256GB ಸ್ಟೋರೇಜ್, 32MP ಸೆಲ್ಫಿ ಕ್ಯಾಮೆರಾ: ಇನ್ಫಿನಿಕ್ಸ್​ನಿಂದ 9,999 ರೂ. ಗೆ ಬೆರಗುಗೊಳಿಸುವ ಫೋನ್

Infinix Hot 40i Launched in India: ಇನ್ಫಿನಿಕ್ಸ್ ಹಾಟ್ 40i ಭಾರತದಲ್ಲಿ ಹೊಸ ಬಜೆಟ್ ಫೋನಾಗಿ ಬಿಡುಗಡೆ ಆಗಿದೆ. ಈ ಫೋನ್​ನ ಮುಂಭಾಗದಲ್ಲಿ 32MP ಕ್ಯಾಮೆರಾ ಆಯ್ಕೆ ನೀಡಲಾಗಿದೆ. ವಿಶೇಷ ಎಂದರೆ 256GB ಸಂಗ್ರಹಣೆಯೊಂದಿಗೆ ರಿಲೀಸ್ ಆಗಿದೆ. ಫೆಬ್ರವರಿ 21 ರಿಂದ ಮಧ್ಯಾಹ್ನ 12 ಗಂಟೆಗೆ ಫ್ಲಿಪ್‌ಕಾರ್ಟ್ ಮೂಲಕ ಮಾರಾಟವಾಗಲಿದೆ.

256GB ಸ್ಟೋರೇಜ್, 32MP ಸೆಲ್ಫಿ ಕ್ಯಾಮೆರಾ: ಇನ್ಫಿನಿಕ್ಸ್​ನಿಂದ 9,999 ರೂ. ಗೆ ಬೆರಗುಗೊಳಿಸುವ ಫೋನ್
Infinix Hot 40i
Follow us
|

Updated on: Feb 16, 2024 | 2:39 PM

ಪ್ರಸಿದ್ಧ ಇನ್ಫಿನಿಕ್ಸ್ ಕಂಪನಿ ಬಜೆಟ್ ಫೋನುಗಳನ್ನು ಬಿಡುಗಡೆ ಮಾಡುವುದರಲ್ಲಿ ಎತ್ತಿದ ಕೈ. ಹೀಗೆ ರಿಲೀಸ್ ಮಾಡಿದ ಸ್ಮಾರ್ಟ್​ಫೋನ್​ಗಳಲ್ಲಿ ಏನಾದರು ಒಂದು ವಿಶೇಷತೆ ಇದ್ದೇ ಇರುತ್ತದೆ. ಇದೇ ಸಾಲಿಗೆ ಮತ್ತೊಂದು ಮೊಬೈಲ್ ಸೇರ್ಪಡೆ ಆಗಿದೆ. ಕಂಪನಿ ಇದೀಗ ಭಾರತದಲ್ಲಿ ತನ್ನ ಹೊಸ ಇನ್ಫಿನಿಕ್ಸ್ ಹಾಟ್ 40i (Infinix Hot 40i) ಫೋನನ್ನು ರಿಲೀಸ್ ಮಾಡಿದೆ. 10,000 ರೂ. ಒಳಗೆ ಲಭ್ಯವಿರುವ ಈ ಫೋನ್​ನ ಮುಂಭಾಗದಲ್ಲಿ 32 ಮೆಗಾ ಪಿಕ್ಸೆಲ್ ಕ್ಯಾಮೆರಾ ಇದೆ. 256GB ಸಂಗ್ರಹಣೆಯನ್ನು ಸಹ ನೀಡಲಾಗಿದೆ. ಈ ಫೋನಿನ ಬೆಲೆ, ಫೀಚರ್ಸ್ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

ಭಾರತದಲ್ಲಿ ಇನ್ಫಿನಿಕ್ಸ್ ಹಾಟ್ 40i ಬೆಲೆ:

ಇನ್ಫಿನಿಕ್ಸ್ ಹಾಟ್ 40i ಸ್ಮಾರ್ಟ್​ಫೋನ್ ಭಾರತದಲ್ಲಿ ಸದ್ಯ ಒಂದು ಸ್ಟೋರೇಜ್ ಆಯ್ಕೆಯಲ್ಲಷ್ಟೆ ಅನಾವರಣಗೊಂಡಿದೆ. ಇದರ 8GB + 256GB ಸ್ಟೋರೇಜ್ ಮಾದರಿಗೆ 9,999 ರೂ. ನಿಗದಿ ಮಾಡಲಾಗಿದೆ. ಈ ಹ್ಯಾಂಡ್‌ಸೆಟ್ ಭಾರತದಲ್ಲಿ ಫೆಬ್ರವರಿ 21 ರಿಂದ ಮಧ್ಯಾಹ್ನ 12 ಗಂಟೆಗೆ ಫ್ಲಿಪ್‌ಕಾರ್ಟ್ ಮೂಲಕ ಮಾರಾಟವಾಗಲಿದೆ. ಪಾಮ್ ಬ್ಲೂ, ಸ್ಟಾರ್‌ಫಾಲ್ ಗ್ರೀ ಎನ್, ಹರೈಸನ್ ಗೋಲ್ಡ್ ಮತ್ತು ಸ್ಟಾರ್‌ಲಿಟ್ ಕಪ್ಪು ಬಣ್ಣಗಳಲ್ಲಿ ಬರುತ್ತದೆ.

