AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಜೆಟ್ ಪ್ರಿಯರಿಗಾಗಿ ಬಂತು ಬೊಂಬಾಟ್ ಸ್ಮಾರ್ಟ್​ಫೋನ್: ಭಾರತದಲ್ಲಿ ರಿಯಲ್ ಮಿ C51 ಬಿಡುಗಡೆ

Realme C51 Smartphone Launched in India: ಭಾರತದಲ್ಲಿ ರಿಯಲ್ ಮಿ C51 ಸ್ಮಾರ್ಟ್​ಫೋನ್ ಸದ್ಯಕ್ಕೆ ಕೇವಲ ಒಂದು ಆಯ್ಕೆಯಲ್ಲಷ್ಟೆ ಬಿಡುಗಡೆ ಆಗಿದೆ. ವಿಶೇಷ ಎಂದರೆ ಈ ಫೋನ್ ಬಜೆಟ್ ಬೆಲೆಗೆ ಲಭ್ಯವಿದೆ. ಡ್ಯುಯಲ್-ಟೆಕ್ಸ್ಚರ್ ವಿನ್ಯಾಸವನ್ನು ಹೊಂದಿದೆ. ಇಂದು ಸಂಜೆ 6 ಗಂಟೆಯಿಂದ ಈ ಫೋನ್ ಮೊದಲ ಸೇಲ್ ಆರಂಭಿಸಲಿದೆ.

ಬಜೆಟ್ ಪ್ರಿಯರಿಗಾಗಿ ಬಂತು ಬೊಂಬಾಟ್ ಸ್ಮಾರ್ಟ್​ಫೋನ್: ಭಾರತದಲ್ಲಿ ರಿಯಲ್ ಮಿ C51 ಬಿಡುಗಡೆ
Realme C51
Vinay Bhat
|

Updated on: Sep 04, 2023 | 2:43 PM

Share

ಪ್ರಸಿದ್ಧ ರಿಯಲ್ ಮಿ ಕಂಪನಿ ತನ್ನ ನಾರ್ಜೊ 60x ಸ್ಮಾರ್ಟ್​ಫೋನನ್ನು ಭಾರತದಲ್ಲಿ ಸೆಪ್ಟೆಂಬರ್ 12 ರಂದು ಬಿಡುಗಡೆ ಮಾಡಲಾಗುವುದು ಎಂದು ಘೋಷಣೆ ಮಾಡಿದ ಬೆನ್ನಲ್ಲೇ ಇದೀಗ ದೇಶದಲ್ಲಿ ತನ್ನ C-ಸರಣಿ ಅಡಿಯಲ್ಲಿ ಹೊಸ ರಿಯಲ್ ಮಿ C51 (Realme C51) ಮೊಬೈಲ್ ಅನಾವರಣ ಮಾಡಿದೆ. ಡ್ಯುಯಲ್-ಟೆಕ್ಸ್ಚರ್ ವಿನ್ಯಾಸವನ್ನು ಹೊಂದಿರುವ ಈ ಸ್ಮಾರ್ಟ್​ಫೋನ್​ನಲ್ಲಿ ಬಲಿಷ್ಠ ಬ್ಯಾಟರಿ, ಆಕರ್ಷಕ ಕ್ಯಾಮೆರಾ ಆಯ್ಕೆ ನೀಡಲಾಗಿದೆ. ವಿಶೇಷ ಎಂದರೆ ಈ ಫೋನ್ ಬಜೆಟ್ ಬೆಲೆಗೆ ಲಭ್ಯವಿದೆ. ಹಾಗಾದರೆ, ರಿಯಲ್ ಮಿ C51 ಫೋನಿನ ಬೆಲೆ ಎಷ್ಟು?, ಏನೆಲ್ಲ ಫೀಚರ್ಸ್ ಇದೆ ಎಂಬುದನ್ನು ನೋಡೋಣ.

