ಭಾರತದಲ್ಲಿ ರಿಯಲ್ ಮಿ ನಾರ್ಜೊ 60x ಸ್ಮಾರ್ಟ್​ಫೋನ್ ಬಿಡುಗಡೆ: ಬೆಲೆ ಕೇವಲ 12,999 ರೂ.

|

Updated on: Sep 07, 2023 | 11:49 AM

Realme Narzo 60x Launched in India: ಹೊಸ ರಿಯಲ್ ಮಿ ನಾರ್ಜೊ 60X ಅನ್ನು ರಿಯಲ್ ಮಿ 11x 5G ಯ ​​ಮರುಬ್ರಾಂಡೆಡ್ ಆವೃತ್ತಿ ಎಂದು ಹೇಳಲಾಗಿದೆ. ಈ ಸ್ಮಾರ್ಟ್​ಫೋನ್ ದೇಶದಲ್ಲಿ ಎರಡು ಸ್ಟೋರೇಜ್ ಆಯ್ಕೆಯಲ್ಲಿ ಬಿಡುಗಡೆ ಆಗಿದೆ. ಬಜೆಟ್ ಬೆಲೆಯಿಂದ ಕೂಡಿರುವ ಈ ಸ್ಮಾರ್ಟ್​ಫೋನ್​ನ ಸಂಪೂರ್ಣ ಮಾಹಿತಿ ಇಲ್ಲಿದೆ.

ಭಾರತದಲ್ಲಿ ರಿಯಲ್ ಮಿ ನಾರ್ಜೊ 60x ಸ್ಮಾರ್ಟ್​ಫೋನ್ ಬಿಡುಗಡೆ: ಬೆಲೆ ಕೇವಲ 12,999 ರೂ.
Realme Narzo 60x
Follow us on

ಭಾರತದಲ್ಲಿ ಒಂದರ ಹಿಂದೆ ಒಂದರಂತೆ ಆಕರ್ಷಕ ಸ್ಮಾರ್ಟ್​ಫೋನ್​ಗಳನ್ನು ಬಿಡುಗಡೆ ಮಾಡುವ ಪ್ರಸಿದ್ಧ ರಿಯಲ್ ಮಿ ಕಂಪನಿ ಇದೀಗ ದೇಶದಲ್ಲಿ ಹೊಸ ರಿಯಲ್ ಮಿ ನಾರ್ಜೊ 60x (Realme Narzo 60x) ಫೋನನ್ನು ಅನಾವರಣ ಮಾಡಿದೆ. ಇದು ರಿಯಲ್ ಮಿ ನಾರ್ಜೊ 60 ಸರಣಿಯ ಫೋನಾಗಿದ್ದು, ಈ ವರ್ಷದ ಆರಂಭದಲ್ಲಿ ರಿಯಲ್ ಮಿ ನಾರ್ಜೊ 60 ಮತ್ತು ರಿಯಲ್ ಮಿ ನಾರ್ಜೊ 60 ಪ್ರೊ ಬಿಡುಗಡೆ ಆಗಿತ್ತು. ಹೊಸ ನಾರ್ಜೊ 60X ಅನ್ನು ರಿಯಲ್ ಮಿ 11x 5G ಯ ​​ಮರುಬ್ರಾಂಡೆಡ್ ಆವೃತ್ತಿ ಎಂದು ಹೇಳಲಾಗಿದೆ. ಬಜೆಟ್ ಬೆಲೆಯಿಂದ ಕೂಡಿರುವ ಈ ಸ್ಮಾರ್ಟ್​ಫೋನ್​ನ ಸಂಪೂರ್ಣ ಮಾಹಿತಿ ಇಲ್ಲಿದೆ.

ಭಾರತದಲ್ಲಿ ರಿಯಲ್ ಮಿ ನಾರ್ಜೊ 60x ಬೆಲೆ, ಲಭ್ಯತೆ:

ರಿಯಲ್ ಮಿ ನಾರ್ಜೊ 60x ಸ್ಮಾರ್ಟ್​ಫೋನ್ ದೇಶದಲ್ಲಿ ಎರಡು ಸ್ಟೋರೇಜ್ ಆಯ್ಕೆಯಲ್ಲಿ ಬಿಡುಗಡೆ ಆಗಿದೆ. ಇದರ 4GB + 128GB ರೂಪಾಂತರಕ್ಕೆ 12,999 ರೂ. ಇದೆ. ಅಂತೆಯೆ ಇದರ 6GB + 128GB ಸ್ಟೋರೇಜ್ ಸಾಮರ್ಥ್ಯದ ಬೆಲೆ 14,499 ರೂ. ಆಗಿದೆ. ಇದನ್ನು ನೆಬ್ಯುಲಾ ಪರ್ಪಲ್ ಮತ್ತು ಸ್ಟೆಲ್ಲರ್ ಗ್ರೀನ್ ಬಣ್ಣದ ಆಯ್ಕೆಗಳಲ್ಲಿ ಖರೀದಿಸಬಹುದು. ಸೆಪ್ಟೆಂಬರ್ 15 ಮಧ್ಯಾಹ್ನ 12 ಗಂಟೆಯಿಂದ ರಿಯಲ್​ ಮಿ ವೆಬ್‌ಸೈಟ್ ಮತ್ತು ಅಮೆಜಾನ್ ಮೂಲಕ ಈ ಫೋನ್ ಮಾರಾಟಕ್ಕೆ ಲಭ್ಯವಿರುತ್ತದೆ.

