120W ಫಾಸ್ಟ್ ಚಾರ್ಜಿಂಗ್: ಮಾರುಕಟ್ಟೆಗೆ ಬಂತು ರಿಯಲ್ ಮಿ GT ನಿಯೋ 6 ಸ್ಮಾರ್ಟ್​ಫೋನ್

|

Updated on: May 10, 2024 | 12:32 PM

Realme GT Neo 6 Launched: ಮಾರುಕಟ್ಟೆಗೆ ರಿಯಲ್ ಮಿ GT ನಿಯೋ 6 ಸ್ಮಾರ್ಟ್​ಫೋನ್ ಬಂದಿದೆ. ಈ ಫೋನ್​ನಲ್ಲಿ ಬರೋಬ್ಬರಿ 120W ಫಾಸ್ಟ್ ಚಾರ್ಜಿಂಗ್ ಸೌಲಭ್ಯವಿದೆ. ಜೊತೆಗೆ ಕ್ವಾಲ್ಕಂನ ಸ್ನಾಪ್‌ಡ್ರಾಗನ್ 8s Gen 3 SoC ನಲ್ಲಿ ಕಾರ್ಯನಿರ್ವಹಿಸುತ್ತದೆ. 50-ಮೆಗಾಪಿಕ್ಸೆಲ್ ಸೋನಿ IMX882 ಸಂವೇದಕ, 8-ಮೆಗಾಪಿಕ್ಸೆಲ್ ಸೋನಿ IMX355 ಅಲ್ಟ್ರಾ-ವೈಡ್ ಜೊತೆಗೆ ಡ್ಯುಯಲ್ ರಿಯರ್ ಕ್ಯಾಮೆರಾ ಘಟಕವನ್ನು ಹೊಂದಿದೆ.

120W ಫಾಸ್ಟ್ ಚಾರ್ಜಿಂಗ್: ಮಾರುಕಟ್ಟೆಗೆ ಬಂತು ರಿಯಲ್ ಮಿ GT ನಿಯೋ 6 ಸ್ಮಾರ್ಟ್​ಫೋನ್
realme gt neo 6
Follow us on

ಪ್ರಸಿದ್ಧ ರಿಯಲ್ ಮಿ ಕಂಪನಿ ಇದೀಗ ಹೊಸ ರಿಯಲ್ ಮಿ GT ನಿಯೋ 6 (Realme GT Neo 6) ಸ್ಮಾರ್ಟ್​ಫೋನ್ ಅನ್ನು ಅನಾವರಣ ಮಾಡಿದೆ. ಹೊಸ ಜಿಟಿ ನಿಯೋ ಸರಣಿಯ ಫೋನ್ ಕ್ವಾಲ್ಕಂನ ಸ್ನಾಪ್‌ಡ್ರಾಗನ್ 8s Gen 3 SoC ನಲ್ಲಿ ಕಾರ್ಯನಿರ್ವಹಿಸುತ್ತದೆ, ಇದು 16GB ಯ RAM ಮತ್ತು 1TB ವರೆಗಿನ ಸಂಗ್ರಹಣೆಯೊಂದಿಗೆ ರಿಲೀಸ್ ಆಗಿದೆ. ಇದು 1.5K ರೆಸಲ್ಯೂಶನ್ ಮತ್ತು 120Hz ರಿಫ್ರೆಶ್ ದರದೊಂದಿಗೆ 8T LTPO AMOLED ಡಿಸ್​ಪ್ಲೇಯನ್ನು ಹೊಂದಿದೆ. 120W ವೈರ್ಡ್ ಫಾಸ್ಟ್ ಚಾರ್ಜಿಂಗ್‌ಗೆ ಬೆಂಬಲ ಈ ಫೋನಿನ ಮತ್ತೊಂದು ಹೈಲೇಟ್. ಈ ಫೋನಿನ ಬೆಲೆ, ಫೀಚರ್ಸ್ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

ರಿಯಲ್ ಮಿ GT ನಿಯೋ 6 ಬೆಲೆ

ರಿಯಲ್ ಮಿ GT ನಿಯೋ 6 ಸ್ಮಾರ್ಟ್​ಫೋನ್ ಸದ್ಯಕ್ಕೆ ಚೀನಾದಲ್ಲಿ ಮಾತ್ರ ಬಿಡುಗಡೆ ಆಗಿದೆ. ಇದರ 12GB + 256GB ಆವೃತ್ತಿಗೆ CNY 2,099 (ಸುಮಾರು ರೂ. 22,000) ನಿಂದ ಪ್ರಾರಂಭವಾಗುತ್ತದೆ. 16GB + 256GB ಆಯ್ಕೆಗೆ CNY 2,399 (ಸುಮಾರು ರೂ. 27,000) ಇದೆ. 16GB + 512GB ರೂಪಾಂತರವು CNY 2,699 (ಸುಮಾರು ರೂ. 31,000) ಮತ್ತು ಟಾಪ್-ಎಂಡ್ 16GB + 1TB ಮಾದರಿಯ ಬೆಲೆ CNY 2,999 (ಸುಮಾರು ರೂ. 27,000).

