು ಡಾಲ್ಬಿ ಅಟ್ಮಾಸ್ ಬೆಂಬಲದೊಂದಿಗೆ ಸ್ಟಿರಿಯೊ ಸ್ಪೀಕರ್‌ಗಳನ್ನು ಹೊಂದಿದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