ಭಾರತದಲ್ಲಿ ರಿಯಲ್ ಮಿ C51 ಬೆಲೆ, ಮಾರಾಟ:

ಭಾರತದಲ್ಲಿ ರಿಯಲ್ ಮಿ C51 ಸ್ಮಾರ್ಟ್​ಫೋನ್ ಸದ್ಯಕ್ಕೆ ಕೇವಲ ಒಂದು ಆಯ್ಕೆಯಲ್ಲಷ್ಟೆ ಬಿಡುಗಡೆ ಆಗಿದೆ. ಇದರ 4GB RAM + 64GB ಸ್ಟೋರೇಜ್ ಸಾಮರ್ಥ್ಯಕ್ಕೆ ಕೇವಲ 8,999 ರೂ. ನಿಗದಿ ಮಾಡಲಾಗಿದೆ. ಇದು ಕಾರ್ಬಲ್ ಬ್ಲಾಕ್ ಮತ್ತು ಮಿಂಟ್ ಗ್ರೀನ್ ಬಣ್ಣದ ಆಯ್ಕೆಗಳಲ್ಲಿ ಬರುತ್ತದೆ. ಸೆಪ್ಟೆಂಬರ್ 4 ರಂದು ಅಂದರೆ ಇಂದು ಸಂಜೆ 6 ಗಂಟೆಯಿಂದ ಈ ಫೋನ್ ಮೊದಲ ಸೇಲ್ ಆರಂಭಿಸಲಿದೆ. ಫ್ಲಿಪ್​ಕಾರ್ಟ್ ಮತ್ತು ರಿಯಲ್ ಮಿ ವೆಬ್‌ಸೈಟ್ ಮೂಲಕ ಖರೀದಿಸಬಹುದು. ಕಂಪನಿಯು ICICI ಬ್ಯಾಂಕ್ ಮತ್ತು HDFC ಕಾರ್ಡ್‌ ಮೂಲಕ ಖರೀದಿಸಿದರೆ 500 ರೂ. ತ್ವರಿತ ರಿಯಾಯಿತಿಯನ್ನು ನೀಡುತ್ತಿದೆ.

ರಿಯಲ್ ಮಿ C51 ಫೀಚರ್ಸ್:

ಡಿಸ್‌ಪ್ಲೇ: ರಿಯಲ್ ಮಿ C51 ಫೋನ್ 1600 x 720 ಪಿಕ್ಸೆಲ್‌ಗಳ ರೆಸಲ್ಯೂಶನ್, 90Hz ರಿಫ್ರೆಶ್ ದರ, 180Hz ಟಚ್ ಸ್ಯಾಂಪ್ಲಿಂಗ್ ದರ ಮತ್ತು 560 nits ವರೆಗೆ ಗರಿಷ್ಠ ಬ್ರೈಟ್‌ನೆಸ್‌ನೊಂದಿಗೆ 6.7-ಇಂಚಿನ HD+ ಡಿಸ್ ಪ್ಲೇಯನ್ನು ಹೊಂದಿದೆ.

ಇದನ್ನೂ ಓದಿ
Image
ಬಹುನಿರೀಕ್ಷಿತ ರಿಯಲ್ ಮಿ ನಾರ್ಜೊ 60x ಫೋನ್ ಬಿಡುಗಡೆ ದಿನಾಂಕ ಪ್ರಕಟ
Image
ರಿಮೋಟ್ ಬೇಡ: ಸ್ಮಾರ್ಟ್​ಫೋನ್ ಮೂಲಕ ಟಿವಿ ಚಾನೆಲ್ ಬದಲಾಯಿಸುವುದು ಹೇಗೆ?
Image
ಮೈಕ್ರೋಸಾಫ್ಟ್ ವಿಂಡೋಸ್‌ ಬಳಕೆದಾರರಿಗೆ ಬಿಗ್ ಶಾಕ್
Image
ಐಫೋನ್ 15 ಸರಣಿ ಬಿಡುಗಡೆಗೆ ದಿನಗಣನೆ: ಭಾರತದಲ್ಲಿ ಎಷ್ಟು ಗಂಟೆಗೆ ಲೈವ್?

