Honor X9b: ಭಾರತಕ್ಕೆ ಅಪ್ಪಳಿಸಿತು 108MP ಕ್ಯಾಮೆರಾದ ಬಂಪರ್ ಸ್ಮಾರ್ಟ್​ಫೋನ್: ಖರೀದಿಗೆ ಕ್ಯೂ ಗ್ಯಾರಂಟಿ

108 Mega Pixel Camera Phone: ಪ್ರಸಿದ್ಧ ಹಾನರ್ ಕಂಪನಿ ಭಾರತದಲ್ಲಿ ಹಾನರ್ X9b ಎಂಬ ಫೋನನ್ನು ಬಿಡುಗಡೆ ಮಾಡಿದೆ. ಈ ಫೋನ್​ನಲ್ಲಿ 108 ಮೆಗಾ ಫಿಕ್ಸೆಲ್ ಕ್ಯಾಮೆರಾ ಆಯ್ಕೆಯನ್ನು ನೀಡಲಾಗಿದೆ. ಜೊತೆಗೆ 4nm ಸ್ನಾಪ್‌ಡ್ರಾಗನ್ 6 Gen 1 ಚಿಪ್ ಅನ್ನು ಹೊಂದಿದೆ.

Honor X9b: ಭಾರತಕ್ಕೆ ಅಪ್ಪಳಿಸಿತು 108MP ಕ್ಯಾಮೆರಾದ ಬಂಪರ್ ಸ್ಮಾರ್ಟ್​ಫೋನ್: ಖರೀದಿಗೆ ಕ್ಯೂ ಗ್ಯಾರಂಟಿ
Honor X9b
Follow us
Vinay Bhat
|

Updated on: Feb 15, 2024 | 2:23 PM

ಕಳೆದ ಕೆಲವು ವಾರಗಳಿಂದ ಭಾರತದಲ್ಲಿ ಕ್ಯಾಮೆರಾ ಫೋನುಗಳ ಹಾವಳಿ ತಗ್ಗಿತ್ತು. ಹೀಗಿರುವಾಗ ಇದೀಗ ಪ್ರಸಿದ್ಧ ಹಾನರ್ ಕಂಪನಿ ದೇಶದಲ್ಲಿ 108 ಮೆಗಾ ಫಿಕ್ಸೆಲ್ ಕ್ಯಾಮೆರಾ ಆಯ್ಕೆ ಹೊಂದಿರುವ ಹೊಸ ಹಾನರ್ X9b (Honor X9b) ಎಂಬ ಫೋನನ್ನು ಬಿಡುಗಡೆ ಮಾಡಿದೆ. ಕೇವಲ ಕ್ಯಾಮೆರಾ ಮಾತ್ರವಲ್ಲದೆ ಈ X-ಸರಣಿಯ ಸ್ಮಾರ್ಟ್‌ಫೋನ್ 4nm ಸ್ನಾಪ್‌ಡ್ರಾಗನ್ 6 Gen 1 ಚಿಪ್ ಅನ್ನು ಹೊಂದಿದೆ. ಜೊತೆಗೆ ಬಲಿಷ್ಠ ಬ್ಯಾಟರಿ, ಫಾಸ್ಟ್ ಚಾರ್ಜರ್ ಆಯ್ಕೆ ಕೂಡ ಲಭ್ಯವಿದೆ. ಹಾನರ್ X9b ಫೋನಿನ ಬೆಲೆ, ಫೀಚರ್ಸ್ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

ಭಾರತದಲ್ಲಿ ಹಾನರ್ X9b ಬೆಲೆ, ಲಭ್ಯತೆ

ಭಾರತದಲ್ಲಿ ಹಾನರ್ X9b ಫೋನ್​ನ 8GB+256GB ಸ್ಟೋರೇಜ್ ಕಾನ್ಫಿಗರೇಶನ್​ಗೆ 25, 999 ರೂ. ನಿಗದಿ ಮಾಡಲಾಗಿದೆ. ಈ ಹ್ಯಾಂಡ್‌ಸೆಟ್ ಅನ್ನು ಮಿಡ್‌ನೈಟ್ ಬ್ಲಾಕ್ ಮತ್ತು ಸನ್‌ರೈಸ್ ಆರೆಂಜ್ ಬಣ್ಣದ ಆಯ್ಕೆಗಳಲ್ಲಿ ಖರೀದಿಸಬಹುದು. ಕಂಪನಿಯ ಪ್ರಕಾರ ಹಾನರ್ X9b ಫೆಬ್ರವರಿ 16 ರಿಂದ ಮಧ್ಯಾಹ್ನ 12 ಗಂಟೆಗೆ ಮೊದಲ ಸೇಲ್ ಕಾಣಲಿದೆ.

ಇನ್ಮುಂದೆ ಹಣ ಬೇಕು ಅಂದ್ರೆ ಎಟಿಎಂಗೆ ಹೋಗಬೇಕಿಲ್ಲ: ಈ ಶಾಪ್​ನಲ್ಲಿ ಸಿಗುತ್ತದೆ

ಇದು ಅಮೆಜಾನ್ ಮತ್ತು ದೇಶಾದ್ಯಂತ ಸುಮಾರು 1,800 ಚಿಲ್ಲರೆ ಅಂಗಡಿಗಳ ಮೂಲಕ ಮಾರಾಟವಾಗಲಿದೆ. ಗ್ರಾಹಕರು ಸ್ಮಾರ್ಟ್​ಫೋನ್ ಖರೀದಿಸುವಾಗ ICICI ಬ್ಯಾಂಕ್ ಕಾರ್ಡ್ ಬಳಸಿ 3,000 ರೂ. ರಿಯಾಯಿತಿ ಪಡೆಯಬಹುದು.

