ಒಂದೇ ದಿನ ಎರಡು ಹೊಸ ​ಫೋನ್ ಬಿಡುಗಡೆ ಮಾಡಿದ ರಿಯಲ್ ಮಿ: ಯಾವುದು?, ಬೆಲೆ ಎಷ್ಟು?

Realme 12 Plus 5G and Realme 12 5G Launched: ಭಾರತದಲ್ಲಿ ಹೊಸ ರಿಯಲ್ ಮಿ 12 5G ಮತ್ತು ರಿಯಲ್ ಮಿ 12+ 5G ಎಂಬ ಎರಡು ಫೋನುಗಳನ್ನು ರಿಲೀಸ್ ಆಗಿವೆ. ಈ ಫೋನ್‌ಗಳು 120Hz ಡಿಸ್​ಪ್ಲೇಗಳು, ಟ್ರಿಪಲ್ ಹಿಂಬದಿಯ ಕ್ಯಾಮೆರಾಗಳು ಮತ್ತು 67W SUPERVOOC ವೇಗದ ಚಾರ್ಜಿಂಗ್ ತಂತ್ರಜ್ಞಾನದೊಂದಿಗೆ ಬಿಡುಗಡೆ ಆಗಿವೆ. ರಿಯಲ್ ಮಿ 12 ಸರಣಿಯ ಹೊಸ ಸ್ಮಾರ್ಟ್​ಫೋನ್​ನ ಬೆಲೆ, ಫೀಚರ್ಸ್ ಕುರಿತ ಮಾಹಿತಿ ಇಲ್ಲಿದೆ.

ಒಂದೇ ದಿನ ಎರಡು ಹೊಸ ​ಫೋನ್ ಬಿಡುಗಡೆ ಮಾಡಿದ ರಿಯಲ್ ಮಿ: ಯಾವುದು?, ಬೆಲೆ ಎಷ್ಟು?
Realme 12

Updated on: Mar 07, 2024 | 1:51 PM

ಪ್ರಸಿದ್ಧ ರಿಯಲ್ ಮಿ ಕಂಪನಿ ಭಾರತದಲ್ಲಿ ಒಂದೇ ದಿನ ಎರಡು ಹೊಸ ಸ್ಮಾರ್ಟ್​ಫೋನ್​ಗಳನ್ನು ಅನಾವರಣ ಮಾಡಿದೆ. ತನ್ನ ಜನಪ್ರಿಯ ರಿಯಲ್ ಮಿ 12 ಸರಣಿಯ (Realme 12 Series) ಅಡಿಯಲ್ಲಿ ರಿಯಲ್ ಮಿ 12 5G ಮತ್ತು ರಿಯಲ್ ಮಿ 12+ 5G ಎಂಬ ಎರಡು ಫೋನುಗಳನ್ನು ರಿಲೀಸ್ ಮಾಡಿದೆ. ಹೊಸ ರಿಯಲ್ ಮಿ ಫೋನ್‌ಗಳು 120Hz ಡಿಸ್​ಪ್ಲೇಗಳು, ಟ್ರಿಪಲ್ ಹಿಂಬದಿಯ ಕ್ಯಾಮೆರಾಗಳು ಮತ್ತು 67W SUPERVOOC ವೇಗದ ಚಾರ್ಜಿಂಗ್ ತಂತ್ರಜ್ಞಾನದೊಂದಿಗೆ ಬಿಡುಗಡೆ ಆಗಿವೆ. ರಿಯಲ್ ಮಿ 12 ಸರಣಿಯ ಹೊಸ ಸ್ಮಾರ್ಟ್​ಫೋನ್​ನ ಬೆಲೆ, ಫೀಚರ್ಸ್ ಕುರಿತ ಮಾಹಿತಿ ಇಲ್ಲಿದೆ.