ಅಚ್ಚರಿ: ಕೇವಲ 6,999 ರೂ. ಗೆ ಹೊಚ್ಚಹೊಸ ಬೊಂಬಾಟ್ ಫೋನ್ ಪರಿಚಯಿಸಿದ ಮೋಟೋ

ಇನ್ಫಿನಿಕ್ಸ್ ಹಾಟ್ 40i ಫೀಚರ್ಸ್:

ಇನ್ಫಿನಿಕ್ಸ್ ಹಾಟ್ 40i ಫೋನ್ 1612 x 720 ಪಿಕ್ಸೆಲ್‌ಗಳ ರೆಸಲ್ಯೂಶನ್, 480 nits ಬ್ರೈಟ್‌ನೆಸ್, 90Hz ರಿಫ್ರೆಶ್ ದರ ಮತ್ತು 180Hz ಟಚ್ ಸ್ಯಾಂಪ್ಲಿಂಗ್ ದರದೊಂದಿಗೆ 6.6-ಇಂಚಿನ HD+ ಡಿಸ್ಪ್ಲೇಯನ್ನು ಹೊಂದಿದೆ. ಮಾಲಿ G57 MP1 GPU ಜೊತೆಗೆ ಯುನಿಸಾಕ್ T606 ಪ್ರೊಸೆಸರ್ ಅಳವಡಿಸಲಾಗಿದೆ.

ಚಿಪ್‌ಸೆಟ್ ಅನ್ನು 8GB LPDDR4x RAM ಮತ್ತು 256GB ಸಂಗ್ರಹಣೆಯೊಂದಿಗೆ ಜೋಡಿಸಲಾಗಿದೆ, ಇದನ್ನು ಮೈಕ್ರೊ SD ಕಾರ್ಡ್ ಮೂಲಕ ಮತ್ತಷ್ಟು ವಿಸ್ತರಿಸಬಹುದಾಗಿದೆ. 8GB ವರ್ಚುವಲ್ RAM ಬೆಂಬಲವಿದೆ. ಈ ಫೋನ್ ಆಂಡ್ರಾಯ್ಡ್ 13-ಆಧಾರಿತ XOS 13 ಕಸ್ಟಮ್ ಸ್ಕಿನ್‌ನಿಂದ ರನ್ ಆಗುತ್ತದೆ.

ಭಾರತಕ್ಕೆ ಅಪ್ಪಳಿಸಿತು 108MP ಕ್ಯಾಮೆರಾದ ಬಂಪರ್ ಸ್ಮಾರ್ಟ್​ಫೋನ್: ಖರೀದಿಗೆ ಕ್ಯೂ ಗ್ಯಾರಂಟಿ

ಇನ್ಫಿನಿಕ್ಸ್ ಹಾಟ್ 40i ಫೋನ್ 50MP ಪ್ರಾಥಮಿಕ ಕ್ಯಾಮೆರಾವನ್ನು f/2.0 ದ್ಯುತಿರಂಧ್ರದೊಂದಿಗೆ ಮತ್ತು ಕ್ವಾಡ್-LED ಫ್ಲ್ಯಾಷ್‌ನೊಂದಿಗೆ AI ಸೆಕೆಂಡರಿ ಲೆನ್ಸ್ ಅನ್ನು ಒಳಗೊಂಡಿದೆ. ಸೆಲ್ಫಿ ಮತ್ತು ವಿಡಿಯೋ ಚಾಟ್‌ಗಳಿಗಾಗಿ ಮುಂಭಾಗದಲ್ಲಿ 32MP ಸ್ನ್ಯಾಪರ್ ಇದೆ. ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸಾರ್ ಮತ್ತು 18W ಫಾಸ್ಟ್ ಚಾರ್ಜಿಂಗ್ ಬೆಂಬಲದೊಂದಿಗೆ 5000mAh ಬ್ಯಾಟರಿ ಇದೆ.

ಕನೆಕ್ಟಿವಿಟಿ ವೈಶಿಷ್ಟ್ಯಗಳಲ್ಲಿ 4G VoLTE, Wi-Fi 802.11 ac, ಬ್ಲೂಟೂತ್ 5.0, ಮತ್ತು USB ಟೈಪ್-C ಪೋರ್ಟ್ ಸೇರಿವೆ. ಧೂಳು ಮತ್ತು ಸ್ಪ್ಲಾಶ್ ಪ್ರತಿರೋಧಕ್ಕಾಗಿ IP53 ರೇಟಿಂಗ್‌ನೊಂದಿಗೆ ಬರುತ್ತದೆ ಮತ್ತು ಮ್ಯಾಜಿಕ್ ರಿಂಗ್ ಆಯ್ಕೆ ಇದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