ಭಾರತದಲ್ಲಿ ರೆಡ್ಮಿ ಸ್ಮಾರ್ಟ್ಫೋನ್ಗಳಿಗೆ (Smartphone) ಎಲ್ಲಿಲ್ಲದ ಬೇಡಿಕೆ ಇದೆ ಎಂದು ಅರಿತಿರುವ ಶವೋಮಿ ಕಂಪೆನಿ ಇದೇ ಬ್ರ್ಯಾಂಡ್ನಡಿಯಲ್ಲಿ ಹೊಸ ಹೊಸ ಫೋನನ್ನು ಬಿಡುಗಡೆ ಮಾಡುತ್ತಿದೆ. ಇಂದು ರೆಡ್ಮಿ 10 ಪ್ರೈಮ್ (Redmi 10 Prime) ಅನಾವರಣಗೊಂಡಿದೆ. ಹೀಗಿರುವಾಗ ಕಳೆದ ಆಗಸ್ಟ್ನಲ್ಲಿ ಬಿಡುಗಡೆ ಆದ ರೆಡ್ಮಿ ನೋಟ್ 10ಟಿ (Redmi Note 10T) ಸ್ಮಾರ್ಟ್‌ಫೋನ್ ಬೆಲೆಯಲ್ಲಿ ಏರಿಕೆ ಮಾಡಿದೆ. ಈಗೀಗ ಸದ್ದಿಲ್ಲದೆ ಶವೋಮಿ (Xiaomi) ತನ್ನ ಹೊಸ ಸ್ಮಾರ್ಟ್‌ಫೋನ್ ಬೆಲೆಯಲ್ಲಿ ಏರಿಕೆ ಮಾಡುತ್ತಿರುವುದು ಅಚ್ಚರಿಗೆ ಕಾರಣವಾಗಿದೆ.
ಈ ಹಿಂದೆ ರೆಡ್ಮಿ ನೋಟ್ 10 ಸರಣಿಯಲ್ಲಿ ಬಿಡುಗಡೆ ಆಗಿದ್ದ ಸ್ಮಾರ್ಟ್ಫೋನ್ಗಳು 4G ನೆಟ್ವರ್ಕ್ ಹೊಂದಿದ್ದವು. ಆದರೆ, ಕಳೆದ ತಿಂಗಳು ಮಾಡಿದ ರೆಡ್ಮಿ ನೋಟ್ 10T ಚೊಚ್ಚಲ 5G ಮೊಬೈಲ್ ಆಗಿದೆ. ಅಲ್ಲದೆ ಭಾರತದಲ್ಲಿ ಅತಿ ಕಡಿಮೆ ಬೆಲೆಗೆ ಲಭ್ಯವಿರುವ ಕೆಲವೇ ಕೆಲವು 5G ಸ್ಮಾರ್ಟ್ಫೋನ್ಗಳ ಪೈಕಿ ಇದುಕೂಡ ಒಂದು ಆಗಿದೆ. ಸದ್ಯ ಇದೇ ಫೋನಿನ ಬೆಲೆಯಲ್ಲಿ 500 ರೂ. ಏರಿಕೆ ಮಾಡಿದೆ.
