ಬಹುನಿರೀಕ್ಷಿತ ರಿಯಲ್ ಮಿ ನಾರ್ಜೊ 60x ಫೋನ್ ಬಿಡುಗಡೆ ದಿನಾಂಕ ಪ್ರಕಟ: ಯಾವಾಗ?, ಬೆಲೆ ಎಷ್ಟು?

Realme Narzo 60x India launch date confirmed: ಹೊಚ್ಚ ಹೊಸ ರಿಯಲ್ ಮಿ ನಾರ್ಜೊ 60x ಫೋನ್ 5G ಬೆಂಬಲ ಪಡೆದುಕೊಂಡಿದ್ದು, ಸೆಪ್ಟೆಂಬರ್ 12 ರಂದು ಮಧ್ಯಾಹ್ನ 12 ಗಂಟೆಗೆ ಬಿಡುಗಡೆ ಆಗಲಿದೆ. ಇದರೊಂದಿಗೆ, ಅದೇ ದಿನ ಬಡ್ಸ್ T300 ಬಿಡುಗಡೆಗೆ ಆಗಲಿದೆ ಎನ್ನಲಾಗಿದೆ.

ಬಹುನಿರೀಕ್ಷಿತ ರಿಯಲ್ ಮಿ ನಾರ್ಜೊ 60x ಫೋನ್ ಬಿಡುಗಡೆ ದಿನಾಂಕ ಪ್ರಕಟ: ಯಾವಾಗ?, ಬೆಲೆ ಎಷ್ಟು?
Realme Narzo 60x
Follow us
|

Updated on: Sep 04, 2023 | 2:03 PM

ರಿಯಲ್ ಮಿ ಕಂಪನಿ ತನ್ನ ದ್ವಿತೀಯ ಅವಧಿಯಲ್ಲಿ ಒಂದರ ಹಿಂದೆ ಒಂದರಂತೆ ಆಕರ್ಷಕ ಸ್ಮಾರ್ಟ್​ಫೋನ್​ಗಳನ್ನು ಬಿಡುಗಡೆ ಮಾಡುತ್ತಿದೆ. ಭಾರತದಲ್ಲಿ ಕಳೆದ ಕೆಲವು ತಿಂಗಳುಗಳಿಂದ ಬೊಂಬಾಟ್ ಫೋನುಗಳನ್ನು ಪರಿಚಯಿಸುತ್ತಿರುವ ರಿಯಲ್ ಮಿ ಇದೀಗ ತನ್ನ ನೂತನ ಬಹುನಿರೀಕ್ಷಿತ ರಿಯಲ್ ಮಿ ನಾರ್ಜೊ 60x (Realme Narzo 60x) ಸ್ಮಾರ್ಟ್​ಫೋನ್ ಅನ್ನು ಅನಾವರಣ ಮಾಡುವುದಾಗಿ ಹೇಳಿದೆ. ಜೊತೆಗೆ ಬಿಡುಗಡೆ ದಿನಾಂಕವನ್ನು ಕೂಡ ಪ್ರಕಟ ಮಾಡಿದೆ. ರಿಯಲ್ ಮಿ ಭಾರತದಲ್ಲಿ ಸೆಪ್ಟೆಂಬರ್ 12 ರಂದು ಮಧ್ಯಾಹ್ನ 12 ಗಂಟೆಗೆ ನಾರ್ಜೊ 60x ಫೋನ್ ಬಿಡುಗಡೆಯನ್ನು ಖಚಿತಪಡಿಸಿದೆ.

ಹೊಚ್ಚ ಹೊಸ ರಿಯಲ್ ಮಿ ನಾರ್ಜೊ 60x ಫೋನ್ 5G ಬೆಂಬಲ ಪಡೆದುಕೊಂಡಿದ್ದು, 33W SUPERVOOC ವೇಗದ ಚಾರ್ಜಿಂಗ್ ಮೂಲಕ ಮಾರುಕಟ್ಟೆಗೆ ಪ್ರವೇಶಿಸಲಿದೆ. ಇದರೊಂದಿಗೆ, ಅದೇ ದಿನ ಬಡ್ಸ್ T300 ಬಿಡುಗಡೆಗೆ ಆಗಲಿದೆ ಎನ್ನಲಾಗಿದೆ. ಈ ಹೊಸ ಬಡ್ಸ್ ರಿಯಲ್ ಮಿ TWS 30dB ನಾಯ್ಸ್ ಕ್ಯಾನ್ಸಲೇಷನ್ ಮತ್ತು 12.4mm ಡೈನಾಮಿಕ್ ಬಾಸ್ ಡ್ರೈವರ್ ಅನ್ನು ಒಳಗೊಂಡಿರುತ್ತದೆ. ಬಡ್ಸ್ ಮತ್ತು ಹೊಸ ಸ್ಮಾರ್ಟ್​ಫೋನ್ ಅಮೆಜಾನ್​ನಲ್ಲಿ ಸೇಲ್ ಕಾಣಲಿದೆ.

