ಬಜೆಟ್ ಬೆಲೆಯ ಸ್ಮಾರ್ಟ್ಫೋನ್ನಿಂದ (Budget Smartphone) ಹಿಡಿದು ದುಬಾರಿ ಬೆಲೆಯ ಮೊಬೈಲ್ ವರೆಗೆ (Mobile) ಭರ್ಜರಿ ಬೇಡಿಕೆಯನ್ನು ಸೃಷ್ಟಿಸಿರುವ ರಿಯಲ್ ಮಿ (Realme) ಕಂಪನಿ ಮಾರುಕಟ್ಟೆಯಲ್ಲಿ ಭದ್ರವಾಗಿ ನೆಲೆಯೂರಿದೆ. ತಿಂಗಳಿಗೆ ಒಂದರಂತೆ ಹೊಸ ಹೊಸ ಫೋನನ್ನು ಬಿಡುಗಡೆ ಮಾಡುತ್ತಿರುವ ರಿಯಲ್ ಮಿ ಕಂಪನಿ ಇದೀಗ ತನ್ನ ಬಹುನಿರೀಕ್ಷಿತ ಹೊಸ ರಿಯಲ್ ಮಿ ಜಿಟಿ2 (Realme GT 2) ಸರಣಿಯನ್ನು ಅನಾವರಣ ಮಾಡಲು ತಯಾರು ನಡೆಸಿದೆ. ಇದೇ ಡಿಸೆಂಬರ್ 20 ರಂದು ರಿಯಲ್ ಮಿ GT 2 ಸರಣಿ ಜಾಗತಿಕ ಮಾರುಕಟ್ಟೆಯಲ್ಲಿ ಬಿಡುಗಡೆ ಆಗಲಿದೆ ಎಂದು ಕಂಪನಿ ಘೋಷಿಸಿದೆ. ಇದರಲ್ಲಿ ರಿಯಲ್ ಮಿ GT 2 Pro ಫೋನ್ ಹೊಸದಾಗಿ ಬಿಡುಗಡೆಯಾದ ಸ್ನಾಪ್‌ಡ್ರಾಗನ್ 8 Gen 1 ಪ್ರೊಸೆಸರ್ ಹೊಂದಿರಲಿದೆ ಎನ್ನಲಾಗಿದೆ.
ರಿಯಲ್ ಮಿ GT 2 Pro ಸ್ಮಾರ್ಟ್‌ಫೋನ್ 120Hz ರಿಫ್ರೆಶ್ ರೇಟ್ ಒಳಗೊಂಡಿರುವ 6.8 ಇಂಚಿನ WQHD+ OLED ಡಿಸ್ಪ್ಲೇಯನ್ನು ಹೊಂದಿದೆ. ಇನ್ನು ಈ ಡಿಸ್‌ಪ್ಲೇ 20:9 ರಚನೆಯ ಅನುಪಾತವನ್ನು ಪಡೆದಿದೆ. ಸ್ನಾಪ್‌ಡ್ರಾಗನ್ 8 Gen 1 ಪ್ರೊಸೆಸರ್ ಹೊಂದಿರಲಿದೆ ಎನ್ನಲಾಗಿದ್ದು, ಇದು ಆಂಡ್ರಾಯ್ಡ್ 12 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗೆಯೇ 12GB RAM ಮತ್ತು 256GB ಇಂಟರ್ ಸ್ಟೋರೇಜ್ ಸಾಮರ್ಥ್ಯವನ್ನು ಹೊಂದಿರುವ ಸಾಧ್ಯತೆಯಿದೆ.
ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿರಲಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯವನ್ನು ಹೊಂದಿದೆ. ಎರಡನೇ ಕ್ಯಾಮೆರಾ 50 ಮೆಗಾಪಿಕ್ಸೆಲ್ ಟೆಲಿಫೋಟೋ ಸೆನ್ಸಾರ್ ಹೊಂದಿರುವುದು ವಿಶೇಷ. ಅಂತೆಯೆ ಮೂರನೇ ಕ್ಯಾಮೆರಾ 8 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯವನ್ನು ಹೊಂದಿದೆ. ಇದಲ್ಲದೆ 32 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಹೊಂದಿರಲಿದೆ ಎನ್ನಲಾಗಿದೆ.
ರಿಯಲ್ ಮಿ GT 2 Pro ಸ್ಮಾರ್ಟ್‌ಫೋನ್ 5000mAh ಸಾಮರ್ಥ್ಯದ ಬಲಿಷ್ಠ ಬ್ಯಾಟರಿಯನ್ನು ಹೊಂದಿದ್ದು, 65W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಹಾಟ್‌ಸ್ಪಾಟ್, ಬ್ಲೂಟೂತ್, ವೈಫೈ, ಯುಎಸ್‌ಬಿ ಪೋರ್ಟ್ ಅನ್ನು ಬೆಂಬಲಿಸಲಿದೆ ಎನ್ನಲಾಗಿದೆ. ಇನ್ನು ಈ ಸ್ಮಾರ್ಟ್‌ಫೋನ್ ಡಿಸೆಂಬರ್ 20 ರಂದು ಮುಂಬರುವ Realme GT 2 ಸರಣಿಯ ಈವೆಂಟ್‌ನಲ್ಲಿ ಬಿಡುಗಡೆಯಾಗಲಿದೆ. ಇವುಗಳ ಬೆಲೆ ಎಷ್ಟು ಎಂಬುದು ಇನ್ನೂ ಬಹಿರಂಗವಾಗಿಲ್ಲ.
WhatsApp: ವಾಟ್ಸ್ಆ್ಯಪ್ ವಾಯ್ಸ್ ಮೆಸೇಜ್ನಲ್ಲಿ ಹೊಸ ಫೀಚರ್: ಬಳಕೆದಾರರು ಫುಲ್ ಖುಷ್
(Realme GT 2 could be coming to India sooner than expected spotted on the Indian website)