ಭಾರತದಲ್ಲಿ ರಿಯಲ್ ಮಿ 12+ 5G, ರಿಯಲ್ ಮಿ 12 5G ಬೆಲೆ, ಲಭ್ಯತೆ:

ರಿಯಲ್ ಮಿ 12+ 5G ಫೋನ್ ಎರಡು ಸ್ಟೋರೇಜ್ ಆಯ್ಕೆಯಲ್ಲಿ ಬಿಡುಗಡೆ ಆಗಿದೆ. ಇದರ 8GB RAM ಮತ್ತು 128GB ಸ್ಟೋರೇಜ್ ಬೆಲೆ 20,999 ರೂ. ಆಗಿದೆ. 8GB RAM ಮತ್ತು 256GB ಸಂಗ್ರಹಣೆಯ ಬೆಲೆ 21,999 ರೂ. ಆಗಿದೆ. ರಿಯಲ್ ಮಿ 12 ಎರಡು ರೂಪಾಂತರಗಳಲ್ಲಿ ಬರುತ್ತದೆ. ಇದರ 6GB + 128GB ರೂಪಾಂತರಕ್ಕೆ ರೂ. 16,999 ಮತ್ತು 8GB + 128GB ರೂಪಾಂತರಕ್ಕೆ ರೂ. 17,999 ನಿಗದಿ ಮಾಡಲಾಗಿದೆ.

ಸ್ಮಾರ್ಟ್​ಫೋನ್ ಅಪ್​ಡೇಟ್ ಮಾಡದಿದ್ದರೆ ಏನಾಗುತ್ತದೆ ಗೊತ್ತಾ..?

ರಿಯಲ್ ಮಿ 12 ಮತ್ತು ರಿಯಲ್ ಮಿ 12+ ಮೊದಲ ಮಾರಾಟವು ಮಾರ್ಚ್ 6 ರಂದು realme.com, ಫ್ಲಿಪ್​ಕಾರ್ಟ್ ಮತ್ತು ಚಿಲ್ಲರೆ ಅಂಗಡಿಗಳ ಮೂಲಕ ಮಾರಾಟ ಆಗಲಿದೆ. ರಿಯಲ್ ಮಿ 12+ 5G ಪಯೋನೀರ್ ಗ್ರೀನ್ ಮತ್ತು ನ್ಯಾವಿಗೇಟರ್ ಬೀಜ್ ಎರಡು ಬಣ್ಣ ಆಯ್ಕೆಗಳಲ್ಲಿ ಬರುತ್ತದೆ. ರಿಯಲ್ ಮಿ 12 ಟ್ವಿಲೈಟ್ ಪರ್ಪಲ್ ಮತ್ತು ವುಡ್‌ಲ್ಯಾಂಡ್ ಗ್ರೀನ್ ಬಣ್ಣಗಳಲ್ಲಿ ಮಾರಾಟ ಆಗಲಿದೆ.

ರಿಯಲ್ ಮಿ 12+ 5G ಫೀಚರ್ಸ್:

ರಿಯಲ್ ಮಿ 12+ 5G ಸ್ಮಾರ್ಟ್​ಫೋನ್ 6.67-ಇಂಚಿನ FHD+ ಡಿಸ್​ಪ್ಲೇ ಜೊತೆಗೆ 120Hz ರಿಫ್ರೆಶ್ ರೇಟ್, 240Hz ಟಚ್ ಸ್ಯಾಂಪ್ಲಿಂಗ್ ರೇಟ್ ಹೊಂದಿದೆ. ಮಾಲಿ-ಜಿ68 ಜಿಪಿಯು ಜೊತೆಗೆ ಮೀಡಿಯಾ ಟೆಕ್ ಡೈಮೆನ್ಸಿಟಿ 7050 SoC ಮೂಲಕ ಸ್ಮಾರ್ಟ್‌ಫೋನ್ ಚಾಲಿತವಾಗಿದೆ. ಛಾಯಾಗ್ರಹಣ ವಿಭಾಗದಲ್ಲಿ, ಇದು 50MP SONY LYT-600 ಪ್ರಾಥಮಿಕ ಕ್ಯಾಮೆರಾ, 8MP ವೈಡ್-ಆಂಗಲ್ ಕ್ಯಾಮೆರಾ ಮತ್ತು 2MP ಪೋರ್ಟ್ರೇಟ್ ಕ್ಯಾಮೆರಾವನ್ನು ಒಳಗೊಂಡಿದೆ. ಸೆಲ್ಫಿಗಾಗಿ 16MP ಫ್ರಂಟ್ ಕ್ಯಾಮೆರಾ ಇದೆ. 5000mAh ಬ್ಯಾಟರಿ ಮತ್ತು 67W SUPERVOOC ವೇಗದ ಚಾರ್ಜಿಂಗ್ ತಂತ್ರಜ್ಞಾನವನ್ನು ಪ್ಯಾಕ್ ಮಾಡುತ್ತದೆ. ಇದು ಆಂಡ್ರಾಯ್ಡ್ 14 ಆಧಾರಿತ realme UI 5.0 ಅನ್ನು ರನ್ ಆಗುತ್ತದೆ. ಎರಡು ವರ್ಷಗಳ ಆಂಡ್ರಾಯ್ಡ್ ನವೀಕರಣಗಳು ಮತ್ತು ಮೂರು ವರ್ಷಗಳ ಭದ್ರತಾ ನವೀಕರಣಗಳನ್ನು ಸಹ ಪಡೆಯುತ್ತೀರಿ.