ನೂತನ ಬೆಲೆ ಎಷ್ಟು?:
ಒಟ್ಟು ಎರಡು ಮಾದರಿಯಲ್ಲಿ ರೆಡ್ಮಿ ನೋಟ್ 10T ಸ್ಮಾರ್ಟ್‌ಫೋನ್ ಖರೀದಿಗೆ ಲಭ್ಯವಿದೆ. 4GB RAM ಮತ್ತು 64GB ಸ್ಟೋರೆಜ್ ಸಾಮರ್ಥ್ಯದ ಬೆಲೆ 13,999 ರೂ. ಇದ್ದಿದ್ದು ಈಗ 14,499 ರೂ. ಆಗಿದೆ. ಅಂತೆಯೆ 6GB RAM ಮತ್ತು 128GB ಸ್ಟೋರೆಜ್ ಸಾಮರ್ಥ್ಯಕ್ಕೆ ಆರಂಭದಲ್ಲಿ 16,499 ರೂ. ಇತ್ತು. ಸದ್ಯ ಇದರ ಬೆಲೆ 16,999 ರೂ. ನಿಗದಿ ಮಾಡಲಾಗಿದೆ. ಪ್ರಸಿದ್ಧ ಇ ಕಾಮರ್ಸ್ ತಾಣವಾದ ಅಮೆಜಾನ್ ಮತ್ತು ಶವೋಮಿಯ ಅಧಿಕೃತ ವೆಬ್ಸೈಟ್ನಲ್ಲಿ ಈ ಫೋನ್ ಮಾರಾಟವಾಗುತ್ತಿದೆ.
ಏನು ವಿಶೇಷತೆ?:
ರೆಡ್ಮಿ ನೋಟ್ 10T 5G ಸ್ಮಾರ್ಟ್‌ಫೋನ್ 1,080×2,400 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 6.5-ಇಂಚಿನ ಫುಲ್ ಹೆಚ್‌ಡಿ + ಡಿಸ್‌ಪ್ಲೇ ಹೊಂದಿದೆ. ಆಕ್ಟಾ-ಕೋರ್ ಮೀಡಿಯಾಟೆಕ್ ಡೈಮೆನ್ಸಿಟಿ 700 SoC ಪ್ರೊಸೆಸರ್ನಿಂ ಕಾರ್ಯನಿರ್ವಹಿಸಲಿದ್ದು, ಆಂಡ್ರಾಯ್ಡ್ 11 ನಲ್ಲಿ MIUI ಬೆಂಬಲ ಪಡೆದಿದೆ.
ಈ ಸ್ಮಾರ್ಟ್‌ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 48 ಮೆಗಾಪಿಕ್ಸೆಲ್ ಸೆನ್ಸಾರ್ ಎಫ್ / 1.79 ಲೆನ್ಸ್ ಹೊಂದಿದೆ. ಎರಡನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಮ್ಯಾಕ್ರೋ ಶೂಟರ್ ಮತ್ತು ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸಾರ್ ಹೊಂದಿದೆ. ಇದಲ್ಲದೆ 8 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಕೂಡ ಅಳವಡಿಸಲಾಗಿದೆ.
ರೆಡ್ಮಿ ನೋಟ್ 10ಟಿ 5,000mAh ಸಾಮರ್ಥ್ಯದ ಬ್ಯಾಟರಿ ಹೊಂದಿದ್ದು, 18W ಫಾಸ್ಟ್ ಚಾರ್ಜಿಂಗ್ ಬೆಂಬಲವನ್ನು ಪಡೆದುಕೊಂಡಿದೆ. ಬಾಕ್ಸ್ ಒಳಗಡೆ 22.5W ಫಾಸ್ಟ್ ಚಾರ್ಜರ್ ಕೂಡ ಇರಲಿದೆ.
Redmi 10 Prime: ಭಾರತದಲ್ಲಿ ಅತಿ ಕಡಿಮೆ ಬೆಲೆಗೆ ಬಹುನಿರೀಕ್ಷಿತ ರೆಡ್ಮಿ 10 ಪ್ರೈಮ್ ಸ್ಮಾರ್ಟ್‌ಫೋನ್ ಬಿಡುಗಡೆ
ಈ ತಿಂಗಳು ಬಿಡುಗಡೆ ಆಗಲಿವೆ ಸಾಲು ಸಾಲು ಸ್ಮಾರ್ಟ್ಫೋನ್ಗಳು: ಇಲ್ಲಿದೆ ಪಟ್ಟಿ
(Price Hike Xiaomi hikes Redmi Note 10T price for the second time in India)