ಮೊನ್ನೆಯಷ್ಟೆ ರಿಲೀಸ್ ಆದ 6,000mAh ಬ್ಯಾಟರಿಯ ಈ ಫೋನ್ ಮೇಲೆ ಬಂಪರ್ ಡಿಸ್ಕೌಂಟ್

ಪ್ರೊಸೆಸರ್: ಈ ಫೋನ್ ಯುನಿಸಾಕ್ T612 ಆಕ್ಟಾ-ಕೋರ್ 12nm ಪ್ರೊಸೆಸರ್ ಜೊತೆಗೆ Mali-G57 GPU ನಿಂದ ಚಾಲಿತವಾಗಿದೆ.

RAM ಮತ್ತು ಸ್ಟೋರೇಜ್: 4GB LPDDR4X RAM ಮತ್ತು 64GB ಸಂಗ್ರಹಣೆಯನ್ನು ಮೈಕ್ರೊ SD ಕಾರ್ಡ್ ಜೊತೆಗೆ 2TB ವರೆಗೆ ವಿಸ್ತರಿಸಬಹುದಾಗಿದೆ. 4GB ವರ್ಚುವಲ್ RAM ಬೆಂಬಲವಿದೆ. ಇದು ರಿಯಲ್ ಮಿ ಯುಐ ಟಿ ಆವೃತ್ತಿಯೊಂದಿಗೆ ಆಂಡ್ರಾಯ್ಡ್ 13 ಮೂಲಕ ರನ್ ಆಗುತ್ತದೆ.

ಕ್ಯಾಮೆರಾಗಳು: f/1.8 ಅಪಾರ್ಚರ್​ ಮತ್ತು LED ಫ್ಲ್ಯಾಷ್ ಮತ್ತು ಸೆಕೆಂಡರಿ ಡೆಪ್ತ್ ಸೆನ್ಸರ್ ಜೊತೆಗೆ 50MP ಹಿಂಬದಿಯ ಕ್ಯಾಮೆರಾ ಇದೆ. ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ ಮುಂಭಾಗ 5MP ಕ್ಯಾಮೆರಾ ಆಯ್ಕೆ ನೀಡಲಾಗಿದೆ.

ಬ್ಯಾಟರಿ: 5000mAh ಬ್ಯಾಟರಿ ಜೊತೆಗೆ 33W SuperVOOC ಫಾಸ್ಟ್ ಚಾರ್ಜಿಂಗ್ ಅಳವಡಿಸಲಾಗಿದೆ.

ಸಂಪರ್ಕ: ಡ್ಯುಯಲ್ 4G VoLTE, Wi-Fi 802.11ac, ಬ್ಲೂಟೂತ್ 5.0, GPS + GLONASS, ಮತ್ತು USB ಟೈಪ್-C. ಭದ್ರತೆಗಾಗಿ ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸಾರ್ ನೀಡಲಾಗಿದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

