ಬಜೆಟ್ ಪ್ರಿಯರು ಸಿದ್ಧರಾಗಿ: ಭಾರತಕ್ಕೆ ಬರುತ್ತಿದೆ ರಿಯಲ್ ಮಿಯ ಅತಿ ಕಡಿಮೆ ಬೆಲೆಯ ಸ್ಮಾರ್ಟ್​ಫೋನ್

|

Updated on: Aug 26, 2023 | 3:13 PM

Realme C51 India Launch: ರಿಯಲ್ ಮಿ C51 ಸ್ಮಾರ್ಟ್‌ಫೋನ್ ಕಳೆದ ತಿಂಗಳು ತೈವಾನ್‌ನಲ್ಲಿ ಬಿಡುಗಡೆ ಆಗಿತ್ತು. ಇದೀಗ ಕಂಪನಿಯು ಭಾರತದಲ್ಲಿ ಅದೇ ರೂಪಾಂತರವನ್ನು ಬಿಡುಗಡೆ ಮಾಡುವ ನಿರೀಕ್ಷೆ ಇದೆ. ಈ ಫೋನ್ 720x1600 ಪಿಕ್ಸೆಲ್ ರೆಸಲ್ಯೂಶನ್ ಜೊತೆಗೆ 6.7-ಇಂಚಿನ HD+ ಡಿಸ್ ಪ್ಲೇಯನ್ನು ಹೊಂದಿದೆ.

ಬಜೆಟ್ ಪ್ರಿಯರು ಸಿದ್ಧರಾಗಿ: ಭಾರತಕ್ಕೆ ಬರುತ್ತಿದೆ ರಿಯಲ್ ಮಿಯ ಅತಿ ಕಡಿಮೆ ಬೆಲೆಯ ಸ್ಮಾರ್ಟ್​ಫೋನ್
Realme C51
Follow us on

ಭಾರತದಲ್ಲಿ ಬಜೆಟ್ ಬೆಲೆಗೆ ಆಕರ್ಷಕ ಸ್ಮಾರ್ಟ್​ಫೋನ್​ಗಳನ್ನು ಬಿಡುಗಡೆ ಮಾಡುವುದರಲ್ಲಿ ರಿಯಲ್ ಮಿ ಸಂಸ್ಥೆ ಎತ್ತಿದ ಕೈ. ಅದರಲ್ಲೂ ತನ್ನ C-ಸರಣಿಯ ಅಡಿಯಲ್ಲಿ ಒಂದಲ್ಲ ಒಂದು ಫೋನ್ ಅನ್ನು ರಿಲೀಸ್ ಮಾಡುತ್ತಲೇ ಇರುತ್ತದೆ. ಇದೀಗ ಇದೇ ಸರಣಿ ಅಡಿಯಲ್ಲಿ ಮತ್ತೊಂದು ಹೊಸ ಸ್ಮಾರ್ಟ್‌ಫೋನ್‌ ಅನಾವರಣ ಮಾಡಲು ಸಿದ್ಧವಾಗಿದೆ. ಚೀನಾದ ಸ್ಮಾರ್ಟ್‌ಫೋನ್ ತಯಾರಕರು ಭಾರತದಲ್ಲಿ ರಿಯಲ್ ಮಿ ಸಿ 51 (Realme C51) ಸ್ಮಾರ್ಟ್​ಫೋನನ್ನು ಸದ್ಯದಲ್ಲೇ ಬಿಡುಗಡೆ ಮಾಡುವುದಾಗಿ ಹೇಳಿದೆ.

ರಿಯಲ್ ಮಿ ಇಂಡಿಯಾ ತನ್ನ ಎಕ್ಸ್ ಖಾತೆಯಲ್ಲಿ (ಈ ಹಿಂದೆ ಟ್ವಿಟರ್ ಎಂದು ಕರೆಯಲಾಗುತ್ತಿತ್ತು) ಈ ಸ್ಮಾರ್ಟ್‌ಫೋನ್ನ ಬಿಡುಗಡೆ ಕುರಿತು ಮಾಹಿತಿ ಹಂಚಿಕೊಂಡಿದೆ. “ಚಾಂಪಿಯನ್ ಈಸ್ ಕಮಿಂಗ್! #ChampionIsComing #StayTuned,” ಎಂದು ರಿಯಲ್ ಮಿ ಇಂಡಿಯಾ ಪೋಸ್ಟ್ ಮಾಡಿದೆ.

ಇದನ್ನೂ ಓದಿ
ಕುತೂಹಲ ಕೆರಳಿಸಿದ ಒನ್​ಪ್ಲಸ್ 12 5G ಸ್ಮಾರ್ಟ್​ಫೋನ್: ಬಿಡುಗಡೆ ಯಾವಾಗ?, ಏನಿದೆ ಫೀಚರ್ಸ್?
ಜಿಯೋ ಬಳಕೆದಾರರಿಗೆ ಬಿಗ್ ಶಾಕ್: ಟ್ರೆಂಡಿಂಗ್ ಪ್ಲಾನ್ ಅನ್ನು ದಿಢೀರ್ ಸ್ಥಗಿತಗೊಳಿಸಿದ ಕಂಪನಿ
Train Ticket Booking: IRCTCಯಲ್ಲಿ ರೈಲು ಟಿಕೆಟ್ ಬುಕ್ ಮಾಡುವಾಗ ಎಚ್ಚರಿಕೆ!​
ತಕ್ಷಣ ಬುಕ್ ಮಾಡಿ: ಊಹಿಸಲಾಗದಷ್ಟು ಕಡಿಮೆ ಬೆಲೆಗೆ ಗೂಗಲ್ ಪಿಕ್ಸೆಲ್ 6a ಸ್ಮಾರ್ಟ್​ಫೋನ್ ಮಾರಾಟ