ರಿಯಲ್ ಮಿ ನಾರ್ಜೊ 60x ಫೀಚರ್ಸ್:

ಡಿಸ್ ಪ್ಲೇ: ರಿಯಲ್ ಮಿ ನಾರ್ಜೊ 60x ಸ್ಮಾರ್ಟ್​ಫೋನ್ ರಿಯಲ್ ಮಿ 11x 5Gಯ ಮರು ಬ್ರ್ಯಾಂಡ್ ಆಗಿದೆ ಎನ್ನಲಾಗಿದೆ. ಈ ಫೋನ್ ಪೂರ್ಣ HD+ ರೆಸಲ್ಯೂಶನ್ ಮತ್ತು 120Hz ರಿಫ್ರೆಶ್ ದರದೊಂದಿಗೆ 6.74-ಇಂಚಿನ IPS LCD ಡಿಸ್ ಪ್ಲೇಯನ್ನು ನಿರೀಕ್ಷಿಸಬಹುದು.

ಇದನ್ನೂ ಓದಿ
Image
ರಿಮೋಟ್ ಬೇಡ: ಸ್ಮಾರ್ಟ್​ಫೋನ್ ಮೂಲಕ ಟಿವಿ ಚಾನೆಲ್ ಬದಲಾಯಿಸುವುದು ಹೇಗೆ?
Image
ಮೈಕ್ರೋಸಾಫ್ಟ್ ವಿಂಡೋಸ್‌ ಬಳಕೆದಾರರಿಗೆ ಬಿಗ್ ಶಾಕ್
Image
ಐಫೋನ್ 15 ಸರಣಿ ಬಿಡುಗಡೆಗೆ ದಿನಗಣನೆ: ಭಾರತದಲ್ಲಿ ಎಷ್ಟು ಗಂಟೆಗೆ ಲೈವ್?
Image
ಮೊನ್ನೆಯಷ್ಟೆ ರಿಲೀಸ್ ಆದ 6,000mAh ಬ್ಯಾಟರಿಯ ಈ ಫೋನ್ ಮೇಲೆ ಡಿಸ್ಕೌಂಟ್

ವಿವೋ ಕಂಪನಿಯ ಈ ಎರಡು ಸ್ಮಾರ್ಟ್​ಫೋನ್​ಗಳ ಬೆಲೆಯಲ್ಲಿ ದಿಢೀರ್ ಇಳಿಕೆ: ಬಜೆಟ್ ಬೆಲೆಗೆ ಲಭ್ಯ

ಕ್ಯಾಮೆರಾಗಳು: ಮುಂಭಾಗದಲ್ಲಿ, ಈ ಫೋನ್ 8MP ಸೆಲ್ಫೀ ಕ್ಯಾಮೆರಾ ಇರುವ ಪಂಚ್ ಹೋಲ್ ಅನ್ನು ಹೊಂದಿರಬಹುದು. ಹಿಂಬದಿಯ ಕ್ಯಾಮೆರಾಗಳು, 64MP ಪ್ರಾಥಮಿಕ ಕ್ಯಾಮೆರಾ ಮತ್ತು 2MP ಡೆಪ್ತ್ ಕ್ಯಾಮೆರಾವನ್ನು ಒಳಗೊಂಡಿರುತ್ತದೆ.

ಸಾಫ್ಟ್‌ವೇರ್: ಆಂಡ್ರಾಯ್ಡ್ 13 ಆಧರಿಸಿದ ರಿಯಲ್ ಮಿ UI 4.0 ಈ ಫೋನ್ ರನ್ ಆಗುತ್ತದೆ. ಸೆಕ್ಯುರಿಟಿಗಾಗಿ ಈ ಫೋನ್​ನಲ್ಲಿ ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಆಯ್ಕೆ ನೀಡಲಾಗಿದೆ.

ಚಿಪ್ಸೆಟ್: ಈ ಫೋನಿನಲ್ಲಿ ಮೀಡಿಯಾಟೆಕ್ ಡೈಮೆನ್ಸಿಟಿ 6100+ 5G ಚಿಪ್‌ಸೆಟ್‌ ಅಳವಡಿಸಲಾಗಿದೆ. 8GB RAM, 128GB ಸಂಗ್ರಹಣೆ ಮತ್ತು 5000mAh ಬ್ಯಾಟರಿಯನ್ನು ಸಹ ಒಳಗೊಂಡಿರುತ್ತವೆ. 33W ವೇಗದ ಚಾರ್ಜಿಂಗ್ ಬೆಂಬಲ ಪಡೆದುಕೊಂಡಿದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

ರಾಜಕಾಲುವೆ ಮುಚ್ಚಿರುವ ಕಾರಣ ಐದಾರು ಮನೆಗಳಿಗೆ ನುಗ್ಗಿದ ಮಳೆ ನೀರು
ರಾಜಕಾಲುವೆ ಮುಚ್ಚಿರುವ ಕಾರಣ ಐದಾರು ಮನೆಗಳಿಗೆ ನುಗ್ಗಿದ ಮಳೆ ನೀರು
‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ
ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