ಹಾನರ್ X9b ಫೀಚರ್ಸ್

ಡ್ಯುಯಲ್-ಸಿಮ್ (ನ್ಯಾನೋ) ಹಾನರ್ X9b ಮ್ಯಾಜಿಕ್ OS 7.2 ಜೊತೆಗೆ ಆಂಡ್ರಾಯ್ಡ್ 13 ನಲ್ಲಿ ಕಾರ್ಯನಿರ್ವಹಿಸುತ್ತದೆ. ಇದು 120Hz ರಿಫ್ರೆಶ್ ದರದೊಂದಿಗೆ 6.78-ಇಂಚಿನ 1.5K (1,200×2,652 ಪಿಕ್ಸೆಲ್‌ಗಳು) ಬಾಗಿದ AMOLED ಡಿಸ್​ಪ್ಲೇ ಹೊಂದಿದೆ. ಇದರಲ್ಲಿ ಅಲ್ಟ್ರಾ-ಬೌನ್ಸ್ ಆಂಟಿ ಡ್ರಾಪ್ ಡಿಸ್ಪ್ಲೇ ತಂತ್ರಜ್ಞಾನವನ್ನು ನೀಡಲಾಗಿದೆ. 8GB LPDDR4X RAM ಜೊತೆಗೆ ಕ್ವಾಲ್ಕಂನ 4nm ಸ್ನಾಪ್‌ಡ್ರಾಗನ್ 6 Gen 1 ಚಿಪ್‌ನಲ್ಲಿ ಕಾರ್ಯನಿರ್ವಹಿಸುತ್ತದೆ.

ನಿಮ್ಮ ಸ್ಮಾರ್ಟ್​ಫೋನ್​ಗೆ ವಯಸ್ಸಾಗಿದೆಯೇ?: ಹಳೆಯ ಮೊಬೈಲ್ ಅನ್ನು ಹೊಸದರಂತೆ ಮಾಡಿ

ಫೋಟೋಗಳು ಮತ್ತು ವಿಡಿಯೋಗಳಿಗಾಗಿ, ಹಾನರ್ X9b 108-ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾವನ್ನು f/1.75 ದ್ಯುತಿರಂಧ್ರದೊಂದಿಗೆ, 5-ಮೆಗಾಪಿಕ್ಸೆಲ್ ವೈಡ್-ಆಂಗಲ್ ಕ್ಯಾಮೆರಾ ಜೊತೆಗೆ af/2.2 ಮತ್ತು 2-ಮೆಗಾಪಿಕ್ಸೆಲ್ ಮ್ಯಾಕ್ರೋ ಕ್ಯಾಮೆರಾವನ್ನು f/2.4 ಅಪರ್ಚರ್‌ನೊಂದಿಗೆ ನೀಡಲಾಗಿದೆ. ಮುಂಭಾಗದಲ್ಲಿ, ಇದು ಸೆಲ್ಫಿಗಳು ಮತ್ತು ವಿಡಿಯೋ ಚಾಟ್‌ಗಳಿಗಾಗಿ 16-ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಹೊಂದಿದೆ.

ಹಾನರ್ X9b ನಲ್ಲಿ ನೀವು 256GB UFS 3.1 ಸಂಗ್ರಹಣೆಯನ್ನು ಪಡೆಯುತ್ತೀರಿ. ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, 4G LTE, ಡ್ಯುಯಲ್ ಬ್ಯಾಂಡ್ Wi-Fi, ಬ್ಲೂಟೂತ್ 5.1, NFC, ಮತ್ತು USB ಟೈಪ್-C ಪೋರ್ಟ್ ಸೇರಿವೆ. ಬಯೋಮೆಟ್ರಿಕ್ ದೃಢೀಕರಣಕ್ಕಾಗಿ ಹ್ಯಾಂಡ್‌ಸೆಟ್‌ನಲ್ಲಿ ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಅನ್ನು ಅಳವಡಿಸಲಾಗಿದೆ. ಇದು 5,800mAh ಬ್ಯಾಟರಿಯನ್ನು ಹೊಂದಿದೆ, ಇದು 35W ವೈರ್ಡ್ ಚಾರ್ಜಿಂಗ್‌ಗೆ ಬೆಂಬಲದೊಂದಿಗೆ ಮೂರು ದಿನಗಳ ಬ್ಯಾಟರಿ ಅವಧಿಯನ್ನು ನೀಡುತ್ತದೆ ಎಂದು ಹೇಳಲಾಗಿದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

ಇನ್ನು ಮುಂದೆ ಸುಮ್ಮನಿರಲ್ಲ: ಚೈತ್ರಾ-ಮೋಕ್ಷಿತಾಗೆ ತ್ರಿವಿಕ್ರಮ್ ಸವಾಲು
ಇನ್ನು ಮುಂದೆ ಸುಮ್ಮನಿರಲ್ಲ: ಚೈತ್ರಾ-ಮೋಕ್ಷಿತಾಗೆ ತ್ರಿವಿಕ್ರಮ್ ಸವಾಲು
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