ಇಲ್ಲಿದೆ ನೋಡಿ ರಿಯಲ್ ಮಿ ಮಾಡಿರುವ ಟ್ವೀಟ್:

 

ರಿಯಲ್ ಮಿ C51 ಸ್ಮಾರ್ಟ್‌ಫೋನ್ ಕಳೆದ ತಿಂಗಳು ತೈವಾನ್‌ನಲ್ಲಿ ಬಿಡುಗಡೆ ಆಗಿತ್ತು. ಇದೀಗ ಕಂಪನಿಯು ಭಾರತದಲ್ಲಿ ಅದೇ ರೂಪಾಂತರವನ್ನು ಬಿಡುಗಡೆ ಮಾಡುವ ನಿರೀಕ್ಷೆ ಇದೆ. ಈ ಫೋನ್ 720×1600 ಪಿಕ್ಸೆಲ್ ರೆಸಲ್ಯೂಶನ್ ಜೊತೆಗೆ 6.7-ಇಂಚಿನ HD+ ಡಿಸ್ ಪ್ಲೇಯನ್ನು ಹೊಂದಿದೆ. ಇದು 90Hz ರಿಫ್ರೆಶ್ ರೇಟ್ ಮತ್ತು 560 ನಿಟ್‌ಗಳ ಗರಿಷ್ಠ ಬ್ರೈಟ್​ನೆಸ್ ಅನ್ನು ನೀಡುತ್ತದೆ. ಆಕ್ಟಾ-ಕೋರ್ ಯುನಿಸಾಕ್ ಟಿ612 ಚಿಪ್‌ಸೆಟ್‌ನಿಂದ ಚಾಲಿತವಾಗಿದೆ.

ಗಾಬರಿ ಬೇಡ, ಎಐ ಟೆಕ್ನಾಲಜಿ ನಮ್ಮ ಉದ್ಯೋಗ ಕಸಿಯಲ್ಲ; ಹೆಚ್ಚು ಕೆಲಸ ಸೃಷ್ಟಿಸುತ್ತೆ: ಟಾಟಾ ಸನ್ಸ್ ಛೇರ್ಮನ್ ಅನಿಸಿಕೆ

ರಿಯಲ್ ಮಿ C51 ಸ್ಮಾರ್ಟ್‌ಫೋನ್ 4GB RAM ಮತ್ತು 64GB ಆಂತರಿಕ ಸಂಗ್ರಹಣೆಯನ್ನು ಬರುವ ನಿರೀಕ್ಷೆ ಇದೆ. ಮೈಕ್ರೊ SD ಕಾರ್ಡ್ ಅನ್ನು ಅಳವಡಿಸುವ ಮೂಲಕ ಬಳಕೆದಾರರು ಸಂಗ್ರಹಣೆಯನ್ನು ಇನ್ನಷ್ಟು ವಿಸ್ತರಿಸಬಹುದು. ಈ ಸ್ಮಾರ್ಟ್​ಫೋನ್ ಡ್ಯುಯಲ್ ಸಿಮ್ ಬೆಂಬಲದೊಂದಿಗೆ ಬರುತ್ತದೆ ಮತ್ತು ರಿಯಲ್ ಮಿ ಯುಐ ಟಿ ಆವೃತ್ತಿಯೊಂದಿಗೆ ಆಂಡ್ರಾಯ್ಡ್ 13 ಆಪರೇಟಿಂಗ್ ಸಿಸ್ಟಮ್ ಅನ್ನು ರನ್ ಮಾಡುತ್ತದೆ.

ಕ್ಯಾಮೆರಾ ವಿಚಾರಕ್ಕೆ ಬರುವುದಾದರೆ, ಈ ಸ್ಮಾರ್ಟ್​ಫೋನ್ ಡ್ಯುಯಲ್ ಹಿಂಬದಿಯ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. 50 ಮೆಗಾ ಪಿಕ್ಸೆಲ್ ಮುಖ್ಯ ಸಂವೇದಕದೊಂದಿಗೆ f/1.8 ಅಪಾರ್ಚರ್ ಹೊಂದಿದೆ. f/2.0 ಅಪಾರ್ಚರ್​ನೊಂದಿಗೆ 5MP ಮುಂಭಾಗದ ಕ್ಯಾಮೆರಾವನ್ನು ಸಹ ಹೊಂದಿದೆ.

ಈ ಬಜೆಟ್ ಸ್ಮಾರ್ಟ್‌ಫೋನ್ ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸಾರ್‌ನೊಂದಿಗೆ ಬರುತ್ತದೆ ಮತ್ತು ಇದು 33W SuperVOOC ಫಾಸ್ಟ್ ಚಾರ್ಜಿಂಗ್ ಬೆಂಬಲದೊಂದಿಗೆ 5000mAh ಬ್ಯಾಟರಿಯಿಂದ ಬೆಂಬಲಿತವಾಗಿದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:11 pm, Sat, 26 August 23