ಭಾರತದಲ್ಲಿ ಬಹುನಿರೀಕ್ಷಿತ ನಥಿಂಗ್ ಫೋನ್ 2a ಸ್ಮಾರ್ಟ್​ಫೋನ್ ಬಿಡುಗಡೆ: ಬೆಲೆ ಎಷ್ಟು?, ಏನಿದೆ ಫೀಚರ್ಸ್

ರಿಯಲ್ ಮಿ 12 5G ಫೀಚರ್ಸ್:

ರಿಯಲ್ ಮಿ 12 ಸ್ಮಾರ್ಟ್​ಫೋನ್ 6.72-ಇಂಚಿನ FHD+ ಡಿಸ್​ಪ್ಲೇ ಜೊತೆಗೆ 120Hz ರಿಫ್ರೆಶ್ ರೇಟ್, 180Hz ಟಚ್ ಸ್ಯಾಂಪ್ಲಿಂಗ್ ರೇಟ್ ಹೊಂದಿದೆ. ಮೀಡಿಯಾ ಟೆಕ್ ಡೈಮೆನ್ಸಿಟಿ 6100+ ಪ್ರೊಸೆಸರ್ ಅನ್ನು ಮಾಲಿ ಜಿ 57 ಜಿಪಿಯು ಜೊತೆ ಜೋಡಿಸಲಾಗಿದೆ. 108MP ಪ್ರಾಥಮಿಕ ಕ್ಯಾಮೆರಾ ಮತ್ತು 2MP ಪೋರ್ಟ್ರೇಟ್ ಕ್ಯಾಮೆರಾದೊಂದಿಗೆ ಡ್ಯುಯಲ್ ಕ್ಯಾಮೆರಾ ಸೆಟಪ್ ಇದೆ. ಸೆಲ್ಫಿಗಳಿಗಾಗಿ ನೀವು 8MP ಮುಂಭಾಗದ ಕ್ಯಾಮೆರಾವನ್ನು ಪಡೆಯುತ್ತೀರಿ.

ರಿಯಲ್ ಮಿ 12 ಫೋನ್ 5000mAh ಬ್ಯಾಟರಿ ಮತ್ತು 45W SUPERVOOC ವೇಗದ ಚಾರ್ಜಿಂಗ್ ತಂತ್ರಜ್ಞಾನದೊಂದಿಗೆ ಬರುತ್ತದೆ. ಇದು ಆಂಡ್ರಾಯ್ಡ್ 14 ಆಧಾರಿತ realme UI 5.0 ಅನ್ನು ರನ್ ಮಾಡುತ್ತದೆ ಮತ್ತು ಫೋನ್ ಮೂರು ವರ್ಷಗಳ ಸಾಫ್ಟ್‌ವೇರ್ ನವೀಕರಣಗಳನ್ನು, ಎರಡು ವರ್ಷಗಳ ಆಂಡ್ರಾಯ್ಡ್ ನವೀಕರಣಗಳನ್ನು ಪಡೆಯುತ್ತದೆ.

ರಿಯಲ್ ಮಿ 12 ಸ್ಮಾರ್ಟ್‌ಫೋನ್‌ನ ಸೈಡ್ ಪ್ಯಾನೆಲ್‌ನಲ್ಲಿ ‘ಡೈನಾಮಿಕ್ ಬಟನ್’ ಸಹ ಹೊಂದಿದೆ. ವಾಯ್ಸ್ ಮೋಡ್, ಡಿಎನ್‌ಡಿ ಮೋಡ್, ಸೈಕ್ಲಿಂಗ್ ಮೋಡ್, ಏರ್‌ಪ್ಲೇನ್ ಮೋಡ್ ಮತ್ತು ಕ್ಯಾಮೆರಾ ಶಟರ್‌ನಂತಹ ವಿಭಿನ್ನ ಕಾರ್ಯಗಳಿಗಾಗಿ ಈ ಬಟನ್ ಅನ್ನು ಕಸ್ಟಮೈಸ್ ಮಾಡಬಹುದು.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