ಪ್ರಯಾಣಿಕರ ಗಮನಕ್ಕೆ: ಕರ್ನಾಟಕ-ಗೋವಾ ಸಂಪರ್ಕ ಕಲ್ಪಿಸುವ ಹೆದ್ದಾರಿ ಬಿರುಕು
ಪ್ರಯಾಣಿಕರ ಗಮನಕ್ಕೆ: ಕರ್ನಾಟಕ-ಗೋವಾ ಸಂಪರ್ಕ ಕಲ್ಪಿಸುವ ಹೆದ್ದಾರಿ ಬಿರುಕು
ಟ್ರಿನಿಡಾಡ್ ಮತ್ತು ಟೊಬೆಗೊದ ಅತ್ಯುನ್ನತ ನಾಗರಿಕ ಪ್ರಶಸ್ತಿ ಪಡೆದ ಮೋದಿ
ಟ್ರಿನಿಡಾಡ್ ಮತ್ತು ಟೊಬೆಗೊದ ಅತ್ಯುನ್ನತ ನಾಗರಿಕ ಪ್ರಶಸ್ತಿ ಪಡೆದ ಮೋದಿ
ಕಾರ್ ರೇಸಿಂಗ್ ಕ್ಷೇತ್ರಕ್ಕೆ ಸುದೀಪ್ ಎಂಟ್ರಿ; ಮಾಹಿತಿ ನೀಡಿದ ಕಿಚ್ಚ
ಕಾರ್ ರೇಸಿಂಗ್ ಕ್ಷೇತ್ರಕ್ಕೆ ಸುದೀಪ್ ಎಂಟ್ರಿ; ಮಾಹಿತಿ ನೀಡಿದ ಕಿಚ್ಚ
ಬೇರೆ ಬೇರೆ ಪಕ್ಷಗಳ ದೊಡ್ಡ ನಾಯಕರು ಜೆಡಿಎಸ್ ಮೂಲಕ ಬೆಳೆದವರು: ಶಾಸಕ
ಬೇರೆ ಬೇರೆ ಪಕ್ಷಗಳ ದೊಡ್ಡ ನಾಯಕರು ಜೆಡಿಎಸ್ ಮೂಲಕ ಬೆಳೆದವರು: ಶಾಸಕ
ಜಬಲ್ಪುರದಲ್ಲಿ ನದಿಯಲ್ಲಿ ಕೊಚ್ಚಿ ಹೋದ ಎಲ್‌ಪಿಜಿ ಸಿಲಿಂಡರ್ ತುಂಬಿದ ಟ್ರಕ್
ಜಬಲ್ಪುರದಲ್ಲಿ ನದಿಯಲ್ಲಿ ಕೊಚ್ಚಿ ಹೋದ ಎಲ್‌ಪಿಜಿ ಸಿಲಿಂಡರ್ ತುಂಬಿದ ಟ್ರಕ್
ಜಲಾಶಯದಲ್ಲಿ ಹೆಚ್ಚು ನೀರು ಸ್ಟೋರ್ ಮಾಡಲಾಗಲ್ಲ, ಹರಿಬಿಡುವುದು ಅನಿವಾರ್ಯ
ಜಲಾಶಯದಲ್ಲಿ ಹೆಚ್ಚು ನೀರು ಸ್ಟೋರ್ ಮಾಡಲಾಗಲ್ಲ, ಹರಿಬಿಡುವುದು ಅನಿವಾರ್ಯ
ಗುಜರಾತ್​ನ ಖೇಡಾದಲ್ಲಿ ಬೆಂಕಿ ಅವಘಡ; ಹೊತ್ತಿ ಉರಿದ ಅಕ್ಕಿ ಗಿರಣಿ
ಗುಜರಾತ್​ನ ಖೇಡಾದಲ್ಲಿ ಬೆಂಕಿ ಅವಘಡ; ಹೊತ್ತಿ ಉರಿದ ಅಕ್ಕಿ ಗಿರಣಿ
ಕೇಂದ್ರದಲ್ಲಿ ಇನ್ಯಾವತ್ತೂ ಕಾಂಗ್ರೆಸ್ ಅಧಿಕಾರಕ್ಕೆ ಬರಲಾರದು: ಜೋಶಿ
ಕೇಂದ್ರದಲ್ಲಿ ಇನ್ಯಾವತ್ತೂ ಕಾಂಗ್ರೆಸ್ ಅಧಿಕಾರಕ್ಕೆ ಬರಲಾರದು: ಜೋಶಿ
ರಂಗನಾಥ್ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಮೇಯ ಉದ್ಭವಿಸಲ್ಲ: ಸುರೇಶ್ ಗೌಡ
ರಂಗನಾಥ್ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಮೇಯ ಉದ್ಭವಿಸಲ್ಲ: ಸುರೇಶ್ ಗೌಡ
ಕಾರ್ ರೇಸಿಂಗ್ ತಂಡಕ್ಕೆ ಕಿಚ್ಚ ಸುದೀಪ್ ಮಾಲೀಕ; ಸುದ್ದಿಗೋಷ್ಠಿ ಲೈವ್ ನೋಡಿ..
ಕಾರ್ ರೇಸಿಂಗ್ ತಂಡಕ್ಕೆ ಕಿಚ್ಚ ಸುದೀಪ್ ಮಾಲೀಕ; ಸುದ್ದಿಗೋಷ್ಠಿ ಲೈವ್ ನೋಡಿ..