ಶಾಕಿಂಗ್: ಭಾರತದ ಬರೋಬ್ಬರಿ 72 ಲಕ್ಷಕ್ಕೂ ಅಧಿಕ ವಾಟ್ಸ್​ಆ್ಯಪ್ ಖಾತೆ ಬ್ಯಾನ್ ಮಾಡಿದ ಕಂಪನಿ

ಇದನ್ನೂ ಓದಿ
ವಿವೋ V29e ಸ್ಮಾರ್ಟ್​ಫೋನ್ ಇಂದಿನಿಂದ ಖರೀದಿಗೆ ಲಭ್ಯ: ಬೆಲೆ ಎಷ್ಟು?
ಬಜೆಟ್ ಪ್ರಿಯರು ಕಾದು ಕುಳಿತ ರಿಯಲ್ ಮಿ C51 ಫೋನಿನ ಮಾರಾಟ ಆರಂಭ
ರಿಲಯನ್ಸ್ ಜಿಯೋ 7ನೇ ವಾರ್ಷಿಕೋತ್ಸವ: ಬಳಕೆದಾರರಿಗೆ ಹಿಂದೆಂದೂ ನೀಡದ ಕೊಡುಗೆ
ಇದೀಗ ಖರೀದಿಗೆ ಸಿಗುತ್ತಿದೆ 108MP ಕ್ಯಾಮೆರಾದ ಇನ್ಫಿನಿಕ್ಸ್ ಜಿರೋ 30 5G

ರಿಯಲ್ ಮಿ ನಾರ್ಜೊ 60x ಫೀಚರ್ಸ್:

6.72-ಇಂಚಿನ ಪೂರ್ಣ-HD+ (2400 x 1080 ಪಿಕ್ಸೆಲ್‌ಗಳು) LCD ಡಿಸ್‌ಪ್ಲೇಯನ್ನು ಹೊಂದಿರುವ ಈ ಫೋನ್ 120Hz ನ ರಿಫ್ರೆಶ್ ದರವನ್ನು ಮತ್ತು 680 nits ನ ಗರಿಷ್ಠ ಹೊಳಪನ್ನು ನೀಡುತ್ತದೆ. ಡ್ಯುಯಲ್ ನ್ಯಾನೊ ಸಿಮ್-ಬೆಂಬಲ, ಆಂಡ್ರಾಯ್ಡ್ 13-ಆಧಾರಿತ ರಿಯಲ್ ಮಿ UI 4.0 ಔಟ್-ಆಫ್-ದಿ-ಬಾಕ್ಸ್ ಮೂಲಕ ರನ್ ಮಾಡುತ್ತದೆ. ಇದು ಆಕ್ಟಾ-ಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ 6100+ SoC ಯೊಂದಿಗೆ 6GB ಯ LPDDR4X RAM ನೊಂದಿಗೆ ಜೋಡಿಸಲ್ಪಟ್ಟಿದೆ.

ಕ್ಯಾಮೆತಾ ವಿಚಾರಕ್ಕೆ ಬಂದರೆ, ರಿಯಲ್ ಮಿ ನಾರ್ಜೊ 60x ಫೋಣ್ ಡ್ಯುಯಲ್ ಹಿಂಬದಿಯ ಕ್ಯಾಮೆರಾ ರಚನೆಯನ್ನು ಪಡೆದುಕೊಂಡಿದೆ. 50-ಮೆಗಾಪಿಕ್ಸೆಲ್ ಪ್ರಾಥಮಿಕ ಸಂವೇದಕ ಮತ್ತು 2-ಮೆಗಾಪಿಕ್ಸೆಲ್ ಸೆಕೆಂಡರಿ ಸಂವೇದಕವನ್ನು ಪೋಟ್ರೇಟ್ ಲೆನ್ಸ್‌ನೊಂದಿಗೆ ನೀಡಲಾಗಿದೆ. ಮುಂಭಾಗದ ಕ್ಯಾಮೆರಾವು ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ 8-ಮೆಗಾಪಿಕ್ಸೆಲ್ ಸೆನ್ಸಾರ್​ನಲ್ಲಿದೆ.

ರಿಯಲ್ ಮಿ ನಾರ್ಜೊ 60x 33W ವೈರ್ಡ್ SuperVOOC ಫಾಸ್ಟ್ ಚಾರ್ಜಿಂಗ್ ಬೆಂಬಲದೊಂದಿಗೆ 5,000mAh ಬ್ಯಾಟರಿಯನ್ನು ಪ್ಯಾಕ್ ಮಾಡುತ್ತದೆ. ಭದ್ರತೆಗಾಗಿ, ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸರ್‌ನೊಂದಿಗೆ ಬರುತ್ತದೆ. ಇದು 5G, 4G, GPS, ಬ್ಲೂಟೂತ್ ಮತ್ತು USB ಟೈಪ್-C 2.0 ಪೋರ್ಟ್ ಸಂಪರ್ಕವನ್ನು ಸಹ ಬೆಂಬಲಿಸುತ್ತದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