ಆಂಡ್ರಾಯ್ಡ್ ಬಳಕೆದಾರರಿಗೆ ಎಚ್ಚರಿಕೆ: ಈ ಎರಡು ಆ್ಯಪ್ ಇನ್​ಸ್ಟಾಲ್ ಮಾಡಿದ್ರೆ ತಕ್ಷಣ ಡಿಲೀಟ್ ಮಾಡಿ

ರಿಯಲ್ ಮಿ GT ನಿಯೋ 6 ಫೀಚರ್ಸ್

ಡ್ಯುಯಲ್ ಸಿಮ್ (ನ್ಯಾನೋ) ರಿಯಲ್ ಮಿ GT ನಿಯೋ 6 ಫೋನ್ ಆಂಡ್ರಾಯ್ಡ್ 14-ಆಧಾರಿತ ರಿಯಲ್ ಮಿ UI 5 ನಲ್ಲಿ ಕಾರ್ಯನಿರ್ವಹಿಸುತ್ತದೆ ಮತ್ತು 6.78-ಇಂಚಿನ 1.5K (1,264×2,780 ಪಿಕ್ಸೆಲ್‌ಗಳು) 8T LTPO AMOLED ಡಿಸ್ಪ್ಲೇ ಜೊತೆಗೆ 120Hz ರಿಫ್ರೆಶ್ ದರವನ್ನು ಹೊಂದಿದೆ. ಇದು 4nm ಆಕ್ಟಾ-ಕೋರ್ ಸ್ನಾಪ್‌ಡ್ರಾಗನ್ 8s Gen 3 SoC ಯಿಂದ ಚಾಲಿತವಾಗಿದೆ, ಜೊತೆಗೆ 16GB RAM ಮತ್ತು 1TB ವರೆಗಿನ ಸಂಗ್ರಹಣೆಯನ್ನು ಹೊಂದಿದೆ. ಇದು ಕೂಲಿಂಗ್ ವ್ಯವಸ್ಥೆಯನ್ನು ಕೂಡ ಹೊಂದಿದೆ.

ಕ್ಯಾಮೆರಾ ವಿಚಾರಕ್ಕೆ ಬಂದರೆ, ರಿಯಲ್ ಮಿ GT ನಿಯೋ 6 ಫೋನ್ 50-ಮೆಗಾಪಿಕ್ಸೆಲ್ ಸೋನಿ IMX882 ಸಂವೇದಕ, 8-ಮೆಗಾಪಿಕ್ಸೆಲ್ ಸೋನಿ IMX355 ಅಲ್ಟ್ರಾ-ವೈಡ್ ಜೊತೆಗೆ ಡ್ಯುಯಲ್ ರಿಯರ್ ಕ್ಯಾಮೆರಾ ಘಟಕವನ್ನು ಹೊಂದಿದೆ. ಸೆಲ್ಫಿ ಮತ್ತು ವಿಡಿಯೋ ಚಾಟ್‌ಗಳಿಗಾಗಿ, ಮುಂಭಾಗದಲ್ಲಿ 32-ಮೆಗಾಪಿಕ್ಸೆಲ್ ಸೋನಿ IMX615 ಕ್ಯಾಮೆರಾ ಇದೆ.

ಭಾರತದಲ್ಲಿ ಬಹುನಿರೀಕ್ಷಿತ ಗೂಗಲ್ ಪಿಕ್ಸೆಲ್ 8a ಫೋನ್ ಬಿಡುಗಡೆ: ಬೆಲೆ ಎಷ್ಟು, ಏನಿದೆ ಫೀಚರ್ಸ್?

ರಿಯಲ್ ಮಿ GT ನಿಯೋ 6 ನಲ್ಲಿನ ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, Wi-Fi, ಬ್ಲೂಟೂತ್ 5.4, GPS ಮತ್ತು USB ಟೈಪ್-C ಪೋರ್ಟ್ ಸೇರಿವೆ. ಈ ಹ್ಯಾಂಡ್ಸೆಟ್ ಹೈ-ರೆಸ್ ಪ್ರಮಾಣೀಕರಣವನ್ನು ಹೊಂದಿದೆ ಮತ್ತು ಓರಿಯಾಲಿಟಿ ಆಡಿಯೋ ಧ್ವನಿಯನ್ನು ಬೆಂಬಲಿಸುತ್ತದೆ. ಇದು ಡ್ಯುಯಲ್ ಮೈಕ್ರೊಫೋನ್‌ಗಳನ್ನು ಸಹ ಹೊಂದಿದೆ. ದೀರ್ಘ ಸಮಯ ಬಾಳಿಕೆ ಬರುವ 5,500mAh ಬ್ಯಾಟರಿಯನ್ನು ಹೊಂದಿದ್ದು 120W ಚಾರ್ಜಿಂಗ್ ಬೆಂಬಲವನ್ನು ಹೊಂದಿದೆ. ಈ ವೇಗದ ಚಾರ್ಜಿಂಗ್ ತಂತ್ರಜ್ಞಾನವು ಹತ್ತು ನಿಮಿಷಗಳಲ್ಲಿ ಶೂನ್ಯದಿಂದ 50 ಪ್ರತಿಶತದಷ್ಟು ಬ್ಯಾಟರಿಯನ್ನು ತುಂಬುತ್ತದೆ ಎಂದು ಕಂಪನಿ ಹೇಳಿದೆ.

ಹೆಚ್ಚಿನ ತಂತ್ರಜ್ಞಾನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